February 2023

ಹಳೆ ದ್ವೇಷಕ್ಕೆ ಬೀದಿ ಹೆಣವಾದ ಯುವಕ| ಶರಣರ ನಾಡಿನಲ್ಲೊಂದು ಮರ್ಡರ್

ಸಮಗ್ರ ನ್ಯೂಸ್: ಹಳೆಯ ದ್ವೇಷಕ್ಕೆ ಯುವಕನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ ದುರಂತ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತ ಬಳಿ ನಡೆದಿದೆ. ನಡು ರಸ್ತೆಯಲ್ಲೇ ಇಬ್ಬರು ಯುವಕರ ಗುಂಪಿನ ನಡುವಿನ ಗಲಾಟೆ ತೀವ್ರಗೊಂಡು ಆನಂದ್‌ ಪುಲೆ ಎಂಬ ಯುವಕನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ (26)ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ . ಗಾಯಾಳುವನ್ನು ಚಿಕಿತ್ಸೆಗಾಗಿ‌‌ ಕೂಡಲೇ ಉಮರ್ಗಾ ಆಸ್ಪತ್ರೆಗೆ ರವಾನಿಸಲಾಯಿತಾದರೂ ಮಾರ್ಗ ಮಧ್ಯೆ ಆನಂದ್‌ ಸಾವನ್ನಪ್ಪಿದ್ದಾನೆ ಎಂದು ತಿಳಿದುಯಬಂದಿದೆ. ಗಲಾಟೆಯಲ್ಲಿ ಇನ್ನೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ […]

ಹಳೆ ದ್ವೇಷಕ್ಕೆ ಬೀದಿ ಹೆಣವಾದ ಯುವಕ| ಶರಣರ ನಾಡಿನಲ್ಲೊಂದು ಮರ್ಡರ್ Read More »

ಕಾರು ಡಿಕ್ಕಿ ಹೊಡೆದು ಮೂವರು ಮಕ್ಕಳು ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಚೆನ್ನೈನ ತಿರುಪತ್ತೂರ್ ನ ವಾಣಿಯಂಬಾಡಿನಲ್ಲಿ ನಡೆದಿದೆ. ವಿಜಯ್(13), ರಫೀಕ್(13) ಮತ್ತು ಸೂರ್ಯ(13) ಮೃತಪಟ್ಟ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಗಿರಿಸಮುಥಿರಂನಲ್ಲಿರುವ ಸರ್ಕಾರಿ ಶಾಲೆಗೆ ತೆರಳಲು ಚೆನ್ನೈ- ಬೆಂಗಳೂರು ಹೆದ್ದಾರಿಯಲ್ಲಿ ವಿದ್ಯಾರ್ಥಿಗಳ ಗುಂಪು ಸೈಕಲ್ ನಲ್ಲಿ ಸಾಗುತ್ತಿತ್ತು. ಈ ವೇಳೆ ವೆಲ್ಲೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ವೇಗವಾಗಿ ಬಂದು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿ ಹೊಡೆದು ಮೂವರು ಮಕ್ಕಳು ಸ್ಥಳದಲ್ಲೇ ದುರ್ಮರಣ Read More »

7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ MBBS ಟಾಪರ್

ಸಮಗ್ರ ನ್ಯೂಸ್: ಏಳು ಅಂತಸ್ತಿನ ಕಟ್ಟಡದಿಂದ ಬಿದ್ದು MBBS ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಬೀದರ್​ನ ಬ್ರೀಮ್ಸ್ ಆಸ್ಪತ್ರೆ ಆವರಣದಲ್ಲಿರುವ MBBS ಹಾಸ್ಟೆಲ್ ಟೆರಸ್ ಮೇಲಿಂದ ವಿದ್ಯಾರ್ಥಿ ಹಾರಿ ಸಾವನ್ನಪ್ಪಿದ್ದಾನೆ. MBBS ನಲ್ಲಿ ಅಂತಿಮ ವರ್ಷದ ವ್ಯಾಸಂಗ ಶ್ರೀರಾಮ್ ಕಾಡಗಿ(22) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈತ ಕಲಿಕೆಯಲ್ಲಿ ಈತ ಟಾಪರ್ ಕೂಡ ಆಗಿದ್ದು, ಕೆಲವು ದಿನಗಳಿಂದ ಶ್ರೀರಾಮ ಕಾಡಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಬೆಳಗ್ಗಿನ ಜಾವ 7;30ಕ್ಕೆ ಹಾಸ್ಟೆಲ್​ ಟೆರೆಸ್​ ಮೇಲಿಂದ ಹಾರಿ ಸಾವನ್ನಪ್ಪಿದ್ದಾನೆ.

7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ MBBS ಟಾಪರ್ Read More »

ಏಳನೇ ವೇತನ ಆಯೋಗ ಜಾರಿಗೆ ನಕಾರ ಹಿನ್ನಲೆ,| ನಾಳೆಯಿಂದ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಬಂದ್

ಸಮಗ್ರ ನ್ಯೂಸ್: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಾಳೆ ಅಂದರೆ ಮಾರ್ಚ್​ 01ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರಿಂದ ಸರ್ಕಾರಿ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ. ಇನ್ನು ಈ ಬಗ್ಗೆ ಇಂದು(ಫೆ.28) ಸುದ್ದಿಗೊಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಬಜೆಟ್​ನಲ್ಲಿ 7ನೇ ವೇತನ ಆಯೋಗ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾಳೆಯಿಂದ(ಮಾ.01) ಸಾಮೂಹಿಕವಾಗಿ ಸರ್ಕಾರಿ ನೌಕರರು ಮುಷ್ಕರಕ್ಕೆ ಇಳಿಯಲಿದ್ದೇವೆ. ಈ ಹಿನ್ನೆಲೆಯಲ್ಲಿ

ಏಳನೇ ವೇತನ ಆಯೋಗ ಜಾರಿಗೆ ನಕಾರ ಹಿನ್ನಲೆ,| ನಾಳೆಯಿಂದ ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಬಂದ್ Read More »

ಕೊಟ್ಟಿಗೆಹಾರ: ಮುಳ್ಳು ಹಂದಿ ಶಿಕಾರಿಗೆ ತೆರಳಿದ ಯುವಕರು ಸಾವು

ಸಮಗ್ರ ನ್ಯೂಸ್: ಮುಳ್ಳು ಹಂದಿ ಇದ್ದ ಸುರಂಗಕ್ಕೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿಕಾರ್ಮಿಕರು ಸಾವನಪ್ಪಿದ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಳಿಗನಾಡು ಎಂಬಲ್ಲಿ ಸಂಭವಿಸಿದೆ. ತಮಿಳುನಾಡು ಮೂಲದ ವಿಜಯ್ (28), ಶರತ್ (26) ಸಾವನ್ನಪ್ಪಿದ ಕೂಲಿಕಾರ್ಮಿಕರು. ಇವರು ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಮುಳ್ಳು ಹಂದಿ ಶಿಕಾರಿ ಮಾಡಲು ಗುಡ್ಡಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಹಂದಿ ಸುರಂಗದ ಒಳಗೆ ಹೊಗಿದ್ದು ತಕ್ಷಣ ಯುವಕರು ಸುರಂಗದ ಒಳಗೆ ಹೊಗೆ ಹಾಕಿ

ಕೊಟ್ಟಿಗೆಹಾರ: ಮುಳ್ಳು ಹಂದಿ ಶಿಕಾರಿಗೆ ತೆರಳಿದ ಯುವಕರು ಸಾವು Read More »

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ| ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ(6-8) ನೇಮಕಾತಿಗೆ ಸಂಬಂಧಿಸಿದಂತೆ ‘ಪರಿಷ್ಕೃತ 1ಃ1 ತಾತ್ಕಾಲಿಕ ಆಯ್ಕೆ ಪಟ್ಟಿ’ಯನ್ನು ಸೋಮವಾರ https//schooleducation.kar.nic.in ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮಾ.1ರಿಂದ ಮಾ.4ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರಿಗೆ ಹಾಗೂ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ. ಹಿಂದೆ 1:1 ತಾತ್ಕಾಲಿಕ ಶಿಕ್ಷಣ ಇಲಾಖೆಯು ಪ್ರಕಟಿಸಿತ್ತು. ವಿವಾಹಿತ ಹೆಣ್ಣುಮಕ್ಕಳನ್ನು ಅರ್ಜಿಯನ್ನು ಸಲ್ಲಿಸಿದಾಗ, ಅರ್ಜಿಯಲ್ಲಿ ವಿವಾಹಿತರೆಂದು

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ| ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ Read More »

ಮಡಿಕೇರಿ: ರೈತಮಹಿಳೆ‌ ಮೇಲೆ ಕಾರ್ಮಿಕನಿಂದ ಮನಬಂದಂತೆ‌ ಹಲ್ಲೆ‌..!

ಸಮಗ್ರ ನ್ಯೂಸ್: ರೈತಮಹಿಳೆ‌ ಮೇಲೆ ಕಾರ್ಮಿಕನಿಂದ ಮನಬಂದಂತೆ‌ ಹಲ್ಲೆ‌ ನಡೆಸಿದ ಘಟನೆ ಶ್ರೀಮಂಗಲನಪೊಲೀಸ್ ಠಾಣೆ ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ನಡೆದಿದೆ. ಅಸ್ಸಾಂ ಮೂಲದ‌ ಕೂಲಿ‌ ಕಾರ್ಮಿಕ ರಾಜು ಪ್ರಕರಣದ ಆರೋಪಿ. ಈತ ‌ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದು ಇದನ್ನು ಖಂಡಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಹಲ್ಲೆ‌ ಆರೋಪಿ ಶ್ರೀಮಂಗಲ‌ ಠಾಣೆ ಪೊಲೀಸರ ವಶಕ್ಕೆ ಪಡೆದಿದ್ದು ಗಾಯಾಳು ಮಹಿಳೆ ಆಸ್ಪತ್ರೆ ದಾಖಲು ಮಾಡಲಾಗಿದೆ.

ಮಡಿಕೇರಿ: ರೈತಮಹಿಳೆ‌ ಮೇಲೆ ಕಾರ್ಮಿಕನಿಂದ ಮನಬಂದಂತೆ‌ ಹಲ್ಲೆ‌..! Read More »

ಕೊಡಗಿನಲ್ಲಿ ವ್ಯಾಘ್ರಗಳ ದಾಂಧಲೆ ಹೆಚ್ಚಳ |ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ದ ವೀಣಾ ಅಚ್ಚಯ್ಯ ಗರಂ

ಸಮಗ್ರ ನ್ಯೂಸ್: ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೊಡಗು ಜಿಲ್ಲೆಯಲ್ಲಿ ಹುಲಿಗಳ ಉಪಟಳ ಹೆಚ್ಚಾಗುತ್ತಿದೆ. 2 ವರ್ಷಗಳಲ್ಲಿ 6 ಮಾನವಜೀವ ಹಾನಿ ಮತ್ತು ಅನೇಕ ಜಾನುವಾರುಗಳು ಸಾವನ್ನಪ್ಪಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಕೊಡಗಿನ ಜನರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ. ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಕಾ೯ರದ ವಿರುದ್ದ ಆರೋಪಗಳ ಸುರಿಮಳೆಗೈಯ್ದ ವೀಣಾ ಅಚ್ಚಯ್ಯ, ಕಾಡಾನೆಗಳು ತೋಟಗಳನ್ನೇ ಆವಾಸ ಸ್ಥಾನ ಮಾಡಿಕೊಂಡಿದ್ದರೆ, ಹುಲಿಗಳು ಮನುಷ್ಯರನ್ನೇ ಆಹಾರ ಮಾಡಿಕೊಳ್ಳುತ್ತಿವೆ. ಈ ಬಗ್ಗೆ

ಕೊಡಗಿನಲ್ಲಿ ವ್ಯಾಘ್ರಗಳ ದಾಂಧಲೆ ಹೆಚ್ಚಳ |ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ದ ವೀಣಾ ಅಚ್ಚಯ್ಯ ಗರಂ Read More »

ಸಂಪಾಜೆ: ಶಾರ್ಟ್ ಸರ್ಕ್ಯೂಟ್; ಹೊತ್ತಿ ಉರಿದ ಕೃಷಿಭೂಮಿ

ಸಮಗ್ರ ನ್ಯೂಸ್: ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಸಂಪಾಜೆಯಿಂದ ವರದಿಯಾಗಿದೆ. ಟ್ರಾನ್ಸ್ ಫಾರ್ಮರ್ ನಲ್ಲಿನ ಬೆಂಕಿ ಕಿಡಿ ಬಿದ್ದು ಆ ಸ್ಥಳದಲ್ಲಿನ ಹುಲ್ಲಿನ ಪೊದೆಗೆ ಬೆಂಕಿ ತಗಲಿತು ಎನ್ನಲಾಗಿದೆ. ಸಂಪಾಜೆಯ ಹೈಸ್ಕೂಲ್ ಬಳಿ ಘಟನೆ ಸಂಭವಿಸಿದ್ದು, ಸಮೀಪದಲ್ಲಿದ್ದ ಕೃಷಿ ಭೂಮಿಯು ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಚೆಸ್ಕಾಂಗೆ ಮಾಹಿತಿ ನೀಡಿದರು. ಬಳಿಕ ಚೆಸ್ಕಾಂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಸ್ಥಳೀಯರ ಸಮಯ

ಸಂಪಾಜೆ: ಶಾರ್ಟ್ ಸರ್ಕ್ಯೂಟ್; ಹೊತ್ತಿ ಉರಿದ ಕೃಷಿಭೂಮಿ Read More »

ಗೆಳೆಯನ ಜೊತೆ ಸೇರಿ ಪತಿಯ‌ ಕಥೆಯನ್ನೇ ಮುಗಿಸಿದ ಪತ್ನಿ| ವಿಟ್ಲದಲ್ಲಿ‌ ನಡೆಯಿತೊಂದು ಭಯಾನಕ ಘಟನೆ

ಸಮಗ್ರ ನ್ಯೂಸ್: ಕೋಣೆಯಲ್ಲಿ ಮಲಗಿದಲ್ಲಿಯೇ ವ್ಯಕ್ತಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರವಿಂದ ಅವರ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್‌ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳೆಂದು ಗುರುತಿಸಲಾಗಿದೆ. ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್‌ ಕೆಲಸವನ್ನು

ಗೆಳೆಯನ ಜೊತೆ ಸೇರಿ ಪತಿಯ‌ ಕಥೆಯನ್ನೇ ಮುಗಿಸಿದ ಪತ್ನಿ| ವಿಟ್ಲದಲ್ಲಿ‌ ನಡೆಯಿತೊಂದು ಭಯಾನಕ ಘಟನೆ Read More »