May 2021

ಪಾಸಿಟಿವ್ ಸಮಾಚಾರ : ಚಾಲಕರಿಂದ ಲಂಚ ಸ್ವೀಕರಿಸಿ ವೈರಲ್ ಆಗಿದ್ದ ಅರಣ್ಯಾಧಿಕಾರಿ ಅಮಾನತು

ಉಪ್ಪು ತಿಂದವ ನೀರು ಕುಡಿಯಬೇಕು ಎಂಬ ಗಾದೆಗೆ‌ ಈ ಘಟನೆ ಸಾಕ್ಷಿಯಾಗಿದೆ. ಮಾಣಿ‌ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಚೆಕ್ ಪೋಸ್ಟ್ ‌ನಲ್ಲಿ ಲಾರಿ ಚಾಲಕರಿಂದ ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಇದೀಗ ಸಸ್ಪೆಂಡ್ ಆಗಿದ್ದಾರೆ.ಸಂಪಾಜೆ ವಲಯದ ದಬ್ಬಡ್ಕ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಕ್ಷಿತ್ ಅಮಾನತುಗೊಂಡ ಅಧಿಕಾರಿ. ಮೇ.24ರಂದು‌ ಸಂಪಾಜೆ ‌ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಲಾರಿ ಚಾಲಕನಿಂದ ಹಣ ಪಡೆದು ಧಮ್ಕಿ ಹಾಕಿದ ವಿಡಿಯೋ ವೈರಲ್ ಆಗಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು […]

ಪಾಸಿಟಿವ್ ಸಮಾಚಾರ : ಚಾಲಕರಿಂದ ಲಂಚ ಸ್ವೀಕರಿಸಿ ವೈರಲ್ ಆಗಿದ್ದ ಅರಣ್ಯಾಧಿಕಾರಿ ಅಮಾನತು Read More »

ಕಡಿಮೆಯಾಗುತ್ತಿರುವ ಪಾಸಿಟಿವ್ ದರ. ಜೂ.7ರಿಂದ ರಾಜ್ಯ ಅನ್ ಲಾಕ್!?

ಬೆಂಗಳೂರು : ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ -19 ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗುತ್ತಿರುವುದರಿಂದ ರಾಜ್ಯ ಸರ್ಕಾರ ಅನ್‌ಲಾಕ್ ಪ್ಲಾನ್ ರೂಪಿಸುತ್ತಿದೆ. ಕೊರೊನಾ ಎರಡನೇ ಅಲೆ ಕರುನಾಡನ್ನು ಸಂಪೂರ್ಣ ನಲುಗಿಸಿದೆ. ದಿನೇದಿನೇ ಉಲ್ಬಣಿಸುತ್ತಿದ್ದ ಕೊರೊನಾ ಅಬ್ಬರ, ಮತ್ತೊಂದೆಡೆ ಹೆಚ್ಚುತ್ತಿರುವ ಸಾವಿನ ಸಂಖ್ಯೆ ರಾಜ್ಯವನ್ನು ಸಂಪೂರ್ಣ ಹಿಂಡಿ ಹಿಪ್ಪೆಯಾಗಿಸಿತ್ತು. ಈ ಕೊರೊನಾದ ಆರ್ಭಟಕ್ಕೆ ನಿಯಂತ್ರಣ ಹೇರಲು ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿದೆ. ಏಪ್ರಿಲ್ 27ರಿಂದ ಚಾಲ್ತಿಯಲ್ಲಿರುವ ಲಾಕ್‌ಡೌನ್‌ ದಿನ ಕಳೆದಂತೆ ಮತ್ತಷ್ಟು ಬಿಗಿಗೊಳಿಸಲಾಯಿತು.‌ ಜೂನ್ 7ರವರೆಗೆ

ಕಡಿಮೆಯಾಗುತ್ತಿರುವ ಪಾಸಿಟಿವ್ ದರ. ಜೂ.7ರಿಂದ ರಾಜ್ಯ ಅನ್ ಲಾಕ್!? Read More »

ನೆರಿಯ ಅನಾಥಾಶ್ರಮದಲ್ಲಿ ಕೊರೊನ ರಣಕೇಕೆ: 210 ಮಂದಿಯಲ್ಲಿ ಕಾಣಿಸಿಕೊಂಡ ಮಹಾಮಾರಿ

ಮಂಗಳೂರು.ಮೇ 31: ಇಲ್ಲಿನ ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಮಹಾಸ್ಪೋಟವಾಗಿದೆ. ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟವಾಗಿದೆ. ಆಶ್ರಮದ 270 ಜನರಲ್ಲಿ 210 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಾಮೂಹಿಕ ಟೆಸ್ಟ್ ಮಾಡುವಾಗ ಕೊರೊನಾ ಸೋಂಕು ಪತ್ತೆಯಾಗಿದೆ.ಒಟ್ಟು 270 ಜನರಿರುವ ಆಶ್ರಮ ಇದಾಗಿದ್ದು,ಕಳೆದ ಕೆಲ ದಿನಗಳ ಹಿಂದೆ ಕೆಲವು ಮಂದಿಯಲ್ಲಿ ಕಂಡು ಬಂದಿದ್ದ ಸೋಂಕು ಕಂಡುಬಂದಿತ್ತು. ಶನಿವಾರ ನಡೆಸಿದ ಟೆಸ್ಟ್ ನಲ್ಲಿ ಬಹುತೇಕ ಎಲ್ಲರಲ್ಲೂ ಸೋಂಕು ಪತ್ತೆಯಾಗಿದೆ. ಸಿಯೋನ್ ಆಶ್ರಮದಲ್ಲಿ ಬಹುತೇಕ

ನೆರಿಯ ಅನಾಥಾಶ್ರಮದಲ್ಲಿ ಕೊರೊನ ರಣಕೇಕೆ: 210 ಮಂದಿಯಲ್ಲಿ ಕಾಣಿಸಿಕೊಂಡ ಮಹಾಮಾರಿ Read More »

ಮಕ್ಕಳಲ್ಲೂ ಬ್ಲಾಕ್ ಫಂಗಸ್: ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ಈವರೆಗೆ ವಯಸ್ಕರಲ್ಲಿ ಮಾತ್ರ ಕಾಣಸಿಗುತ್ತಿದ್ದ ಬ್ಲಾಕ್ ಫಂಗಸ್ ಸೋಂಕು ಇದೀಗ ಮಕ್ಕಳಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೋವಿಡ್ ಸೋಂಕಿಗೊಳಗಾದ ಚಿಕಿತ್ಸೆ ಪಡೆಯುತ್ತಿದ್ದ ಬಯಲುಸೀಮೆಯ ಮಕ್ಕಳಲ್ಲಿ ತಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಮಕ್ಕಳಿಗೆ ತೀವ್ರ ಅನಾರೋಗ್ಯ ಬಾಧಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ, ಚಿತ್ರದುರ್ಗ ಜಿಲ್ಲೆಯ ಒಬ್ಬ ಬಾಲಕ ಹಾಗೂ ಬಳ್ಳಾರಿಯ ಓರ್ವ ಬಾಲಕಿ ಗೆ ಬ್ಲಾಕ್ ಫಂಗಸ್

ಮಕ್ಕಳಲ್ಲೂ ಬ್ಲಾಕ್ ಫಂಗಸ್: ಇಬ್ಬರ ಸ್ಥಿತಿ ಗಂಭೀರ Read More »

ತುಳು‌ವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಡಿವಿಎಸ್

ಮಂಗಳೂರು: ತುಳು ಭಾಷೆಯು ಸಂಸ್ಕೃತಿ, ಆಚಾರ- ವಿಚಾರ, ಜೀವನ ಪದ್ಧತಿಯನ್ನು ಪ್ರತಿಬಿಂಬಿಸುತ್ತದೆ. ಭಾಷೆಯೊಂದರ ಅವನತಿ, ದೇಶದ ಸಂಸ್ಕೃತಿಯ ಅವನತಿಯಿದ್ದಂತೆ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಾನು ಮುಂದೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಆನ್ಲೈನ್ ವೇದಿಕೆ

ತುಳು‌ವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಡಿವಿಎಸ್ Read More »

ಡಿಸಿ ಸಿಂಧೂರಿ – ಎಂಪಿ ಸಿಂಹ ನಡುವೆ ಮೈಸೂರು ಮಹಾಯುದ್ಧ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಸಂಸದ ಪ್ರತಾಪ್ ಸಿಂಹ ನಡುವೆ ದಿನನಿತ್ಯ ವಾಕ್ಸಮರ ನಡೆಯುತ್ತಿದ್ದು, ಮೈಸೂರಿನಲ್ಲಿ ಮಹಾಯುದ್ಧ ಪ್ರಾರಂಭವಾದಂತಿದೆ. ಒಂದೆಡೆ ಮೈಸೂರಿಗೆ ಬಂದಾಗಿನಿಂದಲೂ ನನ್ನನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ಆರೋಪಿಸಿದರೇ, ಜಿಲ್ಲಾಧಿಕಾರಿ ದಿನೇದಿನೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಹರಿಹಾಯುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕ ಪಿಡುಗು ನಮ್ಮನ್ನು ದಿನೇದಿನೇ ಬಾಧಿಸುತ್ತಿದೆ ಆದರೂ ಜಿಲ್ಲಾಡಳಿತದೊಂದಿಗೆ ಒಗ್ಗೂಡಿಕೊಂಡು, ಜಿಲ್ಲೆಯ ಜನರ ಹಿತ ಕಾಯ್ದುಕೊಳ್ಳಬೇಕಾದ ಸಂಸದರು ವಿನಾಕಾರಣ ಏನೇನೋ ಹೇಳಿಕೆ ನೀಡಿದರೆ ಹೇಗಾಗಬಹುದು. ಜಿಲ್ಲಾಡಳಿತ ಹಗಲಿರುಳು ದುಡಿದು

ಡಿಸಿ ಸಿಂಧೂರಿ – ಎಂಪಿ ಸಿಂಹ ನಡುವೆ ಮೈಸೂರು ಮಹಾಯುದ್ಧ Read More »

ಜೂ.15ಕ್ಕೆ ಬರಲಿದೆ ಇಪ್ಕೋ ನ್ಯಾನೋ ಯೂರಿಯಾ: ಡಿ.ವಿ

ನವದೆಹಲಿ(ಮೇ 30): ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಸಿರುವ ನ್ಯಾನೋ-ಯೂರಿಯಾ ರಸಗೊಬ್ಬರವು ಕೃಷಿಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.ನ್ಯಾನೋ-ಯುರಿಯಾ ಉಪಯೋಗದ ಬಗ್ಗೆ ಇಫ್ಕೋ ಸಂಸ್ಥೆಯವರು ಶನಿವಾರ ಏರ್ಪಡಿಸಿದ್ದ ವೆಬ್ಬಿನಾರ್ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡ, ಅವರು ಇದು ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು. ನ್ಯಾನೋ ರಸಗೊಬ್ಬರದಿಂದ ಸಾಗುವಳಿ ವೆಚ್ಚದಲ್ಲಿ ಸುಮಾರು 15 ಪ್ರತಿಶತ ಕಡಿಮೆಯಾಗಲಿದೆ. ಇನ್ನು ಇಳುವರಿಯಲ್ಲಿ 15ರಿಂದ

ಜೂ.15ಕ್ಕೆ ಬರಲಿದೆ ಇಪ್ಕೋ ನ್ಯಾನೋ ಯೂರಿಯಾ: ಡಿ.ವಿ Read More »

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ

ಮೇ 31 ವಿಶ್ವ ತಂಬಾಕು ರಹಿತ ದಿನ. ‘ಜೀವನ ಜಯಿಸಲು ತಂಬಾಕು ತ್ಯಜಿಸಿ’ (quit tobacco to be a winner) ಈ ಬಾರಿಯ ಘೋಷವಾಕ್ಯ. ಹಿಂದೆಂದಿಗಿಂತಲೂ ಈ ಬಾರಿಯ ಘೋಷವಾಕ್ಯ ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ಕೋವಿಡ್‌ ಸನ್ನಿವೇಶದಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಮುಕ್ತಿ ಪಡೆಯುವುದು ಬಹಳ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಅಷ್ಟೆ ಅಲ್ಲ, ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ನೂರಾರು ಕಾರಣ, ಅಂತಹ ಹಲವು ಕಾರಣಗಳನ್ನು

‘ತಂಬಾಕಿಗೆ ಹೇಳಬೇಕು ನೀನಿನ್ನು ಸಾಕು’ ತಂಬಾಕಿನ ವಿಷಪಾನದಿಂದ ಮುಕ್ತರಾಗೋಣ Read More »

ವಿರುಷ್ಕಾ ಅಭಿಮಾನಿಗಳಿಗೆ ವಮಿಕಾಳ ಮುದ್ದು ಮುಖ ತೋರಿಸೋದ್ಯಾವಾಗ…?

ನವದೆಹಲಿ: ಲಾಕ್ ಡೌನ್ ನಲ್ಲಿ ತಮ್ಮ ಮುದ್ದು ಮಗಳ ಜೊತೆ ಎಂಜಾಯ್ ಮಾಡುತ್ತಿರುವ ವಿರುಷ್ಕಾ ದಂಪತಿಗೆ ಅಭಿಮಾನಿಯೊಬ್ಬರು ಪ್ರಶ್ನೆಯೊಂದನ್ನು ಕೇಳಿದ್ದಾರೆ. ನಿಮ್ಮ ಮಗುವಿನ ಮುದ್ದು ಮುಖವನ್ನು ನಮಗೆಂದು ತೋರಿಸುತ್ತೀರಿ ಎಂದು ಕೇಳಿದ ಅಭಿಮಾನಿಗಳಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುದ್ದಾದ ಉತ್ತರವೊಂದವೊಂದನ್ನು ನೀಡಿದ್ದಾರೆ. ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ಅವರ ಅಸಂಖ್ಯಾತ ಅಭಿಮಾನಿಗಳಿಗೆ, ಮೂರು ತಿಂಗಳ ಹಿಂದೆ ಜನಿಸಿದ ಅವರ ಮುದ್ದಾದ ಮಗಳು ಈಗ ಹೇಗಿದ್ದಾಳೆ ಅನ್ನೋ ಕುತೂಹಲ ಇದೆ. ಲಾಕ್ಡೌನ್

ವಿರುಷ್ಕಾ ಅಭಿಮಾನಿಗಳಿಗೆ ವಮಿಕಾಳ ಮುದ್ದು ಮುಖ ತೋರಿಸೋದ್ಯಾವಾಗ…? Read More »

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು

ಮಂಗಳೂರು: ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರಗಳು, ಸ್ಥಳೀಯ ಆಡಳಿತಗಳು ಅಗತ್ಯ ಸಭೆ ನಡೆಸಲು ಅಗತ್ಯ ಸಚಿವರುಗಳು ಮತ್ತು ಅಧಿಕಾರಿಗಳನ್ನು ಸೇರಿಸಿಕೊಳ್ಳುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ ಇಲ್ಲೊಬ್ಬ ಸಂಸದರು ತಮ್ಮ ಪಕ್ಷದ ಕಾರ್ಯಕ್ರಮಕ್ಕೆ ತಮ್ಮದೇ ಸರ್ಕಾರದ ನಿಯಮ ಮೀರಿ ಜನ ಸೇರಿಸಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಮಾರಂಭ ನಡೆಸಿರುವ ಘಟನೆ ನಡೆದಿದೆ. ಹೇಳಿ ಕೇಳಿ ಇವ್ರು ಬಿಜೆಪಿ ರಾಜ್ಯಾಧ್ಯಕ್ಷರು, ಜೊತೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್. ಇವ್ರು ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ

ಕೋವಿಡ್ ರೂಲ್ಸ್ ಗಿಂತ ಮೋದಿ ಸರ್ಕಾರದ ಏಳನೇ ವರ್ಷಚಾರಣೆಯೇ ಮೇಲಾಯ್ತು ಈ ಸಂಸದರಿಗೆ…! | ತಮ್ಮದೇ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷರು Read More »