August 2021

ಉಡುಪಿ| ಪ್ರೇಯಸಿಯ ಇರಿದು ಕೊಂದ ಪ್ರೇಮಿಯೂ ಸಾವು| ಸಾವಲ್ಲಿ ಕೊನೆಯಾಯ್ತು ಭಗ್ನ ಪ್ರೇಮ

ಉಡುಪಿ: ಪ್ರೇಯಸಿಗೆ ಚೂರಿಯಿಂದ ಇರಿದು ತಾನೂ ಕುತ್ತಿಗೆ ಕೊಯ್ದುಕೊಂಡ ಪ್ರಿಯಕರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಪ್ರೀತಿ ಸಾವಲ್ಲಿ ಅಂತ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಪ್ರೇಯಸಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಳು. ಉಡುಪಿಯ ಸಂತೆಕಟ್ಟೆ ಸಮೀಪದ ಬ್ಯಾಂಕ್ ಉದ್ಯೋಗಿಯಾಗಿದ್ದ ಸೌಮ್ಯಶ್ರೀ ಹಾಗೂ ಮೆಡಿಕಲ್ ಉದ್ಯೋಗಿಯಾಗಿದ್ದ ಸಂದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸೌಮ್ಯಶ್ರೀಗೆ ವಾರದ ಹಿಂದಷ್ಟೇ‌ ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಇದರಿಂದ ಸಂದೇಶ ಕುಲಾಲ್ ಕುಪಿತಗೊಂಡಿದ್ದ, ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವೂ ನಡೆದಿತ್ತು. ಹೀಗಿರುವಾಗ […]

ಉಡುಪಿ| ಪ್ರೇಯಸಿಯ ಇರಿದು ಕೊಂದ ಪ್ರೇಮಿಯೂ ಸಾವು| ಸಾವಲ್ಲಿ ಕೊನೆಯಾಯ್ತು ಭಗ್ನ ಪ್ರೇಮ Read More »

ಪ್ಯಾರಾಲಂಪಿಕ್ಸ್ ನಲ್ಲಿ ಮತ್ತೆರಡು ಪದಕ ಬಾಚಿದ ಭಾರತ

ಟೋಕಿಯೊ : ಇಲ್ಲಿ ನಡೆಯುತ್ತಿರುವಂತ ಪ್ಯಾರಾಲಿಂಪಿಕ್ಸ್ ನಲ್ಲಿ ಮಂಗಳವಾರ ನಡೆದ ಪುರುಷರ ಹೈಜಂಪ್ – ಟಿ63 ಫೈನಲ್ ನಲ್ಲಿ ಭಾರತದ ಥಂಗಾವೇಲು ಮರಿಯಪ್ಪನ್ ಮತ್ತು ಶರದ್ ಕುಮಾರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಯುಎಸ್‌ಎಯ ಸ್ಯಾಮ್ ಗ್ರೂ ತನ್ನ ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ 1.88 ಮೀ ಎತ್ತರವನ್ನು ಜಿಗಿಯುವ ಮೂಲಕ ಚಿನ್ನವನ್ನು ಗೆದ್ದಿದ್ದಾರೆ. ಭಾರತದ ಮರಿಯಪ್ಪನ್ ಎತ್ತರವನ್ನು ತೆರವುಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆಳ್ಳಿ ಪದಕವನ್ನು ಪಡೆದರು. ಇದು 2016ರ ರಿಯೋ ಒಲಿಂಪಿಕ್ಸ್ ನಲ್ಲಿ

ಪ್ಯಾರಾಲಂಪಿಕ್ಸ್ ನಲ್ಲಿ ಮತ್ತೆರಡು ಪದಕ ಬಾಚಿದ ಭಾರತ Read More »

ಮಂಗಳೂರು: ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯ ಸಂಕೀರ್ಣದಿಂದ ಜಿಗಿದು ಆತ್ಮಹತ್ಯೆ

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಕೋರ್ಟಿಗೆ ಹಾಜರುಪಡಿಸಿದ ವೇಳೆ ನಗರದ ನ್ಯಾಯಾಲಯ ಸಂಕೀರ್ಣದ ಆರನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ತಲಪಾಡಿ ಕಿನ್ಯ ನಿವಾಸಿ ರವಿರಾಜ್ (32) ಕೋರ್ಟ್ ಮಹಡಿಯಿಂದ ಹಾರಿ ಸಾವು ಕಂಡವರು. ರವಿರಾಜ್ ಅವರನ್ನು ಸೋಮವಾರ ತೊಕ್ಕೊಟ್ಟಿನ ಸೆಬಾಸ್ಟಿಯನ್ ಕಾಲೇಜು ಬಳಿ ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಇಂದು ಉಳ್ಳಾಲ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ

ಮಂಗಳೂರು: ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯ ಸಂಕೀರ್ಣದಿಂದ ಜಿಗಿದು ಆತ್ಮಹತ್ಯೆ Read More »

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ

ಮಂಗಳೂರು : ಕಾರಿನ ನಂಬರ್ ಪ್ಲೇಟ್‌ ಬಳಿ ಕೊರಗಜ್ಜನ ಭಾವಚಿತ್ರ ಇದೆ ಎಂದು ಆಕ್ಷೇಪಿಸಿದ ಪೊಲೀಸ್‌ ಸಿಬ್ಬಂದಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ ಬಳಿ ಇಂದು ನಡೆದಿದೆ. ನಗರದ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಮಾರುತಿ 800 ವಾಹನದಲ್ಲಿ ನೋಂದಣಿ ಸಂಖ್ಯೆಯ ಬಳಿ ಕೊರಗಜ್ಜನ ಭಾವಚಿತ್ರವಿತ್ತು. ಆ ಭಾವಚಿತ್ರ ತೆಗೆಯುವಂತೆ ಪೊಲೀಸ್‌ ಸಿಬ್ಬಂದಿ ಸೂಚಿಸಿದ್ದು, ಈ ವೇಳೆ ದೈವದ ಭಾವಚಿತ್ರ ತೆಗೆಯಲು ಕಾರಿನ ಮಾಲೀಕ ಹಾಗೂ

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ Read More »

9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕಾರ| ದೇಶದ ಮೊದಲ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ ಬಿ.ವಿ ನಾಗರತ್ನ|

ನವದೆಹಲಿ: ಇತ್ತೀಚೆಗಷ್ಟೇ ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದ ಕರ್ನಾಟಕದ ನ್ಯಾಯಮೂರ್ತಿ ನಾಗರತ್ನ ಬಿ.ವಿ ಸೇರಿದಂತೆ ದೇಶದ 9 ನ್ಯಾಯಾಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕರ್ನಾಟಕದವರಾದ, ರಾಜ್ಯ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದ ನಾಗರತ್ನ ಬಿ.ವಿ ಸೇರಿ ಮೂವರು ಮಹಿಳಾ ನ್ಯಾಯಮೂರ್ತಿಗಳೂ ಒಳಗೊಂಡಂತೆ ಒಂಬತ್ತು ಹೊಸ ನ್ಯಾಯಮೂರ್ತಿಗಳು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ನಾಗರತ್ನಿ ಬಿವಿ ಅವರೊಂದಿಗೇ ನ್ಯಾಯಮೂರ್ತಿ ಎ.ಎಸ್. ಓಕಾ, ನ್ಯಾಯಮೂರ್ತಿ, ವಿಕ್ರಮ್ ನಾಥ್, ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ,

9 ಮಂದಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕಾರ| ದೇಶದ ಮೊದಲ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ ಬಿ.ವಿ ನಾಗರತ್ನ| Read More »

ಶ್ರಿಲಂಕಾ ಉಗ್ರರ ಕರಿನೆರಳು| ಕೇರಳ, ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್

ಮಂಗಳೂರು: ಕೇರಳ ಹಾಗೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಶ್ರೀಲಂಕಾ ಉಗ್ರರು ನುಸಿಳಿರೋ ಸುಳಿವನ್ನು, ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ, ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಕೇರಳದ ಕರಾವಳಿ ಪ್ರದೇಶಕ್ಕೆ 12 ಶ್ರೀಲಂಕಾ ಮೂಲಕ ಉಗ್ರರು 2 ಯಾಂತ್ರಿಕ ದೋಣಿಗಳಲ್ಲಿ ಬಂದಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸರು ಹದ್ದಿನ ಕಣ್ಣು ನೆಟ್ಟಿದ್ದಾರೆ. ಕೇರಳ ಅಥವಾ ಕರ್ನಾಟಕದಿಂದ ಪಾಕಿಸ್ತಾನಕ್ಕೆ ತೆರಳುವ ಯೋಜನೆಯಿಂದ ಉಗ್ರರು ಬಂದಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ

ಶ್ರಿಲಂಕಾ ಉಗ್ರರ ಕರಿನೆರಳು| ಕೇರಳ, ಕರ್ನಾಟಕದ ಕರಾವಳಿಯಲ್ಲಿ ಹೈ ಅಲರ್ಟ್ Read More »

OLX ನಲ್ಲಿ ಅತ್ಯಾಚಾರ ಆರೋಪಿಯನ್ನು ಹಿಡಿದ ಪೊಲೀಸರು| ಪುತ್ತೂರು ಮೂಲದ ಆರೋಪಿ ಕೊಚ್ಚಿಯಲ್ಲಿ ಪತ್ತೆಯಾಗಿದ್ದು ಹೇಗೆ?

ಕೊಚ್ಚಿ: ಎರಡೂವರೆ ವರ್ಷದ ಹಿಂದಿನ ಕೇರಳದ ಕಾಕ್ಕನಾಡ್ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಪುತ್ತೂರು ಮೂಲದ ಪ್ರವೀಣ್ ಎಂಬಾತನನ್ನು ಕೇರಳ ಪೊಲೀಸರು ಒ ಎಲ್ ಎಕ್ಸ್ ಸಹಾಯದಿಂದ ಹಿಡಿದಿರುವ ಅಚ್ಚರಿಯ ಘಟನೆ ನಡೆದಿದೆ. ಆರೋಪಿ ಕಳೆದ ಎರಡೂವರೆ ವರ್ಷಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಆತನ ಬಂಧನಕ್ಕಾಗಿ ಪೊಲೀಸರು ಎಷ್ಟೇ ಬಲೆ ಬೀಸಿದ್ದರೂ ಸಾಧ್ಯವಾಗಿರಲಿಲ್ಲ. ಕಡೆಗೆ ಅವರಿಗೆ ಸಹಾಯ ಮಾಡಿದ್ದು ಒ ಎಲ್ ಎಕ್ಸ್ ಜಾಲತಾಣ. 30ರ ಹರೆಯದ ಆರೋಪಿ ಪ್ರವೀಣ್ ದಕ್ಷಿಣ ಕನ್ನಡದ ಪುತ್ತೂರಿನ ನಿವಾಸಿ. 2019ರಲ್ಲಿ ಆತ

OLX ನಲ್ಲಿ ಅತ್ಯಾಚಾರ ಆರೋಪಿಯನ್ನು ಹಿಡಿದ ಪೊಲೀಸರು| ಪುತ್ತೂರು ಮೂಲದ ಆರೋಪಿ ಕೊಚ್ಚಿಯಲ್ಲಿ ಪತ್ತೆಯಾಗಿದ್ದು ಹೇಗೆ? Read More »

ಪ್ಯಾರಾಲಂಪಿಕ್| ಮತ್ತೊಂದು ಪದಕದ ಭೇಟೆಯಾಡಿದ ಭಾರತ

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಇಂದು ಪುರುಷರ 10 ಮೀಟರ್ ಏರ್ ಪಿಸ್ತೂಲ್‌ಎಸ್​ಹೆಚ್​1 ಸ್ಪರ್ಧೆಯಲ್ಲಿ ಭಾರತದ ಸಿಂಗರಾಜ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಫೈನಲ್​ನಲ್ಲಿ 216.8 ಅಂಕ ಸಂಪಾದಿಸಿ ಮೂರನೇ ಸ್ಥಾನ ಪಡೆದುಕೊಂಡು ಸಿಂಗರಾಜ್ ಅವರ ಕಂಚಿನ ಪದಕ ಗೆದ್ದರು. ಭಾರತದ ಇನ್ನೋರ್ವ ಶೂಟರ್ ಮನೀಶ್ 7ನೇ ಸ್ಥಾನ ಪಡೆದರು. ಫೈನಲ್ ನಲ್ಲಿ ಒಟ್ಟು 216.8 ಅಂಕಗಳನ್ನು ಗಳಿಸಿದ ಸಿಂಗ್ ರಾಜ್ ಮೂರನೇ ಸ್ಥಾನ ಪಡೆದರೆ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದ ಭಾರತದ ಇನ್ನೋರ್ವ

ಪ್ಯಾರಾಲಂಪಿಕ್| ಮತ್ತೊಂದು ಪದಕದ ಭೇಟೆಯಾಡಿದ ಭಾರತ Read More »

ಬಾರಿಯಂಡ ದೀಪಕ್ ಜೋಯಪ್ಪರಿಗೆ ಜರ್ನಲಿಸಂನಲ್ಲಿ ಪಿಹೆಚ್.ಡಿ.

ಮಡಿಕೇರಿ: ಕೊಡಗಿನ ಮದೆನಾಡು ಗ್ರಾಮದ ಬಾರಿಯಂಡ ದೀಪಕ್ ಜೋಯಪ್ಪ ಅವರು ಸಂಶೋಧಸಿದ ’ಇಂಗ್ಲಿಷ್ ಮತ್ತು ಕನ್ನಡ ನ್ಯೂಸ್ ವೆಬ್‌ಸೈಟ್ಸ್: ಸ್ಟಡಿ ಆನ್ ದೇರ್ ಪೊಟೆನ್‌ಷ್ಯಾಲಿಟಿ ಆಂಡ್ ಸಸ್ಟೈನೇಬಿಲಿಟಿ’ ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಮಾಹೆ) ಸಂಸ್ಥೆಯು ಡಾಕ್ಟರೇಟ್ ನೀಡಿದೆ. ದೀಪಕ್ ಅವರು ಈ ಸಂಸ್ಥೆಯು ಕೊಡುವ ಪ್ರತಿಷ್ಠಿತ ’ಡಾ. ಟಿಎಂಎ ಪೈ’ ವಿದ್ಯಾರ್ಥಿ ವೇತನದಲ್ಲಿ ಸಂಶೋಧನೆ ನಡೆಸಿದ್ದರು. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯ ಪ್ರೊಫೆಸರ್ ಮತ್ತು ನಿರ್ದೇಶಕರಾದ ಡಾ. ಪದ್ಮ ರಾಣಿ ಅವರ

ಬಾರಿಯಂಡ ದೀಪಕ್ ಜೋಯಪ್ಪರಿಗೆ ಜರ್ನಲಿಸಂನಲ್ಲಿ ಪಿಹೆಚ್.ಡಿ. Read More »

ಕೋಣವನ್ನು ಸುಪಾರಿ ಪಡೆದು ಕೊಂದ ಪಾತಕಿಗಳು ಕಂಬಿ ಹಿಂದೆ| ಮನುಷ್ಯತ್ವ ಮರೆತ ನರರಾಕ್ಷಸರು..!

ಮಂಗಳೂರು: ಮಳೆಗಾಲದಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ತಿನ್ನುತ್ತಾ, ದಷ್ಟಪುಷ್ಟವಾಗಿ ಬೆಳೆದ ಬಿಡಾಡಿ ಕೋಣವದು. ಕೋಣದ ಯಜಮಾನ ಕೋಣವನ್ನು ಹಟ್ಟಿಗೆ ಸೇರಿಸದೇ ಬಿಟ್ಟು ಬಿಟ್ಟಿದ್ದ. ಕೋಣ ಊರಿನಲ್ಲೇ ಹುಲ್ಲಿದ್ದ ಜಾಗದಲ್ಲಿ ಮೇದು ಅಲ್ಲೇ ಮಲಗಿ ದಿನ ಕಳೆಯುತಿತ್ತು. ಆಹಾರ ಅರಸುತ್ತಾ, ಹುಲ್ಲು ಜಾಸ್ತಿ ಬೆಳೆದ ತೋಟಕ್ಕೆ ಕೋಣ ನುಗ್ಗಿದ್ದೇ ತಪ್ಪಾಗಿತ್ತು. ತೋಟದ ಮಾಲೀಕನ ಕೆಂಗಣ್ಣಿಗೆ ಕೋಣ ಅನಾಯಾಸವಾಗಿ ಬಿದ್ದಿತ್ತು. ಕೋಣವನ್ನು ತೋಟದಿಂದ ಓಡಿಸಲು ನಾನಾ ಪ್ರಯತ್ನ ಪಟ್ಟರೂ ಕೋಣ ಮಾತ್ರ ಜಪ್ಪಯ್ಯ ಅಂದ್ರೂ ತೋಟ ಬಿಡಲಿಲ್ಲ. ಅಂತಿಮವಾಗಿ ಮಾಲೀಕ

ಕೋಣವನ್ನು ಸುಪಾರಿ ಪಡೆದು ಕೊಂದ ಪಾತಕಿಗಳು ಕಂಬಿ ಹಿಂದೆ| ಮನುಷ್ಯತ್ವ ಮರೆತ ನರರಾಕ್ಷಸರು..! Read More »