January 2023

ಸುಳ್ಯ: ಉರೂಸ್ ಮುಗಿದರೂ ವಿವೇಚನಾ ರಜೆ ಮುಂದುವರಿಕೆ| ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂ

ಸಮಗ್ರ ನ್ಯೂಸ್: ಉರೂಸ್ ಕಾರ್ಯಕ್ರಮ ಮುಗಿದರೂ ಶಾಲಾ ವಿವೇಚನಾ ರಜೆಯನ್ನು ಮುಂದುವರಿಸಿರುವ ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂಗೊಂಡಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಇಲ್ಲಿನ ಅಜ್ಜಾವರ ಮಾಪಳಡ್ಕ ದರ್ಗಾದಲ್ಲಿ ವರ್ಷಂಪ್ರತಿಯಂತೆ ಈ ಭಾರಿಯು ಅದ್ದೂರಿಯಾಗಿ ಉರುಸ್ ಕಾರ್ಯಕ್ರಮ ಜರಗಿತು. ಉರುಸ್ ಕಾರ್ಯಕ್ರಮ ಮುಗಿದ ಬಳಿಕ ಇತ್ತ ಸರಕಾರಿ ಶಾಲೆಗೆ ಇಂದು ಕೂಡಾ ವಿವೇಚನಾ ರಜೆ ಘೋಷಣೆ ಮಾಡಿರುವುದು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗಿದೆ . ಇತಿಹಾಸ ಪ್ರಸಿದ್ದ ಮಾಪಳಡ್ಕ ಮುಖಾಂ ಊರುಸ್ ಕಾರ್ಯಕ್ರಮವು ಮುಗಿದಿದ್ದರೂ […]

ಸುಳ್ಯ: ಉರೂಸ್ ಮುಗಿದರೂ ವಿವೇಚನಾ ರಜೆ ಮುಂದುವರಿಕೆ| ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂ Read More »

ಕಾರ್ಕಳ: ಲಾರಿ ಚಾಲಕರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ಸಮಗ್ರ ನ್ಯೂಸ್: ತಮಿಳುನಾಡಿನ ಲಾರಿ ಚಾಲಕರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿ ಎಂಬಲ್ಲಿ ಜ.30ರಂದು ರಾತ್ರಿ ವೇಳೆ ನಡೆದಿರುವ ಬಗ್ಗೆ ವರದಿಯಾಗಿದೆ. ಲಾರಿಯ ಚಾಲಕ ತಮಿಳುನಾಡಿನ ಮಣಿ (36) ಎಂಬವರು ಕೊಲೆಯಾಗಿದ್ದು, ಕೊಲೆ ಆರೋಪಿ ಇನ್ನೋರ್ವ ಲಾರಿ ಚಾಲಕ ವೀರಬಾಹು ಎಂದು ಗುರುತಿಸಲಾಗಿದೆ. ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅದರಲ್ಲಿ‌ ಬಂದವರು

ಕಾರ್ಕಳ: ಲಾರಿ ಚಾಲಕರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ Read More »

ಫೆ. 11ಕ್ಕೆ ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ. 11ರಂದು ಆಗಮಿಸಲಿದ್ದು, ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ಅಪರಾಹ್ನ 2ರಿಂದ 4.30ರ ತನಕ ಬೃಹತ್ ಸಮಾವೇಶ ನಡೆಯಲಿದೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಬಂಧಿಸಿದ ವಿವಿಧ ಯೋಜನೆಗಳು ಹಾಗೂ ಇತರ ಕಾರ್ಯಕ್ರಮಗಳಿಗೆ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಹಿತ ಹಲವು ಸಚಿವರು, ಬಿಜೆಪಿ ನಾಯಕರು, ಮುಂಬರುವ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ

ಫೆ. 11ಕ್ಕೆ ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ Read More »

ನಾಳೆ(ಫೆ.1) ಕೇಂದ್ರ ಬಜೆಟ್ ಮಂಡನೆ| ಮೋದಿ ಸರ್ಕಾರದ ೨ನೇ ಅವಧಿಯ ಕೊನೆಯ ಬಜೆಟ್ ಮಂಡಿಸಲಿರುವ ನಿರ್ಮಲಾ ಮೇಡಂ

ಸಮಗ್ರ ನ್ಯೂಸ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಇದು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷಕ್ಕೆ ಸೀತಾರಾಮನ್ ಅವರ ಐದನೇ ನೇರ ಬಜೆಟ್ ಆಗಿರುತ್ತದೆ. ಹಿಂದಿನ ಎರಡು ಬಜೆಟ್‌ನಂತೆ 2023-24 ರ ಕೇಂದ್ರ ಬಜೆಟ್ ಅನ್ನು ಸಹ ಕಾಗದರಹಿತ ರೂಪದಲ್ಲಿ ವಿತರಿಸಲಾಗುತ್ತದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಇದಾಗಿದೆ. ಉಭಯ

ನಾಳೆ(ಫೆ.1) ಕೇಂದ್ರ ಬಜೆಟ್ ಮಂಡನೆ| ಮೋದಿ ಸರ್ಕಾರದ ೨ನೇ ಅವಧಿಯ ಕೊನೆಯ ಬಜೆಟ್ ಮಂಡಿಸಲಿರುವ ನಿರ್ಮಲಾ ಮೇಡಂ Read More »

ಟಯರ್ ಬದಲಿಸುವ ವೇಳೆ ಜಾಕ್ ಮುರಿದು ಇಬ್ಬರು ದುರ್ಮರಣ

ಸಮಗ್ರ‌ ನ್ಯೂಸ್: ಟ್ರ್ಯಾಕ್ಟರ್ ಟೈರ್ ಬದಲಿಸುವಾಗ ಜಾಕ್ ಮುರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಟ್ರ್ಯಾಕ್ಟರ್ ಟೈರ್ ಬದಲಾಯಿಸುವಾಗ ಜಾಕ್ ಮುರಿದ ಪರಿಣಾಮ ಟ್ರ್ಯಾಕ್ಟರ್ ನ ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸುಬ್ರಹ್ಮಣ್ಯ (30) ಹಾಗೂ ಸುನೀಲ್ (27) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಹರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಯರ್ ಬದಲಿಸುವ ವೇಳೆ ಜಾಕ್ ಮುರಿದು ಇಬ್ಬರು ದುರ್ಮರಣ Read More »

ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವೆಯಿಂದ ಬಿಡುಗಡೆ| ಹೊಸ ನೇಮಕಾತಿ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಿಗೆ 2021 -22ನೇ ಸಾಲಿನಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಿ 2022 -23ನೇ ಸಾಲಿಗೆ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಾಂಶುಪಾಲರಿಗೆ ಸೂಚನೆ ನೀಡಿದೆ. ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗಿದ್ದು, 2022 -23ನೇ ಸಾಲಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗಿದೆ. ಫೆಬ್ರವರಿ 3ರಂದು ಅಂತಿಮ ಮೆರಿಟ್ ಪಟ್ಟಿ ಮತ್ತು ಕಾರ್ಯಭಾರದ ಮಾಹಿತಿ ಪ್ರಕಟಿಸಬೇಕಿದೆ.

ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವೆಯಿಂದ ಬಿಡುಗಡೆ| ಹೊಸ ನೇಮಕಾತಿ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ Read More »

ಹವಾಮಾನ ವರದಿ; ನಾಳೆಯಿಂದ ಮತ್ತೆ ಮಳೆ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನಾಳೆಯಿಂದ(ಫೆ.1) ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಫೆಬ್ರವರಿ 1 ರಂದು ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಫೆಬ್ರವರಿ 1 ರಂದು ಸಾಧಾರಣ ಮಳೆಯಾಗಲಿದೆ. ಕನಿಷ್ಠ ಉಷ್ಣಾಂಶವು ದಕ್ಷಿಣ ಒಳನಾಡಿನ ಸಾಮಾನ್ಯಕ್ಕಿಂತ 2 ರಿಂದ

ಹವಾಮಾನ ವರದಿ; ನಾಳೆಯಿಂದ ಮತ್ತೆ ಮಳೆ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮುನ್ಸೂಚನೆ Read More »

ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ

ಸಮಗ್ರ ನ್ಯೂಸ್: ದೆಹಲಿಯ ಪಶ್ಚಿಮ ವಿಹಾರ್‌ ನಲ್ಲಿ ಸೋಮವಾರ 32 ವರ್ಷದ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಪೊಲೀಸರ ಪ್ರಕಾರ, ಮೃತರನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಘಟನೆ ಸಂಭವಿಸಿದಾಗ ಸಂಜೆ 7:30 ರ ಸುಮಾರಿಗೆ ತನ್ನ ಕಚೇರಿಯಿಂದ ಹಿಂತಿರುಗುತ್ತಿದ್ದರು. ಮಹಿಳೆ ಫ್ಲಿಪ್‌ ಕಾರ್ಟ್‌ ನ ಕೊರಿಯರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮೃತಳ ಪತಿ ದೀಪಕ್ ಅವರು ತಮ್ಮ ಮನೆಗೆ ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಬಂದಿದ್ದು, ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಘಟನೆಯ ನಂತರ ಡಿಸಿಪಿ ಹರೇಂದ್ರ

ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ Read More »

ಭಾರತ ಮತ್ತೆ ಪ್ರಕಾಶಿಸುತ್ತಿದೆ!! ಇಸ್ರೋ ನೀಡಿದೆ ಹೊಸ ವರದಿ

ಸಮಗ್ರ ನ್ಯೂಸ್: ಇತ್ತೀಚೆಗೆ, ಇಸ್ರೋದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದ ವರದಿಯಲ್ಲಿ, ಒಂದು ದಶಕದಲ್ಲಿ ಭಾರತದಲ್ಲಿ ರಾತ್ರಿ ಸಮಯದ ದೀಪಗಳಲ್ಲಿ 43% ಹೆಚ್ಚಳವಾಗಿದೆ ಎಂದು ಹೇಳಿದೆ. ಸೌಭಾಗ್ಯ ಯೋಜನೆ, ಉಜ್ವಲಾ ಯೋಜನೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಸೇರಿದಂತೆ ರಾತ್ರಿಯ ದೀಪಗಳ ಏರಿಕೆಗೆ ಮೂರು ಪ್ರಮುಖ ಕಾರಣಗಳಿವೆ ಎಂದು ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ವೇಳೆ ಭಾರತದ ಭೂಭಾಗವನ್ನು ಸೆರೆಹಿಡಿಯುವ ಇಸ್ರೋದ ಉಪಗ್ರಹಗಳು, ಹಿಂದಿನ ದಶಕಕ್ಕೆ ಹೋಲಿಸಿದರೆ ಇದೀಗ ಭಾರತ ಹೆಚ್ಚು

ಭಾರತ ಮತ್ತೆ ಪ್ರಕಾಶಿಸುತ್ತಿದೆ!! ಇಸ್ರೋ ನೀಡಿದೆ ಹೊಸ ವರದಿ Read More »

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್| ಅಂಚೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

ಸಮಗ್ರ ನ್ಯೂಸ್: ಉದ್ಯೋಗಕ್ಕಾಗಿ ಆಕಾಂಕ್ಷಿಗಳಾಗಿರುವವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶವಿದ್ದು, ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಕೆಗೆ ಫೆಬ್ರುವರಿ 16 ಕೊನೆ ದಿನವಾಗಿದೆ. ಗ್ರಾಮೀಣ ಅಂಚೆ ಸೇವಕರು, ಬ್ರಾಂಚ್ ಪೋಸ್ಟ್‌ಮಾಸ್ಟರ್ , ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್‌ಮಾಸ್ಟರ್ ಅಂಚೆ ಸೇವಕ್ ಅಭ್ಯರ್ಥಿಗಳನ್ನು ಅವರ 10 ನೇ ತರಗತಿಯ ಮಾರ್ಕ್ ಶೀಟ್ ಬಳಸಿ ರಚಿಸಲಾದ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಉದ್ಯೋಗ ಪ್ರಕಟಣೆಯನ್ನು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ www.indiapostgdsonline.gov.in ನಲ್ಲಿ ಪೋಸ್ಟ್ ಮಾಡಲಾಗಿದೆ. 40,889

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್| ಅಂಚೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ Read More »