ವೈದ್ಯ ಲೋಕದಿಂದ ಹೊಸ ಪ್ರಯೋಗ|ಹೃದಯವು ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ

ಸಮಗ್ರ ನ್ಯೂಸ್: ವೈದ್ಯ ಲೋಕದಿಂದ ಏನಾದರು ಒಂದು ರೀತಿಯಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುತ್ತದೆ. ಅದಕ್ಕೆ ಉದಾಹರಣೆ ಇಲ್ಲಿದೆ ನೋಡಿ, ಬೆಂಗಳೂರು ವೈದ್ಯರ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Ad Widget ... ..

ಜೀವ ಕೈಚೆಲ್ಲಿದ್ದ ವ್ಯಕ್ತಿಗೆ ಕೃತಕ ಹೃದಯವನ್ನು ಅಳವಡಿಸಿ ಹೊಸ ಜೀವನವನ್ನು ವೈದ್ಯರು ಕಟ್ಟಿಕೊಟ್ಟಿದ್ದಾರೆ. ಈ ವ್ಯಕ್ತಿಗೆ ಹೃದಯವಿಲ್ಲ, ಅಂದರೆ ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್‌ ಡಬ್ಬದಲ್ಲಿದೆ. ದುರ್ಬಲ ಹೃದಯ ತೆಗೆದು ಕೃತಕ ಹೃದಯ ಅಳವಡಿಕೆ ಮಾಡಲಾಗಿದೆ. ಈ ಹೃದಯವು ದೇಹದೊಳಗೆ ಇರವುದಿಲ್ಲ. ಬದಲಾಗಿ ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಬೇಕಿದೆ.

Ad Widget

ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ವ್ಯಕ್ತಿಗೆ ಹೃದಯಾಘಾತದಿಂದ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು. ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಕೃತಕ ಹೃದಯ ಅಳವಡಿಕೆ ಮಾಡಿ ವೈದ್ಯರು ಮರು ಜನ್ಮ ನೀಡಿದ್ದಾರೆ. ಈ ಕೃತಕ ಮಷಿನ್ ಬ್ಲೆಡ್ ಪಂಪ್ ಮಾಡುತ್ತದೆ. ಬ್ಯಾಗ್‍ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್‍ಗಳ ಮೂಲಕ ಗಾಳಿಯನ್ನು ಪಂಪ್ ಮಾಡುತ್ತದೆ. ಅದು ಕೃತಕ ಹೃದಯದ ಕೋಣೆಗಳಿಗೆ ಶಕ್ತಿ ನೀಡುತ್ತದೆ. ಈ ಮೂಲಕ ದೇಹದಲ್ಲೆಲ್ಲಾ ರಕ್ತ ಸಂಚಾರಗೊಳ್ಳುತ್ತದೆ. ಹೀಗಾಗಿ ಹೃದಯ ಇಲ್ಲದೆಯೂ ಕೃತಕ ಹೃದಯದ ಮೂಲಕ ಜೀವನ ಪೂರ್ತಿ ಬದುಕು ಸಾಗಿಸುವ ಶಕ್ತಿ ನೀಡಲಾಗಿದೆ

ಈ ಚಿಕಿತ್ಸೆಗೆ 1 ಕೋಟಿ 10 ಲಕ್ಷ ರೂ. ಖರ್ಚು ಆಗಿದೆ. ರಾಜ್ಯದಲ್ಲಿಯೇ ಮೊದಲ 3rd ಜನರೇಶನ್ ಕೃತಕ ಹೃದಯ ಅಳವಡಿಕೆ ಮಾಡಿರುವ ಖ್ಯಾತಿಯು ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಅಶ್ವಿನಿ ಕುಮಾರ್ ಅವರಿಗೆ ಸಲ್ಲುತ್ತದೆ.

Leave a Comment

Your email address will not be published. Required fields are marked *