ಸಿನಿಮಾ

ಬ್ರಾಹ್ಮೀ ಮುಹೂರ್ತದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್

ಸಮಗ್ರ ನ್ಯೂಸ್: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಹಲವು ದಿನಗಳಿಂದ ಈ ಟ್ರೇಲರ್‌ಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಭರ್ಜರಿ ಉಡುಗೊರೆಯನ್ನೇ ನೀಡಿದೆ. ಬ್ರಾಹ್ಮಿ ಮುಹೂರ್ತದ ವಿಶೇಷ ಸಂದರ್ಭದಲ್ಲಿ ವಿಶ್ವದಾದ್ಯಂತ ಟ್ರೇಲರ್ ಅನಾವರಣಗೊಂಡಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರತಂಡ ಮೊದಲೇ ಘೋಷಿಸಿದ್ದಂತೆ ಟ್ರೇಲರ್ ಅನ್ನು ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟರ್ ಹಂಚಿಕೊಂಡು ಈ ನಿರ್ಧಾರವನ್ನು ಪ್ರಕಟಿಸಿದ್ದರು. […]

ಬ್ರಾಹ್ಮೀ ಮುಹೂರ್ತದಲ್ಲಿ ‘ರಾಮಾಯಣ’ ಟ್ರೇಲರ್ ರಿಲೀಸ್ Read More »

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಕನ್ನಡದ ‘ಮಿಥ್ಯ’ ತುಳುವಿನ ‘ಇಂಬು’ಗೆ ಪ್ರಶಸ್ತಿ

ಸಮಗ್ರ ನ್ಯೂಸ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಶನಿವಾರ ನವದೆಹಲಿಯಲ್ಲಿ ಘೋಷಿಸಲಾಯಿತು. ಚಲನಚಿತ್ರ ತೀರ್ಪುಗಾರರ ಅಧ್ಯಕ್ಷತೆಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಜಯರಾಜ್ ವಹಿಸಿದ್ದರು. ಕನ್ನಡ ಸೇರಿದಂತೆ ಇತರೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ. ಸಿನಿಮಾ ಬಗ್ಗೆ ಅತ್ಯುತ್ತಮ ಬರವಣಿಗೆ: ಅತ್ಯುತ್ತಮ ಪುಸ್ತಕ ನಾನಿರುವುದೆ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ ಲೇಖಕ: ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಪ್ರಕಾಶಕರು: ಮಿರರ್ ಬುಕ್ಸ್ ಅತ್ಯುತ್ತಮ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ| ಕನ್ನಡದ ‘ಮಿಥ್ಯ’ ತುಳುವಿನ ‘ಇಂಬು’ಗೆ ಪ್ರಶಸ್ತಿ Read More »

ಪುತ್ರಶೋಕದಲ್ಲೇ ಕೊನೆಯುಸಿರೆಳೆದ ಗಾನ ಕೋಗಿಲೆ| ನೋವಿನಿಂದಲೇ ಕಳೆಯಿತು ಎಸ್.ಜಾನಕಿಯವರ ಕೊನೆ ದಿನಗಳು

ಸಮಗ್ರ ನ್ಯೂಸ್: ದಕ್ಷಿಣ ಭಾರತದ ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ತಮ್ಮ ಮಾಧುರ್ಯಭರಿತ ಕಂಠದಿಂದ ರಂಜಿಸಿದ್ದ ಗಾನಕೋಗಿಲೆ ಎಸ್. ಜಾನಕಿ ಶನಿವಾರ ವಯೋಸಹಜ ಕಾಯಿಲೆಯಿಂದ ಸಾವು ಕಂಡಿದ್ದಾರೆ. ಆರು ದಶಕಗಳ ಕಾಲ ಸಂಗೀತ ಸಾಮ್ರಾಜ್ಯದ ಮಹಾರಾಜ್ಞಿಯಾಗಿ ಮೆರೆದ ಜಾನಕಿ ಅಮ್ಮನವರ ಕೊನೆಯ ದಿನಗಳ ಬದುಕು ಮಾತ್ರ ಅತ್ಯಂತ ನೋವಿನಿಂದ ಕೂಡಿತ್ತು. ತಮ್ಮ 88ರ ಇಳಿವಯಸ್ಸಿನಲ್ಲಿ ಇದ್ದೊಬ್ಬ ಏಕೈಕ ಮಗ ಮುರಳಿ ಕೃಷ್ಣ (65) ಅವರನ್ನು ಕಳೆದುಕೊಂಡ ದುಃಖದಲ್ಲೇ ಜಾನಕಿ ಅಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಮಗನ ಹಠಾತ್ ಸಾವು

ಪುತ್ರಶೋಕದಲ್ಲೇ ಕೊನೆಯುಸಿರೆಳೆದ ಗಾನ ಕೋಗಿಲೆ| ನೋವಿನಿಂದಲೇ ಕಳೆಯಿತು ಎಸ್.ಜಾನಕಿಯವರ ಕೊನೆ ದಿನಗಳು Read More »

ಸ್ವರ ನಿಲ್ಲಿಸಿದ ಗಾನಕೋಗಿಲೆ| ಮೇರು ಗಾಯಕಿ ಎಸ್.ಜಾನಕಿ ಇನ್ನಿಲ್ಲ

ಸಮಗ್ರ ನ್ಯೂಸ್: ಖ್ಯಾತ ಹಿನ್ನೆಲೆ ಗಾಯಕಿ ಗಾನ ಕೋಗಿಲೆ ಖ್ಯಾತಿಯ ಎಸ್. ಜಾನಕಿ(88) ವಿಧಿವಶರಾಗಿದ್ದಾರೆ. ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಎಸ್ .ಜಾನಕಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಅವರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ, 1957ರಿಂದಲೂ ಚಿತ್ರಗಳಿಗೆ ಹಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ್ದಾರೆ. ಹಲವು ವರ್ಷಗಳಿಂದ ಅವರು ಮೈಸೂರಿನಲ್ಲಿಯೇ ನೆಲೆಸಿದ್ದರು. 20ಕ್ಕೂ ಹೆಚ್ಚು

ಸ್ವರ ನಿಲ್ಲಿಸಿದ ಗಾನಕೋಗಿಲೆ| ಮೇರು ಗಾಯಕಿ ಎಸ್.ಜಾನಕಿ ಇನ್ನಿಲ್ಲ Read More »

ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್| ಸೊರಗುತ್ತಿರುವ ದಾಸನ ಕಂಡು ಮರುಗಿದ ಜನ

ಸಮಗ್ರ ನ್ಯೂಸ್ : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರದ್ದು ಎನ್ನಲಾದ ಫೋಟೋ ಒಂದು ವೈರಲ್‌ ಆಗಿದೆ. ತಮ್ಮ ಹಿಂದಿನ ಎಲ್ಲಾ ವರ್ಚಸ್ಸು, ದೇಹದಾರ್ಢ್ಯತೆಗಳನ್ನು ಕಳೆದುಕೊಂಡಂತೆ ಕಾಣುತ್ತಿರುವ ನಟ ದರ್ಶನ್‌ , ತೀವ್ರವಾಗಿ ಸೊರಗಿದಂತೆ ಕಂಡು ಬರುತ್ತಿದ್ದು ಈ ಫೋಟೋ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ. ನಟ ದರ್ಶನ್‌ ಗೆ ಜೈಲಿನಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂದು ಆರೋಪಿಸಿ ದರ್ಶನ್‌ ಪರ ವಕೀಲರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು

ಜೈಲಿನಲ್ಲಿರುವ ದರ್ಶನ್ ಫೋಟೋ ವೈರಲ್| ಸೊರಗುತ್ತಿರುವ ದಾಸನ ಕಂಡು ಮರುಗಿದ ಜನ Read More »

ರಾಕಿಂಗ್ ಸ್ಟಾರ್ ಯಶ್ ನಟನೆಯ “ರಾಮಾಯಣ“ ರಿಲೀಸ್ ಗೆ ಡೇಟ್ ಫಿಕ್ಸ್ 

ಸಮಗ್ರ ನ್ಯೂಸ್ : ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಬಗ್ಗೆಯಾವುದೇ ಮಾಹಿತಿ ಇಲ್ಲ, ಆದರೆ ಟಾಕ್ಸಿಕ್ ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ.  ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮತ್ತೆ ಪೋಸ್ಟ್ ಪೋನ್ ಆದ ಮೇಲೆ, ಫ್ಯಾನ್ಸ್ ಯಾವಾಗ ರಿಲೀಸ್ ಅನ್ನೋದನ್ನ ಕೇಳೋದೇ ಬಿಟ್ಟುಬಿಟ್ಟಿದ್ದಾರೆ. ಅದ್ಯಾವಾಗ ಬರುತ್ತೋ ಬರಲಿ ಅಂತ ಸೈಲೆಂಟ್ ಆಗಿಬಿಟ್ಟಿದ್ದಾರೆ. ಆದ್ರೆ ಇದರ ನಡುವೆ ರಾಮಾಯಣ ಟೀಂ ಮಾತ್ರ ಫ್ಯಾನ್ಸ್ ಗೆ ಒಂದು ಗುಡ್ ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ “ರಾಮಾಯಣ“ ರಿಲೀಸ್ ಗೆ ಡೇಟ್ ಫಿಕ್ಸ್  Read More »

ಜೆಡಿಎಸ್‌ ಪಕ್ಷ ಸೇರ್ಪಡೆಗೊಂಡ BBK ಮಾಜಿ ಸ್ಪರ್ಧಿ ಜಾಹ್ನವಿ

ಸಮಗ್ರ ನ್ಯೂಸ್ :  ಬಿಗ್‌ ಬಾಸ್‌ ಕನ್ನಡ ಮಾಜಿ ಸ್ಪರ್ಧಿ ಜಾಹ್ನವಿ ಅವರು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಜೆಡಿಎಸ್‌ ಪಕ್ಷ ಸೇರ್ಪಡೆ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿಗೆ ಪಕ್ಷದ ಶಾಲು ಹಾಕಿ, ಬಾವುಟ ನೀಡಿ ಸ್ವಾಗತಿಸಲಾಗಿದೆ.  ಬಿಗ್‌ ಬಾಸ್‌ನಿಂದ ಹೊರಬಂದ ನಂತರ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಜಾಹ್ನವಿ, ಇದೀಗ ತಮ್ಮ ಜೀವನದ ಹೊಸ ಕಾರ್ಯ ಆರಂಭಿಸಿದ್ದಾರೆ. ಜೆಡಿಎಸ್ ಮಹಿಳಾ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಇವರು ಪಕ್ಷಕ್ಕೆ

ಜೆಡಿಎಸ್‌ ಪಕ್ಷ ಸೇರ್ಪಡೆಗೊಂಡ BBK ಮಾಜಿ ಸ್ಪರ್ಧಿ ಜಾಹ್ನವಿ Read More »

ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ

ಸಮಗ್ರ ನ್ಯೂಸ್: ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಆಶಾ ಭೋಸ್ಲೆ (92) ಅವರಿಗೆ ಶನಿವಾರ (ಏಪ್ರಿಲ್ 11) ಹೃದಯಾಘಾತ ಸಂಭವಿಸಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಅವರು ಇಂದು(ಎ.12) ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಇದರಿಂದ ಭಾರತೀಯ ಸಂಗೀತ ಕ್ಷೇತ್ರದ ಅಪ್ರತಿಮ ಕೊಂಡಿಯೊಂದು ಕಳಚಿದಂತಾಗಿದೆ. ಪ್ಟೆಂಬರ್ 8, 1933 ರಂದು ಜನಿಸಿದ ಅವರು ಬಹಳ ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು ಮತ್ತು ವಿಶ್ವದ ಅತ್ಯಂತ ಹೆಚ್ಚು ರೆಕಾರ್ಡ್ ಮಾಡಲಾದ ಕಲಾವಿದರಲ್ಲಿ ಆಶಾ ಒಬ್ಬರೆನಿಸಿದ್ದಾರೆ. ಹಿಂದಿ,

ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ Read More »

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಡಾ| ಜಯಮಾಲಾ ಆಯ್ಕೆ

ಸಮಗ್ರ ನ್ಯೂಸ್: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಫಿಲಂ ಚೇಂಬರ್) ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಆಯ್ಕೆಯಾಗಿದ್ದಾರೆ. 170 ಮತಗಳ ಅಂತರದಿಂದ ನಟಿ ಜಯಮಾಲಾ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲಾ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಎದುರಾಳಿ ಭಾ.ಮಾ ಹರೀಶ್ 334 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಆ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿದ್ದಾರೆ. ಅವರು ಎರಡನೇ ಬಾರಿ ಫಿಲಂ ಚೇಂಬರ್​​ನ ಅಧ್ಯಕ್ಷರಾಗಲಿದ್ದಾರೆ. 2008ರಲ್ಲಿ

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಡಾ| ಜಯಮಾಲಾ ಆಯ್ಕೆ Read More »

ದಿಢೀರ್ ನಿವೃತ್ತಿ ಘೋಷಿಸಿದ ಬಾಲಿವುಡ್ ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್

ಸಮಗ್ರ ನ್ಯೂಸ್: ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌’ನಲ್ಲಿ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಹುದ್ದೆಗಳನ್ನ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾನು ಅದನ್ನ ರದ್ದುಗೊಳಿಸುತ್ತಿದ್ದೇನೆ. ಇದು ಅದ್ಭುತ ಪ್ರಯಾಣವಾಗಿತ್ತು” ಎಂದು ಪೋಸ್ಟ್‌’ನಲ್ಲಿ ಹೇಳಲಾಗಿದೆ. ಅರಿಜಿತ್ ಸಿಂಗ್ ಅವರನ್ನು ಇಂದು ಭಾರತೀಯ ಸಂಗೀತ ಉದ್ಯಮದ ದೊಡ್ಡ ಹೆಸರುಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರ ಧ್ವನಿಯು ಪ್ರಣಯ ಗೀತೆಗಳಿಗೆ

ದಿಢೀರ್ ನಿವೃತ್ತಿ ಘೋಷಿಸಿದ ಬಾಲಿವುಡ್ ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ Read More »