February 2021

ಶಿವಾರ್ಜುನರು ವರಾಹನಿಗಾಗಿ ಕಾದಾಡಿದ ಪುಣ್ಯ ತಾಣ…. ಮಲ್ಲಿಯ ಕುಡುಗೋಲಿನ ಏಟಿಗೆ ಕಣ್ವರು ತೇಯ್ದ ಶ್ರೀಗಂಧವೇ ಮದ್ದಾಯಿತು.. ಶ್ರೀಕ್ಷೇತ್ರ ತೊಡಿಕಾನದ ಸಂಪೂರ್ಣ ಮಾಹಿತಿ

ದಕ್ಷಿಣ ಕನ್ನಡದ ಸುಳ್ಯದಿಂದ ಮಡಿಕೇರಿ ಮಾರ್ಗದಲ್ಲಿ “ಅರಂತೋಡು”ಎಂಬಲ್ಲಿ ಬಲಕ್ಕೆ ತಿರುಗಿ ಆರೇಳು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಹಸಿರು ಪ್ರಕೃತಿಯ ಸುಂದರ ತಾಣವೇ ತೊಡಿಕಾನ. ಜುಳು ಜುಳು ಹರಿಯುವ ತೊರೆಯ ತಟದಲ್ಲಿ ಕಂಗೊಳಿಸುವುದೇ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಾಲಯ. ಇದು 3000 ವರ್ಷಗಳಷ್ಟು ಹಳೆಯ ದೇವಸ್ಥಾನವೆಂದು ಸಾಮಾನ್ಯವಾಗಿ ಹೇಳಿದರೂ ಮಹಾಭಾರತ ಕಾಲದಲ್ಲಿ ಇತ್ತೆಂಬುದಕ್ಕೆ ಇತಿಹಾಸಕಾರರು ದಾಖಲೆ ಕೊಡುವ ಕಾರಣ 5000 ವರ್ಷದ ಮೇಲ್ಪಟ್ಟದ್ದೆಂದು‌ ಹೇಳಲಾಗುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ “ತುದಿ” ಯ ಕಾನನ(ಕಾಡು) ಆದ ಕಾರಣ” […]

ಶಿವಾರ್ಜುನರು ವರಾಹನಿಗಾಗಿ ಕಾದಾಡಿದ ಪುಣ್ಯ ತಾಣ…. ಮಲ್ಲಿಯ ಕುಡುಗೋಲಿನ ಏಟಿಗೆ ಕಣ್ವರು ತೇಯ್ದ ಶ್ರೀಗಂಧವೇ ಮದ್ದಾಯಿತು.. ಶ್ರೀಕ್ಷೇತ್ರ ತೊಡಿಕಾನದ ಸಂಪೂರ್ಣ ಮಾಹಿತಿ Read More »

ಭಾರತದ ಮುಕುಟ ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಕ್ಕೀಗ ಶತವರ್ಷದ ಸಂಭ್ರಮ

ಪ್ರಿನ್ಸ್ ಆರ್ಥರ್, ದಿ ಡ್ಯೂಕ್ ಆಫ್ ಕನ್ಹಾಟ್ ನಿಂದ ಶಂಕುಸ್ಥಾಪನೆ ನೆರವೇರಿಸಲ್ಪಟ್ಟ ಭಾರತದ ಮುಕುಟಮಣಿ ದೆಹಲಿಯ ಇಂಡಿಯಾ ಗೇಟ್ ಶತ ವರ್ಷಗಳ ಹೊಸ್ತಿಲಲ್ಲಿದೆ. ಈ ವಿಚಾರ ತಿಳಿಯಬೇಕಾದರೆ ಬರೋಬ್ಬರಿ 100 ವರ್ಷಗಳ ಇತಿಹಾಸ ಪುಟಗಳನ್ನು ತಿರುಚಿ ಹಾಕಬೇಕಾಗುತ್ತದೆ.ದಿಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್‌ ಕೂಡ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ತಾಣ ಕೂಡ ಹೌದು. ನಗರ ಕೇಂದ್ರದಲ್ಲಿ ಇದು ನೆಲೆಸಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಗುರುತಾಗಿದೆ. 42 ಮೀಟರ್‌ ಎತ್ತರವಾಗಿರುವ ಇದು,

ಭಾರತದ ಮುಕುಟ ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಕ್ಕೀಗ ಶತವರ್ಷದ ಸಂಭ್ರಮ Read More »

ಖಿನ್ನತೆಯ ಮೆಟ್ಟಿ ನಿಂತವ ಜಗತ್ತಿಗೆ ದೊಡ್ಡಣ್ಣನಾದ. ಅಬ್ರಾಹಂ ಲಿಂಕನ್ ಎಂಬ ಅಜಾತಶತ್ರು

ಮನೋಖಿನ್ನತೆ… ಇದು ಬಹುತೇಕ ಎಲ್ಲರನ್ನೂ ಕಾಡಿರುವ ಭೂತ. ಇದರ ತೀಕ್ಷ್ಣತೆ ಹಲವರನ್ನು ಕುಗ್ಗಿಸಿಬಿಟ್ಟರೆ ಮನೋ ದಾರ್ಢ್ಯತೆ, ಛಲ ಮತ್ತು ಹೊಣೆಗಾರಿಕೆಗಳಿಂದ ಬದ್ಧರಾದ ವ್ಯಕ್ತಿಗಳು ಅದರಿಂದ ಹೊರಬಂದು ಜಗತ್ತನ್ನೇ ಬೆರಗುಗೊಳಿಸುವಂತಹ ಸಾಧನೆ ಮಾಡಿ ಮಹಾಪುರುಷರು ಎನಿಸುತ್ತಾರೆ. ಇಂತಹವರ ಸಾಲಿನಲ್ಲಿ ಅಚ್ಚರಿಪಡುವಂತಹ ವ್ಯಕ್ತಿ ಎಂದರೆ ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್.! ಆಧುನಿಕ ಪ್ರಜಾಪ್ರಭುತ್ವಕ್ಕೆ ಭಾಷ್ಯ ಬರೆದು, ಗುಲಾಮಗಿರಿಯನ್ನೇ ಹೊಡೆದೋಡಿಸಿದ ಅಜಾತಶತ್ರು. ಅಮೆರಿಕದ ಅಧ್ಯಕ್ಷರಾಗಿ ಆ ದೇಶದ ಆರ್ಥಿಕ ಪರಿಸ್ಥಿತಿ ಉನ್ನತ ಶೃಂಗಕ್ಕೇರಲು ಭದ್ರ ಬುನಾದಿ ಹಾಕಿದ ಅಬ್ರಹಾಂ ಲಿಂಕನ್

ಖಿನ್ನತೆಯ ಮೆಟ್ಟಿ ನಿಂತವ ಜಗತ್ತಿಗೆ ದೊಡ್ಡಣ್ಣನಾದ. ಅಬ್ರಾಹಂ ಲಿಂಕನ್ ಎಂಬ ಅಜಾತಶತ್ರು Read More »

ಕೆಡ್ಡಸ: ಇದು ಭೂಮಿತಾಯಿಗೆ ನಮಿಸುವ ದಿವಸ

ಸಮಗ್ರ ವಿಶೇಷ: ಭಾರತ ಧಾರ್ಮಿಕ ನಂಬಿಕೆಗಳ ಆವಾಸ ಸ್ಥಾನ. ಇಲ್ಲಿನ ಜನರ ಪ್ರತೀ ದಿನಚರಿಯಲ್ಲೂ, ಆಚರಣೆಯಲ್ಲೂ ನಂಬಿಕೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಬೆಳಿಗ್ಗೆ ಹಾಸಿಗೆ ಬಿಡುವಲ್ಲಿಂದ ಹಿಡಿದು, ರಾತ್ರಿ ನಿದ್ರಾದೇವಿಗೆ ಶರಣಾಗುವಲ್ಲಿಯವರೆಗೆ ಪ್ರತೀ ಕ್ಷಣವೂ ಒಂದೊಂದು ಪದ್ದತಿ, ಸಂಪ್ರದಾಯ ಭಾರತೀಯರನ್ನು ನಂಬಿಕೆಯೊಳಗೆ ಬಂಧಿಸುತ್ತದೆ. ಜನರ ಪ್ರತೀ ಆಚರಣೆಗಳೂ ನಂಬಿಕೆಯ ನೆಲೆಗಟ್ಟಿನಲ್ಲಿಯೇ ರಚನೆಗೊಳ್ಳುತ್ತವೆ. ಭಾರತೀಯರು ಪ್ರಕೃತಿಯ ಆರಾಧಕರು ಎಂಬುದು ವೇದ ಪುರಾಣಗಳ ಕಾಲದಿಂದಲೇ ನಡೆದು ಬಂದ ಸಂಗತಿ. ಪುರಾಣ ಕಥನಗಳಲ್ಲಿ, ವೇದ ಶಾಸ್ತ್ರಗಳಲ್ಲಿ ಪ್ರಕೃತಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ

ಕೆಡ್ಡಸ: ಇದು ಭೂಮಿತಾಯಿಗೆ ನಮಿಸುವ ದಿವಸ Read More »

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ

ನೀವೇನಾದ್ರೂ ಚಾರಣ ಪ್ರೀಯರಾದ್ರೆ ಈ ತಾಣಕ್ಕೊಮ್ಮೆ ಭೇಟಿ‌ ನೀಡ್ಲೇ ಬೇಕು. ಭಾರತದಲ್ಲಿ ಅತೀ ಕಷ್ಟಕರವಾದ ಹಾಗೆಯೇ ಅತ್ಯಂತ ಮನಸ್ಸಿಗೆ ಮುದ ನೀಡುವ ಕೆಲವೇ ಕೆಲವು ಚಾರಣ ತಾಣಗಳ ಪೈಕಿ ಚಾರಣಿಗರ ಸ್ವರ್ಗ ಅಂತನೇ ಕರೆಸಿಕೊಳ್ಳುವ ಪುಷ್ಪಗಿರಿ ಕುಮಾರ ಪರ್ವತ ಶ್ರೇಣಿ ನಿಜಕ್ಕೂ ಅಧ್ಬುತ ಮತ್ತು ಅಷ್ಟೇ ರೋಮಾಂಚಕಾರಿ ಅನುಭವ ನೀಡುವ ಪ್ರಕೃತಿಯ ಸೃಷ್ಟಿ. ದಕ್ಷಿಣ ಕನ್ನಡ ಮತ್ತು‌ ಕೊಡಗು ಜಿಲ್ಲೆಗಳ ನಡುವೆ.ಸಮುದ್ರ ಮಟ್ಟದಿಂದ 1712 ಮೀಟರ್‌ ಎತ್ತರದಲ್ಲಿರುವ ಪುಷ್ಪಗಿರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಣ್ಣುಗಳೇ ಸಾಲದು. ಈ ಶಿಖರಕ್ಕೆ

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ Read More »

ಕಾಶ್ಮೀರ ಕಣಿವೆಯಲ್ಲೊಂದು ಹಿಮ ಕೆಫೆ: ಪ್ರವಾಸಿಗರ ಸ್ವರ್ಗವಾಗಿದೆ ಗುಲ್ಮಾರ್ಗ್ ನ ಇಗ್ಲೂ….

ಕಾಶ್ಮೀರ… ಭೂಲೋಕದ ಸ್ವರ್ಗಕ್ಕೆ ಮನಸೋಲದವರೇ ಇಲ್ಲ. ಸದಾ ಹಿಮದಿಂದ ಆವೃತ್ತವಾಗಿರುವ ಈ ಕಣಿವೆ ರಾಜ್ಯದಲ್ಲಿ ಈ ಚಳಿಗಾಲ ಮತ್ತೊಂದು ವಿಶಿಷ್ಟ ಆಕರ್ಷಣೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದುವೇ ಗುಲ್ಮಾರ್ಗ್ ನ ಇಗ್ಲೂ ಕೆಫೆ(ಹಿಮ ಕೆಫೆ). ಚಳಿಗಾಲದ ಸೀಸನ್ ನಲ್ಲಿ ಎತ್ತ ನೋಡಿದರೂ ಹಿಮ. ಅದರಲ್ಲೂ ಕಣಿವೆ ರಾಜ್ಯದ ಗುಲ್ಮಾರ್ಗ್ ಕ್ಕೆ ಚಳಿಗಾಲದಲ್ಲಿ ಪ್ರವಾಸಿಗರು ಭೇಟಿ ನೀಡುವ ನೆಚ್ಚಿನ ತಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ಗುಲ್ಮಾರ್ಗ್ ನಲ್ಲಿ ಇಗ್ಲೋ ಕೆಫೆ ತಲೆ ಎತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕಾಶ್ಮೀರ ಕಣಿವೆಯಲ್ಲೊಂದು ಹಿಮ ಕೆಫೆ: ಪ್ರವಾಸಿಗರ ಸ್ವರ್ಗವಾಗಿದೆ ಗುಲ್ಮಾರ್ಗ್ ನ ಇಗ್ಲೂ…. Read More »

ರಾಮಚರಿತೆಯ ದಂಡಕಾರಣ್ಯ ಅಭಯಾರಣ್ಯ, ಕಿನ್ನೇರಸಾನಿ ವನ್ಯಧಾಮದ ಸಂಪೂರ್ಣ ಮಾಹಿತಿ.

ಕಿನ್ನೇರಸಾನಿ…. ಹೆಸರು ಕೇಳುವಾಗಲೇ ಅದೆಂತಹುದೋ ಆಕರ್ಷಣೆ. ವಿಶೇಷವಾದ ಭಾವ. ಇದಕ್ಕೆ ಕಾರಣವೂ ಇದೆ. ಯಾಕೆಂದರೆ ಇದು ಅಂತಿಂಥ ಪ್ರದೇಶವಲ್ಲ. ಇದು ತ್ರೇತಾಯುಗದ ದಂಡಕಾರಣ್ಯದ ಕಾಡುಗಳ ಭಾಗ. ಪ್ರಭು ರಾಮಚಂದ್ರ ತನ್ನ ವನವಾಸದ ದಿನಗಳನ್ನು ಇಲ್ಲಿ ಕಳೆದಿದ್ದಾನೆ ಎಂಬುದು ಪುರಾಣ ಐತಿಹ್ಯ. ಹಿಂದೂ ಪುರಾಣಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಪರ್ನ್‌ಶಾಲಾ, ರೇಖಾಪಲ್ಲಿ, ದುಮ್ಮುಗುಡೆಮ್ ಮುಂತಾದ ಸ್ಥಳಗಳು ಇದಕ್ಕೆ ಸಾಕ್ಷಿ.ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯವು ಭಾರತದ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿದೆ. ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯವು ಖಮ್ಮಮ್ ಜಿಲ್ಲೆಯಲ್ಲಿರುವ ಪಾಲೊಂಚ ಪಟ್ಟಣದಿಂದ 21

ರಾಮಚರಿತೆಯ ದಂಡಕಾರಣ್ಯ ಅಭಯಾರಣ್ಯ, ಕಿನ್ನೇರಸಾನಿ ವನ್ಯಧಾಮದ ಸಂಪೂರ್ಣ ಮಾಹಿತಿ. Read More »