ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಗಸ್ಟ್ ತಿಂಗಳ ನಾಲ್ಕನೇ ಮತ್ತು ಕೊನೆಯ ವಾರ ಇದು. ಜ್ಯೋತಿಷ್ಯದ ಪ್ರಕಾರ, ಈ ವಾರ ಅನೇಕರ ಜೀವನದಲ್ಲಿ ಮಹತ್ವದ ತಿರುವು ತರಲಿದೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದಾಗಿ, ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದಾಯಕವಾಗಿರುವುದು. ಇನ್ನು ಕೆಲವರಿಗೆ ಸವಾಲಿನಿಂದ ಕೂಡಿರುವುದು. ಯಾವ ರಾಶಿಗೆ ಶುಭ? ಯಾರಿಗೆ ಈ ವಾರ ಲಾಭ? ನೋಡೋಣ…

. Ad Widget . Ad Widget . Ad Widget .

ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವಾರ ಅದೃಷ್ಟದಿಂದ ಕೂಡಿರುತ್ತದೆ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ವ್ಯವಹಾರ ಮಾಡುವವರಿಗೆ ಹೊಸ ಗ್ರಾಹಕರು ಸಿಗಬಹುದು. ಕೆಲಸದಲ್ಲಿರುವವರಿಗೆ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಯಿದೆ. ಆದಾಯ ಉತ್ತಮವಾಗಿದ್ದರೂ, ಅನಗತ್ಯ ಖರ್ಚುಗಳಿಂದ ದೂರ ಇರಿ. ಕುಟುಂಬದಲ್ಲಿನ ವಾತಾವರಣವು ಸಂತೋಷವಾಗಿರುತ್ತದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ವೃಷಭ ರಾಶಿ:
ಈ ವಾರ ಸ್ಥಿರ ಪ್ರಗತಿಯ ವಾರವಾಗಿರುವುದು. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ಸಿಗುತ್ತದೆ. ಪ್ರಮುಖ ಜವಾಬ್ದಾರಿಗಳು ಸಿಗಬಹುದು. ಈ ವಾರ ಹಣ ಉಳಿಸುವುದು ಸಾಧ್ಯವಾಗುತ್ತದೆ. ದೊಡ್ಡ ಹೂಡಿಕೆಗಳನ್ನು ಮಾಡುವ ಮೊದಲು ಸರಿಯಾದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಸಂಗಾತಿಯಿಂದ ಉತ್ತಮ ಬೆಂಬಲ ಸಿಗುವುದು.

ಮಿಥುನ ರಾಶಿ :
ಈ ವಾರ ಮಿಥುನ ರಾಶಿಯವರಿಗೆ ಹೊಸ ಅವಕಾಶಗಳು ಸಿಗುವುದು. ಬುದ್ಧಿವಂತಿಕೆಯಿಂದ ಅನೇಕ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ವ್ಯವಹಾರದಲ್ಲಿ ಹೊಸ ಜನರೊಂದಿಗೆ ಸಂಪರ್ಕ ಬೆಳೆಯುವುದು. ಭವಿಷ್ಯದಲ್ಲಿ ಇದು ಪ್ರಯೋಜನಕಾರಿಯಾಗಿರುವುದು. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವುದು.

ಕರ್ಕಾಟಕ ರಾಶಿ:
ಕೆಲಸದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದು. ವಾರದ ಆರಂಭದಲ್ಲಿ ಸ್ವಲ್ಪ ಒತ್ತಡ ಇರಬಹುದು. ಆದರೂ, ಕಠಿಣ ಪರಿಶ್ರಮ ಉತ್ತಮ ಫಲಿತಾಂಶಗಳನ್ನು ನೀಡುವುದು. ಮನೆಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ಸಣ್ಣ ವಿಷಯಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಸಂಗಾತಿಯೊಂದಿಗೆ ತಾಳ್ಮೆಯಿಂದ ಮಾತುಕತೆ ನಡೆಸಿ. ಇಲ್ಲವಾದರೆ ಮನಸ್ತಾಪ ಮೂಡಬಹುದು.

ಸಿಂಹ ರಾಶಿ:
ಈ ವಾರ ಪ್ರಗತಿಯ ವಾರವಾಗಿರುವುದು. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ವ್ಯವಹಾರದಲ್ಲಿರುವವರಿಗೆ ಹೊಸ ಒಪ್ಪಂದದಿಂದ ಆರ್ಥಿಕ ಲಾಭವಾಗುವುದು. ಅನಿರೀಕ್ಷಿತ ಮೂಲದಿಂದ ಹಣ ಸಿಗುವುದು. ಪ್ರೀತಿಯ ವಿಷಯದಲ್ಲಿ ಈ ವಾರ ವಿಶೇಷವಾಗಿರಬಹುದು. ವಿವಾಹ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಕನ್ಯಾ ರಾಶಿ:
ಸಣ್ಣ ಸಣ್ಣ ವಿಷಯಗಳಿಗೆ ಗಮನ ಕೊಡುವುದರಿಂದ ಉತ್ತಮ ಪ್ರಯೋಜನಗಳಾಗುವುದು. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ವಿಶೇಷವಾಗಿ ಜಾಗರೂಕರಾಗಿರಿ. ಹಣದ ಪರಿಸ್ಥಿತಿ ನಿಯಂತ್ರಣದಲ್ಲಿರುವುದು. ಹಠಾತ್ ಖರ್ಚುಗಳು ಎದುರಾಗುವುದು. ಕುಟುಂಬದಲ್ಲಿನ ವಾತಾವರಣವು ಸಂತೋದಿಂದ ಕೂಡಿರುವುದು.

ತುಲಾ ರಾಶಿ:
ಆಗಸ್ಟ್ ನಾಲ್ಕನೇ ವಾರ ತುಲಾ ರಾಶಿಯವರಿಗೆ ಮಿಶ್ರ ಫಲ ನೀಡುವುದು.ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುವುದು. ಸಂಬಂಧಗಳಲ್ಲಿ ನಂಬಿಕೆ ಇರಿಸಿ. ಮಾಡುವ ಕೆಲಸಗಳು ಯಶಸ್ಸು ಸಿಗುವುದು. ಆದರೆ ಅದಕ್ಕಾಗಿ ಸ್ವಲ್ಪ ಕಾಯಬೇಕಾಗುವುದು. ಯಾರೊಂದಿಗೂ ಹಣದ ವ್ಯವಹಾರ ನಡೆಸಬೇಡಿ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ತಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಕಾಣುವರು. ಮಾನಸಿಕ ಒತ್ತಡದಿಂದ ಪರಿಹಾರ ಸಿಗುವುದು. ಕೆಲಸದಲ್ಲಿ ಸಕಾರಾತ್ಮಕ ಫಲ ಸಿಗುವುದು. ನಿಮ್ಮ ಮೇಲಧಿಕಾರಿಗಳಿಂದ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.

ಧನು ರಾಶಿ:
ನಿಮ್ಮ ಪಾಲಿನ ಅದೃಷ್ಟದ ವಾರ. ವ್ಯವಹಾರದ ವಿಸ್ತರಿಸಲು ಸರಿಯಾದ ಸಮಯ. ಪ್ರೀತಿಯ ವಿಷಯಗಳಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಈ ವಾರ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಬಹುದು.

ಮಕರ ರಾಶಿ:
ಮಕರ ರಾಶಿಯವರಿಗೆ ಈ ಹೊಸ ವಾರವು ಉತ್ತಮವಾಗಿರುವುದು. ಈ ಸಮಯದಲ್ಲಿ ಯಾವುದೇ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಹೊಸ ಜವಾಬ್ದಾರಿ ಹೆಗಲೇರುವುದು.

ಕುಂಭ ರಾಶಿ:
ಕುಂಭ ರಾಶಿಯವರಿಗೆ ಈ ಹೊಸ ವಾರ ಸ್ವಲ್ಪ ಜಾಗರೂಕತೆಯಿಂದ ಇರಬೇಕಾಗುವುದು. ಈ ಅವಧಿಯಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಯಶಸ್ಸು ಸಿಗುವ ಸಾಧ್ಯತೆ ತೀರಾ ಕಡಿಮೆ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

ಮೀನ ರಾಶಿ:
ಮೀನ ರಾಶಿಯವರಿಗೆ ವಾರದ ಆರಂಭವು ಉತ್ತಮವಾಗಿರುವುದು. ಆರ್ಥಿಕ ಸ್ಥಿತಿ ಸುಧಾರಿಸುವುದು. ಪ್ರತಿಭೆಗೆ ಉತ್ತಮ ಅವಕಾಶ ಸಿಗುವುದು. ಮಕ್ಕಳಿಂದ ಸಿಹಿ ಸುದ್ದಿ ಕೇಳುವಿರಿ. ದೂರದ ಊರಿಗೆ ಪ್ರಯಾಣ ಬೆಳೆಸುವ ಯೋಗವಿದೆ.

Leave a Comment

Your email address will not be published. Required fields are marked *