June 2023

58ರ ಹರೆಯದಲ್ಲಿ ಅವಳಿ ಮಕ್ಕಳ ಹಡೆದ ಮಹಾತಾಯಿ!!

ಸಮಗ್ರ ನ್ಯೂಸ್: ಮಕ್ಕಳಿಲ್ಲದ ಮಹಿಳೆಯೊಬ್ಬರು ತಮ್ಮ 58ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಜೈಪುರದ ಬಿಕಾನೇರ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಅವಳಿ ಗಂಡು-ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ನಡೆದಿದ್ದು, ಹೆರಿಗೆಯ ನಂತರ ತಾಯಿ ಮತ್ತು ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವರದಿಗಳ ಪ್ರಕಾರ 58 ವರ್ಷದ ಶೇರಾ ಬಹದ್ದೂರ್ ಅವರಿಗೆ ಮಕ್ಕಳಿರಲಿಲ್ಲ. ಕೊನೆಗೆ ಐವಿಎಫ್ ತಂತ್ರದ ಮೊರೆ ಹೋಗಿದ್ದರು. ಎರಡು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದಾರೆ. ವೃದ್ಧಾಪ್ಯದಲ್ಲೂ ಮಕ್ಕಳನ್ನು ಹೊಂದಬೇಕೆಂಬ ಅವರ ಬಯಕೆ […]

58ರ ಹರೆಯದಲ್ಲಿ ಅವಳಿ ಮಕ್ಕಳ ಹಡೆದ ಮಹಾತಾಯಿ!! Read More »

ಬೆಳ್ತಂಗಡಿ: ನೇತ್ರಾವತಿ ಪೀಕ್ ಗೆ ಟ್ರಕ್ಕಿಂಗ್ ಗೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ನೇತ್ರಾವತಿ ಪೀಕ್ ಪಾಯಿಂಟ್ ಗೆ ಟ್ರಕ್ಕಿಂಗ್ ಬಂದಿದ್ದ ಮೈಸೂರು ಮೂಲದ ಪ್ರವಾಸಿ ಯುವಕನೋರ್ವ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟವನನ್ನು ಮೈಸೂರಿನ ರಕ್ಷಿತ್ (27) ಎಂದು ಗುರುತಿಸಲಾಗಿದೆ. ಮೈಸೂರು ಮೂಲದ 7 ಯುವಕರ ತಂಡ ಟ್ರಕ್ಕಿಂಗ್ ಗೆ ಆಗಮಿಸಿದ್ದರು. ಕುದುರೆಮುಖದಿಂದ- ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿದ್ದ ವೇಳೆ ಮಾರ್ಗ ಮಧ್ಯದಲ್ಲಿ ರಕ್ಷಿತ್‌ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು- ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿ ಪೀಕ್ ಸ್ಪಾಟ್ ನಿಂದ ಮೃತದೇಹವನ್ನ ಪೊಲೀಸರು ಕಳಸಕ್ಕೆ ತಂದಿದ್ದಾರೆ.

ಬೆಳ್ತಂಗಡಿ: ನೇತ್ರಾವತಿ ಪೀಕ್ ಗೆ ಟ್ರಕ್ಕಿಂಗ್ ಗೆ ಬಂದಿದ್ದ ಯುವಕ ಹೃದಯಾಘಾತದಿಂದ ಸಾವು Read More »

ಏಷ್ಯನ್ ಕಬಡ್ಡಿ ಚಾಂಪಿಯನ್‌ ಶಿಪ್| ಇರಾನ್ ಮಣಿಸಿ ಎಂಟನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ

ಸಮಗ್ರ ನ್ಯೂಸ್: ದ.ಕೊರಿಯಾದ ಬುಸಾನ್ ನಲ್ಲಿ ನಡೆದ 11ನೇ ಆವೃತ್ತಿಯ ಪುರುಷರ ಏಷ್ಯನ್‌ ಕಬಡ್ಡಿ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಪೂರ್ಣ ಪ್ರಾಬಲ್ಯ ಮೆರೆದು ಭಾರತ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಇಂದು ನಡೆದ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿದ ಸ್ಟಾರ್‌ ರೇಡರ್‌ ಪವನ್‌ ಕುಮಾರ್‌ ಸೆಹ್ರಾವತ್‌ ಸಾರಥ್ಯದ ಟೀಮ್ ಇಂಡಿಯಾ 42-32 ಅಂಕಗಳಿಂದ ಅಪಾಯಕಾರಿ ಹಾಗೂ ಬದ್ಧ ಎದುರಾಳಿ ಇರಾನ್‌ ತಂಡವನ್ನು ಬಗ್ಗು ಬಡಿದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡವಾಗಿರುವ

ಏಷ್ಯನ್ ಕಬಡ್ಡಿ ಚಾಂಪಿಯನ್‌ ಶಿಪ್| ಇರಾನ್ ಮಣಿಸಿ ಎಂಟನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ Read More »

ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಕೆಎಸ್ಆರ್ ಟಿಸಿ| ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ವಿವಿಧ ಪದವಿ ಕೋರ್ಸ್‌ಗಳ ಪರೀಕ್ಷೆಗಳು ಆಗಸ್ಟ್‌ ನಲ್ಲಿ ನಡೆಯುವುದರಿಂದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತಿಳಿಸಿದೆ. ಈ ಹಿಂದೆ 2022-23 ಸಾಲಿನ ಸ್ನಾತಕೋತ್ತರ, ಡಿಪ್ಲೋಮಾ ಬಿ.ಫಾರ್ಮ, ಕಾನೂನು ಪದವಿ ಹಾಗೂ ಮುಂತಾದ ಕೋರ್ಸುಗಳ ಪದವಿವಿದ್ಯಾರ್ಥಿಗಳ ಬಸ್‌ಪಾಸ್ ಜೂನ್ 2023ರ ಅಂತ್ಯದವರೆಗೆ ಮಾತ್ರ ವಿಸ್ತರಿಸಲಾಗಿತ್ತು. ಆದರೆ ಪದವಿ ವಿದ್ಯಾರ್ಥಿಗಳಿಗೆ ಜುಲೈ/ಆಗಸ್ಟ್ ನಲ್ಲಿ ಪರೀಕ್ಷೆಗಳು ನಡೆಯಲಿದ್ದು ಈ ಕುರಿತು ಆಯಾ ವಿಶ್ವವಿದ್ಯಾನಿಲಯಗಳು ಅಧಿಸೂಚನೆಯನ್ನು ಹೊರಡಿಸಿವೆ. ಈ

ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಕೆಎಸ್ಆರ್ ಟಿಸಿ| ಇಲ್ಲಿದೆ ಫುಲ್ ಡೀಟೈಲ್ಸ್ Read More »

ಮೊದಲ ರಾತ್ರಿಯೇ ಮಗು ಹೆತ್ತ ನವ ವಧು!!

ಸಮಗ್ರ ನ್ಯೂಸ್: ಮದುವೆಯಾದ ಮೊದಲನೇ ರಾತ್ರಿಯೇ ವಧು ಮಗುವಿಗೆ ಜನ್ಮ ನೀಡಿದ ಘಟನೆ ದೆಹಲಿ ಹೊರವಲಯದ ಗ್ರೇಟರ್‌ ನೊಯ್ಡಾದಲ್ಲಿ ವರದಿಯಾಗಿದೆ. ಗ್ರೇಟರ್‌ ನೊಯ್ಡಾದ ವರನಿಗೆ ತೆಲಂಗಾಣದ ಸಿಕಂದರಾಬಾದ್‌ನ ಯುವತಿಯೊಬ್ಬಳ ಜತೆಗೆ ಜೂ.26ರಂದು ಮದುವೆ ನಡೆಯಿತು. ಪ್ರಥಮ ರಾತ್ರಿಯಂದು ವಧು ತನಗೆ ಹೊಟ್ಟೆ ನೋವು ಎಂದು ಹೇಳಿದ್ದಾಳೆ. ಹುಡುಗನ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ನಡೆಸಿದ ವೈದ್ಯರು, ಆಕೆ 7 ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ. ಮುಂಜಾನೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. “ವಧುವಿಗೆ

ಮೊದಲ ರಾತ್ರಿಯೇ ಮಗು ಹೆತ್ತ ನವ ವಧು!! Read More »

ಎಸ್ಎಸ್ಎಲ್ ಸಿ ಪೂರಕ ಪಲಿತಾಂಶ ಪ್ರಕಟ| ಬಾಲಕಿಯರೇ ಮೇಲುಗೈ

ಸಮಗ್ರ ನ್ಯೂಸ್: ಜೂನ್ ತಿಂಗಳಿನಲ್ಲಿ ನಡೆದಿದ್ದ ಎಸ್‌ಎಸ್‌ಎಲ್​ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 1,11,781 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 46,270 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ. 41.39ರಷ್ಟು ಫಲಿತಾಂಶ ಬಂದಿದೆ. ಮಂಡಳಿಯ ಅಧಿಕೃತ ವೆಬ್​ಸೈಟ್​ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಎಸ್‌ಎಂಎಸ್ ಮೂಲಕವೂ ವಿದ್ಯಾರ್ಥಿಗಳಿಗೆ ಫಲಿತಾಂಶ ಕಳುಹಿಸಿಕೊಡಲಾಗುತ್ತದೆ ಎಂದು ಮಂಡಳಿ ತಿಳಿಸಿದೆ. ಪರೀಕ್ಷೆಗೆ ಹಾಜರಾದ 71,134 ಬಾಲಕರಲ್ಲಿ 27,705 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.38 ಫಲಿತಾಂಶ ಬಂದಿದೆ.

ಎಸ್ಎಸ್ಎಲ್ ಸಿ ಪೂರಕ ಪಲಿತಾಂಶ ಪ್ರಕಟ| ಬಾಲಕಿಯರೇ ಮೇಲುಗೈ Read More »

ಸುಬ್ರಹ್ಮಣ್ಯ: ಕೆ. ಎಸ್.ಎಸ್. ಕಾಲೇಜಿನಲ್ಲಿ ಹಲಸು ಮೇಳ ಪ್ರದರ್ಶನ | ವಿದ್ಯಾರ್ಥಿಗಳಿಂದ ಹಲಸಿನ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಎಸ್.ಎಸ್. ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಇದರ ಆಶ್ರಯದಲ್ಲಿ ಜೂನ್ 30 ರಂದು ಹಲಸು ಮೇಳ-2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ಶ್ರೀ ಮಂಕುಡೆ ವೆಂಕಟರಮಣ ರಾವ್ ನೆರವೇರಿಸಿದರು. ಮುಖ್ಯ ಅಭ್ಯಾಗತರಾಗಿ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಡಾ.ನಿಂಗಯ್ಯ ಭಾಗವಹಿಸಿದ್ದರು. ವಿದ್ಯಾರ್ಥಿಗಳೇ ತಯಾರಿಸಿದ ಹೊಸ ರೀತಿಯ ಸ್ವಾದಿಷ್ಟವಾದ ಹಲಸಿನ ಖಾದ್ಯಗಳ

ಸುಬ್ರಹ್ಮಣ್ಯ: ಕೆ. ಎಸ್.ಎಸ್. ಕಾಲೇಜಿನಲ್ಲಿ ಹಲಸು ಮೇಳ ಪ್ರದರ್ಶನ | ವಿದ್ಯಾರ್ಥಿಗಳಿಂದ ಹಲಸಿನ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ Read More »

ಈ ಸ್ಪುರದ್ರೂಪಿ ಯುವಕ ವಧು ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ| ಕೃಷಿಕರ ಮಕ್ಕಳಿಗೆ ಹೆಣ್ಣು ಕೊಡೋರೇ ಇಲ್ಲ!!

ಸಮಗ್ರ ನ್ಯೂಸ್: ಕರಾವಳಿ ಮತ್ತು ಮಲೆನಾಡು ಭಾಗದಲ್ಲಂತೂ ಕೃಷಿಕರಿಗೆ, ಬಾಣಸಿಗರಿಗೆ, ಅರ್ಚಕರಿಗೆ, ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿರುವವರಿಗೆ ಮದುವೆಯೇ ಮರೀಚಿಕೆಯಾದಂತಿದೆ. ಇಂಥಹುದೇ ಪರಿಸ್ಥಿತಿಯನ್ನು ಎದುರಿಸಿದ ಯುವಕನೊಬ್ಬ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತೇಲಂಗಾರ ನಿವಾಸಿ ಕಿರಗಾರಿ ಮನೆಯ ನಾಗರಾಜ ಗಣಪತಿ ಗಾಂವ್ಕರ (35) ಮೃತ ಯುವಕ. ಕಳೆದ ಹಲವಾರು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದ ಅವರಿಗೆ ಕೊನೆಗೂ ಒಂದು ಮದುವೆ ಸೆಟ್‌ ಆಗಲೇ ಇಲ್ಲ. ಇದರಿಂದ ನೊಂದು ಪ್ರಾಣವನ್ನೇ ಕಳೆದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ

ಈ ಸ್ಪುರದ್ರೂಪಿ ಯುವಕ ವಧು ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ| ಕೃಷಿಕರ ಮಕ್ಕಳಿಗೆ ಹೆಣ್ಣು ಕೊಡೋರೇ ಇಲ್ಲ!! Read More »

ಶ್ರೀಮಂತ ದೇಗುಲಗಳ ಪಟ್ಟಿ ರಿಲೀಸ್ ಮಾಡಿದ ಮುಜುರಾಯಿ ಇಲಾಖೆ| ಈ ಬಾರಿಯೂ ಕುಕ್ಕೆ ಸುಬ್ರಹ್ಮಣ್ಯನೇ ಅತೀ ಶ್ರೀಮಂತ ದೇವರು

ಸಮಗ್ರ ನ್ಯೂಸ್: ರಾಜ್ಯ ಮುಜರಾಯಿ ಇಲಾಖೆ ಆದಾಯ ತರುವ ರಾಜ್ಯದ ಟಾಪ್ 10 ದೇವಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2022-23ರ ಅವಧಿಯಲ್ಲಿ ದೇವಾಲಯ ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನ ಪಡೆದಿದೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿದೆ. ಯಾವ

ಶ್ರೀಮಂತ ದೇಗುಲಗಳ ಪಟ್ಟಿ ರಿಲೀಸ್ ಮಾಡಿದ ಮುಜುರಾಯಿ ಇಲಾಖೆ| ಈ ಬಾರಿಯೂ ಕುಕ್ಕೆ ಸುಬ್ರಹ್ಮಣ್ಯನೇ ಅತೀ ಶ್ರೀಮಂತ ದೇವರು Read More »

ಯತ್ನಾಳ್, ರೇಣುಕಾಚಾರ್ಯ ಕಿವಿಹಿಂಡಿದ ಬಿಜೆಪಿ| ಪಕ್ಷದ ವಿರುದ್ದ ಬಹಿರಂಗ ಹೇಳಿಕೆ ನೀಡದಂತೆ ನೋಟೀಸ್

ಸಮಗ್ರ ನ್ಯೂಸ್: ಇತ್ತೀಚಿಗೆ ಸ್ವಪಕ್ಷೀಯ ನಾಯಕರ ವಿರುದ್ಧ, ಬಿಜೆಪಿ ವಿರುದ್ಧ ಕಿಡಿಕಾರುತ್ತಿರುವಂತ ನಾಯಕರ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಮುಂದಾಗಿರುವ ಬಿಜೆಪಿ, ಬಹಿರಂಗವಾಗಿ ಪಕ್ಷದ ವಿರುದ್ಧ, ನಾಯಕರ ವಿರುದ್ಧ ಹೇಳಿಕೆ ಕೊಡುತ್ತಿರುವವರಿಗೆ ಹೇಳಿಕೆ ನೀಡದಂತೆ ಎಚ್ಚರಿಕೆಯ ನೋಟಿಸ್ ಜಾರಿಗೊಳಿಸಿದೆ. ಬಿಜೆಪಿ ಶಿಸ್ತು ಪಾಲನಾ ಸಮಿತಿ ನೀಡಿರುವಂತ ನೋಟಿಸ್ ಬಹಿರಂಗವಾಗಿ ಬಿಜೆಪಿ ವಿರುದ್ಧ, ನಾಯಕರ ವಿರುದ್ಧ ಹೇಳಿಕೆ ನೀಡದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಈ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರಿಗೆ ಬಿಸಿ

ಯತ್ನಾಳ್, ರೇಣುಕಾಚಾರ್ಯ ಕಿವಿಹಿಂಡಿದ ಬಿಜೆಪಿ| ಪಕ್ಷದ ವಿರುದ್ದ ಬಹಿರಂಗ ಹೇಳಿಕೆ ನೀಡದಂತೆ ನೋಟೀಸ್ Read More »