ಸಮಗ್ರ ನ್ಯೂಸ್: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ನ.26ರಂದು 150 ರಿಂದ 160 ಕೋಟಿ ರೂ ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಲಿದ್ದಾರೆ. ತಿರುಮಲ ದೇಗುಲದ ಇತಿಹಾಸದಲ್ಲೇ ವೈಯಕ್ತಿಕ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಲಿದೆ.
ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ನ.26ರಂದು 150 ರಿಂದ 160 ಕೋಟಿ ರು. ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಲಿದ್ದಾರೆ. ತಿರುಮಲ ದೇಗುಲದ ಇತಿಹಾಸದಲ್ಲೇ ವೈಯಕ್ತಿಕ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಲಿದೆ.
ಒಟ್ಟು 121 ಕೆಜಿ ತೂಕದ ಚಿನ್ನವನ್ನು 9 ಸೆಟ್ಗಳಲ್ಲಿ 45 ವಿವಿಧ ಆಭರಣಗಳ ರೂಪದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು ₹150 ಕೋಟಿಯಿಂದ ₹160 ಕೋಟಿ ಎಂದು ಅಂದಾಜಿಸಲಾಗಿದೆ.
ದಾನಿಯು ಈಗಾಗಲೇ ಟಿಟಿಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದು, ನ;26 ರಂದು ದೇವಸ್ಥಾನದಲ್ಲಿ ಅಧಿಕೃತವಾಗಿ ಈ ಆಭರಣಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ದೇಗುಲದ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ 2025ರ ಆಗಸ್ಟ್ನಲ್ಲಿ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಷೇರು ಮಾರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ ನೀಡುವುದಾಗಿ ಹರಕೆ ಹೊತ್ತಿದ್ದರು. ಆ ಆಭರಣಗಳ ತಯಾರಿಕೆ ಪೂರ್ಣಗೊಂಡಿದ್ದು, ಈಗ ಅಧಿಕೃತವಾಗಿ ಸಮರ್ಪಣೆಯಾಗುತ್ತಿದೆ









