August 2022

ಮಂಗಳೂರು: ಕ್ಲಾಕ್ ಟವರ್ ಗೆ ಮರುಜೀವ ನೀಡಿದ ಕೆಪಿಟಿ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಹಲವು ದಿನಗಳಿಂದ ಕೆಟ್ಟು ಹೋಗಿದ್ದ ಮಂಗಳೂರಿನ ಪ್ರತಿಷ್ಠಿತ ಕ್ಲಾಕ್ ಟವರ್ ಗೆ ಕೆಪಿಟಿ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಮರುಜೀವ ನೀಡಿದ್ದಾರೆ. ಮಂಗಳೂರು ನಗರಕ್ಕೆ ಭೇಟಿ ನೀಡುವವರಿಗೆ ಅನುಕೂಲವಾಗಲು ನಿರ್ಮಿಸಲಾಗಿದ್ದ ಕ್ಲಾಕ್ ಟವರ್ ನ ಗಂಟೆ ಕೆಟ್ಟು ಹೋಗಿತ್ತು. ಕಾಲೇಜು ಆವರಣದಲ್ಲಿದ್ದ ಈ ಟವರ್ ದುರಸ್ತಿಗೆ ಕಾಲೇಜು ಆಡಳಿತ ಸೇರಿದಂತೆ ಯಾರೊಬ್ಬರೂ ಈ ಟವರ್ ಸರಿಪಡಿಸಲು ಮುಂದೆ ಬಂದಿರಲಿಲ್ಲ. ಈ ಸಮಸ್ಯೆಯನ್ನು ಅರಿತ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಮೆಕಾನಿಕಲ್ ವಿದ್ಯಾರ್ಥಿಗಳು ದುರಸ್ತಿಗೊಳಿಸಿದ್ದು, ಮತ್ತೆ ಸರಿಯಾದ […]

ಮಂಗಳೂರು: ಕ್ಲಾಕ್ ಟವರ್ ಗೆ ಮರುಜೀವ ನೀಡಿದ ಕೆಪಿಟಿ ವಿದ್ಯಾರ್ಥಿಗಳು Read More »

ಸುಳ್ಯ: ಕಾಲೇಜು ವಿದ್ಯಾರ್ಥಿಗೆ ಥಳಿಸಿದ ಪ್ರಕರಣ| 9 ಮಂದಿ ಅರೆಸ್ಟ್

ಸಮಗ್ರ ನ್ಯೂಸ್: ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಪ್ರೀತಿಸುತ್ತಿದ್ದು, ಅನ್ಯಕೋಮಿನ ಜೋಡಿಯ ಮೇಲೆ ಎರಗಿದ ವಿದ್ಯಾರ್ಥಿಗಳ ಗುಂಪೊಂದು ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ಯುವಕ ಸನೀಫ್ ಮತ್ತು ಅದೇ ಕಾಲೇಜಿನ ಯುವತಿ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿತ್ತು. ಇದರಿಂದ ಕೆರಳಿದ ವಿದ್ಯಾರ್ಥಿಗಳ ಗುಂಪೊಂದು ಮಂಗಳವಾರ ಕಾಲೇಜು ಮೈದಾನಕ್ಕೆ ಯುವಕನನ್ನು ಕರೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಸನೀಫ್​ನ ಕಾಲರ್

ಸುಳ್ಯ: ಕಾಲೇಜು ವಿದ್ಯಾರ್ಥಿಗೆ ಥಳಿಸಿದ ಪ್ರಕರಣ| 9 ಮಂದಿ ಅರೆಸ್ಟ್ Read More »

ಸುಳ್ಯ: ರಂಜಿತ್ ಬೇಕರಿ ಸ್ಥಳಾಂತರಗೊಂಡು ಶುಭಾರಂಭ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಕಳೆದ 38 ವರ್ಷಗಳಿಂದ ಗ್ರಾಹಕರಿಗೆ ರುಚಿಕರವಾದ ಬೇಕರಿ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದ ರವೀಂದ್ರ ಪೂಜಾರಿ ಪರಿವಾರಕಾನ ರವರ ಮಾಲಕತ್ವದ ರಂಜಿತ್ ಬೇಕರಿಯು ಗ್ರಾಹಕರ ಹೆಚ್ಚಿನ ಅನೂಕೂಲತೆಗೋಸ್ಕರ ಸುಳ್ಯದ ಗಾಂಧಿನಗರದ ಆಲೆಟ್ಟಿ ಕ್ರಾಸ್ ಬಳಿಯಿರುವ ಸುಸಜ್ಜಿತ ಕಟ್ಟಡಕ್ಕೆ ಆ.31 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಪ್ರಿಯ ಗ್ರಾಹಕರು ಎಂದಿನಂತೆ ಸಹಕರಿಸಬೇಕೆಂದು ಮ್ಹಾಲಕರಾದ ರಂಜಿತ್ ಪೂಜಾರಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಳ್ಯ: ರಂಜಿತ್ ಬೇಕರಿ ಸ್ಥಳಾಂತರಗೊಂಡು ಶುಭಾರಂಭ Read More »

ವಿಘ್ನ ನಿವಾರಕ ಹೇ ಗಣಪ

ಎಲ್ಲಾ ಕಾರ್ಯಗಳಿಗೂ ಮೊದಲು ಪೂಜೆ ಗಣಪತಿಗೆ ಸಲ್ಲುತ್ತದೆ. ಗಣೇಶನ ಪೂಜೆ ಪುರಾತನವಾದದ್ದು. ಗಣಪತಿ ಗುಡಿಯಿಲ್ಲದ ಊರಿಲ್ಲ ಎಂಬ ಕಲ್ಪನೆಗಳಿಗೂ ಸಾಧ್ಯವಿಲ್ಲ‌. ಕಾವ್ಯಗಳಲ್ಲಿ  ಸಾಹಿತ್ಯ, ಜಾನಪದ ಚಿತ್ರಕಲೆಗಳಲ್ಲಿ ಮೂಡಿದೆ. ವಿವಿಧ ದೇಶ ವಿದೇಶಗಳಲ್ಲಿ ಹಲವು ವಿನ್ಯಾಸದ ಮೂರ್ತಿಗಳನ್ನು ಕಾಣಬಹುದು.  ಗಣೇಶ ಹಬ್ಬವೆಂದರೆ ಎಲ್ಲರಿಗೂ ಎಲ್ಲಿಲ್ಲದ ಸಂತಸ. ಮನೆಗಳಲ್ಲಿ, ರಸ್ತೆಗಳಲ್ಲಿ ಗಣೇಶನ ವಿಗ್ರಹ  ಕುಳ್ಳಿರಿಸಿ ಸಂಭ್ರಮಿಸುತ್ತಾರೆ. ವಿವಿಧ ಕಾರ್ಯ ಕ್ರಮಗಳನ್ನು ಕೈಗೊಂಡು ಆನಂದಿಸುತ್ತಾರೆ. ವಿದ್ಯಾ ಗಣಪತಿ ಪೂಜೆ ಮಾಡಿದರೆ, ಓದಿನಲ್ಲಿ ಹೆಚ್ಚಿನ ಲಾಭವಾಗಲಿದೆ ಎನ್ನುವ ಮಾತಿದೆ.  ಗಣಪತಿ ಪೂಜೆ ಗೆ ಪ್ರಿಯವಾದ ಗರಿಕೆ ಹುಲ್ಲು,

ವಿಘ್ನ ನಿವಾರಕ ಹೇ ಗಣಪ Read More »

ಮೈಸೂರು ವಿಶ್ವವಿದ್ಯಾನಿಲಯದಿಂದ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸಂಶೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಶೋಧನಾ ಸಹಾಯಕ, ಕ್ಷೇತ್ರ ತನಿಖಾಧಿಕಾರಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​​ 2 ಆಗಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ

ಮೈಸೂರು ವಿಶ್ವವಿದ್ಯಾನಿಲಯದಿಂದ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ Read More »

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಮೋಹಕತಾರೆ| ಮತ್ತೆ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ…

ಸಮಗ್ರ ನ್ಯೂಸ್: ಮೋಹಕತಾರೆ ರಮ್ಯಾ ಗಣೇಶ ಹಬ್ಬಕ್ಕೆ ಗುಡ್ ನ್ಯಾಸ್ ನೀಡುವುದಾಗಿ ಬಹಿರಂಗ ಪಡಿಸಿದ್ದರು. ರಮ್ಯಾ ನೀಡುವ ಸಿಹಿ ಸುದ್ದಿ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಕೊನೆಗೂ ರಮ್ಯಾ ಗುಡ್ ನ್ಯೂಸ್ ಏನು ಎನ್ನುವುದು ಬಹಿರಂಗವಾಗಿದೆ. ‘ನಾಳೆ ಬೆಳಗ್ಗೆ 11.15ಕ್ಕೆ ಸುದ್ದಿ ಬರುತ್ತೆ. ಅದು ಅಫೀಶಿಯಲ್ ವಿಚಾರ’ ಎಂದಿದ್ದರು ರಮ್ಯಾ. ಹೀಗಾಗಿ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಾಗಿತ್ತು. ಜೊತೆಗೆ ರಮ್ಯಾ ಮತ್ತೆ ಸಿನಿಮಾ ಮಾಡ್ತಾರೆ ಎನ್ನುವ ಸುಳಿವು ಅಭಿಮಾನಿಗಳಿಗೆ ಸಿಕ್ಕಿತ್ತು. ಆದರೀಗ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಹೌದು

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಮೋಹಕತಾರೆ| ಮತ್ತೆ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ… Read More »

ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ 6 ಮಂದಿ ನಕಲಿ ಪತ್ರಕರ್ತರ ಬಂಧಿಸಿದ ಪೋಲಿಸರು

ಸಮಗ್ರ ನ್ಯೂಸ್ : ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಬೆಂಗಳೂರು ಮೂಲದ 6 ಮಂದಿ ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿರುವ ಘಟನೆಯೊಂದು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್​ನಲ್ಲಿ ನಡೆದಿದೆ. ಬಂಧಿತ ನಕಲಿ ಪತ್ರಕರ್ತರು ಯೂಟ್ಯೂಬ್ ಚಾನಲ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ರಾಜು ಬಿ, ನಾಗರಾಜ ಸಿ, ಪ್ರದೀಪಗೌಡ, ಅರ್ಪಿತಾ, ಮಹಾದೇವಿ, ಮೇಘ ಬಂಧಿತ ನಕಲಿ ಪತ್ರಕರ್ತರು. ಮುದಗಲ್ ನ ಅಕ್ಕಿ ವ್ಯಾಪಾರಿ ವಿರೇಶ ಎನ್ನುವವರ ಅಂಗಡಿಗೆ ನುಗ್ಗಿ ಅವರಿಗೆ ಬ್ಲ್ಯಾಕ್​ಮೇಲ್ ಮಾಡಿದ್ದರು ಎನ್ನುವ ಆರೋಪ

ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ 6 ಮಂದಿ ನಕಲಿ ಪತ್ರಕರ್ತರ ಬಂಧಿಸಿದ ಪೋಲಿಸರು Read More »

ಮದುವೆ ಸಮಾರಂಭದಲ್ಲಿ ಹಪ್ಪಳ ವಿಚಾರವಾಗಿ ನಡೆಯಿತು ಭಾರೀ ಗಲಾಟೆ

ಸಮಗ್ರ ನ್ಯೂಸ್ : ಮದುವೆ ಸಮಾರಂಭದ ವೇಳೆ ಹೆಚ್ಚುವರಿ ಹಪ್ಪಳಕ್ಕಾಗಿ ನಡೆದ ಗಲಾಟೆಯಲ್ಲಿ ಟೇಬಲ್ಸ್​ ಮತ್ತು 25 ಕುರ್ಚಿಗಳಿಗೆ ಹಾನಿಯಾಗಿದ್ದು ಸೇರಿದಂತೆ ಕಲ್ಯಾಣ ಮಂಟಪಕ್ಕೆ ಸುಮಾರು 1.5 ಲಕ್ಷ ರೂಪಾಯಿ ನಷ್ಟವಾದ ಘಟನೆಯೊಂದು ಕೇರಳದ ಹರಿಪಾದದಲ್ಲಿ ನಡೆದಿದೆ ಈ ಘಟನೆ ಭಾನುವಾರ (ಆ.28) ಮುತ್ತೊಮ್​ನಲ್ಲಿ ನಡೆದಿದ್ದು, ಮದುವೆ ವೇಳೆ ವರನ ಕಡೆಯವರು ಎರಡನೇ ಬಾರಿಗೆ ಹಪ್ಪಳವನ್ನು ಕೇಳಿದ್ದಾರೆ. ಇದು ಎರಡು ಗುಂಪಿನ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ವಾಗ್ವಾದ ಹೊಡೆದಾಟಕ್ಕೂ ತಿರುಗಿ, ಕಲ್ಯಾಣ ಮಂಟಪದಲ್ಲೇ ಎರಡು ಗುಂಪಿನವರು ಗಲಾಟೆ ಮಾಡಿಕೊಂಡಿದ್ದಾರೆ.

ಮದುವೆ ಸಮಾರಂಭದಲ್ಲಿ ಹಪ್ಪಳ ವಿಚಾರವಾಗಿ ನಡೆಯಿತು ಭಾರೀ ಗಲಾಟೆ Read More »

ಕೊಕ್ಕಡ: ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು| ಪತಿಯೇ ಕೊಲೆಗಾರನಾದನೇ?

ಸಮಗ್ರ ನ್ಯೂಸ್: ವಿವಾಹಿತ ಮಹಿಳೆಯೊಬ್ಬರು ಅನುಮಾ ನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ‌ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ನಡೆದಿದ್ದು ಪತಿಯೇ ಹೊಡೆದು ಕೊಲೆಗೈದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ್‌ ಗೌಡ ಅವರ ಪತ್ನಿ ಮೋಹಿನಿ(36) ಮೃತ ಮಹಿಳೆ. ಪತಿ ಗಣೇಶನಿಗೆ ಕುಡಿತದ ಚಟವಿದ್ದು ಕುಡಿದ ಮತ್ತಿನಲ್ಲಿ ಪತ್ನಿ ಜತೆ ಜಗಳ ಉಂಟಾಗಿ ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆಗೈದ ಪರಿಣಾಮ ಪತ್ನಿ ಮೋಹಿನಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಹಿಳೆಯ ಅನುಮಾನಾಸ್ಪದ ಸಾವಿನ ಬಗ್ಗೆ

ಕೊಕ್ಕಡ: ವಿವಾಹಿತ ಮಹಿಳೆಯ ಅನುಮಾನಾಸ್ಪದ ಸಾವು| ಪತಿಯೇ ಕೊಲೆಗಾರನಾದನೇ? Read More »

ಸುಳ್ಯ: ಕಾಲೇಜು ವಿದ್ಯಾರ್ಥಿಗಳಿಗೆ ಥಳಿಸಿದ ಪ್ರಕರಣ| 7 ಮಂದಿ ವಿರುದ್ದ ಪ್ರಕರಣ ದಾಖಲು

ಸುಳ್ಯ: ಕಾಲೇಜಿನಲ್ಲಿ ಜೊತೆಯಾಗಿದ್ದ ಅನ್ಯಕೋಮಿನ ಯುವಕ- ಯುವತಿಯನ್ನು ಪತ್ತೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಅದೇ ಕಾಲೇಜಿನ ಏಳು ಜನರ ವಿರುದ್ಧ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ದೀಕ್ಷಿತ್, ಧನುಷ್, ಪ್ರಜ್ವಲ್, ತನುಜ್, ಅಕ್ಷಯ್, ಮೋಕ್ಷಿತ್, ಗೌತಮ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಸನೀಫ್ ಸುಳ್ಯ ತಾಲೂಕು ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಪದವಿಯನ್ನು ಓದುತ್ತಿದ್ದು, ಅದೇ ಕಾಲೇಜಿನ ಯುವತಿಯೋರ್ವಳು ಆತನ ಸ್ನೇಹಿತೆಯಾಗಿದ್ದು,

ಸುಳ್ಯ: ಕಾಲೇಜು ವಿದ್ಯಾರ್ಥಿಗಳಿಗೆ ಥಳಿಸಿದ ಪ್ರಕರಣ| 7 ಮಂದಿ ವಿರುದ್ದ ಪ್ರಕರಣ ದಾಖಲು Read More »