ರಾಜ್ಯ

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ| ರಾಜ್ಯ ಸರ್ಕಾರದಿಂದ ಆದೇಶ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಲೋಕಸಭಾ ಚುನಾವಣೆಯ ಮತದಾನದಂದು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ:26.04.2024ರ ಶುಕ್ರವಾರದಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತ ಹಾಗೂ ಶೋರಾಪುರ-36 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ದಿನಾಂಕ:07.05.2024ರ ಮಂಗಳವಾರದಂದು ನಡೆಸುತ್ತಿದೆ

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ| ರಾಜ್ಯ ಸರ್ಕಾರದಿಂದ ಆದೇಶ Read More »

ನಂಜನಗೂಡು:ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

ಸಮಗ್ರ ನ್ಯೂಸ್‌: ನಂಜನಗೂಡಿನ ನೆಲ್ಲಿತಾಳಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಕುಡಿಯುವ ನೀರು ಕೊಡಿ ಎಂದು ಖಾಲಿ ಕೊಡೆ ಹಿಡಿದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನೆಲ್ಲಿತಾಳಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಿಂದ ಸುಮಾರು 1 ಕಿಲೋ ಮಿಟರ್ ದೂರದಿಂದ ನೀರನ್ನು ತಂದು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಗೂಲಿಯಿಂದ ಜೀವನ ನಡೆಸುವ ನಾವು ನೀರಿಗಾಗಿ

ನಂಜನಗೂಡು:ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ Read More »

ವೈದ್ಯ ಲೋಕದಿಂದ ಹೊಸ ಪ್ರಯೋಗ|ಹೃದಯವು ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ

ಸಮಗ್ರ ನ್ಯೂಸ್: ವೈದ್ಯ ಲೋಕದಿಂದ ಏನಾದರು ಒಂದು ರೀತಿಯಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುತ್ತದೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ, ಬೆಂಗಳೂರು ವೈದ್ಯರ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೀವ ಕೈಚೆಲ್ಲಿದ್ದ ವ್ಯಕ್ತಿಗೆ ಕೃತಕ ಹೃದಯವನ್ನು ಅಳವಡಿಸಿ ಹೊಸ ಜೀವನವನ್ನು ವೈದ್ಯರು ಕಟ್ಟಿಕೊಟ್ಟಿದ್ದಾರೆ. ಈ ವ್ಯಕ್ತಿಗೆ ಹೃದಯವಿಲ್ಲ, ಅಂದರೆ ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ. ದುರ್ಬಲ ಹೃದಯ ತೆಗೆದು ಕೃತಕ ಹೃದಯ ಅಳವಡಿಕೆ ಮಾಡಲಾಗಿದೆ. ಈ ಹೃದಯವು ದೇಹದೊಳಗೆ ಇರವುದಿಲ್ಲ. ಬದಲಾಗಿ ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಬೇಕಿದೆ. ಬಾಗಲಕೋಟೆ ಜಿಲ್ಲೆಯ

ವೈದ್ಯ ಲೋಕದಿಂದ ಹೊಸ ಪ್ರಯೋಗ|ಹೃದಯವು ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ Read More »

ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಪುನರ್ ರಚನೆ

ಸಮಗ್ರ ನ್ಯೂಸ್‌ : ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧಿಕಾರೇತರ ಸದಸ್ಯರಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಕೆ.ಪಿ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿಗಳಾದ , ಕೆ.ಎಸ್. ಗೋಪಾಲಕೃಷ್ಣ ಇವರನ್ನು ಸರ್ಕಾರದಿಂದ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಮಿತಿಯಲ್ಲಿ ಸೋಮವಾರಪೇಟೆ ತಾಲೂಕಿನ ಉಮಾ ಪ್ರಭಾಕರ್, ಟಿ..ಕೆ ಪ್ರಭಾಕರ್, ಸುರೇಶ್ ಬಾಬು, ಕುಂಯ್ ಕೃಷ್ಣನ್, ಎ.ಪಿ ಸುಬ್ಬಯ್ಯ, ಮುಸ್ತಫ ಇವರುಗಳನ್ನು ಆಯ್ಕೆಗೊಳಿಸಿ ಸರ್ಕಾರದ ರಾಜ್ಯಪಾಲರ ಆದೇಶದ ಅನ್ವಯ, ಜಲ ಸಂಪನ್ಮೂಲ ಇಲಾಖೆಯ

ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಪುನರ್ ರಚನೆ Read More »

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ತೇಜಸ್ವಿನಿ ಗೌಡ

ಸಮಗ್ರ ನ್ಯೂಸ್: ಬಿಜೆಪಿ ಮಾಜಿ MLC ತೇಜಸ್ವಿನಿ ಗೌಡ ಮೊನ್ನೆಯಷ್ಟೆ ಬಿಜೆಪಿ MLC ಸ್ಥಾನಕ್ಕೆ ರಾಜೀನಾಮೆ ನೀಡಿ ದರು, ಇದೀಗ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಲ್ಲೆ ಬಿಜೆಪಿಗೆ‌ ಇದೊಂದು ರೀತಿಯ ಆಘಾತವುಂಟಾಗಿದೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ನಂತರ ಮಾತನಾಡಿದ ಅವರು, ಬಿಜೆಪಿಯಲ್ಲಿ ವ್ಯಭಿಚಾರಿಗಳು, ಭ್ರಷ್ಟಾಚಾರಿಗಳ ಪರವಾಗಿ ವಕ್ತಾರಿಕೆ ಮಾಡಿದ್ದೇನೆ. ದೆಹಲಿಯಲ್ಲಿ ಕಾಂಗ್ರೆಸ್ ಸೇರಬೇಕೆಂಬುದು ಹೈಕಮಾಂಡ್ ತೀರ್ಮಾನ ಅದಕ್ಕಾಗಿ ಇಲ್ಲಿ ಬಂದು ಸೇರಿದ್ದೇನೆ ಎಂದರು.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ತೇಜಸ್ವಿನಿ ಗೌಡ Read More »

10 ಕೋಟಿ ರೂ. ಬಂಪರ್‌ ಲಾಟರಿ ಗೆದ್ದ ಆಟೋ ಚಾಲಕ

ಸಮಗ್ರ ನ್ಯೂಸ್‌ : ಕೇರಳದ ಬಂಪರ್‌ ಸಮ್ಮರ್‌ ಲಾಟರಿಯಲ್ಲಿ 10 ಕೋಟಿ ರೂ. ಬಂಪರ್‌ ಲಾಟರಿ ಹೊಡೆದ ಕೇರಳದ ಕಣ್ಣೂರಿನ ಕಾರ್ತಿಕಾಪುರಂನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಜರ್‌ ಅವರು ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ. ನಜರ್‌ ಅವರು ಮಾಧ್ಯಮದ ಜೊತೆ ಮಾತನಾಡಿ, “ನನಗೆ ಲಾಟರಿ ಬಹುಮಾನ ಸಿಕ್ಕಿದೆ ಎಂಬ ಸುದ್ದಿ ತಿಳಿದು ಶಾಕ್‌ ಆಯಿತು. ಈಗಲೂ ನಾನು ಈ ಸುದ್ದಿಯ ಗುಂಗಿನಿಂದ ಹೊರಬಂದಿಲ್ಲ” ಎಂದು ತಿಳಿಸಿದರು. ಕೇರಳದಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ಹಬ್ಬಗಳು ಸೇರಿ ಹಲವು ಸಂದರ್ಭಗಳಲ್ಲಿ ಲಾಟರಿ

10 ಕೋಟಿ ರೂ. ಬಂಪರ್‌ ಲಾಟರಿ ಗೆದ್ದ ಆಟೋ ಚಾಲಕ Read More »

ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆ

ಸಮಗ್ರ ನ್ಯೂಸ್‌ : ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಗೌತಂಪುರ ಮಾರಿಕಾಂಬಾ ಜಾತ್ರೆಯಲ್ಲಿ ನಡೆದಿದೆ. ಅಂಗಡಿ ಮುಂಗಟ್ಟು ಬಳಿ ಗಲಾಟೆ ಮಾಡುತ್ತಿರುವುದನ್ನು ತಡೆಯಲು ಹೋದ ಆನಂದಪುರ ಪೊಲೀಸ್ ಠಾಣೆ ಸಿಬ್ಬಂದಿ ಕಿರಣ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿಯ ಖಾಕಿ ಹಿಡಿದು ಎಳೆದಾಡಿದ್ದಲ್ಲದೇ ಕಪಾಳಕ್ಕೆ ಹೊಡೆದಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಎಲ್ಲ ಪುಂಡರನ್ನು ಬಂಧಿಸಿ, ತನಿಖೆಯನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಗಲಾಟೆ ಬಿಡಿಸಲು ಹೋದ ಪೊಲೀಸರ ಮೇಲೆ ಹಲ್ಲೆ Read More »

ತಾಪಮಾನ ಹೆಚ್ಚಳದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರು: 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ

ಸಮಗ್ರ ನ್ಯೂಸ್‌ : ತಾಪಮಾನ ಹೆಚ್ಚಳದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರಾಗಿ ನಗರದ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಅಗ್ನಿ ಅವಘಡದಲ್ಲಿ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿದೆ. ಮೂರು ಟಿ.ಸಿಗಳು ಸುಟ್ಟಿದ್ದರಿಂದ ಇಡೀ ರಾಯಚೂರು ನಗರಕ್ಕೆ ವಿದ್ಯುತ್ ಸರಬರಾಜು ಬಂದ್ ಆಗಿತ್ತು. ವಿದ್ಯುತ್ ಕೇಂದ್ರದಲ್ಲಿನ ಕೇಬಲ್‌ಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ನಿರಂತರ ಪ್ರಯತ್ನದಿಂದ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಕೇಂದ್ರದಲ್ಲಿ ದುರಸ್ತಿ ಕಾರ್ಯ ನಡೆದಿದ್ದು ವಿದ್ಯುತ್ ಸರಬರಾಜು

ತಾಪಮಾನ ಹೆಚ್ಚಳದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರು: 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ Read More »

ತಾಪಮಾನ ಹೆಚ್ಚಳದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರು| 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ

ಸಮಗ್ರ ನ್ಯೂಸ್‌ : ತಾಪಮಾನ ಹೆಚ್ಚಳದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರಾಗಿ ನಗರದ 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಅಗ್ನಿ ಅವಘಡದಲ್ಲಿ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿದೆ. ಮೂರು ಟಿ.ಸಿಗಳು ಸುಟ್ಟಿದ್ದರಿಂದ ಇಡೀ ರಾಯಚೂರು ನಗರಕ್ಕೆ ವಿದ್ಯುತ್ ಸರಬರಾಜು ಬಂದ್ ಆಗಿತ್ತು. ವಿದ್ಯುತ್ ಕೇಂದ್ರದಲ್ಲಿನ ಕೇಬಲ್‌ಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ನಿರಂತರ ಪ್ರಯತ್ನದಿಂದ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಕೇಂದ್ರದಲ್ಲಿ ದುರಸ್ತಿ ಕಾರ್ಯ ನಡೆದಿದ್ದು ವಿದ್ಯುತ್ ಸರಬರಾಜು

ತಾಪಮಾನ ಹೆಚ್ಚಳದಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರು| 220 ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದಲ್ಲಿ ಬೆಂಕಿ Read More »

ಕೊನೆಗೂ ಕೋಲಾರ ‘ಕೈ’ ಟಿಕೆಟ್ ಘೋಷಣೆ… ಕೆ.ವಿ ಗೌತಮ್ ಅಭ್ಯರ್ಥಿಯಾಗಿ ಆಯ್ಕೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಟಿಕೆಟ್ ಫೈಟ್ ಜೋರಾಗಿ ನಡೆದಿತ್ತು. ಕರ್ನಾಟಕದ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಚಾಮರಾಜನಗರ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಕೋಲಾರ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿ ಉಳಿದುಕೊಂಡಿತ್ತು. ಚಿಕ್ಕಬಳ್ಳಾಪುರ ಟಿಕೆಟ್ ಅನ್ನು ಎಂ.ಎಸ್.ರಾಮಯ್ಯನವರ ಮೊಮ್ಮಗ ರಕ್ಷಾ ರಾಮಯ್ಯ, ಬಳ್ಳಾರಿ ಲೋಕಸಭಾ ಟಿಕೆಟ್ ಸಂಡೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ತುಕರಾಂ ಅವರಿಗೆ ನೀಡಿದ್ದು, ಚಾಮರಾಜನಗರ

ಕೊನೆಗೂ ಕೋಲಾರ ‘ಕೈ’ ಟಿಕೆಟ್ ಘೋಷಣೆ… ಕೆ.ವಿ ಗೌತಮ್ ಅಭ್ಯರ್ಥಿಯಾಗಿ ಆಯ್ಕೆ Read More »