ಸುಳ್ಯ: ವಿದ್ಯುತ್ ಕಂಬದ ಸಹಿತ ಕಾಂಕ್ರೀಟ್ ಕಾಮಗಾರಿ| ವಿಲಕ್ಷಣ ಘಟನೆಗೆ ಕಾರಣವಾದ ಈ ರಸ್ತೆ!!

ಸಮಗ್ರ ನ್ಯೂಸ್: ರಸ್ತೆ ಬದಿ ಹಾದು ಹೋಗುವ ‌ವಿದ್ಯುತ್ ಕಂಬಗಳ ಸಹಿತ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿದ ವಿಲಕ್ಷಣ ಘಟನೆ ಸುಳ್ಯದಲ್ಲಿ ಬೆಳಕಿಗೆ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಗುಲ್ಲೆಬ್ಬಿಸುತ್ತಿದೆ.

Ad Widget ... .. Ad Widget .

ಸುಳ್ಯದ ಪ.ಪೂ ಕಾಲೇಜು ಬಳಿಯಿಂದ ಶಾಸ್ತ್ರಿ ಸರ್ಕಲ್‌ಗೆ ಹೋಗುವ ಒಳರಸ್ತೆಯಿದು. ಇಲ್ಲಿ ಸ್ಥಳೀಯ ಆಡಳಿತ ರಸ್ತೆಯನ್ನು ಅಭಿವೃದ್ಧಿ ಮಾಡಲು ಕಾಂಕ್ರಿಟೀಕರಣ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರ ಹಾಗೂ ಇಂಜಿನಿಯರ್ ರ ಜುಗಲ್ ಬಂದಿಗೆ ರಸ್ತೆಯ ಬದಿಯ ವಿದ್ಯುತ್ ಕಂಬಗಳನ್ನು ಸೇರಿಸಿ ರಸ್ತೆ‌ ನಿರ್ಮಿಸಲಾಗಿದೆ.

Ad Widget

ರಸ್ತೆಗೆ ಡಿವೈಡರ್ ಹಾಕಿದಂತೆ ಕಂಬಗಳು ಕಾಣುತ್ತಿದ್ದು ಈ ರಸ್ತೆಯಲ್ಲಿ ಓಡಾಟ ನಡೆಸಿದರೆ ಶಿವನ ಪಾದ ಸೇರುವ ಅವಕಾಶ ತಪ್ಪದು. ಯಾರೋ ಎಸಗಿದ ಪಾಪದ ಕೆಲಸಕ್ಕೆ ಸಾರ್ವಜನಿಕರು ಬಲಿಯಾಗುವ ಮುನ್ನ ಆಡಳಿತ ವರ್ಗ ಇದಕ್ಕೊಂದು ಕ್ರಮ ಕೈಗೊಳ್ಳಬೇಕಿದೆ.

ಸಾರ್ವಜನಿಕ ತೆರಿಗೆ ಹಣ ಈ ರೀತಿಯಲ್ಲಿ ಪೋಲಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *