ರಾಜ್ಯಾದ್ಯಂತ ಚುರುಕುಗೊಂಡ ಮುಂಗಾರು| ಕರಾವಳಿಯ ಹಲವೆಡೆ ಭಾರೀ ಮಳೆ
ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದೆ. ಅದರಲ್ಲೂ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಅನೇಕ ಭಾಗಗಳಲ್ಲಿ ವಿಪರೀತ ಮಳೆಯಾಗುತ್ತಿದ್ದು, ಬೆಂಗಳೂರಲ್ಲೂ ಕೂಡ ಹೆಚ್ಚಿನ ಮಳೆಯಾಗುತ್ತಿದೆ. ಬೆಂಗಳೂರಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರುತ್ತಿದೆ. ಆಗಸ್ಟ್ 24ರಂದು ಅತಿಹೆಚ್ಚು ಮಳೆ 9 ಸೆಂ.ಮೀ. ಬಿದ್ದಿತ್ತು. ಇನ್ನು ಬೀದರ್‌ನ ಹುಮನಾಬಾದ್, ಕೊಡಗಿನ ಶ್ರೀಮಂಗಲ, ಶಿವಮೊಗ್ಗದ ಆಗುಂಬೆ, ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ಭಾರಿ ಮಳೆಯಾಗಿದೆ. ಇಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ
ರಾಜ್ಯಾದ್ಯಂತ ಚುರುಕುಗೊಂಡ ಮುಂಗಾರು| ಕರಾವಳಿಯ ಹಲವೆಡೆ ಭಾರೀ ಮಳೆ Read More »










