ಮಂಗಳೂರು: ಸೆಪ್ಟೆಂಬರ್ 2ನೇ ಶನಿವಾರದಿಂದ ಮಳೆ ರಜೆಯ ಹೊಂದಾಣಿಕೆಗೆ ಸೂಚನೆ

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭಾರೀ ಮಳೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಘೋಷಿಸಿದ ರಜೆಯ ಕೊರತೆ ನೀಗಿಸಲು ಸೆಪ್ಟಂಬರ್ 2ನೇ ಶನಿವಾರದಿಂದ ಪೂರ್ಣ ತರಗತಿ ನಡೆಸಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಸೂಚನೆ ನೀಡಿದ್ದಾರೆ.

. Ad Widget . Ad Widget . Ad Widget .

ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ, ಮೂಡುಬಿದಿರೆ ಶೈಕ್ಷಣಿಕ ವಲಯಗಳಿಗೆ ಒಟ್ಟು 8 ಪೂರ್ಣ ದಿನ ಮತ್ತು 1 ಅರ್ಧ ದಿನ ಹಾಗೂ ಬೆಳ್ತಂಗಡಿ, ಪುತ್ತೂರು, ಸುಳ್ಯ ಶೈಕ್ಷಣಿಕ ವಲಯಗಳಿಗೆ ಒಟ್ಟು 9 ಪೂರ್ಣ ರಜೆಗಳನ್ನು ಜಿಲ್ಲಾಧಿಕಾರಿ ಘೋಷಿಸಿದ್ದರು. ಈ ರಜಾ ದಿನಗಳಲ್ಲಿ ಕೊರತೆಯಾಗಿರುವ ಬೋಧನಾ ಅವಧಿಯನ್ನು ಸರಿದೂಗಿಸಲು ಸೆಪ್ಟಂಬರ್ 2ನೆ ಶನಿವಾರ ಮಧ್ಯಾಹ್ನದ ಬಳಿಕ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇತರ ದಿನಗಳಲ್ಲಿ ಹೆಚ್ಚುವರಿಯಾಗಿ ಸಂಜೆ ವೇಳೆ ಒಂದು ಬೋಧನಾ ಅವಧಿ ನಡೆಸಲು ಸೂಚಿಸಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಪ್ರತೀ ಶಾಲೆಯಲ್ಲಿ ಮಳೆಯ ರಜೆ ಲೆಕ್ಕಾಚಾರವನ್ನಿಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಅವಧಿಯನ್ನು ಲೆಕ್ಕಾಚಾರ ಮಾಡಿ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ಎಸ್‌ಡಿಎಂಸಿಯೊಂದಿಗೆ ಚರ್ಚಿಸಿ ದಿನಗಳನ್ನು ನಿರ್ಧರಿಸಿ ವೇಳಾಪಟ್ಟಿ ದಾಖಲಿಸಿ ಶೈಕ್ಷಣಿಕ ಮಾರ್ಗಸೂಚಿಯಂತೆ ಬೋಧನಾ ದಿನಗಳನ್ನು ಸರಿದೂಗಿಸಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಆದೇಶಿಸಿದ್ದಾರೆ.

Leave a Comment

Your email address will not be published. Required fields are marked *