April 2022

ರಂಜಾನ್: ಮೆ. 02 ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮೇ.2ರಂದು ರಂಜಾನ್ ಆಚರಣೆಗೆ ಮೂನ್ ಕಮಿಟಿ ನಿರ್ಧರಿಸಿರುವುದರಿಂದ ಸರ್ಕಾರದ ರಂಜಾನ್ ರಜೆಯನ್ನು ಮೇ.02ರಂದು ಬದಲಾವಣೆ ಮಾಡಿ ಮರು ನಿಗದಿಪಡಿಸಿ, ಸಾರ್ವತ್ರಿಕ ರಜೆಯಾಗಿ ಘೋಷಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಶಿಷ್ಟಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮೇ. 03ರಂದು ಖುತುಬ್ ಎ ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಖುತುಬ್ ಎ ರಂಜಾನ್ ಹಬ್ಬವನ್ನು ದಿನಾಂಕ 02-05-2022ರಂದು ಆಚರಿಸಲು […]

ರಂಜಾನ್: ಮೆ. 02 ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ Read More »

ನಟಿ ಜಾಕ್ವೆಲಿನ್ ಗೆ ಇಡಿ‌ ಸಂಕಷ್ಟ| 7.27 ಕೋಟಿ ಆಸ್ತಿ ಮುಟ್ಟುಗೋಲು

ಸಮಗ್ರ ನ್ಯೂಸ್: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾನ್ಮನ್ ಸುಕೇಶ್ ಚಂದ್ರಶೇಖರ್ ಲಗತ್ತಿಸಲಾದ ಆಸ್ತಿಯು ಸ್ಥಿರ ಠೇವಣಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಜಾಕ್ವೆಲಿನ್‌, ಸುಕೇಶ್‌ ನಡುವೆ ಅಕ್ರಮ ಹಣ ವರ್ಗಾವಣೆ ಆಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಜಾರಿ ನಿರ್ದೇಶನಾಲಯ ಕಲೆಹಾಕಿತ್ತು. ಜ್ಯಾಕ್ವೆಲಿನ್‌ರ ವಿರುದ್ಧ “ಲುಕ್‌ ಔಟ್‌ ಸರ್ಕ್ಯುಲರ್ ‘ ಜಾರಿ ಗೊಳಿಸಿ ವಿಚಾರಣೆಗೊಳಪಡಿಸಿತ್ತು.

ನಟಿ ಜಾಕ್ವೆಲಿನ್ ಗೆ ಇಡಿ‌ ಸಂಕಷ್ಟ| 7.27 ಕೋಟಿ ಆಸ್ತಿ ಮುಟ್ಟುಗೋಲು Read More »

ಮಂಗಳೂರು: ಮಸೀದಿಗೆ ನುಗ್ಗಿ ಮಹಿಳೆಯರಿಗೆ ಗುಪ್ತಾಂಗ ತೋರಿದ ಯುವಕ- ಆರೋಪಿಯ ಬಂಧನ

ಸಮಗ್ರ ನ್ಯೂಸ್: ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಗುಪ್ತಾಂಗ ತೋರಿಸಿ‌‌ ಅಸಭ್ಯವಾಗಿ ವರ್ತಿಸಿರುವ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು‌ ಗುರುತಿಸಲಾಗಿದೆ. ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌

ಮಂಗಳೂರು: ಮಸೀದಿಗೆ ನುಗ್ಗಿ ಮಹಿಳೆಯರಿಗೆ ಗುಪ್ತಾಂಗ ತೋರಿದ ಯುವಕ- ಆರೋಪಿಯ ಬಂಧನ Read More »

ಬೆಂಗಳೂರು: ಕೊಳದಮಠ ಸ್ವಾಮೀಜಿ ಲಿಂಗೈಕ್ಯ

ಸಮಗ್ರ ನ್ಯೂಸ್: ನಗರದ ಶಾಂತಿನಗರದಲ್ಲಿರುವ ಕೊಳದಮಠದಲ್ಲಿದ ಶಾಂತವೀರ ಸ್ವಾಮೀಜಿಯವರು (80), ಇಂದು ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗೆ ಹೃದಯಾಘಾತ ಸಂಭವಿಸಿದ್ದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಶಾಂತಿನಗರದಲ್ಲಿರುವ ಕೊಳದ ಮಠದಲ್ಲಿಶ್ರೀ ಶಾಂತವೀರ ಸ್ವಾಮೀಜಿಗಳು ಇಂದು ಎಂದಿನಂತೆ ತಮ್ಮ ನಿತ್ಯಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಬೆಂಗಳೂರು: ಕೊಳದಮಠ ಸ್ವಾಮೀಜಿ ಲಿಂಗೈಕ್ಯ Read More »

ಭೀಕರ ಅಪಘಾತ; ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸಾವು

ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಕಾರಿನ ಟೈರ್ ಸಿಡಿದು ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಜರಾತ್ ಮೂಲದ ಕಾರು ದಾವಣಗೆರೆ ಕಡೆಯಿಂದ ಹುಬ್ಬಳ್ಳಿಗೆ ಹೊರಟಿದ್ದ ವೇಳೆ ಕಾರಿನ ಟೈರ್ ಬ್ಲಾಸ್ಟ್

ಭೀಕರ ಅಪಘಾತ; ಗುಜರಾತ್ ಹಾಗೂ ಕೇರಳ ಮೂಲದ ನಾಲ್ವರು ಸಾವು Read More »

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ| ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರಾಮಾಣಿಕ ಅಭ್ಯರ್ಥಿಗಳು

ಸಮಗ್ರ ನ್ಯೂಸ್: ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ಮರು ಪರೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿರುವ ಪ್ರಾಮಾಣಿಕ ಪಿಎಸ್​ಐ ಅಭ್ಯರ್ಥಿಗಳು ನಮಗೆ ನ್ಯಾಯಬೇಕು ಯಾರೋ ಮಾಡಿರುವ ತಪ್ಪಿಗೆ, ನಮಗೆ ಈ ರೀತಿ ಯಾಕೆ ಅನ್ಯಾಯ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತಂತೆ ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್​ ಬಳಿ ಉಪವಾಸ ಕೈಗೊಳ್ಳಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಪಿಎಸ್‌ಐ ಎಕ್ಸಾಂನಲ್ಲಿ ನಡೆದಿದೆ ಎನ್ನಲಾಗಿರುವ

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ| ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಪ್ರಾಮಾಣಿಕ ಅಭ್ಯರ್ಥಿಗಳು Read More »

ಇಂದು ವರ್ಷದ ಮೊದಲ ಸೂರ್ಯಗ್ರಹಣ| ಗ್ರಹಣದಂದೇ ಶನಿ ಅಮಾವಾಸ್ಯೆ|

ಸಮಗ್ರ ನ್ಯೂಸ್: ನಭೋಮಂಡಲದ ಕೌತುಕ, ವರ್ಷದ ಮೊದಲ ರಾಹುಗ್ರಸ್ತ ಸೂರ್ಯಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣವೂ ಕೆಟ್ಟ ಪರಿಣಾಮ ಬೀರುತ್ತದೆ ಅಂತಾರೆ. ಸೂರ್ಯಗ್ರಹಣದ ದಿನವೇ, ಶನಿ ಅಮಾವಾಸ್ಯೆ ಕೂಡ ಬಂದಿರೋದು ಇನ್ನೊಂದು ಕಾಕತಾಳೀಯ. ಏಪ್ರಿಲ್ 30ರಂದು ನಭೋಮಂಡಲದಲ್ಲಿ ಸೂರ್ಯನ ಮೇಲೆ ಗ್ರಹಣದ ಕಾರ್ಮೋಡ ಇರಲಿದೆ. ಆದ್ರೆ ಭಾರತದಲ್ಲಿ ನಭೋಮಂಡಲದ ಈ ವಿಸ್ಮಯ ಗೋಚರಿಸಲ್ಲ. ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ.

ಇಂದು ವರ್ಷದ ಮೊದಲ ಸೂರ್ಯಗ್ರಹಣ| ಗ್ರಹಣದಂದೇ ಶನಿ ಅಮಾವಾಸ್ಯೆ| Read More »

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಸಮಗ್ರ ನ್ಯೂಸ್: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ‌ ಕೆಳಗೆ ಬಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಮೃತರನ್ನು ವಗ್ಗ ಸಮೀಪದ ಕಾಡಬೆಟ್ಟು‌ನಿವಾಸಿ ಯೋಗೀಶ್ ಎಂದು ಗುರುತಿಸಲಾಗಿದೆ ಇವರು ಎ.28 ರಂದು ಸಂಜೆ ವೇಳೆ‌ ಮನೆಯ‌ ಅಂಗಳದಲ್ಲಿದ್ದ ತೆಂಗಿನ ಮರದಿಂದ ಕಾಯಿ ಕೊಯ್ಯಲೆಂದು ಮರ ಏರಿದ್ದವರು, ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ತಕ್ಷಣ‌ ಅವರನ್ನು ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ‌ಪ್ರಕರಣ ದಾಖಲಾಗಿದೆ.

ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು Read More »

ತುಮಕೂರು: ಭೀಕರ ಅಪಘಾತದಲ್ಲಿ ನವವಿವಾಹಿತ ಸೇರಿ ಮೂವರು ಸಾವು| ನವವಧು ಗಂಭೀರ

ಸಮಗ್ರ ನ್ಯೂಸ್: ಲಾರಿ ಹಾಗೂ ಇವೋವಾ ಕಾರಿನ ನಡುವೆ ತುಮಕೂರಿನ ಚಿಕ್ಕ ಶೆಟ್ಟಿ ಕೆರೆ ಬಳಿ ಡಿಕ್ಕಿ ಸಂಭವಿಸಿದ್ದು, ದುರ್ಘಟನೆಯಲ್ಲಿ ನವ ವರ ಸೇರಿ ಮೂವರು ದರ್ಮರಣವನ್ನಪ್ಪಿದ್ದಾರೆ. ಮೃತರನ್ನು ಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪ ಅವರ ಮಗ ಪ್ರಸನ್ನಕುಮಾರ್ (30), ಸಂತೋಷ್ (29), ಚಾಲಕ ಚಿನ್ನಪ್ಪ (30) ಎಂದು ಗುರ್ತಿಸಲಾಗಿದೆ. ವಾರದ ಹಿಂದೆಯಷ್ಟೇ ಅರಸೀಕೆರೆ ತಾಲೂಕಿನ ಕಮಲಾಪುರ ಗ್ರಾಮದ ಪ್ರಸನ್ನಕುಮಾರ್​ ಅವರಿಗೆ ಅದೇ ಗ್ರಾಮದ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ ಎಂಬುವವರ ಜೊತೆ ವಿವಾಹವಾಗಿತ್ತು. ಮನೆಗೆ

ತುಮಕೂರು: ಭೀಕರ ಅಪಘಾತದಲ್ಲಿ ನವವಿವಾಹಿತ ಸೇರಿ ಮೂವರು ಸಾವು| ನವವಧು ಗಂಭೀರ Read More »

ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ಮುಖಾಮುಖಿ – ಬೈಕ್ ಸವಾರನಿಗೆ ಗಾಯ

ಸಮಗ್ರ ನ್ಯೂಸ್: ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ತಾಯಿ, ಮಗ ಗಾಯಗೊಂಡಿರುವ ಘಟನೆ ಪುತ್ತೂರಿನ ನೆಹರೂನಗರ ಬಳಿ ನಡೆದಿದೆ. ನೆಹರೂ ನಗರ ವಿವೇಕಾನಂದ ಕಾಲೇಜು ಕ್ಯಾಂಪಸ್ ಬಳಿಯ ಸರ್ವಿಸ್ ಸ್ಟೇಷನ್ ಎದುರು ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ದಾರಂದಕುಕ್ಕು ನಿವಾಸಿ ಅಭಿಷೇಕ್ ಕೆ.ಎಸ್(24ವ)ಮತ್ತು ಹಿಂಬದಿ ಸವಾರೆಯಾಗಿದ್ದ ಅವರ ತಾಯಿ ಭಾರತಿ ಕೆ. ಎಸ್. (49)ರವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ

ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ಮುಖಾಮುಖಿ – ಬೈಕ್ ಸವಾರನಿಗೆ ಗಾಯ Read More »