ರಾಜ್ಯ

ಚುನಾವಣೆ ಬಂದರೆ ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ : ರಮೇಶ್‌ ಬಂಡೀಸಿದ್ದೇಗೌಡ

ಸಮಗ್ರ ನ್ಯೂಸ್‌ : ಮಾಜಿ ಸಿಎಂ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಹೆಚ್‌.ಡಿ.ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಕಾಂಗ್ರೆಸ್‌ ಶಾಸಕ ರಮೇಶ್‌ ಬಂಡೀಸಿದ್ದೇಗೌಡ ಅನುಮಾನ ವ್ಯಕ್ತಪಡಿಸಿದ್ದು, ಮಳವಳ್ಳಿಯ ಕಾಂಗ್ರೆಸ್‌ ಸಭೆಯಲ್ಲಿ ಹೆಚ್‌ಡಿಕೆ ಹೃದಯ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಅವರು, ಚುನಾವಣೆ ಬಂತು ಎಂದರೇ ಸಾಕು ಆಸ್ಪತ್ರೆ ಸೇರ್ತಾರೆ. ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ ಆಗುತ್ತೆ. ನಾಲ್ಕನೇ ದಿನಕ್ಕೆ ಇಡೀ ರಾಜ್ಯ ಸುತ್ತುತ್ತಾರೆ. ಅದು ಹೇಗೆ ಸಾಧ್ಯ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಚುನಾವಣೆ ಬಂದರೆ ಮೂರೇ ದಿನದಲ್ಲಿ ಹಾರ್ಟ್ ಆಪರೇಷನ್ : ರಮೇಶ್‌ ಬಂಡೀಸಿದ್ದೇಗೌಡ Read More »

ಇಂದು (ಮಾ.30) ಪ್ರಥಮ ಪಿಯುಸಿ ಫಲಿತಾಂಶ| ರಿಸಲ್ಟ್ ಚೆಕ್ ಮಾಡ್ಕೊಳ್ಳೋದು ಹೀಗೆ…

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ ನಡೆಸಿದ ಪ್ರಥಮ ಪಿಯುಸಿ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ನೋಡಲು www.karresults.nic.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮೇ. 20 ರಿಂದ ಮೇ.31 ರವರೆಗೆ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗಿದೆ.

ಇಂದು (ಮಾ.30) ಪ್ರಥಮ ಪಿಯುಸಿ ಫಲಿತಾಂಶ| ರಿಸಲ್ಟ್ ಚೆಕ್ ಮಾಡ್ಕೊಳ್ಳೋದು ಹೀಗೆ… Read More »

ಗಗನಕ್ಕೇರಿದ ಚಿನ್ನದ ಬೆಲೆ; ಆಭರಣ ಪ್ರಿಯರಿಗೆ ಬೇಸರ

ಸಮಗ್ರ ನ್ಯೂಸ್:ಚಿನ್ನದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಆಭರಣ ಪ್ರಿಯರಿಗೆ ನೋವುಂಟು ಮಾಡಿದೆ. ಮದುವೆ ಸೀಸನ್‌’ನಲ್ಲಿ ಚಿನ್ನಕ್ಕೆ ಹೆಚ್ಚು ಡಿಮ್ಯಾಂಡ್ ಆದರೆ ಆಭರಣದ ಬೆಲೆ ಏರಿಕೆಯಾಗುತ್ತಿರುವುದು ನುಂಗಲಾರದ ತುತ್ತಾಗಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಇಂದು (ಮಾ. 28) ಚಿನ್ನದ ದರ ದುಪ್ಪಟ್ಟು ಹೆಚ್ಚಾಗಿದೆ. ಬೆಳ್ಳಿ ದರ ತುಸು ಇಳಿಕೆಯಾಗಿದೆ. ಇಂದು 1 ಗ್ರಾಂ ಚಿನ್ನಕ್ಕೆ 6,170 ರೂ. ಆಗಿದೆ. ನಿನ್ನೆ 6,135 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 35 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ

ಗಗನಕ್ಕೇರಿದ ಚಿನ್ನದ ಬೆಲೆ; ಆಭರಣ ಪ್ರಿಯರಿಗೆ ಬೇಸರ Read More »

ವಿರಾಜಪೇಟೆ-ಸೋಮವಾರಪೇಟೆಯಲ್ಲಿ ಗಡಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ| ಎರಡು ಕಡೆ ನಡೆದ ಪ್ರತ್ಯೇಕ ಸಭೆಯಲ್ಲಿ ಕೇರಳ ರಾಜ್ಯದ ಪೊಲೀಸ ಅಧಿಕಾರಿಗಳು ಬಾಗಿ

ಸಮಗ್ರ ನ್ಯೂಸ್: ಏ. 26ರಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಹಾಸನ ಮೈಸೂರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ಗಡಿ ಭಾಗಗಳಲ್ಲಿನ ಪ್ರದೇಶದ ಕಾನೂನು ಹಾಗೂ ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳು, ನಕ್ಸಲ್ ಚಟುವಟಿಕೆಗಳು, ಸಾಮಾಜಿಕ ವಿರೋಧಿ ಅಂಶಗಳು, ಕೋಮುಗಲಭೆ, ರೌಡಿ ಆಸಾಮಿಗಳ ಮೇಲೆ ನಿಗಾ ಇಡುವುದು, ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ, ಪರಸ್ಪರ ವಿಷಯದ ಕುರಿತು ಚರ್ಚಿಸಿ ಮಾಹಿತಿಯನ್ನು ವಿನಿಮಯ ಹಾಗೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಸಲುವಾಗಿ ಹಿರಿಯ ಅಧಿಕಾರಿಗಳ

ವಿರಾಜಪೇಟೆ-ಸೋಮವಾರಪೇಟೆಯಲ್ಲಿ ಗಡಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ| ಎರಡು ಕಡೆ ನಡೆದ ಪ್ರತ್ಯೇಕ ಸಭೆಯಲ್ಲಿ ಕೇರಳ ರಾಜ್ಯದ ಪೊಲೀಸ ಅಧಿಕಾರಿಗಳು ಬಾಗಿ Read More »

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಫೋಟೋಗ್ರಾಫರ್‌ ಮೃತ್ಯು

ಸಮಗ್ರ ನ್ಯೂಸ್:ಮದುವೆ ಸಮಾರಂಭಕ್ಕೆ ಫೋಟೋಗ್ರಫಿ ಮಾಡಲು ತೆರಳಿದ್ದ ಫೋಟೋಗ್ರಾಫರ್‌ರೊಬ್ಬರು ಮರಳಿ ಬರುವಾಗ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಮ್ಮನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ನಡೆದಿದೆ. ಚಳ್ಳಕೆರೆ ನಗರದ ಚಿತ್ರಯ್ಯನಹಟ್ಟಿಯ ಫೋಟೋಗ್ರಾಫರ್ ಅಭಿಷೇಕ್ (30) ಮೃತಪಟ್ಟ ಯುವಕ. ಈತ ಮೊಳಕಾಲ್ಮೂರು ತಾಲೂಕಿನ ರಾಯದುರ್ಗದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದಕ್ಕೆ ಫೋಟೋ ತೆಗೆಯಲು ಹೋಗಿ ಮರಳಿ ನಗರಕ್ಕೆ ಕಾರಿನಲ್ಲಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ

ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಫೋಟೋಗ್ರಾಫರ್‌ ಮೃತ್ಯು Read More »

ಹೆಗ್ಗವಾಡಿ ಗ್ರಾಮಕ್ಕೆ ಶಾಸಕ ದರ್ಶನ್ ಧ್ರುವ ನಾರಾಯಣ್ ಭೇಟಿ

ಸಮಗ್ರ ನ್ಯೂಸ್‌ : ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಹೆಗ್ಗವಾಡಿ ಗ್ರಾಮಕ್ಕೆ ಭೇಟಿ ನೀಡಿ, ಅವರ ತಂದೆ ತಾಯಿ ಸ್ಮಾರಕಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಶಾಸಕ ದರ್ಶನ್ ಧ್ರುವ ನಾರಾಯಣ್ ರವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿ, ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ದಿವಂಗತ ಆರ್ ಧ್ರುವನಾರಾಯಣ್, ತಾಯಿ ವೀಣಾ ಧ್ರುವನಾರಾಯಣ್ ರವರ ಸ್ಮಾರಕದಲ್ಲಿ ಪೂಜೆ ಸಲ್ಲಿಸಿದರು. ತಂದೆ ತಾಯಿಯನ್ನು ನೆನೆದು ಹುಟ್ಟು ಹಬ್ಬದ ದಿನವೇ ಶಾಸಕರು ಭಾವುಕರಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್

ಹೆಗ್ಗವಾಡಿ ಗ್ರಾಮಕ್ಕೆ ಶಾಸಕ ದರ್ಶನ್ ಧ್ರುವ ನಾರಾಯಣ್ ಭೇಟಿ Read More »

ಮಾತನಾಡುವ ಶಕ್ತಿ ಇಲ್ಲ, ಅಡುಗೆ ಮಾಡುದಕ್ಕೆ ಸರಿ: ಶಾಮನೂರು

ಸಮಗ್ರ ನ್ಯೂಸ್ :ಮಾತನಾಡಲು ಬಾರದ ಇವರು ಅಡುಗೆ ಮಾಡುದಕ್ಕೆ ಸರಿ. ಅವರಿಗೆ ಮಾತನಾಡುವ ಶಕ್ತಿ ಇಲ್ಲ ಎಂದು ಸಂಸದ ಸಿದ್ದೇಶ್ವರ್ ಪತ್ನಿ ವಿರುದ್ಧ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ದಾವಣಗೆರೆ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪ ಮಾತನಾಡಿದರು. ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಟೀಕಿಸುವ ಭರದಲ್ಲಿ ಶಾಮನೂರು ಈ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಬಿಜೆಪಿ ಅಭ್ಯರ್ಥಿ ದಾವಣಗೆರೆಯಿಂದ ಗೆದ್ದು ಮೋದಿಗೆ ಕಮಲದ ಹೂ ಅರ್ಪಿಸುತ್ತೇನೆ ಅಂತಾರೆ.

ಮಾತನಾಡುವ ಶಕ್ತಿ ಇಲ್ಲ, ಅಡುಗೆ ಮಾಡುದಕ್ಕೆ ಸರಿ: ಶಾಮನೂರು Read More »

ನನ್ನ ಹುಟ್ಟುಹಬ್ಬಕ್ಕೆ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿ|ಶಾಸಕ ದರ್ಶನ್ ಧ್ರುವನಾರಾಯಣ ಕರೆ

ಸಮಗ್ರ ನ್ಯೂಸ್‌ : ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವ ನರೇಂದ್ರ ಅವರ ಇಂದು ಹುಟ್ಟುಹಬ್ಬ ಇರುವುದರಿಂದ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡುವಂತೆ ಶಾಸಕ ದರ್ಶನ್ ಧ್ರುವನಾರಾಯಣ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನನ್ನ ಜನ್ಮದಿನದಂದು ಯಾರು ಫ್ಲೆಕ್ಸ್ , ಬ್ಯಾನರ್ ಹಾಕಬೇಡಿ ಶಾಲು ಮಾಲೆ ಹೂವುಚ್ಚ ಕೇಕ್ ಗಳನ್ನು ತರಬಾರದು ಎಂದು ಮನವಿ ಮಾಡಿದ್ದಾರೆ. ಹಾಗೆ ಯಾವುದೇ ವೆಚ್ಚ ಮಾಡದೆ ಅದೇ ಹಣವನ್ನು ಬಡವರು ಮತ್ತು

ನನ್ನ ಹುಟ್ಟುಹಬ್ಬಕ್ಕೆ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಿ|ಶಾಸಕ ದರ್ಶನ್ ಧ್ರುವನಾರಾಯಣ ಕರೆ Read More »

ರಾಯಚೂರು : ಆರ್‌ಟಿಪಿಎಸ್‌ನ ನಾಲ್ಕು ವಿದ್ಯುತ್ ಘಟಕ ಸ್ಥಗಿತ|ರಾಜ್ಯಕ್ಕೆ ವಿದ್ಯುತ್ ಕೊರತೆಯ ಶಾಕ್

ಸಮಗ್ರ ನ್ಯೂಸ್‌ : ಇಲ್ಲಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್‌ನ ನಾಲ್ಕು ಘಟಕಗಳು ಸ್ಥಗಿತವಾಗಿದ್ದು, ರಾಜ್ಯಕ್ಕೆ ವಿದ್ಯುತ್ ಕೊರತೆಯ ಶಾಕ್ ಎದುರಾಗಿದೆ. ಬರಗಾಲ ಹಿನ್ನೆಲೆ ರಾಜ್ಯದಲ್ಲಿ ಈಗ ಎಲ್ಲಾ ಕಡೆ ನೀರಿಗಾಗಿ ಪರಿತಪಿಸುವಂತಾಗಿದ್ದು, ಈಗ ಬಿರು ಬೇಸಿಗೆಯಲ್ಲಿ ವಿದ್ಯುತ್ನ ಸಮಸ್ಯೆಯನ್ನು ಜನರು ಎದುರಿಸಬೇಕಾಗಿದೆ. ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಪೂರೈಸುವ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ತಲೆದೂರಿದ್ದು, ಆರ್‌ಟಿಪಿಎಸ್‌ನ ಎಂಟು ಘಟಕಗಳಲ್ಲಿ ನಾಲ್ಕು ಘಟಕ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸಿವೆ. ಬಾಯ್ಲರ್ ಟ್ಯೂಬ್ ಲೀಕೇಜ್ ಹಾಗೂ

ರಾಯಚೂರು : ಆರ್‌ಟಿಪಿಎಸ್‌ನ ನಾಲ್ಕು ವಿದ್ಯುತ್ ಘಟಕ ಸ್ಥಗಿತ|ರಾಜ್ಯಕ್ಕೆ ವಿದ್ಯುತ್ ಕೊರತೆಯ ಶಾಕ್ Read More »

ಗುಂಡ್ಲುಪೇಟೆ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪೊಲೀಸರ ವಶ

ಸಮಗ್ರ ನ್ಯೂಸ್: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4 ಲಕ್ಷದ ನಾಲ್ಕು ಸಾವಿರ ಹಣವನ್ನು ಗುಂಡ್ಲುಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಮದ್ದೂರು ಚೆಕ್ಪೋಸ್ಟ್ ಬಳಿ ತಪಾಸಣೆ ನಡೆಸುವ ವೇಳೆ ದಾಖಲೆ ರಹಿತ ನಗದನ್ನ ವಶಪಡಿಸಿಕೊಳ್ಳಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ಪೊಲೀಸರು ಚುರುಕಿನ ತಪಾಸಣೆ ಕೈಗೊಂಡಿರುವ ಹಿನ್ನೆಲೆ ಇಂದು ಬೆಳೆಗ್ಗೆ ಮದ್ದೂರು ಚೆಕ್ಪೋಸ್ಟ್ ನಲ್ಲಿ ದಾಖಲೆ ರಹಿತವಾಗಿ ಸಾಗಿಸಲಾಗ್ತಿದ್ದ 4 ಲಕ್ಷದ ನಾಲ್ಕು ಸಾವಿರ ಹಣವನ್ನ ಗುಂಡ್ಲುಪೇಟೆ ಪೊಲೀಸರು ಜಪ್ತಿ ಮಾಡಿದ್ದಾರೆ. ಪಿಐ

ಗುಂಡ್ಲುಪೇಟೆ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪೊಲೀಸರ ವಶ Read More »