Editor

ಧರ್ಮಸ್ಥಳ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿ

ಸಮಗ್ರ ನ್ಯೂಸ್‌ : ಇಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ 39 ಅಂತರ್ಜಾತಿಯ ಜೋಡಿ ಸೇರಿದಂತೆ ಒಟ್ಟು 123 ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಜೆ 6.45ರ ಗೋದೂಳಿ ಮುಹೂರ್ತದಲ್ಲಿ ವೇದಮಂತ್ರದೊಂದಿಗೆ ನಡೆದ ಮದುವೆ ಕಾರ್ಯಕ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ ಮತ್ತು ವರನಿಗೆ ಧೋತಿ, ಶಾಲು ವಿತರಿಸಿದರು. ಸಂಜೆ 6 ಗಂಟೆಗೆ ವಧು–ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಸಭಾಭವನದಲ್ಲಿ ಹಾಜರಾದರು. […]

ಧರ್ಮಸ್ಥಳ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿ Read More »

ಉಡುಪಿ‌‌: ವಿಪರೀತ ಸೆಖೆಯಿದೆ ಎಂದು ಟೆರೇಸ್ ನಲ್ಲಿ ಮಲಗಿದ್ದ ಶಿಕ್ಷಕ ಸಾವು

ಸಮಗ್ರ ನ್ಯೂಸ್‌ : ವಿಪರೀತ ಸೆಖೆಯಿದೆ ಎಂದು ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟವರನ್ನು ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್ ( 55) ಎಂದು ಗುರುತಿಸಲಾಗಿದೆ. ಸುಂದರ ನಾಯ್ಕ್ ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ.

ಉಡುಪಿ‌‌: ವಿಪರೀತ ಸೆಖೆಯಿದೆ ಎಂದು ಟೆರೇಸ್ ನಲ್ಲಿ ಮಲಗಿದ್ದ ಶಿಕ್ಷಕ ಸಾವು Read More »

ಹಾಸನ: ಸಂಸದ ಪ್ರಜ್ವಲ್‌ ಗೆ ಅಭಿಮಾನಿಯಿಂದ ಶುಭಾಶಯ ಪತ್ರ

ಸಮಗ್ರ ನ್ಯೂಸ್‌ : ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ದೇಶಾದ್ಯಂತ ಭಾರೀ ಚರ್ಚೆ ಯಾಗುತ್ತಿದ್ದು, ಈ ನಡುವೆ ಅಭಿಮಾನಿಯೊಬ್ಬ ಪ್ರಜ್ವಲ್‌ ರೇವಣ್ಣಗೆ ಶುಭಾಶಯಗಳನ್ನು ತಿಳಿಸಿದ್ದಾನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿದಿರುವ ಪ್ರಜ್ವಲ್‌ ರೇವಣ್ಣಗೆ ಅಭಿಮಾನಿ ಶುಭಾಶಯಗಳನ್ನು ತಿಳಿಸಿ ಪತ್ರ ಬರೆದಿದ್ದಾನೆ. ಈ ಪತ್ರ ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ಕಚೇರಿ ಬಾಗಿಲ ಬಳಿ ಸಿಕ್ಕಿದೆ. ನೀವು ಈಗಾಗಲೇ ಹಾಸನ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ

ಹಾಸನ: ಸಂಸದ ಪ್ರಜ್ವಲ್‌ ಗೆ ಅಭಿಮಾನಿಯಿಂದ ಶುಭಾಶಯ ಪತ್ರ Read More »

ಲೋಕಸಭಾ ಚುನಾವಣೆ/ ಇಂದು ಚಿಕ್ಕೋಡಿಯಲ್ಲಿ ಅಮಿತ್ ಷಾ ಪ್ರಚಾರ

ಸಮಗ್ರ ನ್ಯೂಸ್: ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ಬಹಿರಂಗ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಪ್ರಭಾಕರ ಕೋರೆ, ರಮೇಶ್ ಕತ್ತಿ, ನಿಖಿಲ್ ಕತ್ತಿ, ಶಶಿಕಲಾ ಜೊಲ್ಲೆ, ದುರ್ಯೋಧನ ಐಹೊಳೆ, ಮಹಾಂತೇಶ ಕವಟಗಿ ಮಠ ಭಾಗವಹಿಸಲಿದ್ದಾರೆ.

ಲೋಕಸಭಾ ಚುನಾವಣೆ/ ಇಂದು ಚಿಕ್ಕೋಡಿಯಲ್ಲಿ ಅಮಿತ್ ಷಾ ಪ್ರಚಾರ Read More »

ಬೀದರ್ : ಮಠದ ಆಸ್ತಿ ಹೊಡೆದವರು ಶಾಸಕರಾಗಲು ಯೋಗ್ಯರೇ? ಸಚಿವ ಭಗವಂತ ಖೂಬಾ

ಸಮಗ್ರ ನ್ಯೂಸ್‌ : ‘ಭಾಲ್ಕಿ ಹಿರೇಮಠದ ಪೂಜ್ಯರು, ಈ ಭಾಗದ ನಡೆದಾಡುವ ದೇವರೆಂಬ ಗೌರವಕ್ಕೆ ಪಾತ್ರರಾಗಿರುವ ಚನ್ನಬಸವ ಪಟ್ಟದ್ದೇವರು ಬೆವರು ಸುರಿಸಿ ಕಟ್ಟಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಸಿದುಕೊಂಡು, ಭಾಲ್ಕಿ ಹಿರೇಮಠದ ಆಸ್ತಿ ಹೊಡೆದವರು ಶಾಸಕರಾಗಲು ಯೋಗ್ಯರೇ? ಇಂತಹವರು ಇನ್ನೊಬ್ಬರ ಬಗ್ಗೆ ಮಾತನಾಡಬಹುದಾ?’ ಹೀಗೆಂದು ಸಚಿವ ಈಶ್ವರ ಬಿ. ಖಂಡ್ರೆಯವರನ್ನು ಕೇಂದ್ರ ಸಚಿವ ಭಗವಂತ ಖೂಬಾ ಪ್ರಶ್ನಿಸಿದ್ದಾರೆ. ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಜನರ ಮುಂದೆ ಹೇಳಿರುವ ಸತ್ಯಾಂಶಗಳು ಈಶ್ವರ ಖಂಡ್ರೆಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸತ್ಯ

ಬೀದರ್ : ಮಠದ ಆಸ್ತಿ ಹೊಡೆದವರು ಶಾಸಕರಾಗಲು ಯೋಗ್ಯರೇ? ಸಚಿವ ಭಗವಂತ ಖೂಬಾ Read More »

ಮೈಸೂರಿನಲ್ಲಿಯೂ ಪ್ರಜ್ವಲ್‌ ರೇವಣ್ಣನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ದೂರು

ಸಮಗ್ರ ನ್ಯೂಸ್‌ : ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲೂ ಒಂದು ಲೈಂಗಿಕ ಕಿರುಕುಳ ಹಾಗೂ ಅಪಹರಣ ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ದಾಖಲಾಗಿದೆ. ತಾಯಿಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಪುತ್ರ ಪೊಲೀಸರಿಗೆ ದೂರು ನೀಡಿರುವ ಘಟನೆ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ. ಪ್ರಜ್ವಲ್ ರೇವಣ್ಣ ಅವರಿಂದ ನನ್ನ ತಾಯಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದರು.‌ ಈ ಸಂಬಂಧ ಫೋಟೋಗಳು ಬಹಿರಂಗ ಆಗಿದ್ದವು. ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ.

ಮೈಸೂರಿನಲ್ಲಿಯೂ ಪ್ರಜ್ವಲ್‌ ರೇವಣ್ಣನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ದೂರು Read More »

ಕೋಲ್ಕತ್ತ : ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ: ಪರಕಾಲ ಪ್ರಭಾಕರ್‌

ಸಮಗ್ರ ನ್ಯೂಸ್‌ : ಬಿಜೆಪಿ ಅಧಿಕಾರದಲ್ಲಿರುವ ನವಭಾರತದಲ್ಲಿ ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ ಮಾಡಲಾಗುತ್ತಿದೆ ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್‌ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಾಂವಿಧಾನಿಕ ನಡೆಯ ಮೂಲಕ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದರು. ಧರ್ಮ ಯಾವತ್ತಿಗೂ ಇರುತ್ತದೆ. ಬಿಜೆಪಿ ಆಡಳಿತದ ನವಭಾರತದಲ್ಲಿ ರಾಜಕೀಯ ಸ್ವಹಿತಾಸಕ್ತಿಗಾಗಿ ಅದನ್ನು ಬಳಸಲಾಗುತ್ತಿದೆ ಎನ್ನುವುದು ಹೊಸ ವಿಚಾರ ಎಂದು ಹೇಳಿದರು. ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯು ಅಪಾಯದಲ್ಲಿದೆ. ಕೇಂದ್ರ ಸರ್ಕಾರವು

ಕೋಲ್ಕತ್ತ : ರಾಜಕೀಯ ಲಾಭಕ್ಕೆ ಧರ್ಮವನ್ನು ಆಯುಧವಾಗಿ ಬಳಕೆ: ಪರಕಾಲ ಪ್ರಭಾಕರ್‌ Read More »

ಲಕ್ನೋ: ರಾಯ್‌ ಬರೇಲಿಯಲ್ಲಿ ರಾಹುಲ್, ಅಮೇಠಿಯಿಂದ ಕಿಶೋರಿ ಲಾಲ್‌ ಶರ್ಮಾ ಸ್ಪರ್ಧೆ

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆಯಲ್ಲಿ ರಾಯ್‌ ಬರೇಲಿ ಹಾಗೂ ಅಮೇಥಿ ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ನೇಮಕ ಮಾಡಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರು ರಾಯ್‌ ಬರೇಲಿಯಿಂದ ಸ್ಪರ್ಧೆ ಮಾಡಲಿದ್ದು, ಕಿಶೋರಿ ಲಾಲ್ ಶರ್ಮಾ ಅಮೇಥಿಯಿಂದ ಕಣಕ್ಕಿಳಿಸುವುದಾಗಿ ಘೋಷಣೆ ಮಾಡಲಾಗಿದೆ. ಐದನೇ ಹಂತದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ಇದೀಗ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋನಿಯಾ ಗಾಂಧಿ

ಲಕ್ನೋ: ರಾಯ್‌ ಬರೇಲಿಯಲ್ಲಿ ರಾಹುಲ್, ಅಮೇಠಿಯಿಂದ ಕಿಶೋರಿ ಲಾಲ್‌ ಶರ್ಮಾ ಸ್ಪರ್ಧೆ Read More »

ತಿಂಗಳಿಗೆ 1 ಲಕ್ಷ ಸಂಬಳ ಕೊಡ್ತಾರೆ ಈ ಉದ್ಯೋಗದಲ್ಲಿ, ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: Jawaharlal Nehru Centre For Advanced Scientific Research ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 HPC ಫೆಸಿಲಿಟಿ ಮ್ಯಾನೇಜರ್, ಡೇಟಾ ಸೆಂಟರ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಮೇ 23, 2024 ರೊಳಗೆ ಇ-ಮೇಲ್ ಮಾಡುವ ಮೂಲಕ ಅರ್ಜಿ

ತಿಂಗಳಿಗೆ 1 ಲಕ್ಷ ಸಂಬಳ ಕೊಡ್ತಾರೆ ಈ ಉದ್ಯೋಗದಲ್ಲಿ, ಈಗಲೇ ಅಪ್ಲೈ ಮಾಡಿ Read More »

Yes Bank ನಲ್ಲಿ ಉದ್ಯೋಗವಕಾಶ! ಹೀಗೆ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಯೆಸ್​ ಬ್ಯಾಂಕ್​ನಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ. ಅನೇಕ ಸೇಲ್ಸ್ ಆಫೀಸರ್, ಕಲೆಕ್ಷನ್​​​ ಮ್ಯಾನೇಜರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 13, 2024 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಪ್ರಮುಖ ದಿನಾಂಕಗಳು:ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/04/2024ಅರ್ಜಿ ಹಾಕಲು ಕೊನೆಯ ದಿನ: ಮೇ 3, 2024 (ನಾಳೆ)

Yes Bank ನಲ್ಲಿ ಉದ್ಯೋಗವಕಾಶ! ಹೀಗೆ ಅಪ್ಲೈ ಮಾಡಿ Read More »