ಅಳಿವಿನಂಚಿನಲ್ಲಿರುವ ಅಳಿಯಬಾರದವು

ಅಳಿವಿನಂಚಿನ ಅಪರೂಪದ ಮೌಸ್ ಡೀರ್ ಪತ್ತೆ

ಸಮಗ್ರ ನ್ಯೂಸ್: ನೀವು ಚಿರತೆಯನ್ನು ಹೋಲುವ ಬೆಕ್ಕನ್ನು ನೋಡಿರಬಹುದು. ಆದರೆ ಜಿಂಕೆ ಮರಿಯ ತದ್ರೂಪಿಯಂತೆ ತೋರುವ ಬೇರೊಂದು ಪ್ರಾಣಿಯನ್ನು ಕಂಡಿದ್ದೀರಾ? ಹಾಗಾದ್ರೆ ಈ ವಿಡಿಯೋದಲ್ಲಿರುವ ಪುಟ್ಟ ಪ್ರಾಣಿಯನ್ನು ನೋಡಿ. ಇದು ಅಳಿಲು ಮರಿ ಅಥವಾ ಇಲಿ ಮರಿ ಅಥವಾ ಜಿಂಕೆ ಮರಿ ಆಗಿರಬಹುದು ಎಂದು ನೀವು ಯೋಚಿಸಿದಲ್ಲಿ ನಿಮ್ಮ ಊಹೆ ತಪ್ಪು. ಸುಂಟಿಕೊಪ್ಪ ಸಮೀಪದ ಹೊರೂರು ಕಾಫಿ ಬೆಳೆಗಾರರಾದ ಪಿ.ಸಿ. ಮೋಹನ್ ರವರಿಗೆ ಸೇರಿದ ಗ್ರೀನ್ ಫೀಲ್ಡ್ ಎಸ್ಟೇಟ್ ನಲ್ಲಿ ನೆನ್ನೆ ದಿನ ಬೆಳಗ್ಗೆ ಆಚನಾಕಾಗಿ ಕಾರ್ಮಿಕರ […]

ಅಳಿವಿನಂಚಿನ ಅಪರೂಪದ ಮೌಸ್ ಡೀರ್ ಪತ್ತೆ Read More »

ಚೆನ್ನಮಣೆಯೆಂಬ ಚದುರಂಗದಾಟ ಮರೆಯಾಯಿತೇ…!!!

ಸಮಗ್ರ ವಿಶೇಷ: ತುಳುನಾಡಿನ ಸಂಸ್ಕೃತಿ ಆಚಾರ ವಿಚಾರ ಸಂಪ್ರದಾಯ ಕಟ್ಟು ಕಟ್ಟಲೆಗಳು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಅದು ನಮ್ಮ ಹೆಮ್ಮೆ ಕೂಡ ಹೌದು. ಪ್ರತಿದಿನ ಪ್ರತಿಕ್ಷಣ ಸಂಭ್ರಮದ ವಾತಾವರಣ. ಹಚ್ಚ ಹಸಿರಿನ ನಡುವಿನ ಪರಿಸರದಲ್ಲಿ ಜೀವಿಸುವುದು ಮತ್ತಷ್ಟು ಹುಮ್ಮಸು ಮತ್ತು ಆನಂದ. ಇನ್ನು ಗ್ರಾಮೀಣ ಸೊಗಡಿನ ಆಟಗಳು ಮನಸ್ಸಿನ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಅದರಲ್ಲೂ ಚೆನ್ನೆಮನೆ ಆಟದ ಸೊಗಡಿನ ವಿಶೇಷತೆ ಬಹಳಷ್ಟಿದೆ. ಚೆನ್ನೆಮನೆ ಅಥವಾ ಚೆನ್ನೆದ ಮನೆ ತುಳುನಾಡು ಪ್ರದೇಶದಲ್ಲಿ ಆಟಿ ಮಾಸದಲ್ಲಿ ಆಡುವ ಜನಪ್ರಿಯ ಒಳಾಂಗಣ ಆಟವಾಗಿದೆ.

ಚೆನ್ನಮಣೆಯೆಂಬ ಚದುರಂಗದಾಟ ಮರೆಯಾಯಿತೇ…!!! Read More »

ಮೈಸೂರು:ಅರಣ್ಯ ಇಲಾಖೆಯ ಕಾರ್ಯಾಚರಣೆ|ಶ್ರೀಗಂಧ ಮರ ವಶ

ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅರಣ್ಯ ಇಲಾಖೆಯ ಸಂಚಾರ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಕೆಜಿ ಶ್ರೀಗಂಧ ಮರವನ್ನು ಪಿರಿಯಾಪಟ್ಟಣ ತಾಲ್ಲೂಕಿನ ನಿಲುವಾಡಿ ಬಳಿ ವಶಪಡಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದ ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಧರ್ಮ ಮತ್ತು ಯುಸೂಫ್ ಪರಾರಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ದ್ವಿಚಕ್ರ ವಾಹನ ಬಿಟ್ಟು ಪರಾರರಿಯಾಗಿದರೆ ಇನ್ನು ಶ್ರೀಗಂಧದ ಮರ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮೈಸೂರು:ಅರಣ್ಯ ಇಲಾಖೆಯ ಕಾರ್ಯಾಚರಣೆ|ಶ್ರೀಗಂಧ ಮರ ವಶ Read More »

ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಗೋಸಾಗಾಟ‌ ತಾತ್ಕಾಲಿಕ ನಿಷೇಧ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಅ. 20ರಿಂದ ನ. 30ರ ವರೆಗೆ ಜಿಲ್ಲೆಯೊಳಗೆ ಮತ್ತು ಹೊರಜಿಲ್ಲೆ ಅಥವಾ ನೆರೆರಾಜ್ಯದಿಂದ ಜಿಲ್ಲೆಗೆ ಜಾನುವಾರುಗಳ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ಕ್ಯಾಪ್ರಿಪಾಕ್ಸ್‌ ಎಂಬ ವೈರಾಣುವಿನಿಂದ ಹರಡುವ ಚರ್ಮಗಂಟು ರೋಗ ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ವೈರಸ್‌ ಕಾಯಿಲೆಯಾಗಿದೆ. ರೋಗಗ್ರಸ್ಥ ಜಾನುವಾರುವಿನಿಂದ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತಿದೆ. ಈ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ

ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹಿನ್ನೆಲೆ| ದ.ಕ ಜಿಲ್ಲೆಯಲ್ಲಿ ಗೋಸಾಗಾಟ‌ ತಾತ್ಕಾಲಿಕ ನಿಷೇಧ Read More »

ಇಬ್ಬರು ಕಾಡು ಹಂದಿ ಬೇಟೆಗಾರರ ಬಂಧನ

ಸಮಗ್ರ ನ್ಯೂಸ್: ಕಾಡು ಹಂದಿ ಬೇಟೆಯಾಡುತ್ತಿದ್ದ ಇಬ್ಬರನ್ನು ಬೆಳಗಾವಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಭಾನುವಾರ ಬಂಧಿಸಿ, ಮೂರು ಜೀವಂತ ಕಾಡುಹಂದಿ, ಹಗ್ಗ ಹಾಗೂ ವಿವಿಧ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ರಡೇರಹಟ್ಟಿ ಗ್ರಾಮದ ನಿವಾಸಿಯಾದ ಸದಾಶಿವ ಬಸವಂತ ಕಾಂಬಳೆ ಹಾಗೂ, ಅಥಣಿ ಗವಿಸಿದ್ದನಮಡ್ಡಿಯ ನಿವಾಸಿಯಾದ ಶಿವಾಜಿ ಅಶೋಕ ಭಜಂತ್ರಿ (35) ಬಂಧಿತ ಆರೋಪಿಗಳು. ಕಾಡುಹಂದಿಯ ಮಾಂಸವನ್ನು ಅಥಣಿ, ಜಮಖಂಡಿ ಸೇರಿ ಮಹಾರಾಷ್ಟ್ರದ ಮಿರಜ, ಸಾಂಗಲಿ

ಇಬ್ಬರು ಕಾಡು ಹಂದಿ ಬೇಟೆಗಾರರ ಬಂಧನ Read More »

ಕುಂಬಳೆ ಅನಂತಪದ್ಮನಾಭ ಕ್ಷೇತ್ರದ ಸಸ್ಯಾಹಾರಿ ಮೊಸಳೆ ‘ಬಬಿಯಾ’ ಇನ್ನಿಲ್ಲ

ಸಮಗ್ರ ನ್ಯೂಸ್: ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತ ಪದ್ಮನಾಭ ದೇವಸ್ಥಾನದ ‘ಬಬಿಯಾ’ ಹೆಸರಿನ ಮೊಸಳೆ ಇಹಲೋಕ ತ್ಯಜಿಸಿದೆ. ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಎನ್ನಲಾದ ಕುಂಬಳೆ ಅನಂತ ಪದ್ಮನಾಭ ದೇವಸ್ಥಾನದಲ್ಲಿರುವ ಸಸ್ಯಹಾರಿ ಮೊಸಳೆ ಎಂದೇ ಬಬಿಯಾ ಪ್ರಖ್ಯಾತಿ ಪಡೆದಿತ್ತು. ಬಬಿಯಾ ಕಳೆದ 70 ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿದೆ ಎನ್ನಲಾಗಿದೆ. ದೇವಸ್ಥಾನದ ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ. ಈ ಬಬಿಯಾ ಮೊಸಲೆ ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ

ಕುಂಬಳೆ ಅನಂತಪದ್ಮನಾಭ ಕ್ಷೇತ್ರದ ಸಸ್ಯಾಹಾರಿ ಮೊಸಳೆ ‘ಬಬಿಯಾ’ ಇನ್ನಿಲ್ಲ Read More »

ಸುಳ್ಯದಲ್ಲಿ ಪತ್ತೆಯಾಯ್ತು ಟ್ರಾವಂಕೂರ್ ಅಳಿಲು

ಸಮಗ್ರ ನ್ಯೂಸ್: ದಕ್ಷಿಣ ಭಾರತದಲ್ಲಿ ಅಪರೂಪದ ಅಳಿಲು ಪ್ರಭೇದಗಳಲ್ಲಿ ಒಂದಾದ ಟ್ರಾವಂಕೂರು ಹಾರುವ ಅಳಿಲು ಸುಳ್ಯ ತಾಲೂಕಿನಲ್ಲಿ ಪತ್ತೆಯಾಗಿದೆ. ಇವು ನಿಶಾಚರಿ ಆಗಿರುವುದರಿಂದ ಕಾಣಸಿಗುವುದು ಅಪೂರ್ವ. ಪರಿಸರ ಸಂರಕ್ಷಕ ದೀಪಕ್ ಸುಳ್ಯ ಅವರ ತೋಟದಲ್ಲಿ ಈ ಅಳಿಲು ಪತ್ತೆಯಾಗಿದೆ. ಸ್ಥಳೀಯವಾಗಿ ಇದನ್ನು ದರಗು ಪಾಂಜ, ಚಿಕ್ಕ ಪಾಂಜ ಎಂದು ಕರೆಯುತ್ತಾರೆ. ಪಶ್ಚಿಮಘಟ್ಟದಲ್ಲಿ ಕಂಡುಬರುವ ಅಳಿವಿನಂಚಿನ ಪ್ರಾಣಿ ಪ್ರಭೇದಗಳಲ್ಲಿ ಇದೂ ಒಂದು. ಪಶ್ಚಿಮಘಟ್ಟದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರಾವಂಕೂರು ಹಾರುವ ಅಳಿಲು ಎಂಬ ಎರಡು

ಸುಳ್ಯದಲ್ಲಿ ಪತ್ತೆಯಾಯ್ತು ಟ್ರಾವಂಕೂರ್ ಅಳಿಲು Read More »

ನಮೀಬಿಯಾದಿಂದ ಬಂದ ‘ಆಶಾ’ ನೀಡಿದ್ದಾಳೆ ಗುಡ್ ನ್ಯೂಸ್!! ಏನದು?

ಸಮಗ್ರ ನ್ಯೂಸ್: ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳ ಪೈಕಿ ‘ಆಶಾ’ ಎಂಬ ಚೀತಾ ಗರ್ಭಿಣಿ ಎಂಬ ಸುದ್ದಿ ಹೊರಬಿದ್ದಿದೆ. ಭಾರತದಲ್ಲಿ ನಶಿಸಿಹೋಗಿದ್ದ ಚೀತಾ ಸಂತತಿಗೆ ಮರು ಜೀವ ನೀಡುವ ಸಲುವಾಗಿ ಚೀತಾ ಪ್ರಾಜೆಕ್ಟ್ ಆರಂಭಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ತಂದು ಬಿಡಲಾಗಿತ್ತು. ಇವುಗಳ ಪೈಕಿ ಆಶಾ ಎಂಬ ಚೀತಾ ಗರ್ಭಿಣಿಯಾಗಿರುವ ಲಕ್ಷಣಗಳು ಕಂಡುಬಂದಿವೆ. ಇದಕ್ಕಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಗರ್ಭಧಾರಣೆ ಖಚಿತಪಟ್ಟು ಮರಿ ಜನಿಸಿದರೆ ಇದು

ನಮೀಬಿಯಾದಿಂದ ಬಂದ ‘ಆಶಾ’ ನೀಡಿದ್ದಾಳೆ ಗುಡ್ ನ್ಯೂಸ್!! ಏನದು? Read More »

ಶ್ವಾನವೊಂದಕ್ಕೆ ಶ್ವಾನವೇ ರಕ್ತದಾನ

ಧಾರವಾಡ: ಕೃಷಿ ಮೇಳದಲ್ಲಿ ಶ್ವಾನವೊಂದಕ್ಕೆ ಶ್ವಾನವೇ ರಕ್ತದಾನ ಮಾಡಿರುವುದು ಧಾರವಾಡ ಜಿಲ್ಲೆಯಿಂದ ಸುದ್ದಿಯಾಗಿದೆ. ಧಾರವಾಡ ಕೃಷಿ ಮೇಳಕ್ಕೆ ಆಗಮಿಸಿರುವ ಡಾಗ್ ಸ್ಕ್ವಾಡ್ ʼಮಾಯಾʼಗೆ ಅನಾರೋಗ್ಯ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ರೆಸ್ಕ್ಯೂ ಟೀಂ ಸದಸ್ಯರಾಗಿರುವ ಸೋಮು ಅವರ ಜರ್ಮನ್ ಶೆಫರ್ಡ್ ʼಚಾರ್ಲಿʼ ರಕ್ತ ನೀಡಿದೆ. ಕೃಷಿ ವಿಶ್ವವಿದ್ಯಾಲಯ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ರಕ್ತದಾನ ಮಾಡಿಸಿದ್ದಾರೆ. ಎರಡನೇ ಬಾರಿ ರಕ್ತದಾನ ಮಾಡುವ ಮೂಲಕ ಚಾರ್ಲಿ ಗಮನ ಸೆಳೆದಿದೆ.

ಶ್ವಾನವೊಂದಕ್ಕೆ ಶ್ವಾನವೇ ರಕ್ತದಾನ Read More »

ಚೀತಾ ಪ್ರಾಜೆಕ್ಟ್ ನಲ್ಲಿ ಪುತ್ತೂರಿನ ಮುಳಿಯದ ಪಶುವೈದ್ಯ ಡಾ. ಸನತ್ ಕೃಷ್ಣ|

ಸಮಗ್ರ ನ್ಯೂಸ್: ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತಂದ ನಿಯೋಗದಲ್ಲಿದ್ದ ಪಶುವೈದ್ಯ ಡಾ.ಸನತ್‌ ಕೃಷ್ಣ ಮುಳಿಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದವರು. ಅವರು ನವದೆಹಲಿಯ ನ್ಯಾಷನಲ್‌ ಝೂವಾಲಾಜಿಕಲ್‌ ಪಾರ್ಕ್‌ನಲ್ಲಿ ಸಹಾಯಕ ಪಶುವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತಕ್ಕೆ ಚೀತಾಗಳನ್ನು ತಂದ ಬಗ್ಗೆ ಖುಷಿ ಹಂಚಿಕೊಂಡ ಡಾ.ಸನತ್‌ಕೃಷ್ಣ ಮುಳಿಯ ಅವರ ಸಂಬಂಧಿ, ಗುತ್ತಿಗಾರು ಗ್ರಾಮದ ಕೇಶವ ಭಟ್‌ ಮುಳಿಯ, ‘ಇದು ದೇಶಕ್ಕೆ ಹೆಮ್ಮಯ ಕ್ಷಣ. ಅಂತೆಯೇ ಈ ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಪಶುವೈದ್ಯರು ನಮ್ಮ ರಾಜ್ಯದವರು ಎಂಬುದು

ಚೀತಾ ಪ್ರಾಜೆಕ್ಟ್ ನಲ್ಲಿ ಪುತ್ತೂರಿನ ಮುಳಿಯದ ಪಶುವೈದ್ಯ ಡಾ. ಸನತ್ ಕೃಷ್ಣ| Read More »