September 2021

ಕೋರ್ಟ್ ಗೆ ಹಾಜರಾಗದ ಡಿಕೆಶಿ| ನ.6 ಕ್ಕೆ ಮತ್ತೆ ವಾರಂಟ್ ಜಾರಿ|

ಸುಳ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಕರ್ನಾಟಕದ ಇಂಧನ ಸಚಿವರಾಗಿದ್ದಾಗ ನಡೆದ ಘಟನೆಯೊಂದಕ್ಕೆ ಸಂಬಂಧಿಸಿ ಕೇಸಿನ ವಿಚಾರದಲ್ಲಿ ಸಾಕ್ಷ್ಯ ಹೇಳಲು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದು, ಅವರು ಹಾಜರಾಗದ ಹಿನ್ನಲೆಯಲ್ಲಿ ನ.06ಕ್ಕೆ ಮತ್ತೆ ವಾರೆಂಟ್ ಆಗಿದೆ 2016ನೆ‌ ಇಸವಿಯಲ್ಲಿ ‌ವಿದ್ಯುತ್ ಸಮಸ್ಯೆ‌ ಕುರಿತಂತೆ ಬೆಳ್ಳಾರೆಯ ಸಾಯಿ ಗಿರಿಧರ ಎಂಬವರು ಅಂದು ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಗೆ ಫೋನ್ ಮಾಡಿ ಸುಳ್ಯದ ವಿದ್ಯುತ್ ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸಿದ್ದರು. ಇದರಿಂದ ‌ಕುಪಿತರಾದ ಶಿವಕುಮಾರ್, ಮೆಸ್ಕಾಂ ಎಂ.ಡಿ.ಗೆ ಹೇಳಿ […]

ಕೋರ್ಟ್ ಗೆ ಹಾಜರಾಗದ ಡಿಕೆಶಿ| ನ.6 ಕ್ಕೆ ಮತ್ತೆ ವಾರಂಟ್ ಜಾರಿ| Read More »

ಕೋವಿಡ್ ಹಿನ್ನಲೆ| ವಾಹನ ದಾಖಲೆ ಸಿಂಧುತ್ವ ಅವಧಿ ವಿಸ್ತರಿಸಿದ ಸಾರಿಗೆ ಇಲಾಖೆ|

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ದಾಖಲೆಗಳಾದ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ ಮತ್ತು ಇತರ ಪರವಾನಗಿಗಳ ಸಿಂಧುತ್ವವನ್ನು 2021ರ ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ. ಈ ಆದೇಶವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದ್ದು, ನಾಗರಿಕರು, ಸಾಗಾಣಿಕೆದಾರರು ಮತ್ತು ಇತರ ಸಂಘಟನೆಗಳು ತೊಂದರೆಗಳನ್ನ ಎದುರಿಸದಂತೆ ಜಾರಿಗೆ ತರುವಂತೆ ವಿನಂತಿಸಿದೆ. ಮೋಟಾರು ವಾಹನ ಕಾಯ್ದೆ, 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು, 1989ಕ್ಕೆ ಸಂಬಂಧಿಸಿದ ದಾಖಲೆಗಳ

ಕೋವಿಡ್ ಹಿನ್ನಲೆ| ವಾಹನ ದಾಖಲೆ ಸಿಂಧುತ್ವ ಅವಧಿ ವಿಸ್ತರಿಸಿದ ಸಾರಿಗೆ ಇಲಾಖೆ| Read More »

ಈ ಬಾರಿ ನಡೆಯುತ್ತೆ ತಲಕಾವೇರಿ ಜಾತ್ರೆ| ಅ.17 ರಂದು ತೀರ್ಥಸ್ವರೂಪಿಣಿಯಾಗಿ ಉದ್ಭವಿಸಲಿದ್ದಾಳೆ ಕಾವೇರಿ|

ಕೊಡಗು : ಪ್ರತಿವರ್ಷದಂತೆ ಈ ವರ್ಷವೂ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅಕ್ಟೋಬರ್ 17ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಪವಿತ್ರ ಕಾವೇರಿ ತೀರ್ಥೋದ್ಭವವಾಗಲಿದೆ ಕೊರೋನಾ ಸೋಂಕಿನ ಕಾರಣದಿಂದಾಗಿ ಕಾವೇರಿ ತೀರ್ಥೋದ್ಭವ ನಡೆಯೋದು ಅನುಮಾನವಾಗಿತ್ತು.ಆದರೆ ಈ ಬಾರಿ ಕೊರೋನಾ ಆತಂಕದ ನಡುವೆಯೂ ಕಾವೇರಿ ತೀರ್ಥೋದ್ಭವ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಅ. 17 ರಂದು ಮಧ್ಯಾಹ್ನ 1.11 ನಿಮಿಷಕ್ಕೆ ಕಾವೇರಿ ತೀರ್ಥೋದ್ಭವವಾಗಲಿದೆ. ಮಕರ ಲಗ್ನದಲ್ಲಿ ಕಾವೇರಿ ತೀರ್ಥರೂಪದಲ್ಲಿ ತಲಕಾವೇರಿಯಲ್ಲಿ ಉಗಮವಾಗಲಿದ್ದಾಳೆ.

ಈ ಬಾರಿ ನಡೆಯುತ್ತೆ ತಲಕಾವೇರಿ ಜಾತ್ರೆ| ಅ.17 ರಂದು ತೀರ್ಥಸ್ವರೂಪಿಣಿಯಾಗಿ ಉದ್ಭವಿಸಲಿದ್ದಾಳೆ ಕಾವೇರಿ| Read More »

Tika ಉತ್ಸವ ಬಳಿಕ ‘ತಿಥಿ ಭೋಜನ’| “ಎನ್ ಸ್ವಾಮೀ ಇದೂ?” ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

ನವದೆಹಲಿ: ಕೇಂದ್ರ ಸರ್ಕಾರವು ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಹೆಸರನ್ನು ಬದಲಿಸಿದೆ. ಯೋಜನೆಗೆ ‘ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌’ ಯೋಜನೆ ಅಥವಾ ‘ಪಿಎಂ ಪೋಷಣ್‌’ ಎಂದು ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮೋದಿ ನೇತೃತ್ವದ ಬಿಜೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ, ಈ ಹಿಂದಿನ ಸರ್ಕಾರಗಳು ರೂಪಿಸಿದ್ದ ಹಲವಾರು ಯೋಜನೆಗಳ ಹೆಸರುಗಳನ್ನು ಬದಲಿಸಿದೆ. ಇದೀಗ, ಶಾಲೆಗಳಲ್ಲಿ ನೀಡುತ್ತಿದ್ದ ಮಧ್ಯಾಹ್ನದ

Tika ಉತ್ಸವ ಬಳಿಕ ‘ತಿಥಿ ಭೋಜನ’| “ಎನ್ ಸ್ವಾಮೀ ಇದೂ?” ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು Read More »

ಲಾಕ್ಡೌನ್ ಇಫೆಕ್ಟ್| ಏಳು ತಿಂಗಳ ಗರ್ಭವತಿಯಾದ ಅಪ್ರಾಪ್ತೆ| ಇಬ್ಬರ ವಿರುದ್ದ ಫೋಕ್ಸೋ ದಾಖಲು|

ಬೆಳ್ತಂಗಡಿ: ಹತ್ತನೇ ತರಗತಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ, ಇಬ್ಬರು ಕಾಮುಕರು ಅತ್ಯಾಚಾರ ನಡೆಸಿದ ಪರಿಣಾಮ ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ ಕೇಸು ದಾಖಲಾಗಿದೆ.ಶಾಲಾ ತರಗತಿಗಳು ಪ್ರಾರಂಭವಾಗಿದ್ದು, ಇತ್ತೀಚೆಗೆ ಶಾಲೆಗೆ ಇಂಜೆಕ್ಷನ್ ನೀಡಲೆಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಕುರಿತು ಹುಡುಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು ತನ್ನ ಮನೆ ಸಮೀಪದಲ್ಲಿ ಜೆಸಿಬಿ ಕಾಮಗಾರಿ ನಡೆಸುತ್ತಿದ್ದ

ಲಾಕ್ಡೌನ್ ಇಫೆಕ್ಟ್| ಏಳು ತಿಂಗಳ ಗರ್ಭವತಿಯಾದ ಅಪ್ರಾಪ್ತೆ| ಇಬ್ಬರ ವಿರುದ್ದ ಫೋಕ್ಸೋ ದಾಖಲು| Read More »

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ| ಡೆತ್ ನೋಟ್ ಬರೆದಿಟ್ಟು ಜೀವ ಕಳೆದುಕೊಂಡಿದ್ಯಾಕೆ..?

ಬೆಂಗಳೂರು: ಕಿರುತೆರೆಯ ಖ್ಯಾತ ನಟಿ ಸೌಜನ್ಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆಯಲ್ಲಿ ನಡೆದಿದೆ. ದೊಡ್ಡಬೆಲೆ ಬಳಿಯ ಅಪಾರ್ಟ್ ಮೆಂಟ್ ನ ತಮ್ಮ ನಿವಾಸದಲ್ಲೇ ಸೌಜನ್ಯ (25) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೌಜನ್ಯ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಸೌಜನ್ಯ ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾಗಿದ್ದು, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಚೌಕಟ್ಟು ಹಾಗೂ ಫನ್ ಚಿತ್ರದಲ್ಲಿ ಕೂಡ ಸೌಜನ್ಯ ಅಭಿನಯಿಸಿದ್ದಾರೆ. ಬೆಂಗಳೂರಿನ ದೊಡ್ಡಬೆಲೆ ಬಳಿ

ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ| ಡೆತ್ ನೋಟ್ ಬರೆದಿಟ್ಟು ಜೀವ ಕಳೆದುಕೊಂಡಿದ್ಯಾಕೆ..? Read More »

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು

ಉಪ್ಪಿನಂಗಡಿ: ಮಹಿಳೆಯೊಬ್ಬರು ತಪ್ಪಾಗಿ ನೀರಿನ ಬದಲು ಪೆಟ್ರೋಲ್‌ ಕುಡಿದು ಅಸ್ವಸ್ಥಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ದೃಷ್ಟಿ ದೋಷದಿಂದ ಬಳಲುತ್ತಿದ್ದ ಈಕೆ ಪೆರ್ನೆಯ ಸಂಪದಕೋಡಿಯಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದಾಗ ಅಲ್ಲಿ ಹುಲ್ಲು ಕತ್ತರಿಸುವ ಯಂತ್ರದ ಬಳಕೆಯ ಉದ್ದೇಶದಿಂದ ಮನೆಯಲ್ಲಿ ಬಾಟಲಿಯಲ್ಲಿ ತಂದಿರಿಸಿದ ಪೆಟ್ರೋಲನ್ನು ತಿಳಿಯದೇ ಕುಡಿದಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಸ್ವಸ್ಥರಾದ ಅವರನ್ನು ಮಂಗಳೂರಿನ ವೆನ್‌

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು Read More »

ನದಿಗೆ ಉರುಳಿದ‌ ಬಸ್| ಆರು ಮಂದಿ ದುರ್ಮರಣ|

ಮೇಘಾಲಯ: ಇಲ್ಲಿನ ಶಿಲ್ಲಾಂಗ್‌ ಜಿಲ್ಲೆಯಲ್ಲಿ ನಡುರಾತ್ರಿಯಲ್ಲಿ ಪ್ರಯಾಣಿಸುತ್ತಿದ್ದ ಬಸ್‌ವೊಂದು ನದಿಗೆ ಉರುಳಿದ್ದು, ಆರು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಖಾಸಗಿ ಬಸ್‌ನಲ್ಲಿ ಸುಮಾರು 21 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಸ್ ಶಿಲ್ಲಾಂಗ್‌ ಸಮೀಪದಲ್ಲಿರುವ ರಿಂಗ್ಡಿ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ. 16 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುರಂತದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾ ಆರಂಭಿಸಿದ್ದರು. ಆದರೆ,

ನದಿಗೆ ಉರುಳಿದ‌ ಬಸ್| ಆರು ಮಂದಿ ದುರ್ಮರಣ| Read More »

ವಿವಾಹ ವಾರ್ಷಿಕೋತ್ಸವ ಆಚರಿಸುವ ಹೃದಯದ ಚೆಕಪ್ ಮಾಡಿಸಿಕೊಳ್ಳಿ| ವೈದ್ಯಕೀಯ ತಪಾಸಣೆಯಿಂದ ಹೃದಯ ಹಗುರಾಗಿಸಿ- ಡಾ| ಸಿ.ಎನ್ .ಮಂಜುನಾಥ್

ಬೆಂಗಳೂರು: 40 ವರ್ಷ ಮೇಲ್ಪಟ್ಟ ಪುರುಷರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಬದಲು ಮೆಡಿಕಲ್ ಚೆಕಪ್ ವಾರ್ಷಿಕೋತ್ಸವ ಆಚರಿಸಿಕೊಂಡರೆ ಹೃದಯಾಘಾತ ಆಗುವುದರಿಂದ ಬಚಾವ್ ಆಗಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಇಂದಿಲ್ಲಿ ಹೇಳಿದರು. ಬಿಬಿಎಂಪಿ ಮತ್ತು ಜಯದೇವ ಹೃದ್ರೋಗ ಸಂಸ್ಥೆ ಸಹಯೋಗದಲ್ಲಿ ಬಾಬು ಜಗಜೀವನರಾಮ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಒಂದೇ ಜಾಗದಲ್ಲಿ

ವಿವಾಹ ವಾರ್ಷಿಕೋತ್ಸವ ಆಚರಿಸುವ ಹೃದಯದ ಚೆಕಪ್ ಮಾಡಿಸಿಕೊಳ್ಳಿ| ವೈದ್ಯಕೀಯ ತಪಾಸಣೆಯಿಂದ ಹೃದಯ ಹಗುರಾಗಿಸಿ- ಡಾ| ಸಿ.ಎನ್ .ಮಂಜುನಾಥ್ Read More »

ಭಾರತಕ್ಕೆ ಪತ್ರ ಬರೆದ ತಾಲಿಬಾನಿಗಳು|

ಕಾಬೂಲ್, ಸೆ.29- ಆಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಮೊದಲ ಬಾರಿಗೆ ತಾಲಿಬಾನಿಗಳು ಭಾರತ ಸರ್ಕಾರದೊಂದಿಗೆ ಸಂಪರ್ಕ ಸಾಸಿದ್ದು, ಎರಡೂ ದೇಶಗಳ ನಡುವೆ ವಿಮಾನ ಸಂಚಾರ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಆಫ್ಘಾನಿಸ್ಥಾನದ ವಿಮಾನಯಾನ ಹಂಗಾಮಿ ಸಚಿವ ಹಮೀದುಲ್ಲಾ ಅಕುಂದಾ ಅವರು ಭಾರತದ ವಿಮಾನಯಾನದ ಮಹಾ ನಿರ್ದೇಶಕ ಅರುಣ್‍ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಎರಡೂ ದೇಶಗಳ ನಡುವೆ ಈ ಮೊದಲಿನಂತೆ ವಿಮಾನ ಸಂಚಾರ ಆರಂಭಿಸಬೇಕು ಎಂದು ಅಕುಂದಾ ಪತ್ರದಲ್ಲಿ ಸಲಹೆ ನೀಡಿದ್ದಾರೆ. ಕಾಬುಲ್ ವಿಮಾನ ನಿಲ್ದಾಣವನ್ನು ತಾಲಿಬಾನಿಗಳು ವಶಪಡಿಸಿಕೊಂಡ

ಭಾರತಕ್ಕೆ ಪತ್ರ ಬರೆದ ತಾಲಿಬಾನಿಗಳು| Read More »