March 2021

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಮುತ್ತು ಬೆಳೆಯುವ ಕೆರೆ ಎಂದು ಐತಿಹ್ಯ ಹೊಂದಿರುವ ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ! ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಅಂದ ಹಾಗೆ ಇಲ್ಲಿ ನೆಲೆಸಿರುವ ಮಹಾಲಿಂಗೇಶ್ವರನಿಗೂ ಗಜರಾಜನಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಇದಕ್ಕೆ ಕಾರಣವೂ […]

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ Read More »

ವಿಶ್ವ ಜಲ ದಿನ: ಹನಿ ನೀರೂ ಅಮೂಲ್ಯ

ನೀರು ಮಾನವ ಕುಲದ ಅಸ್ತಿತ್ವ ಹಾಗೂ ಪುನಶ್ಚೇತನಕ್ಕೆ ಜೀವನಾಧಾರ ದ್ರವವಾಗಿದ್ದು, ಜೀವಜಲ ಎಂದೇ ಭಾವಿಸಲಾಗಿದೆ. ಮನುಷ್ಯನಿಗೆ ಗಾಳಿಯಂತೆಯೇ ನೀರು ಅತಿ ಅಮೂಲ್ಯ. ಹಾಗಾಗಿ ನೀರಿನ ಬಳಕೆ ,ಉಳಿಕೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್‌ 22ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಾರಂಭವಾದದ್ದು 1993ರಿಂದ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಸುಧೀರ್ಘ ಚರ್ಚೆಯ ನಂತರ ತೀರ್ಮಾನ ಕೈಕೊಂಡು ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ

ವಿಶ್ವ ಜಲ ದಿನ: ಹನಿ ನೀರೂ ಅಮೂಲ್ಯ Read More »

ಬೆಳ್ಳಿಮೀಸೆಯ‌ ಹರಕೆಗೆ ಒಲಿಯುವ ಬಚ್ಚನಾಯಕ ದೈವ ಬಲ್ಲಾಳ ಸ್ಥಾಪಿತ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಚಯ

ಪರಶುರಾಮ ಸೃಷ್ಟಿಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ‌ ನಾಗಾರಾಧನೆ, ಭೂತಾರಾಧನೆಗಳು ಅನಾದಿಕಾಲದಿಂದ ನಡೆದು ಬಂದಿದೆ. ಜಾತಿ ಬೇಧವಿಲ್ಲದೇ ಎಲ್ಲರ ಆರಾಧನೆ, ಆಚರಣೆಗಳು ದೈವಶಕ್ತಿಗೆ ಅರ್ಪಿತವಾಗುತ್ತವೆ. ಇಂತಹ ಹಲವು ಸುಪ್ರಸಿದ್ದ ಕ್ಷೇತ್ರಗಳ ಪೈಕಿ ಮಂಗಳೂರಿನಿಂದ 100 ಕಿ.ಮೀ ಹಾಗೂ ತಾಲೂಕು ಕೇಂದ್ರವಾದ ಕಡಬದಿಂದ 20ಕಿ.ಮೀ ದೂರದಲ್ಲಿದೆ ಏನೆಕಲ್ಲು ಬಚ್ಚನಾಯಕ, ಉಳ್ಳಾಲ್ತಿ, ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರ. ನಾಗರಾಧನೆ ಜೊತೆಗೆ ದೈವಾರಾಧನೆ ಈ ಕ್ಷೇತ್ರದ ವಿಶೇಷತೆ. ಅದರಲ್ಲೂ ಇಲ್ಲಿ ನೆಲೆಸಿರುವ ಬಚ್ಚನಾಯಕ ದೈವಕ್ಕೆ ಬೆಳ್ಳಿ ಮೀಸೆಯೇ ಪ್ರದಾನ ಹರಿಕೆ. ಗುಡಿ, ಅತಿಶಯ ಕ್ಷೇತ್ರ ಇಲ್ಲಿನ

ಬೆಳ್ಳಿಮೀಸೆಯ‌ ಹರಕೆಗೆ ಒಲಿಯುವ ಬಚ್ಚನಾಯಕ ದೈವ ಬಲ್ಲಾಳ ಸ್ಥಾಪಿತ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಚಯ Read More »

ಎತ್ತಿನ ಭುಜ ಹತ್ತೋದೇ ಮಜಾ

ಚಿಕ್ಕಮಗಳೂರು….ಬೆಟ್ಟಗುಡ್ಡ ಪರ್ವತಗಳ ತವರೂರು. ಕಾಫಿನಾಡಿನಲ್ಲಿ ಕಾಫೀಯ ಘಮದ ಜೊತೆಗೆ ಪ್ರಕೃತಿಯ ಸೌಂದರ್ಯ ಸವಿಯೋದೇ ಅದ್ಬುತ ಅನುಭವ. ಜಿಲ್ಲೆಯ ಪ್ರತೀ ಭಾಗದಲ್ಲೂ ಒಂದಲ್ಲೊಂದು ಅನುಭವ ನೀಡುವ ರಮಣೀಯ ತಾಣಗಳಿವೆ. ಅವುಗಳಲ್ಲಿ ಒಂದು ಎತ್ತಿನ ಭುಜ.ದೂರದಿಂದ ನೋಡಿದಾಗ ಕೊಬ್ಬಿದ ಎತ್ತು ಮಲಗಿದಂತಿದ್ದು, ಅದರ ಭುಜ ಮಾತ್ರ ಕಾಣುವಂತಿರುವ ಈ ಬೆಟ್ಟ ಇದನ್ನು ಚಾರಣಿಗರ ಬೆಟ್ಟ ಅಂತಾನೆ ಫೇಮಸ್ಸ್ . ಮೂಡಿಗೆರೆಯಿಂದ 28 ಕೀ.ಮಿ. ದೂರದಲ್ಲಿರುವ ಶಿಶಿಲ ಬೆಟ್ಟ ಚಾರಣಿಗರ ಹಾಟ್ ಸ್ಪಾಟ್. ಕಾಫಿನಾಡಲ್ಲಿ ಚಾರಣ ಮಾಡೋವಂತ ಪ್ರವಾಸಿಗರಿಗೆ ಇಲ್ಲೊಂದು ಅವರ

ಎತ್ತಿನ ಭುಜ ಹತ್ತೋದೇ ಮಜಾ Read More »