August 2023

ಹಾಸನ:ಗಾಯಗೊಂಡ ಕಾಡಾನೆಯನ್ನು ಸೆರೆ ಹಿಡಿಯುವ ವೇಳೆ ದಾಳಿ| ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ಸಾವು

ಸಮಗ್ರ ನ್ಯೂಸ್: ಗಾಯಗೊಂಡಿದ್ದ ಕಾಡಾನೆ ಸೆರೆ ಹಿಡಿದು ಅರವಳಿಕೆ ಮದ್ದು ನೀಡಲು ಹೋಗಿದ್ದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿಗೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಗಾಯಗೊಂಡ ಕಾಡಾನೆ ಚಿಕಿತ್ಸೆ ನೀಡಲು ಅರವಳಿಕೆ ಮದ್ದು ನೀಡಲು ಹೋಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಆನೆ ದಾಳಿ ಮಾಡಿದೆ. ವನ್ಯ ಜೀವಿ ವೈದ್ಯ ವಸೀಂ ಜೊತೆ ಅರಣ್ಯಕ್ಕೆ ತೆರಳಿದ್ದ ವೇಳೆ ಭೀಮ ನೇರವಾಗಿ ಮಾಡಿದ ದಾಳಿಗೆ ಅರಣ್ಯ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. […]

ಹಾಸನ:ಗಾಯಗೊಂಡ ಕಾಡಾನೆಯನ್ನು ಸೆರೆ ಹಿಡಿಯುವ ವೇಳೆ ದಾಳಿ| ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ಸಾವು Read More »

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಯಾನಂದ ಕಲ್ನಾರ್ ಆಯ್ಕೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಯಿತು. ಅಧ್ಯಕ್ಷರಾಗಿ ದಯಾನಂದ ಕಲ್ನಾರ್, ಉಪಾಧ್ಯಕ್ಷರಾಗಿ ಪದ್ಮನಾಭ ಅರಂಬೂರು, ಪ್ರಧಾನ ಕಾರ್ಯದರ್ಶಿಯಾಗಿ ತೇಜೇಶ್ವರ್ ಕುಂದಲ್ಪಾಡಿ, ಮತ್ತು ಜತೆ ಕಾರ್ಯದರ್ಶಿಯಾಗಿ ಜಯದೀಪ್ ಕುದ್ಕುಳಿ, ಕೋಶಾಧಿಕಾರಿಯಾಗಿ ಪ್ರಜ್ಞಾ ಎಸ್. ನಾರಾಯಣ್ ಆಯ್ಕೆಯಾದರು. ನಿರ್ದೇಶಕರಾಗಿ ಜೆ.ಕೆ. ರೈ, ಕೃಷ್ಣ ಬೆಟ್ಟ, ಹಸೈನಾರ್ ಜಯನಗರ, ವಿಶ್ವನಾಥ ಮೊಟುಕಾನ, ಪದ್ಮನಾಭ ಮುಂಡೋಕಜೆ, ಗಣೇಶ್ ಮಾವಂಜಿ, ಸತೀಶ್

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಯಾನಂದ ಕಲ್ನಾರ್ ಆಯ್ಕೆ Read More »

ಸುಳ್ಯ: ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ “ಬೆಳ್ಳಿ ಬರಹ” ಬಿಡುಗಡೆ

ಸಮಗ್ರ ನ್ಯೂಸ್: ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಹೊರ ತಂದ “ಬೆಳ್ಳಿ ಬರಹ” ಸ್ಮರಣ ಸಂಚಿಕೆಯನ್ನು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಆ. 31ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು. ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್

ಸುಳ್ಯ: ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ “ಬೆಳ್ಳಿ ಬರಹ” ಬಿಡುಗಡೆ Read More »

ಮಲೆನಾಡಿಗೆ ಬರುವ ಪ್ರವಾಸಿಗರೇ ಎಚ್ಚರ…! | ಹೋಟೆಲ್ ಗಳಲ್ಲಿ ಕುರಿ ಮಾಂಸ ಎಂದು ಬೀಫ್ ಬಿರಿಯಾನಿ ನೀಡ್ತಾರೆ ಜೋಕೆ..!!

ಸಮಗ್ರ ನ್ಯೂಸ್: ಕಾಫಿನಾಡಿನ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಚಿಕ್ಕಮಗಳೂರು ಪೊಲೀಸರು ದಾಳಿ ಮಾಡಿದ ಸಂಧರ್ಬದಲ್ಲಿ ದನದ ಮಾಂಸ ರೆಡ್ ಹ್ಯಾಂಡ್ ಆಗಿ ಸೀಜ್ ಮಾಡಲಾಗಿದೆ. ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ. ಐದು ಕೆ.ಜಿ. ದನದ ಮಾಂಸ, ಗೋ ಮಾಂಸದ ಬಿರಿಯಾನಿ ಮತ್ತು ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಭೂಲೋಕದ ಸ್ವರ್ಗವೆಂದೆ ಪ್ರಸಿದ್ಧವಾಗಿರುವ ಮಲೆನಾಡಿನಲ್ಲಿ ಕಣ್ಣಿನ ದೃಷ್ಠಿ ಮುಗಿದರೂ ಮುಗಿಯದ ಬೆಟ್ಟಗುಡ್ಡಗಳ ಸಾಲುಗಳಿವೆ. ಇಲ್ಲಿನ ಸೌಂದರ್ಯದ ರಾಶಿಗೆ ಪ್ರವಾಸಿಗರು ಕೂಡ

ಮಲೆನಾಡಿಗೆ ಬರುವ ಪ್ರವಾಸಿಗರೇ ಎಚ್ಚರ…! | ಹೋಟೆಲ್ ಗಳಲ್ಲಿ ಕುರಿ ಮಾಂಸ ಎಂದು ಬೀಫ್ ಬಿರಿಯಾನಿ ನೀಡ್ತಾರೆ ಜೋಕೆ..!! Read More »

ಬಂಟ್ವಾಳ: ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ 19ರ ಯುವತಿ

ಸಮಗ್ರ ನ್ಯೂಸ್: ಯುವತಿಯೋರ್ವಳು ಮಲಗಿದ್ದಲ್ಲಿಯೇ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಬಂಟ್ವಾಳದ ಕಾವಳಪಡೂರು ಗ್ರಾಮದಲ್ಲಿ ಸಂಭವಿಸಿದೆ. ಇಲ್ಲಿನ ಮಧ್ವಗುತ್ತು ರಾಜೀವ ಶೆಟ್ಟಿ-ಮೀನಾ ದಂಪತಿಯ ಪುತ್ರಿ ಮಿತ್ರಾ ಶೆಟ್ಟಿ (19) ಮೃತಪಟ್ಟ ದುರ್ದೈವಿ. ಮೂಲತ: ಕಾವಳಮೂಡೂರು ಪುಳಿಮಜಲಿನ ನಿವಾಸಿಯಾಗಿದ್ದ ಮಿತ್ರಾ ಅವರ ತಂದೆ ಹಾಗೂ ಸಹೋದರ ಬೆಂಗಳೂರಿನಲ್ಲಿದ್ದು, ಪ್ರಸ್ತುತ ಮಿತ್ರಾ ಅವರು ಬಿ.ಸಿ.ರೋಡ್ನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು, ಮಧ್ವದಲ್ಲಿ ದೊಡ್ಡಮ್ಮನ ಮನೆಯಲ್ಲಿ ತಾಯಿ ಜತೆ ವಾಸವಿದ್ದರು. ಮಂಗಳವಾರ ರಾತ್ರಿ ಊಟ ಮುಗಿಸಿ ತಾಯಿ ಜತೆ ಮಲಗಿದ್ದರು. ಬೆಳಗ್ಗೆ ಹೊತ್ತು

ಬಂಟ್ವಾಳ: ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ 19ರ ಯುವತಿ Read More »

ಸೌಜನ್ಯ ಪ್ರಕರಣ| ಧರ್ಮಸ್ಥಳದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡದಂತೆ ತಿಮರೋಡಿಗೆ ಹೈಕೋರ್ಟ್ ಎಚ್ಚರಿಕೆ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೆಗ್ಗಡೆ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋದ ಬೆನ್ನಲ್ಲೇ ಇದೀಗ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಖಡಕ್ ಎಚ್ಚರಿಕೆ ನೀಡಿದೆ. ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಹೇಳಿದೆ. ಅಲ್ಲದೇ ಇದಕ್ಕೆ ತಪ್ಪಿದಲ್ಲಿ ಡಿ.ಜಿ. ಮತ್ತು ಐ.ಜಿ., ಸರಕಾರದ ಮುಖ್ಯ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಪೋಲಿಸ್ ಉನ್ನತ ಅಧಿಕಾರಿಗಳಿಗೆ

ಸೌಜನ್ಯ ಪ್ರಕರಣ| ಧರ್ಮಸ್ಥಳದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡದಂತೆ ತಿಮರೋಡಿಗೆ ಹೈಕೋರ್ಟ್ ಎಚ್ಚರಿಕೆ Read More »

ಚಿಕ್ಕಮಗಳೂರು : ಸಾಲಬಾಧೆಗೆ ಮನನೊಂದು ರೈತ ಆತ್ಮಹತ್ಯೆ

ಸಮಗ್ರ ನ್ಯೂಸ್: ಮಳೆ ಕೊರತೆಯಿಂದ ಸಂಪೂರ್ಣ ಹಾಳಾದ ಈರುಳ್ಳಿ ಬೆಳೆ ನಾಶವಾಗಿದ್ದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ಆ.31 ರಂದು ನಡೆದಿದೆ. ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸತೀಶ್ (48), ಈರುಳ್ಳಿ ಬೆಳೆಗಾಗಿ ಕೈ ಸಾಲವನ್ನೂ ಮಾಡಿದ್ದ ಮತ್ತು ಸಹಕಾರ ಸಂಘದಲ್ಲಿ 1 ಲಕ್ಷದ 30 ಸಾವಿರ ಸಾಲ ಮಾಡಿದ್ದು, ತಾಯಿ ಹೆಸರಲ್ಲಿ 1 ಲಕ್ಷ ಸಾಲ ಪಡೆದುಕೊಂದಿದ್ದ. ಮಳೆ ಇಲ್ಲದ ಒಣಗಿ ಹೋದ ಈರುಳ್ಳಿ ಬೆಳೆಯಿಂದ, ಮ

ಚಿಕ್ಕಮಗಳೂರು : ಸಾಲಬಾಧೆಗೆ ಮನನೊಂದು ರೈತ ಆತ್ಮಹತ್ಯೆ Read More »

ಸೆ.1ರಿಂದ ಅರಮನೆ ನಗರಿಯತ್ತ ಗಜಪಡೆ |ಕೊಡಗಿನಿಂದ 3 ಸೇರಿ 9 ಗಜಗಳ ಪಯಣ

ಸಮಗ್ರ ನ್ಯೂಸ್: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಮುನ್ನುಡಿಯಾಗಿರುವ ಗಜಪಯಣಕ್ಕೆ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಸೆ.1ರ ಶುಕ್ರವಾರದಂದು ಚಾಲನೆ ದೊರೆಯಲಿದ್ದು, ಅರಣ್ಯ ಇಲಾಖೆ ಪೂರ್ವ ಸಿದ್ದತೆ ನಡೆಸಿದೆ. ನಾಗರಹೊಳೆ ಹೆಬ್ಬಾಗಿಲಲ್ಲಿ ಗಜಪಯಣಕ್ಕೆ ಸಕಲ ಸಿದ್ದತೆಗಳು ಆರಂಭವಾಗಿದೆ. ವೀರನಹೊಸಹಳ್ಳಿ ಗೇಟ್ ಬಳಿಯಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಗಜಪಯಣದ ಸಿದ್ದತೆ ಕುರಿತು ಮೈಸೂರು ವಿಭಾಗದ ಡಿಸಿಎಫ್ ಸೌರಬ್ಕುಮಾರ್ ಅವರು ಮಾಹಿತಿ ನೀಡಿದರು.ಈ ಬಾರಿ ಗಜಪಯಣ ವಿಜೃಂಭಿಸಲು ವಿಭಿನ್ನ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಂಗಲ್ ಇನ್ ರೆಸಾರ್ಟ್ ಬಳಿ

ಸೆ.1ರಿಂದ ಅರಮನೆ ನಗರಿಯತ್ತ ಗಜಪಡೆ |ಕೊಡಗಿನಿಂದ 3 ಸೇರಿ 9 ಗಜಗಳ ಪಯಣ Read More »

ಸುಳ್ಯ: ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದ ಪ್ರಕರಣ| ಗಂಭೀರ ಗಾಯಗೊಂಡ ಮೂವರೂ ಸಾವು

ಸಮಗ್ರ ನ್ಯೂಸ್: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಡ್ಕಾರು ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರೂ ಸಾವನ್ನಪ್ಪಿದ್ದಾಗಿ‌ ತಿಳಿದುಬಂದಿದೆ. ಪ್ರಕರಣದ ವಿವರ: ಅಡ್ಕಾರಿನ ಹೊಟೇಲ್ ಕರಾವಳಿ ಬಳಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರು ಕೆಲಸದ ನಿಮಿತ್ತ ನಿನ್ನೆ ಅಡ್ಕಾರಿಗೆ ಆಗಮಿಸಿ ಕರಾವಳಿ ಹೋಟೆಲ್ ಎದುರುಗಡೆ ಇರುವ ಅಂಗಡಿಯೊಂದರ ವರಾಂಡದಲ್ಲಿ ಆಶ್ರಯ ಪಡೆದಿದ್ದರು. ಇಂದು

ಸುಳ್ಯ: ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದ ಪ್ರಕರಣ| ಗಂಭೀರ ಗಾಯಗೊಂಡ ಮೂವರೂ ಸಾವು Read More »

ರಕ್ಷಾಬಂಧನ ದಿನದಂದೇ ಪ್ರೀತಿಯ ಸಹೋದರ ಹೃದಯಾಘಾತದಿಂದ ಸಾವು| ಕಣ್ಣೀರಿಡುತ್ತಲೇ ರಾಖಿ ಕಟ್ಟಿದ ತಂಗಿ

ಸಮಗ್ರ ನ್ಯೂಸ್: ರಕ್ಷಾ ಬಂಧನ ದಿನದಂದೇ ತನ್ನ ಪ್ರೀತಿಯ ಅಣ್ಣ ತೀವ್ರ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಹೋದರಿ ಕಣ್ಣೀರಿಡುತ್ತಲೇ ಕೊನೆಯ ಬಾರಿಗೆ ರಾಖಿ ಕಟ್ಟಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಬುಧವಾರ ದೇಶದಾದ್ಯಂತ ರಕ್ಷಾಬಂಧನ ದಿನವನ್ನು ಭರ್ಜರಿಯಾಗಿ ಆಚರಿಸಲಾಗಿದ್ದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಸಂಭ್ರಮಿಸಿದ್ದಾರೆ. ಇದರ ಮಧ್ಯೆ ತೆಲಂಗಾಣದಲ್ಲಿ ಇದೇ ದಿನದಂದು ಹೃದಯ ವಿದ್ರಾವಕ ಘಟನೆ ನಡೆದಿದ್ದು, ನೆಟ್ಟಿಗರ ಕಣ್ಣಂಚನ್ನು ತೇವಗೊಳಿಸಿದೆ.

ರಕ್ಷಾಬಂಧನ ದಿನದಂದೇ ಪ್ರೀತಿಯ ಸಹೋದರ ಹೃದಯಾಘಾತದಿಂದ ಸಾವು| ಕಣ್ಣೀರಿಡುತ್ತಲೇ ರಾಖಿ ಕಟ್ಟಿದ ತಂಗಿ Read More »