December 2021

ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ|

ಸುಳ್ಯ: ಇಲ್ಲಿನ ನಗರದ ವಸತಿಗೃಹವೊಂದರಲ್ಲಿ ಭಿನ್ನ ಕೋಮಿನ ಜೋಡಿಯೊಂದು ಸಿಕ್ಕಿಬಿದ್ದಿದ್ದು, ಭಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ವರದಿಯಾಗಿದೆ. ಯುವತಿ ಹಾಗೂ ಯುವಕ ಕೇರಳ ಮೂಲದವರಾಗಿದ್ದು, ಯುವತಿಯ ಕುರಿತು ಕೇರಳದ ಠಾಣೆಯೊಂದರಲ್ಲಿ ಕೆಲ ದಿನಗಳ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದೇ ಯುವತಿ ಇದೀಗ ಯುವಕನೊಂದಿಗೆ ಪತ್ತೆಯಾಗಿದ್ದು, ಈ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ಜೋಡಿಯನ್ನು ಕೇರಳ ಪೊಲೀಸರಿಗೆ ಹಸ್ತಾಂತರಿಸುವುದಾಗಿ ಸುಳ್ಯ ಪೊಲೀಸರು ತಿಳಿಸಿದ್ದಾರೆ.

ಸುಳ್ಯ: ವಸತಿಗೃಹದಲ್ಲಿ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ| ಭಜರಂಗದಳದ ಕಾರ್ಯಾಚರಣೆ| Read More »

ವರ್ಷಾರಂಭದ ಎರಡು ದಿನ ರಾಜ್ಯದಲ್ಲಿ “ವರ್ಷಧಾರೆ” ಸಾಧ್ಯತೆ| ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಹಲವೆಡೆ ಜ.1 ಮತ್ತು 2ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ ಮೂಲಕ ಹೊಸ ವರ್ಷದ ಮೊದಲ ದಿನವೇ ಇಳೆಗೆ ವರ್ಷಧಾರೆ ಬರಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ ಮತ್ತು ಕೊಡಗು ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎರಡು ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಬೀಳಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಬೀಳುವುದಿಲ್ಲ.

ವರ್ಷಾರಂಭದ ಎರಡು ದಿನ ರಾಜ್ಯದಲ್ಲಿ “ವರ್ಷಧಾರೆ” ಸಾಧ್ಯತೆ| ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ Read More »

ಹೊಸ ವರ್ಷಾಚರಣೆಗೆ ತೆರಳುತ್ತಿದ್ದವರು ಮಸಣಕ್ಕೆ| ಕಾರು ಅಪಘಾತದಲ್ಲಿ ಮೂವರು ಯುವಕರು ದುರ್ಮರಣ|

ಅಲಪ್ಪುಳ: ಹೊಸ ವರ್ಷಾಚರಣೆಗೆಂದು ಗೋವಾಕ್ಕೆ ತೆರಳಿದ್ದ ಯುವಕರ ತಂಡವೊಂದು ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಘಟನೆ ಗೋವಾದಲ್ಲಿ ನಡೆದಿದೆ. ಮೂವರು ಯುವಕರು ಕೇರಳ ಮೂಲದವರಾಗಿದ್ದು, ಮೃತರನ್ನು ಕಣ್ಣನ್ (24), ವಿಷ್ಣು (27) ಮತ್ತು ನಿಧಿನ್ ದಾಸ್ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕೇರಳದ ಅಲಪ್ಪುಳ ಜಿಲ್ಲೆಯ ಕಾಯಂಕುಲಂನ ಅರಟ್ಟುಪುಳದವರು ಎಂದು ತಿಳಿದುಬಂದಿದೆ. ಘಟನೆ ವೇಳೆ ಜೊತೆಗಿದ್ದ ಅಖಿಲ್ ಮತ್ತು ವಿನೋದ್ ಕುಮಾರ್ ಸ್ಥಿತಿ ಚಿಂತಾಜನಕವಾಗಿದೆ. ಗುರುವಾರ ರಾತ್ರಿ 9:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಖಿಲ್ ವಾಹನ ಚಲಾಯಿಸುತ್ತಿದ್ದರು

ಹೊಸ ವರ್ಷಾಚರಣೆಗೆ ತೆರಳುತ್ತಿದ್ದವರು ಮಸಣಕ್ಕೆ| ಕಾರು ಅಪಘಾತದಲ್ಲಿ ಮೂವರು ಯುವಕರು ದುರ್ಮರಣ| Read More »

ಹಿಜಾಬ್ ಧರಿಸಿದ ಕಾರಣಕ್ಕೆ 6 ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ನಿಲ್ಲಿಸಿದ ಕಾಲೇಜು ಮುಖ್ಯಸ್ಥರು

ಉಡುಪಿ : ಹಿಜಾಬ್ ಹಾಕಿದ್ದಾರೆ ಎಂಬ ಕಾರಣಕ್ಕೆ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿರುವ ಘಟನೆ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಹಿಂದು ಧರ್ಮದಲ್ಲಿ ಕುಂಕುಮ ಇಡುವಂತೆ ಮುಸ್ಲಿಂ ಧರ್ಮದಲ್ಲಿ ಹಿಜಾಬ್ ಹಾಕುತ್ತೇವೆ. ಇದಕ್ಕೆ ಇಲ್ಲಿ ವಿರೋಧಿಸಿದ್ದಾರೆ. ಸರಕಾರಿ ಶಾಲೆಯಲ್ಲಿಯೇ ಈ ರೀತಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಇದ್ಯಾವ ಸಮಾನತೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಸಂಸ್ಕೃತಿ. ನಮಗೆ ಹಿಜಾಬ್ ಧರಿಸಲು ಅನುಮತಿ ನೀಡಿ, ನಮಗೆ

ಹಿಜಾಬ್ ಧರಿಸಿದ ಕಾರಣಕ್ಕೆ 6 ಮುಸ್ಲಿಂ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ನಿಲ್ಲಿಸಿದ ಕಾಲೇಜು ಮುಖ್ಯಸ್ಥರು Read More »

ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ

ನವದೆಹಲಿ: ಭಾರತದ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ದೇಸಿ ಸಂಗೀತವನ್ನು ಬಳಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ. ಈ ಬಗ್ಗೆ ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯ ಮನವಿಯನ್ನು ಉಲ್ಲೇಖಿಸಿ ಈ ಪತ್ರ ಬರೆದಿದೆ. ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯು ಭಾರತದಲ್ಲಿ ಸಂಚರಿಸುವ ವಿಮಾನಗಳು ಮತ್ತು ದೇಶದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಬಳಕೆ ಮಾಡಲು ಸೂಚಿಸುವಂತೆ ಮನವಿ ಮಾಡಿ ಕೇಂದ್ರ

ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ Read More »

ಕುಂದಾಪುರ: “ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡ ಸಾಲ”| ಹಾಗಿದ್ರೆ ಡೆತ್ ನೋಟ್ ನಲ್ಲಿ ಏನಿದೆ?

ಕುಂದಾಪುರ: ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡ ಸಾಲ ಎಂದು ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಯುವಕನನ್ನು ಕುಂದಾಪುರದ ಹೆಮ್ಮಾಡಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ. ಈತ ಎಂಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿಘ್ನೇಶ್ ಸ್ನೇಹಿತರೊಂದಿಗೆ ಬಿಸಿನೆಸ್ ಆರಂಭಿಸಲು ಮೊಬೈಲ್ ಆಪ್ ಮೂಲಕ ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡಲಾಗದೇ ಮನೆಯ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ತಾನು ಸಾಲ ಮಾಡಿಕೊಂಡಿದ್ದಾಗಿ ಬರೆದಿರುವ

ಕುಂದಾಪುರ: “ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡ ಸಾಲ”| ಹಾಗಿದ್ರೆ ಡೆತ್ ನೋಟ್ ನಲ್ಲಿ ಏನಿದೆ? Read More »

ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದಾತನಿಗೆ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ವ್ಯಕ್ತಿ

ಮಂಗಳೂರು : ದಕ್ಷಿಣಕನ್ನಡ ಹೆಸರಾಂತ ಹಾಗೂ ಕಾರ್ಣಿಕದ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಯ ವಿರುದ್ಧ ಇದೀಗ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಗುಡುಗಿದ್ದು, ಭಾರಿ ಎಚ್ಚರಿಕೆಯನ್ನೇ ನೀಡಿದ್ದಾರೆ. ಜೈಲಿನಲ್ಲಿರುವ ಆರೋಪಿ ಹೊರಗೆ ಬಂದರೆ ಆತನ ಕೈ-ಕಾಲು ಕಡಿಯುತ್ತೇನೆ ಎಂಬುದಾಗಿ ಹೇಳಿದ್ದಾರೆ. ಕೊರಗಜ್ಜ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದ ಆರೋಪದ ಮೇಲೆ ಮಿತ್ರನಗರ ನಿವಾಸಿ ದೇವದಾಸ್ ದೇಸಾಯಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಆ ಆರೋಪಿ ವಿರುದ್ಧ ರೋಶನ್ ಡಿಸೋಜ ಎಂಬವರು ಆಕ್ರೋಶ ವ್ಯಕಪಡಿಸಿದ್ದಾರೆ. ಮಂಗಳೂರು ನಗರದ 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ್ದ ಆರೋಪಿ ದೇವದಾಸ್,

ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದಾತನಿಗೆ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ವ್ಯಕ್ತಿ Read More »

10ನೇ ಕ್ಲಾಸ್ ವಿದ್ಯಾರ್ಥಿಯ ಮದ್ವೆಯಾದ ಪೋಲಿ ಟೀಚರ್| ಇವರಿಬ್ಬರ ಪ್ರೇಮ ಪ್ರಕರಣ ಕಂಡು ದಿಗಿಲುಗೊಂಡ ಪೊಲೀಸರು|

ಚೆನ್ನೈ: ಪ್ರೇಮ ಕುರುಡು ಎನ್ನುವಂತೆ 10ನೇ ವಿದ್ಯಾರ್ಥಿಯೊಂದಿಗೆ ಅದೇ ಕ್ಲಾಸ್‌ನ ಟೀಚರ್‌ಗೆ ಲವ್‌ ಆಗಿರುವ ಅಚ್ಚರಿಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಬ್ಬರಿಗೂ ಪರಸ್ಪರ ಪ್ರೀತಿಯುಂಟಾಗಿ ಮದುವೆಯೂ ಆಗಿ ಪೇಚಿಗೆ ಸಿಲುಕಿದ್ದಾರೆ. ಇಲ್ಲಿಯ ವಿಕ್ರಮಂಗಲಂ ಪ್ರೌಢಶಾಲೆಯಲ್ಲಿ ಶಿಕ್ಷಕಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 10ನೇ ಕ್ಲಾಸ್‌ನಲ್ಲಿ ಓದುತ್ತಿರುವ ಹುಡುಗನೊಬ್ಬನ ಮೇಲೆ ಈ ಶಿಕ್ಷಕಿಗೆ ಪ್ರೀತಿಯುಂಟಾಗಿದೆ. ಅದನ್ನು ಆಕೆ ಬಾಲಕನಲ್ಲಿ ನಿವೇದನೆ ಮಾಡಿಕೊಂಡಾಗ, ಆತನಿಗೂ ಶಿಕ್ಷಕಿ ಮೇಲೆ ಪ್ರೀತಿಯಾಗಿರುವುದಾಗಿ ಹೇಳಿದ್ದಾನೆ. ಹೀಗೆ ಇಬ್ಬರೂ ಕದ್ದುಮುಚ್ಚಿ ಭೇಟಿಯಾಗುತ್ತ ತಮ್ಮ ಕೆಲಸ ಮುಂದುವರೆಸಿದ್ದರು.

10ನೇ ಕ್ಲಾಸ್ ವಿದ್ಯಾರ್ಥಿಯ ಮದ್ವೆಯಾದ ಪೋಲಿ ಟೀಚರ್| ಇವರಿಬ್ಬರ ಪ್ರೇಮ ಪ್ರಕರಣ ಕಂಡು ದಿಗಿಲುಗೊಂಡ ಪೊಲೀಸರು| Read More »

ಸುಳ್ಯ: ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಬೈ ಹುಲ್ಲು ಲಾರಿ

ಸುಳ್ಯ: ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಬೈ ಹುಲ್ಲು ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಜಾಲ್ಸೂರು-ಸುಬ್ರಹ್ಮಣ್ಯ ರಸ್ತೆಯ ಕಂದಡ್ಕ ಎಂಬಲ್ಲಿ ನಡೆದಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಹೆಚ್ ಟಿ ವಿದ್ಯುತ್ ಲೈನ್ ಗೆ ಡಿಕ್ಕಿಯಾಗಿ ಲಾರಿಗೆ ಬೆಂಕಿ ತಗುಲಿದ್ದು, ಲಾರಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅಪಾರ ನಷ್ಟವಾಗಿದೆ.

ಸುಳ್ಯ: ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಬೈ ಹುಲ್ಲು ಲಾರಿ Read More »

ಹೊಸ ವರ್ಷಾಚರಣೆ ಹಿನ್ನಲೆ: ಅವಳಿ ಜಿಲ್ಲೆಗಳ ಬೀಚ್ ಗಳಿಗೆ ಸಂಜೆ ಪ್ರವೇಶ ನಿಷೇಧ

ಮಂಗಳೂರು: ಕೊರೊನಾ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್‌ ಸೇರಿದಂತೆ ಪ್ರಮುಖ ಬೀಚ್‌ಗಳಿಗೆ ಡಿ.31ರ ಶುಕ್ರವಾರದಂದು ಸಂಜೆ 7 ಗಂಟೆಯ ಬಳಿಕ ಹೋಗುವುದು ಹಾಗೂ ಅಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ” ಎಂದು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ. ವಿ ಹೇಳಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆವರೆಗೆ ಜನ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.‌ ಆದರೆ

ಹೊಸ ವರ್ಷಾಚರಣೆ ಹಿನ್ನಲೆ: ಅವಳಿ ಜಿಲ್ಲೆಗಳ ಬೀಚ್ ಗಳಿಗೆ ಸಂಜೆ ಪ್ರವೇಶ ನಿಷೇಧ Read More »