ಪ್ರಪಂಚ ಪರ್ಯಟನೆ

ನೋಡಲಷ್ಟೇ ಚಂದ; ಹತ್ರ ಹೋದ್ರೆ ಸಾವು ಕಟ್ಟಿಟ್ಟದ್ದೇ…!!

ಸಮಗ್ರ ನ್ಯೂಸ್: ಕೊಳಕು ಮಂಡಲ, ಭಾರತದ ನಾಲ್ಕು ದೊಡ್ಡ ವಿಷಕಾರಿ ಹಾವುಗಳಲ್ಲಿ ಒಂದು. ಬಹಳಷ್ಟು ಜನರ ನಂಬಿಕೆಯಂತೆ ಕೇವಲ ಉಸಿರು ತಾಗಿದರೆ ಇಲ್ಲ ಅಪಾಯ. ಆದರೂ ಉಸಿರು ತಾಗದಷ್ಟು ಅಂತರ ಇಟ್ಟುಕೊಳ್ಳುವುದು ಕ್ಷೇಮ. ನಿಶಾಚರಿಯಾದ ಕೊಳಕು ಮಂಡಲಗಳು ರಾತ್ರಿ ಸಂಚಾರಿಗಳು. ಹುಲ್ಲಿನ ರಾಶಿ, ಸೆತ್ತೆ, ಸೆದೆಗಳು, ಕಲ್ಲಿನ ಸಂದಿಗಳೆ ಇವುಗಳ ಆವಾಸಸ್ಥಾನ. ಹಾಗಾಗಿ ಸಾಮಾನ್ಯವಾಗಿ ಓಡಾಡುವ ತಾಣಗಳಲ್ಲಿ ಅಂತಹ ‘ಸ್ಥಾನ‘ಗಳು ಇರದಂತೆ ಮಾಡುವುದು ಮುನ್ನೆಚ್ಚರಿಕೆ ದೃಷ್ಟಿಯಿಂದ ಉತ್ತಮ. ಜೊತೆಗೆ ಅಂತಹ ತಾಣಗಳಲ್ಲಿ ಓಡಾಡುವಾಗ ಎಚ್ಚರ ವಹಿಸುವುದು ಕ್ಷೇಮ.ಹಾಗಾಗಿ […]

ನೋಡಲಷ್ಟೇ ಚಂದ; ಹತ್ರ ಹೋದ್ರೆ ಸಾವು ಕಟ್ಟಿಟ್ಟದ್ದೇ…!! Read More »

ಗಾಯಕ್ಕೆ ಹೊಲಿಗೆ ಬದಲು ಪೆವಿಕ್ವಿಕ್ ಹಾಕಿದ ಡಾಕ್ಟರ್!!

ಸಮಗ್ರ ನ್ಯೂಸ್: ಗಾಯವಾದ ಹುಡುಗನಿಗೆ ಹೊಲಿಗೆಯ ಬದಲಾಗಿ ಫೆವಿಕ್ವಿಕ್​ ಹಾಕಿರುವ ಘಟನೆ ತೆಲಂಗಾಣದ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಅಯಿಜಾದಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಆ ಆಸ್ಪತ್ರೆ ನೀಡಿದ ಚಿಕಿತ್ಸೆ ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಗಾಯದ ಮೇಲೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿರುವುದಕ್ಕಾಗಿ ಎಲ್ಲರೂ ಕೋಪಗೊಂಡಿದ್ದಾರೆ. ಸ್ಥಳೀಯರ ಪ್ರಕಾರ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ವಂಶಿಕೃಷ್ಣ ಮತ್ತು ಸುನೀತಾ ದಂಪತಿ ಮಗನನ್ನು ಒಂದು ಮದುವೆಗೆ ಕರೆದುಕೊಂಡು ಹೋಗಿದ್ದರು. ಗದ್ವಾಲ್ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ

ಗಾಯಕ್ಕೆ ಹೊಲಿಗೆ ಬದಲು ಪೆವಿಕ್ವಿಕ್ ಹಾಕಿದ ಡಾಕ್ಟರ್!! Read More »

ಮಧ್ಯರಾತ್ರಿ ಪ್ರಿಯತಮೆಯ ಕಾಣಲು ಆಕೆಯ ಮನೆಗೆ ಹೋದ ಪ್ರೇಮಿ| ಮನೆಯವರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಒದ್ದಾಟ!!

ಸಮಗ್ರ ನ್ಯೂಸ್: ಯುವಕನೊಬ್ಬ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಮಧ್ಯರಾತ್ರಿ ಆಕೆಯ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಉಂಟಾದ ಸದ್ದಿನಿಂದಾಗಿ ಮನೆಯವರು ಎಚ್ಚೆತ್ತಾಗ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಒದ್ದಾಡಿದ್ದಾನೆ. ಇಂತಹ ವಿಚಿತ್ರ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿನ ಗ್ರಾಮವೊಂದರ ಯುವಕ ಅದೇ ಗ್ರಾಮದಲ್ಲಿ ತಾನು ಪ್ರೀತಿಸುತ್ತಿದ್ದ ಯುವತಿ ಮನೆಗೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಭೇಟಿ ನೀಡಿದ್ದಾನೆ. ಇವರಿಬ್ಬರೂ ಏಕಾಂತದಲ್ಲಿ ಮಾತನಾಡುತ್ತಿದ್ದ ವೇಳೆ ಆಕೆಯ ಕುಟುಂಬಸ್ಥರಿಗೆ ಎಚ್ಚರವಾಗಿದೆ. ಆಗ ಗಾಬರಿಗೊಂಡ ಆತ ತಪ್ಪಿಸಿಕೊಳ್ಳಲು

ಮಧ್ಯರಾತ್ರಿ ಪ್ರಿಯತಮೆಯ ಕಾಣಲು ಆಕೆಯ ಮನೆಗೆ ಹೋದ ಪ್ರೇಮಿ| ಮನೆಯವರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಒದ್ದಾಟ!! Read More »

ದೇವರೆಂದು ಪೂಜಿಸಿದ ಆ ವಿಗ್ರಹ ದೇವರಲ್ಲ! ಹಾಗಾದ್ರೆ ಮತ್ತಿನ್ನೇನು? ಶಾಕ್ ನಲ್ಲಿ ಭಕ್ತಾಧಿಗಳು..!

ಸಮಗ್ರ ನ್ಯೂಸ್: ಇಷ್ಟು ದಿನ ದೇವರು ಅಂತ ಆರಾಧಿಸಿದ್ದು ದೇವರೇ ಅಲ್ಲ ಎಂದು ತಿಳಿದರೆ ಯಾರಿಗೇ ಆಗಲಿ, ಶಾಕ್ ಆಗೋದು ಖಂಡಿತ. ಇಂತಹುದೇ ಒಂದು ಅತಿ ವಿಚಿತ್ರ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ಪೆರಿಯೇರಿ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ಆರಾಧಿಸುತ್ತಿದ್ದ ತಲೈವೆಟ್ಟಿ ಮುನಿಯಪ್ಪನ್ ದೇವರು ಇದೀಗ ಬುದ್ಧ ಎಂದು ಸಾಬೀತಾಗಿದೆ. ಈ ದೇವಾಲಯದಲ್ಲಿ ಬುದ್ಧನ ಶಿಲ್ಪವಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಖಡಕ್ ಆದೇಶ ನೀಡಿದೆ. ತಲೈವೆಟ್ಟಿ ಮುನಿಯಪ್ಪನ್ ದೇವಾಲಯದಲ್ಲಿ ಹಿಂದೂ ಧರ್ಮಕ್ಕೆ

ದೇವರೆಂದು ಪೂಜಿಸಿದ ಆ ವಿಗ್ರಹ ದೇವರಲ್ಲ! ಹಾಗಾದ್ರೆ ಮತ್ತಿನ್ನೇನು? ಶಾಕ್ ನಲ್ಲಿ ಭಕ್ತಾಧಿಗಳು..! Read More »

ಈ ಕುಟುಂಬ ಮದುವೆ ದಿಬ್ಬಣ ಹೊರಟಿದ್ದು ಯಾವುದರಲ್ಲಿ ಗೊತ್ತಾ?

ಸಮಗ್ರ ನ್ಯೂಸ್: ಬಸ್ಸು, ಕಾರು, ರೈಲಿನಲ್ಲೆಲ್ಲಾ ಸಂಬಂಧಿಕರು ಒಟ್ಟಾಗಿ ಮದುವೆ ದಿಬ್ಬಣ ಹೋಗುವುದನ್ನು ಕಂಡಿದ್ದೇವೆ. ಆದರೆ ಇದೀಗ ಇಲ್ಲೊಂದು ಕುಟುಂಬ ವಿಮಾನವೊಂದನ್ನು ಬುಕ್ ಮಾಡಿ, ಮದುವೆ ದಿಬ್ಬಣ ಹೊರಟಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆ ದಿಬ್ಬಣದಲ್ಲಿ ಸಂಭ್ರಮ, ಸಡಗರ ತುಂಬಿರುತ್ತದೆ. ಹಾಡುತ್ತಾ, ನಲಿಯುತ್ತಾ ಸಾಗುವುದೇ ಸೋಜಿಗ. ಕುಟುಂಬ ಸದಸ್ಯರೊಂದಿಗೆ ಮದುವೆ ದಿಬ್ಬಣ ಹೋಗುವುದು ಸದಾ ಕಾಲ ನೆನಪಿನಲ್ಲಿ ಉಳಿಯುವಂತಹ ಸಂಭ್ರಮ. ಶ್ರೇಯಾ ಶಾ ಎಂಬ ಇನ್ಸ್​ಟಾಗ್ರಾಂ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ವಿಮಾನದ

ಈ ಕುಟುಂಬ ಮದುವೆ ದಿಬ್ಬಣ ಹೊರಟಿದ್ದು ಯಾವುದರಲ್ಲಿ ಗೊತ್ತಾ? Read More »

ಮುಖ, ಮೈ ಮೇಲೆಲ್ಲಾ ಕೂದಲು!
ಅಪರೂಪದ ಕಾಯಿಲೆಗೆ ತುತ್ತಾದ ಮಧ್ಯಪ್ರದೇಶದ ಯುವಕ

ಮಧ್ಯಪ್ರದೇಶ:ಮಧ್ಯಪ್ರದೇಶದ ರತ್ಲಾಮ್‌ ಜಿಲ್ಲೆಯ ಚಿಕ್ಕ ಹಳ್ಳಿಯ ಲಲಿತ್ ಪಾಟಿದಾರ್ (17) ಎಂಬ ಯುವಕನೊಬ್ಬ ಅಪರೂಪದ ‘ವೆರ್‌ವುಲ್ಫ್ ಸಿಂಡ್ರೋಮ್’ ಕಾಯಿಲೆಯಿಂದ ಬಳಲುತ್ತಿದ್ದು, ಮುಖ ಸೇರಿ ದೇಹದ ತುಂಬೆಲ್ಲ ದಟ್ಟವಾದ ಕೂದಲು ಬೆಳೆಯುತ್ತಿವೆ. ಪಾಟಿದಾರ್ ಹುಟ್ಟಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದು, ಇಲ್ಲಿಯವರಗೆ ಕೇವಲ 50 ಜನರು ಮಾತ್ರ ಈ ಅಪರೂಪದ ಕಾಯಿಲೆಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬೇಸರ ವ್ಯಕ್ತಪಡಿಸಿರುವ ಲಲಿತ್, ನನ್ನ ದೇಹ ಪೂರ್ತಿಯಾಗಿ ಕೂದಲು ಆವರಿಸಿಕೊಂಡಿದ್ದು, ನನ್ನ ಸಹಪಾಠಿಗಳು ನನ್ನನ್ನು ಕೋತಿ ಹುಡುಗ ಎಂದು ಕರೆಯುತ್ತಾರೆ ಮತ್ತು ಕಚ್ಚುವ

ಮುಖ, ಮೈ ಮೇಲೆಲ್ಲಾ ಕೂದಲು!
ಅಪರೂಪದ ಕಾಯಿಲೆಗೆ ತುತ್ತಾದ ಮಧ್ಯಪ್ರದೇಶದ ಯುವಕ
Read More »

ಇಂದು(ನ.8) ರಾಹುಗ್ರಸ್ತ ರಕ್ತಚಂದ್ರಗ್ರಹಣ| ಎಲ್ಲೆಲ್ಲಿ ಕಾಣಲಿದೆ ನೆರಳು ಬೆಳಕಿನಾಟ? ಸಂಪೂರ್ಣ ವಿವರ…

ಸಮಗ್ರ ನ್ಯೂಸ್: ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿದೆ. ಕಳೆದ ವಾರವಷ್ಟೇ ಸೂರ್ಯಗ್ರಹಣದ ಜೊತೆಗೆ ಇದೀಗ ಚಂದ್ರಗ್ರಹಣದ ಆಗಮನವಾಗಿದೆ. ಕರ್ನಾಟಕ ಸೇರಿ ದೇಶದಲ್ಲೆಡೆ ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ ಎಂಬ ಮಾಹಿತಿ ‌ಇದೆ. ಸೂರ್ಯಗ್ರಹಣದ 15ನೇ ದಿನಕ್ಕೆ ಚಂದ್ರಗ್ರಹಣ ಬರ್ತಿದೆ. ಗ್ರಹಣದ ವೇಳೆ ಚಂದ್ರ ಕೆಂಪುವರ್ಣದಿಂದ ಗೋಚರಿಸಲಿದ್ದಾನೆ. ಹೀಗಾಗಿ ಇದನ್ನ ರೆಡ್‌ಮೂನ್‌ ಗ್ರಹಣ ಅಂತಾ ಕರೆಯಲಾಗುತ್ತದೆ. ಹೀಗಾಗಿಯೇ ಈ ಗ್ರಹಣವೂ ಮಹತ್ವ ಪಡೆದುಕೊಂಡಿದೆ. ಜಾಗತಿಕವಾಗಿ ಚಂದ್ರಗ್ರಹಣ ಆರಂಭದ ಕಾಲ ಮಧ್ಯಾಹ್ನ 2 ಗಂಟೆ 39 ನಿಮಿಷ

ಇಂದು(ನ.8) ರಾಹುಗ್ರಸ್ತ ರಕ್ತಚಂದ್ರಗ್ರಹಣ| ಎಲ್ಲೆಲ್ಲಿ ಕಾಣಲಿದೆ ನೆರಳು ಬೆಳಕಿನಾಟ? ಸಂಪೂರ್ಣ ವಿವರ… Read More »

ನಮೀಬಿಯಾದಿಂದ ತಂದ ಚೀತಾಗೆ ಗರ್ಭಪಾತ!!

ಸಮಗ್ರ ನ್ಯೂಸ್: ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಅಭಯಾರಣ್ಯಕ್ಕೆ ಇತ್ತೀಚೆಗೆ ತರಲಾಗಿದ್ದ ಚೀತಾಗಳ ಪೈಕಿ ಆಶಾ ಎಂಬ ಚೀತಾ ಗರ್ಭ ಧರಿಸಿತ್ತು ಎಂಬ ವರದಿಗಳ ಕುರಿತು ಇದೀಗ ಸ್ವತಃ ಸಿಸಿಎಫ್‌ (ಚೀನಾ ಕನ್ಸ್‌ರ್ವೇಷನ್‌ ಫಂಡ್‌) ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕಿ ಡಾ.ಲೌರಿ ಮಾರ್ಕರ್‌ ಸ್ಪಷ್ಟನೆ ನೀಡಿದ್ದಾರೆ.’ಗರ್ಭ ಧರಿಸಿದ್ದು ಹೌದು. ಆದರೆ ಗರ್ಭಪಾತವಾಗಿದೆ’ ಎಂದಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಡಾ. ಲೌರಿ ‘ನಮೀಬಿಯಾದ ಅರಣ್ಯದಲ್ಲಿ ಸೆರೆಹಿಡಿಯುವಾಗಲೇ ಒಂದು ಚೀತಾ ಗರ್ಭ ಧರಿಸಿತ್ತು. ಆದರೆ ನಂತರ, ಚೀತಾಗಳಲ್ಲಿ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಒತ್ತಡಕ್ಕೆ

ನಮೀಬಿಯಾದಿಂದ ತಂದ ಚೀತಾಗೆ ಗರ್ಭಪಾತ!! Read More »

ರಾಜಸ್ಥಾನದಲ್ಲಿ ವಿಶ್ವದ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆ| ಏನೀ ಪರಶಿವನ ವಿಶೇಷತೆ?

ಸಮಗ್ರ ನ್ಯೂಸ್: ಮಹಾದೇವನ ಭವ್ಯವಾದ ಪ್ರತಿಮೆ ರಾಜಸ್ಥಾನ ದಲ್ಲಿ ರೂಪುಗೊಂಡಿದೆ. 369 ಅಡಿ ಎತ್ತರದ ‘ವಿಶ್ವಸ್ ಸ್ವರೂಪ್’ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಾಥ್ ಪಟ್ಟಣದಲ್ಲಿ ಉದ್ಘಾಟನೆ ಮಾಡಲಾಗಿದೆ. ಈ ಬೃಹತ್ ಪ್ರತಿಮೆಯನ್ನು ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯ ನಾಥ್ ದ್ವಾರ ಪಟ್ಟಣದಲ್ಲಿ ಸ್ಥಾಪಿಸಲಾಗಿದೆ. ಇದು ವಿಶ್ವದ ಅತಿ ದೊಡ್ಡ ಶಿವನ ವಿಗ್ರಹ ಎಂದು ಪರಿಗಣಿಸಲಾಗಿದೆ. ಈ ಪ್ರತಿಮೆ ಉದ್ಘಾಟನೆಗೊಂಡ ನಂತರ ರಾಜ್ಯದಲ್ಲಿ ಒಂಭತ್ತು ದಿನಗಳ ಕಾಲ ಅಂದರೆ ಅಕ್ಟೋಬರ್ 29 ರಿಂದ ನವೆಂಬರ್ 6ರ ವರೆಗೆ ವಿವಿಧ ಧಾರ್ಮಿಕ, ಆಧ್ಯಾತ್ಮಿಕ

ರಾಜಸ್ಥಾನದಲ್ಲಿ ವಿಶ್ವದ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆ| ಏನೀ ಪರಶಿವನ ವಿಶೇಷತೆ? Read More »

ಮೊಬೈಲ್, ಟಿವಿ ಹುಚ್ಚು ಬಿಡಿಸಲು ನಡೆಯುತ್ತೆ ಡಿಜಿಟಲ್ ಲಾಕ್ ಡೌನ್| ಆ ಸೈರನ್ ಮೊಳಗಿದ ಕೂಡಲೇ ಎಲ್ಲವೂ ಬಂದ್| ಈ ಗ್ರಾಮದಲ್ಲೊಂದು ವಿಶಿಷ್ಟ ನಿಯಮ

ಸಮಗ್ರ ನ್ಯೂಸ್: ಮಕ್ಕಳನ್ನು ಮೊಬೈಲ್‌ ಗೀಳಿನಿಂದ ಹೊರತಂದು, ಕಲಿಕೆ ಯತ್ತ ಆಕರ್ಷಿಸಲು ಇಲ್ಲೊಂದು ಗ್ರಾಮದಲ್ಲಿ ‘ಡಿಜಿಟಲ್‌ ಲಾಕ್‌ಡೌನ್‌’ ಘೋಷಿಸಲಾಗಿದೆ. ನಿತ್ಯ ಸಂಜೆ 7ರಿಂದ 8.30ರವರೆಗೆ ಮೊಬೈಲ್‌, ಟಿ.ವಿ ಬಳಕೆ ನಿಷೇಧಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್‌ ತಾಲ್ಲೂಕಿನ ಮೋಹಿತೆ ವಡಗಾಂವ ಗ್ರಾಮಸ್ಥರು ಇಂತಹ ನಿರ್ಣಯ ಕೈಗೊಂಡಿದ್ದಾರೆ. ಆ.14ರಿಂದ ಹೊಸ ಪದ್ಧತಿ ಜಾರಿಯಾಗಿದ್ದು, ಸಂಜೆ ಹೊತ್ತಿನಲ್ಲಿ ಮಕ್ಕಳು ಮೊಬೈಲ್‌ ಬದಿಗಿರಿಸಿ ಅಭ್ಯಸಿಸುತ್ತಿದ್ದಾರೆ. ಗ್ರಾಮದ ಜನಸಂಖ್ಯೆ ಸುಮಾರು 3 ಸಾವಿರ. 450 ಮಕ್ಕಳು ತಮ್ಮೂರಿನಲ್ಲೇ 1ರಿಂದ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಮೊಬೈಲ್, ಟಿವಿ ಹುಚ್ಚು ಬಿಡಿಸಲು ನಡೆಯುತ್ತೆ ಡಿಜಿಟಲ್ ಲಾಕ್ ಡೌನ್| ಆ ಸೈರನ್ ಮೊಳಗಿದ ಕೂಡಲೇ ಎಲ್ಲವೂ ಬಂದ್| ಈ ಗ್ರಾಮದಲ್ಲೊಂದು ವಿಶಿಷ್ಟ ನಿಯಮ Read More »