June 2026

ಕರಾವಳಿಯಲ್ಲಿ ಬೆಂಕಿ‌ ಹಚ್ಚಲು RSS ನಂತೆ ಸುರೇಶ್ ಭಟ್, ಗೌರಿ ಲಂಕೇಶ್ ಕೂಡಾ ಕಾರಣ‌ – ಲಕ್ಷ್ಮೀಶ ಗಬ್ಲಡ್ಕ

ಸಮಗ್ರ ನ್ಯೂಸ್: “ಸುರೇಶ್‌ ಭಟ್ ಬಾಕ್ರಬೈಲು ಕೋಮು ಸೌಹಾರ್ದತೆ ಹೆಸರಿನಲ್ಲಿ ‌ಅಪನಂಬಿಕೆ ಹೆಚ್ಚಿಸಲು ಕಾರಣರಾದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕರಾವಳಿಯ ಬೆಂಕಿ ಹಚ್ಚಲು ಸಂಘ ಪರಿವಾರದ ಕೆಲವು ಮಂದಿ ಹೇಗೆ ಕಾರಣರೋ ಅದೇ ರೀತಿ ಗೌರಿ ಲಂಕೇಶ್, ಸುರೇಶ್ ಭಟ್ ಕೂಡಾ ಕಾರಣರು.” ಎಂದು ಕಾಂಗ್ರೆಸ್ ಮುಖಂಡ, ಧಾರ್ಮಿಕ ದತ್ತಿ ಇಲಾಖೆಯ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಅಭಿಪ್ರಾಯಪಟ್ಟಿದ್ದಾರೆ. ಗೌರಿ ಲಂಕೇಶ್ ಕರ್ನಾಟಕದ ಹಿರಿಯ ಪತ್ರಕರ್ತೆ ಹಾಗು ಕೋಮುವಾದ ವಿರೋಧಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಸಾಮಾಜಿಕ ಹೋರಾಟಗಾರ್ತಿ. ಆರೆಸ್ಸೆಸ್ […]

ಕರಾವಳಿಯಲ್ಲಿ ಬೆಂಕಿ‌ ಹಚ್ಚಲು RSS ನಂತೆ ಸುರೇಶ್ ಭಟ್, ಗೌರಿ ಲಂಕೇಶ್ ಕೂಡಾ ಕಾರಣ‌ – ಲಕ್ಷ್ಮೀಶ ಗಬ್ಲಡ್ಕ Read More »

ರಾಜ್ಯದಲ್ಲಿ ಮುಂದುವರಿದ ಮಳೆಯಬ್ಬರ| ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ. ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಇಂದು ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಜುಲೈ 1ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ, ಜುಲೈ 2ರಂದು ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ

ರಾಜ್ಯದಲ್ಲಿ ಮುಂದುವರಿದ ಮಳೆಯಬ್ಬರ| ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ Read More »

ಜು.1ರಿಂದ ತೈಲ ಮಾರಾಟದ ಮೇಲಿನ ಎಲ್ಲಾ ನಿರ್ಬಂಧ ತೆರವು

ಸಮಗ್ರ ನ್ಯೂಸ್: ವಾಹನ ಸವಾರರು ಮತ್ತು ವಾಣಿಜ್ಯ ಗ್ರಾಹಕರಿಗೆ ನಿರಾಳ ಸುದ್ದಿ ಸಿಕ್ಕಿದೆ. ದೇಶದಲ್ಲಿ ಇಂಧನ ಪೂರೈಕೆ ವ್ಯವಸ್ಥೆಯು ಸಂಪೂರ್ಣವಾಗಿ ಸುಧಾರಿಸಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ಎಲ್ಲ ರದ್ದತಿ ಹಾಗೂ ನಿರ್ಬಂಧಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹೊಸ ಆದೇಶವು ಜುಲೈ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ನಡೆದ ಸಂಘರ್ಷಗಳಿಂದಾಗಿ ಜಾಗತಿಕ ಸರಬರಾಜು ವ್ಯವಸ್ಥೆಯಲ್ಲಿ ಏರುಪೇರಾಗಿತ್ತು. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆ ಉಂಟಾಗದಂತೆ

ಜು.1ರಿಂದ ತೈಲ ಮಾರಾಟದ ಮೇಲಿನ ಎಲ್ಲಾ ನಿರ್ಬಂಧ ತೆರವು Read More »

ರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ(SIR) ಆರಂಭ| ಬಿಎಲ್ಒ ಗಳು ಮನೆಗೆ ಬಂದಾಗ ಹೀಗೆ ಮಾಡಿ…

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದ್ದು, ಬಿಎಲ್‌ಒಗಳು (BLO) ಜುಲೈ 29ರವರೆಗೆ ರಾಜ್ಯದ ಮನೆ ಮನೆಗೆ ಭೇಟಿ ನೀಡಿ ಮತಪಟ್ಟಿ ಪರಿಷ್ಕರಣೆಯ ಎನ್ಯುಮರೇಷನ್ ಫಾರ್ಮ್ ನೀಡಲಿದ್ದಾರೆ. ಮತದಾರರು ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಿ ಬಿಎಲ್‌ಒಗಳಿಗೆ ಮರಳಿ ನೀಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದಿನಿಂದ ಜುಲೈ 29ರ ವರೆಗೆ ಮನೆ ಮನೆಗೆ ತೆರಳಿ ಬಿಎಲ್‌ಒಗಳು ಮತದಾರರಿಗೆ Enumeration form ಕೊಡಲಿದ್ದಾರೆ. ಎಲ್ಲಾ ಬಿಎಲ್‌ಒಗಳಿಗೆ

ರಾಜ್ಯದಲ್ಲಿ ಇಂದಿನಿಂದ ಮತದಾರರ ಪಟ್ಟಿ ಪರಿಷ್ಕರಣೆ(SIR) ಆರಂಭ| ಬಿಎಲ್ಒ ಗಳು ಮನೆಗೆ ಬಂದಾಗ ಹೀಗೆ ಮಾಡಿ… Read More »

ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಸಾಗಾಟ‌ ಲಾರಿಗಳ ಜಪ್ತಿ| ದಾಖಲೆ ನೀಡಿದಲ್ಲಿ ಬಿಡುಗಡೆಗೆ ಕ್ರಮ – ಅಶೋಕ್ ರೈ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿದ್ದ ಸುಮಾರು 70 ಅಡಿಕೆ ತುಂಬಿದ ಲಾರಿಗಳನ್ನು ಅಲ್ಲಿನ ಸರ್ಕಾರಿ ಅಧಿಕಾರಿಗಳು ವಶಕ್ಕೆ ಪಡೆದು, ಅಡಿಕೆಯನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿರುವ ಗಂಭೀರ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಮುಖ್ಯಮಂತ್ರಿಗಳ ಮೂಲಕ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭರವಸೆ ನೀಡಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕರು, “ನಮ್ಮ ಜಿಲ್ಲೆಯಿಂದ ಹೋದ 70 ಅಡಿಕೆ

ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಸಾಗಾಟ‌ ಲಾರಿಗಳ ಜಪ್ತಿ| ದಾಖಲೆ ನೀಡಿದಲ್ಲಿ ಬಿಡುಗಡೆಗೆ ಕ್ರಮ – ಅಶೋಕ್ ರೈ Read More »

ಸುಳ್ಯ: ವಿದ್ಯುತ್ ಕಂಬದ ಸಹಿತ ಕಾಂಕ್ರೀಟ್ ಕಾಮಗಾರಿ| ವಿಲಕ್ಷಣ ಘಟನೆಗೆ ಕಾರಣವಾದ ಈ ರಸ್ತೆ!!

ಸಮಗ್ರ ನ್ಯೂಸ್: ರಸ್ತೆ ಬದಿ ಹಾದು ಹೋಗುವ ‌ವಿದ್ಯುತ್ ಕಂಬಗಳ ಸಹಿತ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿದ ವಿಲಕ್ಷಣ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿಸುತ್ತಿದೆ. ಸುಳ್ಯದ ಪ.ಪೂ ಕಾಲೇಜು ಬಳಿಯಿಂದ ಶಾಸ್ತ್ರಿ ಸರ್ಕಲ್‌ಗೆ ಹೋಗುವ ಒಳರಸ್ತೆಯಿದು. ಇಲ್ಲಿ ಸ್ಥಳೀಯ ಆಡಳಿತ ರಸ್ತೆಯನ್ನು ಅಭಿವೃದ್ಧಿ ಮಾಡಲು ಕಾಂಕ್ರಿಟೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರ ಹಾಗೂ ಇಂಜಿನಿಯರ್ ರ ಜುಗಲ್ ಬಂದಿಗೆ ರಸ್ತೆಯ ಬದಿಯ ವಿದ್ಯುತ್ ಕಂಬಗಳನ್ನು ಸೇರಿಸಿ ರಸ್ತೆ‌ ನಿರ್ಮಿಸಲಾಗಿದೆ. ರಸ್ತೆಗೆ ಡಿವೈಡರ್ ಹಾಕಿದಂತೆ ಕಂಬಗಳು ಕಾಣುತ್ತಿದ್ದು

ಸುಳ್ಯ: ವಿದ್ಯುತ್ ಕಂಬದ ಸಹಿತ ಕಾಂಕ್ರೀಟ್ ಕಾಮಗಾರಿ| ವಿಲಕ್ಷಣ ಘಟನೆಗೆ ಕಾರಣವಾದ ಈ ರಸ್ತೆ!! Read More »

ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ!? ಸಿಎಂ ಡಿಕೆಶಿ ಹೀಗ್ಯಾಕಂದ್ರು?

ಸಮಗ್ರ ನ್ಯೂಸ್: ‘ಪಾನ್‌ ಮಸಾಲಾ, ಗುಟ್ಕಾದಲ್ಲಿ ಸ್ವಲ್ಪ ನಶೆ ಅಥವಾ ಅಮಲು ಪದಾರ್ಥವನ್ನೂ ಬೆರೆಸಲಾಗುತ್ತಿದೆ ಎಂಬ ಮಾಹಿತಿ ನನಗೆ ಬರುತ್ತಿದೆ. ಅದೇನಾದರೂ ನಿಜವೇ ಆಗಿದ್ದರೆ ರಾಜ್ಯದಲ್ಲಿ ಎಲ್ಲಾ ರೀತಿಯ ಪಾನ್‌ ಮಸಾಲಾ, ಗುಟ್ಕಾ ಪದಾರ್ಥಗಳನ್ನು ನಿಷೇಧಿಸಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಶಾ ಮುಕ್ತ

ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ!? ಸಿಎಂ ಡಿಕೆಶಿ ಹೀಗ್ಯಾಕಂದ್ರು? Read More »

ಬಗೆದಷ್ಟು ಹೊರಬರುತ್ತಿದೆ ರಾಮಮಂದಿರ ಹುಂಡಿಹಣ ಕಳವು ಸಾಕ್ಷ್ಯ| ದಾಖಲೆಗಳ ನಾಶಕ್ಕೆ ಪ್ರಯತ್ನಿಸಿದ ಆರೋಪಿಗಳು

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಬಹುಕೋಟಿ ಮೌಲ್ಯದ ಕಳ್ಳತನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಹೊಸ ಮತ್ತು ಆಘಾತಕಾರಿ ಸಾಕ್ಷ್ಯಗಳು ಬೆಳಕಿಗೆ ಬಂದಿವೆ. ತನಿಖಾ ಸಂಸ್ಥೆಗಳು ಮುಖ್ಯ ಆರೋಪಿಗಳು ಹಾಗೂ ಅವರ ನಿಕಟವರ್ತಿಗಳ ಬ್ಯಾಂಕ್ ಖಾತೆಗಳು ಮತ್ತು ಆಸ್ತಿಪಾಸ್ತಿಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಅವರ ಆಸ್ತಿ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಸುಮಾರು 100 ಪಟ್ಟು ಹೆಚ್ಚಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ವೇಳೆ, ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಲು ಆರೋಪಿಗಳು ಸಂಚು ರೂಪಿಸಿದ್ದರೆಂಬ

ಬಗೆದಷ್ಟು ಹೊರಬರುತ್ತಿದೆ ರಾಮಮಂದಿರ ಹುಂಡಿಹಣ ಕಳವು ಸಾಕ್ಷ್ಯ| ದಾಖಲೆಗಳ ನಾಶಕ್ಕೆ ಪ್ರಯತ್ನಿಸಿದ ಆರೋಪಿಗಳು Read More »

ಉಪ್ಪಿನಂಗಡಿ: ಜೀವನದಿ ನೇತ್ರಾವತಿಗೆ ನೇರವಾಗಿ ಸೇರುತ್ತಿದೆ ವಸತಿ, ಶೌಚಾಲಯಗಳ ತ್ಯಾಜ್ಯ ನೀರು!! ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಜೀವ ನದಿ ನೇತ್ರಾವತಿ ನದಿಯಲ್ಲಿ ಈ ಬಾರಿ ಮುಂಗಾರು ಮಳೆಯ ನೀರು ಹರಿಯದಿದ್ದರೂ ವಸತಿ ಸಮುಚ್ಚಯಗಳ ಶೌಚಾಲಯದ ತ್ಯಾಜ್ಯ ಸೇರಿದಂತೆ ಮಲಿನ ನೀರು ಹರಿಯುತ್ತಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ನದಿಯ ಒಡಲಿನಲ್ಲಿ ವಸತಿ ಸಮುಚ್ಚಯದಿಂದ ಹರಿದು ಬಂದು ಸಂಗ್ರಹವಾಗಿರುವ ಮಲಿನ ನೀರು ಹರಿಯುವ ನದಿಯನ್ನು ಸೇರುತ್ತಿರುವ ದೃಶ್ಯವನ್ನು ಸೆರೆ ಹಿಡಿದಿರುವ ಉಪ್ಪಿನಂಗಡಿ ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೈಲಾರ್ ರಾಜಗೋಪಾಲ ಭಟ್ ಜಿಲ್ಲೆಯ ಜೀವ ನದಿಯನ್ನು ಈ

ಉಪ್ಪಿನಂಗಡಿ: ಜೀವನದಿ ನೇತ್ರಾವತಿಗೆ ನೇರವಾಗಿ ಸೇರುತ್ತಿದೆ ವಸತಿ, ಶೌಚಾಲಯಗಳ ತ್ಯಾಜ್ಯ ನೀರು!! ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ Read More »

ಬಿರುಸುಗೊಂಡ ಮುಂಗಾರು| ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಮಾರುತಗಳು ಮತ್ತಷ್ಟು ಚುರುಕುಗೊಂಡಿದ್ದು, ವರುಣನ ಅಬ್ಬರ ಜೋರಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಲಭ್ಯವಾಗಿದ್ದು, ಹವಾಮಾನ ಇಲಾಖೆಯು ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಜುಲೈ 2ರವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಜೂನ್ 30ರಂದು ಪ್ರಮುಖವಾಗಿ ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು,

ಬಿರುಸುಗೊಂಡ ಮುಂಗಾರು| ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ Read More »