June 2022

ಪದೇಪದೇ ನಡುಗುತ್ತಿರುವ ಕೊಡಗು; ಜಿಲ್ಲೆಯಲ್ಲಿ ಹಿರಿಯ ವಿಜ್ಞಾನಿಗಳಿಂದ ಅಧ್ಯಯನ

ಸಮಗ್ರ ನ್ಯೂಸ್: ಕಳೆದ ಐದು ದಿನಗಳ ಅವಧಿಯಲ್ಲಿ ಕೊಡಗಿನಲ್ಲಿ ಮೂರು ಬಾರಿ ಭೂಕಂಪ ಆಗುತ್ತಿದ್ದಂತೆ ಕೊಡಗು ಜಿಲ್ಲೆಗೆ ಬೆಂಗಳೂರಿನಿಂದ ಹಿರಿಯ ಭೂ ವಿಜ್ಞಾನಿಗಳ ತಂಡ ಆಗಮಿಸಿದ್ದು, ಅಧ್ಯಯನ ಆರಂಭಿಸಿದೆ. ಮಡಿಕೇರಿ ತಾಲ್ಲೂಕಿನ ಕರಿಕೆ, ಚೆಂಬು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೂನ್ 25 ಮತ್ತು 29 ರಂದು ಎರಡು ದಿನಗಳಲ್ಲಿ ಮೂರು ಬಾರಿ ಭೂಕಂಪವಾಗಿತ್ತು. ಜೂ.28ರಂದು ನಡೆದಿದ್ದ ಭೂಕಂಪಕ್ಕೆ ಜಿಲ್ಲೆಯ ಹಲವೆಡೆ ಚಿಕ್ಕಪುಟ್ಟ ಸಮಸ್ಯೆಗಳು ಎದುರಾಗಿದ್ದವು. ಬೆಳಿಗ್ಗೆ 7.45 ಕ್ಕೆ ಚೆಂಬು ಗ್ರಾಮದಲ್ಲಿ 3.0 ರಿಕ್ಟರ್ ಪ್ರಮಾಣದ ಭೂಕಂಪವಾಗಿತ್ತು. […]

ಪದೇಪದೇ ನಡುಗುತ್ತಿರುವ ಕೊಡಗು; ಜಿಲ್ಲೆಯಲ್ಲಿ ಹಿರಿಯ ವಿಜ್ಞಾನಿಗಳಿಂದ ಅಧ್ಯಯನ Read More »

ಭಾರೀ ಮಳೆ ಹಿನ್ನಲೆ ನಾಳೆ.(ಜು.1) ದ.ಕ ಜಿಲ್ಲೆಯಾದ್ಯಂತ ಶಾಲಾ ಕಾಲೇಜಿಗೆ ರಜೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸಂಜೆಯಿಂದ ಭಾರಿ ಮಳೆಯಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ನಾಳೆ, ಶುಕ್ರವಾರ ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಬೆಳಗ್ಗೆ 8.30 ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಆದರೆ ಜಿಲ್ಲಾಡಳಿತ ನಾಳೆ ಸಹ ಅಸಹಜವಾಗಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇರುವ ಕಾರಣ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪಿಯು ಮತ್ತು ಪದವಿ ಕಾಲೇಜುಗಳು ಶುಕ್ರವಾರ ರಜೆ ಘೋಷಿಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ

ಭಾರೀ ಮಳೆ ಹಿನ್ನಲೆ ನಾಳೆ.(ಜು.1) ದ.ಕ ಜಿಲ್ಲೆಯಾದ್ಯಂತ ಶಾಲಾ ಕಾಲೇಜಿಗೆ ರಜೆ Read More »

ಬ್ರೇಕಿಂಗ್ ಸಮಾಚಾರ
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ –

ಸಮಗ್ರ ನ್ಯೂಸ್ : ಮಾಜಿ ಸಿ ಎಂ ಫಡ್ನವೀಸ್ ಅವರಿಂದ ನೂತನ ಸರಕಾರಕ್ಕೆ ಬಾಹ್ಯ ಬೆಂಬಲ ಘೋಷಣೆ ಇಂದೇ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಪಡೆದ ಏಕನಾಥ್ ಶಿಂಧೆ ಶಿವಸೇನೆ ರೆಬೆಲ್​ ನಾಯಕ ಏಕನಾಥ್​​ ಶಿಂಧೆ ಬಣದ ಸಹಕಾರದೊಂದಿಗೆ ಮಹಾರಾಷ್ಟ್ರ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ಈಗಾಗಲೇ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ಮಹಾರಾಷ್ಟ್ರ ರಾಜ್ಯಪಾಲರಿಗೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​​ ಅವರು ಮನವಿ ಮಾಡಿದ್ದರು. ಈಗ ರಾಜ್ಯಪಾಲರು ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ್ದು,

ಬ್ರೇಕಿಂಗ್ ಸಮಾಚಾರ
ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ –
Read More »

ಇಂದು ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್

ಸಮಗ್ರ ನ್ಯೂಸ್ : ಕರ್ನಾಟಕ ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಶ್ರೀ ದೇವರ ದರ್ಶನ ಪಡೆದು ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದರು. ಮಧ್ಯಾಹ್ನ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಸ್ಥಾನದ ಹಾಗೂ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಅವರು ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಇಂದು ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ Read More »

ಮಂಗಳೂರು; ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದೇವಸ್ಥಾನ, ಮನೆ, ರಸ್ತೆಗಳಿಗೆ ನೀರು ನುಗ್ಗಿದೆ. ಮಂಗಳೂರಿನಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆಗೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ನಿನ್ನೆ ರಾತ್ರಿಯಿಂದ ವರುಣನ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಮಂಗಳೂರು – ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿದ್ದು, ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಮತ್ತೊಂದೆಡೆ ಕೇರಳ-ಮುಂಬೈ ಸಂಪರ್ಕಿಸುವ ಕೊಟ್ಟಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನುಗ್ಗಿ ವಾಹನ ಸವಾರರು

ಮಂಗಳೂರು; ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ Read More »

ಸುಳ್ಯ: ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜಡಿಮಳೆಯ ನಡುವೆ ಧರಣಿ| ಗ್ರಾಮಸ್ಥರ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸಾಥ್

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ‌ಮರ್ಕಂಜದಲ್ಲಿನ ಅಳವುಪಾರೆ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಗ್ರಾಮಸ್ಥರಿಂದ ಧರಣಿ ಆರಂಭಗೊಂಡಿದೆ. ಗಣಿಗಾರಿಕೆಯಿಂದ ಸ್ಥಳೀಯರಿಗೆ, ಧಾರ್ಮಿಕ ಕಟ್ಟಡಗಳಿಗೆ, ಶಾಲೆ ಹಾಗೂ ಜನವಸತಿ ಪ್ರದೇಶಕ್ಕೆ ಹಾನಿಯಾಗುತ್ತಿದ್ದು ತಕ್ಷಣ ಗಣಿಗಾರಿಕೆ ನಿಲ್ಲಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಮರ್ಕಂಜದ ಹಳೆ ವಿದ್ಯಾರ್ಥಿ ಸಂಘ, ಭಜನಾ ಮಂದಿರದ ಪದಾಧಿಕಾರಿಗಳು, ಗ್ರಾಮಸ್ಥರು ಧರಣಿಯಲ್ಲಿ ತೊಡಗಿದ್ದಾರೆ. ಮರ್ಕಂಜದ ಅಳವುಪಾರೆ ಗಣಿಗಾರಿಕೆಗೆ ಪಂಚಾಯತ್ ನ ಪರವಾನಗಿ ನವೀಕರಣವಾಗದಿದ್ದರೂ ಅಕ್ರಮವಾಗಿ

ಸುಳ್ಯ: ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜಡಿಮಳೆಯ ನಡುವೆ ಧರಣಿ| ಗ್ರಾಮಸ್ಥರ ಪ್ರತಿಭಟನೆಗೆ ಅಂಬೇಡ್ಕರ್ ರಕ್ಷಣಾ ವೇದಿಕೆ ಸಾಥ್ Read More »

ಮುಸಲಧಾರೆಗೆ ಬೆದರಿದ ಕರಾವಳಿ| ಮಂಗಳೂರು ನಗರ ಜಲಾವೃತ; ತಗ್ಗು ಪ್ರದೇಶಗಳಲ್ಲಿ ನುಗ್ಗಿದ ಕೃತಕ ನೆರೆ| ಪರಿಸ್ಥಿತಿ ಹತೋಟಿಯಲ್ಲಿಡಲು ಜಿಲ್ಲಾಡಳಿತ ಸಜ್ಜು|

ಸಮಗ್ರ ನ್ಯೂಸ್: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ದ್ವಿಚಕ್ರವಾಹನ ಸವಾರರು ಪರದಾಡುವಂತಾಗಿದೆ. ಮಂಗಳೂರಿನ ಕೆಲ ಖಾಸಗಿ ಶಾಲೆಗಳು ರಜೆ ಘೋಷಿಸಿವೆ. ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನಿಗಾ ವಹಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೆ ಮಕ್ಕಳು ಶಾಲೆಗಳಿಗೆ ಬಂದಿದ್ದರೆ ಎಲ್ಲಾ ಮುಂಜಾಗೃತೆ ವಹಿಸಿ ಕಾರ್ಯ ನಿರ್ವಹಿಸಲು ಶಾಲೆಗಳಿಗೆ ಸೂಚಿಸಲಾಗಿದೆ. ಮಕ್ಕಳು ಶಾಲೆಗೆ ಬರಲು ಅನಾನುಕೂಲವಾದ ಪ್ರದೇಶದಲ್ಲಿ ಅಂತಹ ಮಕ್ಕಳಿಗೆ ಈ ದಿನ ರಜೆ ನೀಡಲಾಗಿದೆ’

ಮುಸಲಧಾರೆಗೆ ಬೆದರಿದ ಕರಾವಳಿ| ಮಂಗಳೂರು ನಗರ ಜಲಾವೃತ; ತಗ್ಗು ಪ್ರದೇಶಗಳಲ್ಲಿ ನುಗ್ಗಿದ ಕೃತಕ ನೆರೆ| ಪರಿಸ್ಥಿತಿ ಹತೋಟಿಯಲ್ಲಿಡಲು ಜಿಲ್ಲಾಡಳಿತ ಸಜ್ಜು| Read More »

ಸುಳ್ಯ: ಮರ್ಕಂಜ ಅಳವುಪಾರೆ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಅಧಿಕಾರಿಗಳಿಂದ ಪರಿಶೀಲನೆ

ಸಮಗ್ರ ನ್ಯೂಸ್: ಗ್ರಾಮಸ್ಥರಿಂದ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಸುಳ್ಯ ತಾಲೂಕಿನ ಮರ್ಕಂಜದ ಅಳವುಪಾರೆ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಳವುಪಾರೆಯಲ್ಲಿ ನಡೆಸಲಾಗುತ್ತಿರುವ ಗಣಿಗಾರಿಕೆ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಗಣಿಯಿಂದ ಸ್ಥಳೀಯರಿಗೆ ಭಾರೀ ತೊಂದರೆ ಆಗುತ್ತಿದ್ದು ಗಣಿಯನ್ನು ನಿಲ್ಲಿಸಲು ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಸ್ಥಳ ಭೇಟಿ ನಡೆಸಿದ್ದಾರೆ.

ಸುಳ್ಯ: ಮರ್ಕಂಜ ಅಳವುಪಾರೆ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಅಧಿಕಾರಿಗಳಿಂದ ಪರಿಶೀಲನೆ Read More »

ಮಂಗಳೂರು: ಮರವೂರು ಸೇತುವೆಯಲ್ಲಿ ಬಿರುಕು, ಅಲ್ಲಲ್ಲಿ ಧರೆ ಕುಸಿತ| ಹೆದ್ದಾರಿಗಳಲ್ಲಿ ಸಂಚಾರ ಅಯೋಮಯ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆ ಬಿರುಸುಗೊಂಡಿದೆ. ಮಂಗಳೂರು ನಗರ ಹಾಗೂ ಹೊರವಲಯದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದರೆ, ಕೆಲವೆಡೆ ಮನೆ ಸಮೀಪ ದರೆ ಕುಸಿತ, ತಡೆಗೋಡೆ ಕುಸಿದಿರುವುದು ವರದಿಯಾಗಿದೆ. ಮರವೂರು ಸೇತುವೆ ಬಳು ರಸ್ತೆಯಲ್ಲಿ ಬಿರುಕು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನಗರದ ಪ್ರಮುಖ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಮಳೆ ಇದೇರೀತಿ ಇನ್ನೂ ಕೆಲ ಗಂಟೆಗಳ ಕಾಲ ಮುಂದುವರಿದಲ್ಲಿ ರಾಜಕಾಲುವೆಗಳ

ಮಂಗಳೂರು: ಮರವೂರು ಸೇತುವೆಯಲ್ಲಿ ಬಿರುಕು, ಅಲ್ಲಲ್ಲಿ ಧರೆ ಕುಸಿತ| ಹೆದ್ದಾರಿಗಳಲ್ಲಿ ಸಂಚಾರ ಅಯೋಮಯ Read More »

ಮಂಗಳೂರು: ಭಾರೀ ಮಳೆ ಹಿನ್ನಲೆ; ಶಾಲಾ ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಬಿರುಸಾಗಿದ್ದು, ಬುಧವಾರದಂತೆ ಗುರುವಾರವೂ ಬಿಡದೆ ಸುರಿಯುತ್ತಿದೆ. ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈಗಾಗಲೆ ಮಕ್ಕಳು ಶಾಲೆಗಳಿಗೆ ಬಂದಿದ್ದಲ್ಲಿ ಎಲ್ಲಾ ಮುಂಜಾಗೃತೆ ವಹಿಸಿ ಶಾಲೆಗಳು ಕಾರ್ಯ ನಿರ್ವಹಿಸಬೇಕು, ಮಕ್ಕಳು ಶಾಲೆಗೆ ಬರಲು ಅನಾನುಕೂಲವಾದ ಪ್ರದೇಶದಲ್ಲಿ ಅಂತಹ ಮಕ್ಕಳಿಗೆ ಈ ದಿನ ರಜೆ ನೀಡಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಸುರಕ್ಷತೆ

ಮಂಗಳೂರು: ಭಾರೀ ಮಳೆ ಹಿನ್ನಲೆ; ಶಾಲಾ ಕಾಲೇಜುಗಳಿಗೆ ರಜೆ Read More »