August 2026

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಗಸ್ಟ್ ತಿಂಗಳ ನಾಲ್ಕನೇ ಮತ್ತು ಕೊನೆಯ ವಾರ ಇದು. ಜ್ಯೋತಿಷ್ಯದ ಪ್ರಕಾರ, ಈ ವಾರ ಅನೇಕರ ಜೀವನದಲ್ಲಿ ಮಹತ್ವದ ತಿರುವು ತರಲಿದೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದಾಗಿ, ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದಾಯಕವಾಗಿರುವುದು. ಇನ್ನು ಕೆಲವರಿಗೆ ಸವಾಲಿನಿಂದ ಕೂಡಿರುವುದು. ಯಾವ ರಾಶಿಗೆ ಶುಭ? ಯಾರಿಗೆ ಈ ವಾರ ಲಾಭ? ನೋಡೋಣ… ಮೇಷ ರಾಶಿ:ಮೇಷ ರಾಶಿಯವರಿಗೆ ಈ ವಾರ ಅದೃಷ್ಟದಿಂದ ಕೂಡಿರುತ್ತದೆ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ವ್ಯವಹಾರ ಮಾಡುವವರಿಗೆ ಹೊಸ ಗ್ರಾಹಕರು ಸಿಗಬಹುದು.

ದ್ವಾದಶ ರಾಶಿಗಳ ವಾರಭವಿಷ್ಯ Read More »

ಪುತ್ತೂರು: ಜೆರಾಕ್ಸ್ ಅಂಗಡಿಯಲ್ಲಿ ಗಲಾಟೆ ಪ್ರಕರಣ| ಸಿಸಿ ಟಿವಿಯಲ್ಲಿ ದಾಖಲೆಯಲ್ಲಿ ಬಯಲಾಯ್ತು ಅಸಲಿಯತ್ತು!!

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿರುವ ಜೆರಾಕ್ಸ್ ಅಂಗಡಿಯೊಂದರಲ್ಲಿ ನಡೆದ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಭಾರೀ ರಾಜಕೀಯ ಹಾಗೂ ಸಾರ್ವಜನಿಕ ವಿವಾದಕ್ಕೆ ಕಾರಣವಾಗಿದ್ದ ಈ ಘಟನೆಯ ಅಸಲಿಯತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾಖಲೆ ಪತ್ರಗಳ ಜೆರಾಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲಕರು ಹಾಗೂ ಬಂದಿದ್ದ ಗ್ರಾಹಕರ ನಡುವೆ ತೀವ್ರ ವಾಗ್ವಾದ ನಡೆಯುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿದೆ. ಈ ವಾಗ್ವಾದದ ನಡುವೆ

ಪುತ್ತೂರು: ಜೆರಾಕ್ಸ್ ಅಂಗಡಿಯಲ್ಲಿ ಗಲಾಟೆ ಪ್ರಕರಣ| ಸಿಸಿ ಟಿವಿಯಲ್ಲಿ ದಾಖಲೆಯಲ್ಲಿ ಬಯಲಾಯ್ತು ಅಸಲಿಯತ್ತು!! Read More »

ಗ್ರಾಹಕರಿಗೆ ಕಹಿಯಾದ ಸಕ್ಕರೆ| ಮೂರೇ ದಿನದಲ್ಲಿ ಶೇ40ರಷ್ಟು ಏರಿಕೆ

ಸಮಗ್ರ ನ್ಯೂಸ್: ಶ್ರಾವಣಮಾಸದಲ್ಲಿ ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿ ದರ ಗಗನಕ್ಕೇರಿದೆ. ಈ ನಡುವೆ ಗ್ರಾಹಕರಿಗೆ ಕಹಿ ಸುದ್ದಿ ಸಿಕ್ಕಿದ್ದು, ಸಕ್ಕರೆಯ ಬೆಲೆಯಲ್ಲೂ ಭಾರಿ ಹೆಚ್ಚಳವಾಗಿದೆ. ದೇಶೀಯವಾಗಿ ಕಬ್ಬಿನ ಉತ್ಪಾದನೆ ಕುಸಿದ ಹಿನ್ನೆಲೆಯಲ್ಲಿ ಕೇವಲ ಎರಡು ತಿಂಗಳಲ್ಲೇ ಸಕ್ಕರೆ ಬೆಲೆ ಶೇ. 40ರಷ್ಟು ಏರಿಕೆಯಾಗಿದೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ಸಕ್ಕರೆಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಬೆಂಗಳೂರಿನ ಮಾರುಕಟ್ಟೆಯಲ್ಲೂ ಸಕ್ಕರೆಯ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ.

ಗ್ರಾಹಕರಿಗೆ ಕಹಿಯಾದ ಸಕ್ಕರೆ| ಮೂರೇ ದಿನದಲ್ಲಿ ಶೇ40ರಷ್ಟು ಏರಿಕೆ Read More »

ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ| ಆರೋಪಿಗೆ 5 ವರ್ಷಗಳ ಸಜೆ ಜೊತೆಗೆ ದಂಡ

ಸಮಗ್ರ ನ್ಯೂಸ್: 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕುದ್ಮಾರು ಗ್ರಾಮದ ಅಬ್ದುಲ್ಲಾನಿಗೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುಮಂಗಲಾ ಚಕಲಬ್ಬಿ ಅವರು ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸೆಕ್ಷನ್ 10ರ ಅಡಿ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹ 35 ಸಾವಿರ ದಂಡ ವಿಧಿಸಿದ್ದಾರೆ. ಬಾಲಕಿ ಎಳನೀರು ಖರೀದಿಸಲು ಅಬ್ದುಲ್ಲಾನ ಅಂಗಡಿಗೆ 2020ರ ಫೆ.14ರಂದು ತೆರಳಿದ್ದಳು. ಚಿಲ್ಲರೆ

ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ| ಆರೋಪಿಗೆ 5 ವರ್ಷಗಳ ಸಜೆ ಜೊತೆಗೆ ದಂಡ Read More »

ನೈಋತ್ಯ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಮಂಗಳೂರು ವಿಲೀನ!

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೇ ಪ್ರಯಾಣಿಕರ ದಶಕಗಳ ಬಾಕಿ ಬೇಡಿಕೆಯೊಂದು ಕೊನೆಗೂ ಈಡೇರುವ ಹಂತಕ್ಕೆ ತಲುಪಿದೆ. ಪ್ರಸ್ತುತ ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಕುರಿತು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮಾಹಿತಿ ನೀಡಿದ್ದಾರೆ. ಹೊಸ ನಿರ್ಧಾರದಂತೆ ಉಳ್ಳಾಲವರೆಗಿನ ಮಂಗಳೂರು ರೈಲ್ವೆ ವ್ಯಾಪ್ತಿಯು ದಕ್ಷಿಣ ರೈಲ್ವೆಯಿಂದ ನೈಋತ್ಯ ರೈಲ್ವೆಯ ಮೈಸೂರು

ನೈಋತ್ಯ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಮಂಗಳೂರು ವಿಲೀನ! Read More »

ರಾಜ್ಯಾದ್ಯಂತ ಅಲ್ಲಲ್ಲಿ ಭಾರೀ ಹಾಗೂ ತುಂತುರು ಮಳೆ| ಕರಾವಳಿ, ಮಲೆನಾಡಿಗೆ ಸಾಧಾರಣ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊಂಚ ಮಳೆಯ ಅಬ್ಬರ ಮತ್ತೆ ಕಡಿಮೆ ಆಗಿದೆ. ಆದರೆ ಬೆಂಗಳೂರಲ್ಲಿ ಮಾತ್ರ ಸಂಜೆ ಆಗುತ್ತಿದ್ದಂತೆ ಗಂಟೆಗಳ ಕಾಲ ತುಂತುರು ಮಳೆ ಆಗುತ್ತಿದೆ. ಇದೀಗ ಹವಾಮಾನ ಇಲಾಖೆ ಇಂದಿನ ವರದಿ ಪ್ರಕಾರ, ಇಂದಿನಿಂದ ಆಗಷ್ಟ್‌ 24ರ ವರೆಗೆ ಕರಾವಳಿ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಮಳೆ ಪ್ರಮಾಣ ಸ್ವಲ್ಪ ಹೆಚ್ಚಿರಲಿದೆ ಎಂದು ವರದಿಯಾಗಿದೆ. ಇಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಧ್ಯಮ ಮಳೆ ಹಾಗೂ ಗುಡುಗು-ಮಿಂಚಿನ ಸಾಧ್ಯತೆ

ರಾಜ್ಯಾದ್ಯಂತ ಅಲ್ಲಲ್ಲಿ ಭಾರೀ ಹಾಗೂ ತುಂತುರು ಮಳೆ| ಕರಾವಳಿ, ಮಲೆನಾಡಿಗೆ ಸಾಧಾರಣ ಮಳೆ ಸಾಧ್ಯತೆ Read More »

ಮಂಗಳೂರು: ಸೆಪ್ಟೆಂಬರ್ 2ನೇ ಶನಿವಾರದಿಂದ ಮಳೆ ರಜೆಯ ಹೊಂದಾಣಿಕೆಗೆ ಸೂಚನೆ

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರೀ ಮಳೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಘೋಷಿಸಿದ ರಜೆಯ ಕೊರತೆ ನೀಗಿಸಲು ಸೆಪ್ಟಂಬರ್ 2ನೇ ಶನಿವಾರದಿಂದ ಪೂರ್ಣ ತರಗತಿ ನಡೆಸಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಸೂಚನೆ ನೀಡಿದ್ದಾರೆ. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ, ಮೂಡುಬಿದಿರೆ ಶೈಕ್ಷಣಿಕ ವಲಯಗಳಿಗೆ ಒಟ್ಟು 8 ಪೂರ್ಣ ದಿನ ಮತ್ತು 1 ಅರ್ಧ ದಿನ ಹಾಗೂ ಬೆಳ್ತಂಗಡಿ, ಪುತ್ತೂರು, ಸುಳ್ಯ ಶೈಕ್ಷಣಿಕ ವಲಯಗಳಿಗೆ ಒಟ್ಟು

ಮಂಗಳೂರು: ಸೆಪ್ಟೆಂಬರ್ 2ನೇ ಶನಿವಾರದಿಂದ ಮಳೆ ರಜೆಯ ಹೊಂದಾಣಿಕೆಗೆ ಸೂಚನೆ Read More »

ಸುಳ್ಯ: ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ಎಡವಟ್ಟು| ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಇಬ್ಬರು ಅಪಾಯಕ್ಕೆ!!

ಸಮಗ್ರ ನ್ಯೂಸ್: ಚಾಮರಾಜನಗರದ ಹನೂರು ಎನ್‌ಕೌಂಟರ್ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ಅರಣ್ಯ ಇಲಾಖೆಯ ಮತ್ತೊಂದು ನಿರ್ಲಕ್ಷ್ಯದ ಘಟನೆ ದಕ್ಷಿಣ ಕನ್ನಡದಲ್ಲಿ ಬೆಳಕಿಗೆ ಬಂದಿದೆ. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಬೆಂಗಮಲೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಇಬ್ಬರು ಬೈಕ್ ಸವಾರರು ಅಪಾಯಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ನಡೆದ ಘಟನೆಯಲ್ಲಿ ರಾಘವ ಪ್ರಭು ಎಂಬುವರ ಕಾಲಿಗೆ ಗುಂಡು ತಗುಲಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸುಳ್ಯ: ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ಎಡವಟ್ಟು| ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿನಿಂದ ಇಬ್ಬರು ಅಪಾಯಕ್ಕೆ!! Read More »

ಹಿರಿಯ ನಟಿ‌ ಸಾಹುಕಾರ್ ಜಾನಕಿ ನಿಧನ

ಸಮಗ್ರ ನ್ಯೂಸ್: ಬಹುಭಾಷಾ ನಟಿ, ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟಿ ನಿಧನರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತೆ ಸಾಹುಕಾರ್ ಜಾನಕಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 95 ವರ್ಷದ ನಟಿಗೆ ವಯೋಸಹಜ ಸಮಸ್ಯೆಗಳ ಜೊತೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಕೆಲ ದಿನಗಳ ಹಿಂದೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗ ಅವರು ಮೃತಪಟ್ಟಿರುವ ಸುದ್ದಿ ಬಂದಿದೆ.

ಹಿರಿಯ ನಟಿ‌ ಸಾಹುಕಾರ್ ಜಾನಕಿ ನಿಧನ Read More »

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಮಧು ಬಂಗಾರಪ್ಪ| ತಿಂಗಳಿಗೆ ಒಂದು ರಜೆ, ಜೊತೆಗೆ ಮುಟ್ಟಿನ ರಜೆಯೂ ಮಂಜೂರು

ಸಮಗ್ರ ನ್ಯೂಸ್: ರಾಜ್ಯದ ಸರ್ಕಾರಿ ಪದವಿ ಪೂರ್ವ (ಪಿಯು) ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ಒಂದು ದಿನ ರಜೆ ಹಾಗೂ ಮಹಿಳಾ ಉಪನ್ಯಾಸಕಿಯರಿಗೆ ಮಾಸಿಕ ಮುಟ್ಟಿನ ರಜೆ ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಹಿಂದೆ ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ ₹12,000 ಗೌರವ ಸಂಭಾವನೆ ನೀಡಲಾಗುತ್ತಿತ್ತು. ಇದನ್ನು ₹14,000 ಕ್ಕೆ ಹೆಚ್ಚಿಸಲಾಗಿದೆ.

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ ನೀಡಿದ ಸಚಿವ ಮಧು ಬಂಗಾರಪ್ಪ| ತಿಂಗಳಿಗೆ ಒಂದು ರಜೆ, ಜೊತೆಗೆ ಮುಟ್ಟಿನ ರಜೆಯೂ ಮಂಜೂರು Read More »