October 2021

ಮಂಗಳೂರು: ಗುಂಪುಗಳ ನಡುವೆ ಘರ್ಷಣೆ – ಏಳು ಮಂದಿಯ ಅಂದರ್

ಮಂಗಳೂರು: ನಗರದ ಬಳ್ಳಾಲ್‌ಬಾಗ್‌ನಲ್ಲಿ ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಭಾಗಿಯಾಗಿದ್ದ ಏಳು ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದ ದ್ವೇಷದಿಂದ ಮಾತಿಗೆ ಮಾತು ಬೆಳೆದು ಘರ್ಷಣೆಯಾಗಿದ್ದು, ಘರ್ಷಣೆಯ ವೇಳೆ ಏಳು ವಾಹನಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿ, ಸ್ವಯಂ ಪ್ರೇರಿತ ದೂರು ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ಬರ್ಕೆ […]

ಮಂಗಳೂರು: ಗುಂಪುಗಳ ನಡುವೆ ಘರ್ಷಣೆ – ಏಳು ಮಂದಿಯ ಅಂದರ್ Read More »

ಪವರ್ ಸ್ಟಾರ್ ಸ್ಟೇಟಸ್ ಹಾಕಿದವರು ಹರಾಮಿಗಳಂತೆ..! ವೈರಲ್ ಆಗಿದೆ ಧರ್ಮಾಂಧ ಮುಸ್ಲಿಂ ವ್ಯಕ್ತಿಯ ಆಡಿಯೋ.

ಮಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವನಪ್ಪಿದ ಬಳಿಕ ಅವರಿಗೆ ಸ್ಟೇಟಸ್ ಹಾಕಿ ಶ್ರದ್ಧಾಂಜಲಿ ಹೇಳಿದವರು ಹರಾಮಿಗಳು ಅಂತ ಮುಸ್ಲಿಂ ವ್ಯಕ್ತಿಯೊಬ್ಬರು ಹೇಳುತ್ತಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಡಿಯೋದಲ್ಲಿ ಏನಿದೆ?“ಸಾವು ಎಲ್ಲರಿಗೂ ಬರುತ್ತದೆ, ಮುಸ್ಲಿಂ ಸಮುದಾಯಕ್ಕೆ ಆತನ ಕೊಡುಗೆ ಏನು? ಆತ ಆ ಚಡ್ಡಿಗಳಿಗೆ ಅಲ್ವಾ ಸಹಾಯ ಮಾಡಿದ್ದು, ನಮ್ಮ ಸಮುದಾಯಕ್ಕೆ ಆತನ ಕೊಡುಗೆ ಏನು? ನಾವೆಲ್ಲಾ ಕಲಿಯದವರು. ನೀವೆಲ್ಲಾ ಮಸೀದಿಯಲ್ಲಿ ಕಲಿತವರು. ಹಾಗಿರುವಾಗ ಹೀಗೆ ಯಾಕೆ ಸ್ಟೇಟಸ್ ಹಾಕಿ

ಪವರ್ ಸ್ಟಾರ್ ಸ್ಟೇಟಸ್ ಹಾಕಿದವರು ಹರಾಮಿಗಳಂತೆ..! ವೈರಲ್ ಆಗಿದೆ ಧರ್ಮಾಂಧ ಮುಸ್ಲಿಂ ವ್ಯಕ್ತಿಯ ಆಡಿಯೋ. Read More »

ಮುಂದುವರಿದ ಪೆಟ್ರೋಲ್, ಡೀಸೆಲ್ ಜೊತೆಯಾಟ| ಅಡುಗೆ ಅನಿಲವೂ ಏಕ್ ದಂ‌ ಸೆಂಚುರಿ ಬಾರಿಸುವ ಸಾಧ್ಯತೆ|

ದೆಹಲಿ: ಸತತ ಐದನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದ ದೇಶಾದ್ಯಂತ ತೈಲ ಬೆಲೆ ದಾಖಲೆ ಮಟ್ಟ ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಭಾನುವಾರ (ಅ.31) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿವೆ. ಇಂದು ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 35 ಪೈಸೆ ಏರಿಕೆ ಆಗಿದೆ.ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಈಗಾಗಲೇ ಬಸವಳಿದಿರುವ ಜನಸಾಮಾನ್ಯರ ಮೇಲೆ ದೀಪಾವಳಿ ಹಬ್ಬದ ವೇಳೆ ಇನ್ನೊಂದು ಬರೆ ಎಳೆಯಲು ಕೇಂದ್ರ ಸರಕಾರ ಮುಂದಾಗಿದೆ. ಅಧಿಕೃತ ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ

ಮುಂದುವರಿದ ಪೆಟ್ರೋಲ್, ಡೀಸೆಲ್ ಜೊತೆಯಾಟ| ಅಡುಗೆ ಅನಿಲವೂ ಏಕ್ ದಂ‌ ಸೆಂಚುರಿ ಬಾರಿಸುವ ಸಾಧ್ಯತೆ| Read More »

ಮಣ್ಣಲ್ಲಿ ಮಣ್ಣಾದ ಯುವರತ್ನ| ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ|

ಬೆಂಗಳೂರು: ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನೆರವೇರಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಹಲವು ಸಚಿವರು, ರಾಜಕೀಯ ಮುಖಂಡರು, ಗಣ್ಯರು, ಸಿನಿಮಾ ತಾರೆಯರು ಈ ಸಂದರ್ಭದಲ್ಲಿ ಹಾಜರಿದ್ದು ನೆಚ್ಚಿನ ನಟನಿಗೆ ಕಂಬನಿಧಾರೆಯಿಂದ ಅಂತಿಮ ವಿದಾಯ ಹೇಳಿದರು. ಸಿಎಂ ಬೊಮ್ಮಾಯಿಯವರಂತೂ ಬಹಳ ಭಾವುಕರಾಗಿ ಪುನೀತ್ ಅವರ ಹಣೆಗೆ ಮುತ್ತಿಟ್ಟರು. ಆ ದೃಶ್ಯ ಮನಕಲಕುವಂತಿದೆ. ಈ ಸಂದರ್ಭದಲ್ಲಿ ಪುನೀತ್ ಅವರ ಪತ್ನಿ, ಪುತ್ರಿಯರು

ಮಣ್ಣಲ್ಲಿ ಮಣ್ಣಾದ ಯುವರತ್ನ| ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ| Read More »

ದ್ವಾದಶ ರಾಶಿಗಳ ವಾರಭವಿಷ್ಯ

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1): ಕೃಷಿ ಭೂಮಿಯ ಖರೀದಿ ಬಗ್ಗೆ ಮನೆಯವರೊಡನೆ ಚರ್ಚೆ ಮಾಡುವಿರಿ. ಕೆಟ್ಟು ನಿಂತಿದ್ದ ಯಂತ್ರೋಪಕರಣಗಳ ದುರಸ್ತಿಯಿಂದ ಉದ್ದಿಮೆಯಲ್ಲಿ ತಯಾರಿಕೆ ಹೆಚ್ಚುತ್ತದೆ.ಮನೆಯವರಿಗೆ ಹೊಸ ವಸ್ತ್ರಗಳನ್ನು ಕೊಂಡುಕೊಳ್ಳುವಿರಿ. ನಿಮ್ಮದೇ ತಪ್ಪಿನಿಂದ ಶತ್ರುಬಾಧೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ವ್ಯವಹಾರಗಳ ಮಾತುಕತೆಯ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿರುವವರಿಗೆ ಆಶಾಕಿರಣವೊಂದು ಗೋಚರಿಸಿ ಸಂತಸವಾಗುತ್ತದೆ. ಔಷಧಿ ವಿತರಕರಿಗೆ ವೃತ್ತಿಯಲ್ಲಿ ಹೆಚ್ಚಿನ ಲಾಭ ಬರುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ. ವಿದೇಶಿ ಉದ್ದಿಮೆಗಳಿಗೆ ವಸ್ತುಗಳನ್ನು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಪುತ್ತೂರು: ಜವುಳಿ ಮಳಿಗೆಯಲ್ಲಿ ಮಂಗಳಮುಖಿಯರ ದಾಂಧಲೆ| ಮ್ಹಾಲಕರಿಂದ ದೂರು

ಪುತ್ತೂರು: ನಗರದಲ್ಲಿ ಮಂಗಳಮುಖಿಯರಿಂದ ತೊಂದರೆಯಾಗುತ್ತಿದೆ ಎಂದು ಪ್ರತಿಷ್ಠಿತ ಜವುಳಿ ಮಳಿಗೆಯ ಮಾಲೀಕರು ಕೈಗಾರಿಕೆ ಸಂಘದ ಅಧ್ಯಕ್ಷರಿಗೆ ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ. ಪುತ್ತೂರು ನಗರದಲ್ಲಿ ಮಂಗಳಮುಖಿಯರಿಂದ ತೊಂದರೆ ಹೆಚ್ಚಾಗುತ್ತಿದೆ. ಅವರಿಗೆ ಮಾನವೀಯ ನೆಲೆಯಿಂದ ನಾವು ಕೊಡುವ ಹಣವು, ಅವರ ನಿರೀಕ್ಷೆಯ ಮಟ್ಟದಲ್ಲಿ ಇಲ್ಲವಾದಾಗ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಅವರ ಬೇಡಿಕೆಯ ಮೊತ್ತ ಸಿಗದಿದ್ದರೇ ಕೊಟ್ಟ ಹಣವನ್ನು ಸ್ವೀಕರಿಸದೆ. ಆವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿರುತ್ತಾರೆ ಹಾಗೂ ನಮ್ಮನ್ನು ಅವರಾಗಿ ಸ್ಪರ್ಶಿಸಿ ಹೀನಾಯವಾಗಿ,

ಪುತ್ತೂರು: ಜವುಳಿ ಮಳಿಗೆಯಲ್ಲಿ ಮಂಗಳಮುಖಿಯರ ದಾಂಧಲೆ| ಮ್ಹಾಲಕರಿಂದ ದೂರು Read More »

ಪೋಪ್ ಪ್ರಾನ್ಸಿಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ| ಜಗದ್ವಿಚಾರಗಳ‌ ಬಗ್ಗೆ ಚರ್ಚೆ

ವ್ಯಾಟಿಕನ್​ ಸಿಟಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಇಟಲಿ​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್​ ನಗರದಲ್ಲಿ ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್​ ಫ್ರಾನ್ಸಿಸ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕ್ಯಾಥೋಲಿಕ್​ ಚರ್ಚ್​ನ ಮುಖ್ಯಸ್ಥರಾಗಿರುವ ಪೋಪ್​ ಫ್ರಾನ್ಸಿಸ್​ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು ಇದೇ ಮೊದಲು. ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ, ಬಡತನ ನಿರ್ಮೂಲನೆ, ಉತ್ತಮ ಜೀವನ ನಿರ್ವಹಣೆ ಕುರಿತು ಪೋಪ್​ ಫ್ರಾನ್ಸಿಸ್ ಮತ್ತು ನರೇಂದ್ರ ಮೋದಿ ಇಬ್ಬರೂ

ಪೋಪ್ ಪ್ರಾನ್ಸಿಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ| ಜಗದ್ವಿಚಾರಗಳ‌ ಬಗ್ಗೆ ಚರ್ಚೆ Read More »

ತೊಕ್ಕೊಟ್ಟು:ಮಧ್ಯ ರಾತ್ರಿಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಸೆಕ್ಯುರಿಟಿ ಬೈಕನ್ನೇ ಕಳವಿಗೆ ಯತ್ನಿಸಿದವನಿಗೆ ಧರ್ಮದೇಟು,ಆರೋಪಿ ಪೊಲೀಸ್ ವಶಕ್ಕೆ.

ಉಳ್ಳಾಲ:ಮಧ್ಯರಾತ್ರಿಯಲ್ಲಿ ತೊಕ್ಕೊಟ್ಟಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಮುಂದೆ ನಿಲ್ಲಿಸಿದ್ದ ಸೆಕ್ಯುರಿಟಿ ಗಾರ್ಡ್ ಓರ್ವರ ಬೈಕನ್ನೇ ಕಳವಿಗೆ ಯತ್ನಿಸಿದವನಿಗೆ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಲಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಅಂಗಡಿಪದವು ಶಾಂತಿನಗರ ನಿವಾಸಿ ನೌಫಾಲ್(23) ಬೈಕ್ ಕಳವಿಗೆತ್ನಿಸಿದ ಯುವಕ. ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿರುವ ಮಾರುತಿ ಸೆಂಟರ್ ವಾಣಿಜ್ಯ ಕಟ್ಟಡದ ಮುಂಭಾಗದಲ್ಲಿ ನಿನ್ನೆ ರಾತ್ರಿ ಅದೇ ಕಟ್ಟಡದಲ್ಲಿರುವ ಮುತ್ತೂಟು ಫೈನಾನ್ಸ್ ನ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ಅವರು ತನ್ನ (ಪಲ್ಸರ್ NS 200)ಬೈಕನ್ನ ನಿಲ್ಲಿಸಿದ್ದರು.

ತೊಕ್ಕೊಟ್ಟು:ಮಧ್ಯ ರಾತ್ರಿಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಸೆಕ್ಯುರಿಟಿ ಬೈಕನ್ನೇ ಕಳವಿಗೆ ಯತ್ನಿಸಿದವನಿಗೆ ಧರ್ಮದೇಟು,ಆರೋಪಿ ಪೊಲೀಸ್ ವಶಕ್ಕೆ. Read More »

ಅಭಿಮಾನಿಗಳು ದರ್ಶನ ಮಾಡಬೇಕಿದೆ, ಇಂದಲ್ಲ ನಾಳೆಯೇ ಅಂತ್ಯಕ್ರಿಯೆ – ಸಿಎಂ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರಕ್ಕೆ ಅವಸರ ಮಾಡುವುದಿಲ್ಲ. ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಎಲ್ಲರೊಂದಿಗೂ ಮಾತನಾಡಿದ್ದೇವೆ. ಅಭಿಮಾನಿಗಳು ಬಹಳಷ್ಟು ಜನರು ಅವರ ಅಂತಿಮ ದರ್ಶನ ಮಾಡಬೇಕಿದೆ. ಹೀಗಾಗಿ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ನಾಳೆ ನೆರವೇರಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಭಿಮಾನಿಗಳು ದರ್ಶನ ಮಾಡಬೇಕಿದೆ, ಇಂದಲ್ಲ ನಾಳೆಯೇ ಅಂತ್ಯಕ್ರಿಯೆ – ಸಿಎಂ ಬೊಮ್ಮಾಯಿ ಸ್ಪಷ್ಟನೆ Read More »

ಶ್ರದ್ಧಾಂಜಲಿ ಸಲ್ಲಿಸಿ ಆತ್ಮಹತ್ಯೆಗೆ ಶರಣಾದ ಅಪ್ಪು‌ ಅಭಿಮಾನಿ

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿನಿಂದ ನೊಂದ ಅಭಿಮಾನಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಥಣಿಯಲ್ಲಿ ವರದಿಯಾಗಿದೆ. ಮೃತರನ್ನು ರಾಹುಲ್ ಗಾಡಿವಡ್ಡರ (26) ಎಂದು ಗುರುತಿಸಲಾಗಿದೆ.ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಇವರು ಶುಕ್ರವಾರ ಸಂಜೆ ಗೆಳೆಯರೊಂದಿಗೆ ಸೇರಿ ಪುನೀತ್ ರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮನೆಗೆ ತೆರಳಿದ್ದರು. ಮನೆಗೆ ತೆರಳಿದ ಸಂದರ್ಭದಲ್ಲಿ ಅತೀವ್ರ ದುಃಖದಲ್ಲಿದ್ದ ವ್ಯಕ್ತಿ ಇದ್ದಕ್ಕಿಂದ್ದಂತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರದ್ಧಾಂಜಲಿ ಸಲ್ಲಿಸಿ ಆತ್ಮಹತ್ಯೆಗೆ ಶರಣಾದ ಅಪ್ಪು‌ ಅಭಿಮಾನಿ Read More »