ಸಮಗ್ರ ಸಮಾಚಾರ

ಎಸ್ಐಆರ್ ಗೊಂದಲಕ್ಕೆ ECI ಸ್ಪಷ್ಟನೆ| ಸುಪ್ರೀಂ ನಿಂದ ಮಹತ್ವದ ಹೇಳಿಕೆ

ಸಮಗ್ರ ನ್ಯೂಸ್: ದೇಶಾದ್ಯಂತ ಇದೀಗ ಚುನಾವಣಾ ಆಯೋಗ, ಗ್ಯಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ(SIR) ಭಾರಿ ಕೋಲಾಹಲ ಸೃಷ್ಟಿಸಿದೆ.ಈ ಕುರಿತು ಎದ್ದಿರುವ ಅಪಪ್ರಚಾರ ಮತ್ತು ಕಾನೂನಾತ್ಮಕ ಗೊಂದಲಗಳಿಗೆ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ. ಇದೇ ವೇಳೆ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಸೆಪ್ಟೆಂಬರ್ 26, 2026 ರ ಪತ್ರಿಕಾ ಪ್ರಕಟಣೆಯಲ್ಲಿ ಚುನಾವಣಾ ಆಯೋಗವು SIR ಗಾಗಿ ಫಾರ್ಮ್ 6

ಎಸ್ಐಆರ್ ಗೊಂದಲಕ್ಕೆ ECI ಸ್ಪಷ್ಟನೆ| ಸುಪ್ರೀಂ ನಿಂದ ಮಹತ್ವದ ಹೇಳಿಕೆ Read More »

ಸ್ಮಿತ್ ಮಚ್ಚಾರ್ ಗೆ ಅಮೇರಿಕಾ ಸಂಸತ್ ನಿಂದ ಗೌರವ

ಸಮಗ್ರ ನ್ಯೂಸ್: ಆಕಾಶದಲ್ಲೇ ಎದುರಾದ ಭೀಕರ ಅಪಾಯದ ಸಂದರ್ಭದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಅಮೆರಿಕದ ಸಂಸತ್‌ ನಲ್ಲಿ ವಿಶೇಷ ಗೌರವ ವ್ಯಕ್ತವಾಗಿದೆ. ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಮಚ್ಚಾರ್ ಅವರು ತೋರಿದ ಧೈರ್ಯವನ್ನು ಶ್ಲಾಘಿಸಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನಲ್ಲಿ ನಿರ್ಣಯ ಮಂಡಿಸಲಾಗಿದೆ. ಸೆಪ್ಟೆಂಬರ್ 30ರಂದು ಫ್ಲೈದುಬೈ FZ1073 ವಿಮಾನ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್‌ನ ಟೆಲ್

ಸ್ಮಿತ್ ಮಚ್ಚಾರ್ ಗೆ ಅಮೇರಿಕಾ ಸಂಸತ್ ನಿಂದ ಗೌರವ Read More »

ಅ.27 ರಿಂದ ನಂದಿನಿ ಹಾಲಿನ ದರ ₹.8 ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ, ಸದ್ಯ ನೀತಿಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಈ ಸಂಬಂಧ ಚುನಾವಣಾ ಆಯೋಗದ ಅನುಮತಿ ಪಡೆದು, ನಂತರವಷ್ಟೇ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅ. 23ರಂದು ಮೇಲ್ಮನೆ ಚುನಾವಣೆ ನಡೆಯಲಿದೆ. ಇದೆಲ್ಲವೂ ಮುಗಿದ ಬಳಿಕವೇ ಅಂದರೆ ಅ.27ರ ಬಳಿಕವೇ ಹಾಲಿನ ದರ ಹೆಚ್ಚಳದ ಬಗ್ಗೆ ಆದೇಶ ಹೊರಡಿಸುವುದು ಸೂಕ್ತ

ಅ.27 ರಿಂದ ನಂದಿನಿ ಹಾಲಿನ ದರ ₹.8 ಏರಿಕೆ ಸಾಧ್ಯತೆ Read More »

ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಬೆಳ್ತಂಗಡಿ ನಗರದ ರೆಂಕೆದಗುತ್ತು, ಕಸಬಾ ಗ್ರಾಮ ನಿವಾಸಿ ಶ್ರೇಯಸ್ ಎಸ್. ಕುಂಬಾರ (14 ವ) ಬಾಲಕ ಪಣಂಬೂರು ಬೀಚ್ ನಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಇದೀಗ ಬಾಲಕನ ಮೃತದೇಹ ಉಡುಪಿ ಜಿಲ್ಲೆಯ ಕಾಪು ಹೆಜಮಾಡಿಯಲ್ಲಿ ಅ.6 ರಂದು ಪತ್ತೆಯಾಗಿದೆ. ಬಾಲಕ‌ ಶ್ರೇಯಸ್ ಎಸ್. ತನ್ನ 4 ಜನ ಅಪ್ರಾಪ್ತ ಸ್ನೇಹಿತರ ಜೊತೆ ಅ.4 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿ ವೇಷ ಹಾಕುವ

ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆ Read More »

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ| ಅಪಾಯದಿಂದ ಪಾರು

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಂಚರಿಸುತ್ತಿದ್ದ ಕಾರು ಕರಿಕ್ಕಳ ಮತ್ತು ನಿಂತಿಕಲ್ಲು ನಡುವಿನ ಮುಚ್ಚಿಲ ಎಂಬಲ್ಲಿ ರಸ್ತೆ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಶಾಸಕಿಯವರು ಹಾಗೂ ಚಾಲಕ ಸುರಕ್ಷಿತವಾಗಿ ಪಾರಾಗಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕರಿಕ್ಕಳ–ನಿಂತಿಕಲ್ಲು ಮಾರ್ಗದ ಮುಚ್ಚಿಲ ಎಂಬಲ್ಲಿ ಶಾಸಕರ ಕಾರಿನ ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಚಾಲಕ ಏಕಾಏಕಿ ಸಡನ್ ಬ್ರೇಕ್ ಹಾಕಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ| ಅಪಾಯದಿಂದ ಪಾರು Read More »

ದೇಶವಾಸಿಗಳಿಗೆ ಮತ್ತೆ ಬೆಲೆ ಏರಿಕೆ ಶಾಕ್| ಸಕ್ಕರೆ, ಅಕ್ಕಿ, ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳು ದುಬಾರಿ

ಸಮಗ್ರ ನ್ಯೂಸ್: ದೇಶಾದ್ಯಂತ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂಭ್ರಮದ ವಾತಾವರಣ ಕಳೆಗಟ್ಟುತ್ತಿರುವ ಬೆನ್ನಲ್ಲೇ, ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಡುಗೆ ಎಣ್ಣೆ, ಅಕ್ಕಿ ಹಾಗೂ ಸಕ್ಕರೆ ಸೇರಿದಂತೆ ಹಬ್ಬದಡುಗೆಗೆ ಅತಿ ಅಗತ್ಯವಾಗಿ ಬೇಕಾಗುವ ಪ್ರಮುಖ ದಿನಸಿ ಪದಾರ್ಥಗಳ ದರ ಗಣನೀಯವಾಗಿ ಏರಿಕೆಯಾಗಿದೆ. ಹಬ್ಬದ ದಿನಗಳಲ್ಲಿ ಹೆಚ್ಚುವ ಬೇಡಿಕೆಯೊಂದಿಗೆ ಹವಾಮಾನ ವೈಪರೀತ್ಯ, ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಹಾಗೂ ಪೂರೈಕೆ ಶೃಂಖಲೆಯಲ್ಲಿ ಉಂಟಾಗಿರುವ ವ್ಯತ್ಯಯಗಳು ಈ ಬೆಲೆ ಏರಿಕೆಗೆ ಮುಖ್ಯ ಕಾರಣಗಳಾಗಿದ್ದು, ಸಾಮಾನ್ಯ ಗೃಹಿಣಿಯರ ಮಾಸಿಕ ಬಜೆಟ್

ದೇಶವಾಸಿಗಳಿಗೆ ಮತ್ತೆ ಬೆಲೆ ಏರಿಕೆ ಶಾಕ್| ಸಕ್ಕರೆ, ಅಕ್ಕಿ, ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳು ದುಬಾರಿ Read More »

ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ , ಮಾತೃಭೂಮಿ ಯುವ ವೇದಿಕೆ ಮಾಣಿಲ ಸಂಘದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ 

ಸಮಗ್ರ ನ್ಯೂಸ್: ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ ಮತ್ತು ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ಸಹಯೋಗದಲ್ಲಿ ಆ.4 ರಂದು ಉಚಿತ ನೇತ್ರ ತಪಾಸಣಾ ಶಿಬಿರವು ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಇಲ್ಲಿ ಯಶಸ್ವಿಯಾಗಿ ನಡೆಯಿತು.  ಶಿಬಿರವನ್ನು ಮಾಣಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ ಇಲ್ಲಿನ ಶಾಲಾ ಸಂಚಾಲಕರಾದ ನಡುಮನೆ ಶ್ರೀ ಮಹಾಬಲ ಭಟ್ ಉದ್ಘಾಟಿಸಿದರು. ಪಾರಾದೀಪ್

ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ , ಮಾತೃಭೂಮಿ ಯುವ ವೇದಿಕೆ ಮಾಣಿಲ ಸಂಘದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ  Read More »

ರಾಜ್ಯ‌ ಅಬಕಾರಿ ಆದಾಯಕ್ಕೆ ಕಿಕ್ ಕೊಟ್ಟ ಮದ್ಯಪ್ರಿಯರು| ರಾಜಸ್ವ ಸಂಗ್ರಹದಲ್ಲಿ ಭಾರೀ ಏರಿಕೆ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯು ಪ್ರಸಕ್ತ 2026ನೇ ಸಾಲಿನ ಅರ್ಧವಾರ್ಷಿಕ ಅವಧಿಯ ಅಂದರೆ ಏಪ್ರಿಲ್​​ನಿಂದ ಸ್ಟೆಪ್ಟೆಂಬರ್​​ವರೆಗಿನ ಮದ್ಯ ಮಾರಾಟ ಹಾಗೂ ರಾಜಸ್ವ ಸಂಗ್ರಹದ ವರದಿಯನ್ನು ಬಿಡುಗಡೆ ಮಾಡಿದೆ. 2025ಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟ ಮತ್ತು ರಾಜಸ್ವ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡಿದೆ. ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 22,191.63 ಕೋಟಿ ರೂ ಅಬಕಾರಿ ರಾಜಸ್ವ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ 2,621.40 ಕೋಟಿ ರೂ ಹೆಚ್ಚಳವಾಗಿದೆ. ಆ ಮೂಲಕ ಒಟ್ಟು ಅಬಕಾರಿ

ರಾಜ್ಯ‌ ಅಬಕಾರಿ ಆದಾಯಕ್ಕೆ ಕಿಕ್ ಕೊಟ್ಟ ಮದ್ಯಪ್ರಿಯರು| ರಾಜಸ್ವ ಸಂಗ್ರಹದಲ್ಲಿ ಭಾರೀ ಏರಿಕೆ Read More »

ವಾಲ್ಮೀಕಿ ಜಯಂತಿ ರಜೆ ದಿನ ಬದಲಾವಣೆ

ಸಮಗ್ರ ನ್ಯೂಸ್: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ ದಿನಾಂಕದ ಬದಲಾಗಿ, ಅಕ್ಟೋಬರ್ 26ರ ಸೋಮವಾರದಂದು ವಾಲ್ಮೀಕಿ ಜಯಂತಿ ಆಚರಿಸಲು ಹಾಗೂ ಅಂದು ಸಾರ್ವತ್ರಿಕ ರಜೆ ನೀಡಿ ಸರ್ಕಾರ ಆದೇಶಿಸಿದೆ. ಶೀಗಿ ಹುಣ್ಣಿಮೆಯಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆಗೆ ಸರ್ಕಾರ ಆದೇಶಿಸಿದೆ. ಹೀಗಾಗಿ ಸಾರ್ವತ್ರಿಕ ರಜೆಯನ್ನು 2026ರ ಅಕ್ಟೋಬರ್ 25ರ ಭಾನುವಾರದ ಬದಲು ಅಕ್ಟೋಬರ್ 26ರ ಸೋಮವಾರಕ್ಕೆ ಬದಲಾಯಿಸಿ ಸಿಬ್ಬಂದಿ ಮತ್ತು ಆಡಳಿತ

ವಾಲ್ಮೀಕಿ ಜಯಂತಿ ರಜೆ ದಿನ ಬದಲಾವಣೆ Read More »

ಬೆಂಗಳೂರು: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ, ರೌಡಿಶೀಟರ್ ಸಿಸಿಬಿ ವಶಕ್ಕೆ; ಡಿಸಿಪಿ ಶ್ರೀನಿವಾಸ್ ಗೌಡ ರೇಡ್ ಗೆ ಬೆಚ್ಚಿಬಿದ್ದ ರೌಡಿಪಡೆ 

ಸಮಗ್ರ ನ್ಯೂಸ್: ನಗರದಲ್ಲಿ ರೌಡಿ ಚಟುವಟಿಕೆಗಳ ಮೇಲಿನ ನಿಯಂತ್ರಣ ಕ್ರಮಗಳನ್ನು ಮುಂದುವರಿಸಿರುವ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು, ಕೊಲೆ ಪ್ರಕರಣದಲ್ಲಿ ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಹಾಗೂ ಕಳೆದ 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ರೌಡಿಶೀಟರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.    ರೌಡಿಗಳ ವಿರುದ್ಧ ನಿರಂತರ ನಿಗಾ ವಹಿಸಿರುವ ಸಿಸಿಬಿ, ಡಿಸಿಪಿ ಶ್ರೀನಿವಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ನಿತ್ಯ ಕಾರ್ಯಾಚರಣೆ ಪ್ರಾರಂಭಿಸಿದೆ. ಶ್ರೀನಿವಾಸ್ ಗೌಡ ಈ ನಡೆಗೆ ಸದ್ಯ ರೌಡಿ ಪಡೆ ಬೆಚ್ಚಿಬಿದ್ದಿದೆ. ಕೆ.ಜಿ. ಹಳ್ಳಿ

ಬೆಂಗಳೂರು: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ, ರೌಡಿಶೀಟರ್ ಸಿಸಿಬಿ ವಶಕ್ಕೆ; ಡಿಸಿಪಿ ಶ್ರೀನಿವಾಸ್ ಗೌಡ ರೇಡ್ ಗೆ ಬೆಚ್ಚಿಬಿದ್ದ ರೌಡಿಪಡೆ  Read More »