ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಪುನರ್ ರಚನೆ

ಸಮಗ್ರ ನ್ಯೂಸ್‌ : ಹಾರಂಗಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧಿಕಾರೇತರ ಸದಸ್ಯರಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಕೆ.ಪಿ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿಗಳಾದ , ಕೆ.ಎಸ್. ಗೋಪಾಲಕೃಷ್ಣ ಇವರನ್ನು ಸರ್ಕಾರದಿಂದ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

. Ad Widget . Ad Widget . Ad Widget

ಸಮಿತಿಯಲ್ಲಿ ಸೋಮವಾರಪೇಟೆ ತಾಲೂಕಿನ ಉಮಾ ಪ್ರಭಾಕರ್, ಟಿ..ಕೆ ಪ್ರಭಾಕರ್, ಸುರೇಶ್ ಬಾಬು, ಕುಂಯ್ ಕೃಷ್ಣನ್, ಎ.ಪಿ ಸುಬ್ಬಯ್ಯ, ಮುಸ್ತಫ ಇವರುಗಳನ್ನು ಆಯ್ಕೆಗೊಳಿಸಿ ಸರ್ಕಾರದ ರಾಜ್ಯಪಾಲರ ಆದೇಶದ ಅನ್ವಯ, ಜಲ ಸಂಪನ್ಮೂಲ ಇಲಾಖೆಯ ವಿಶೇಷ ಕರ್ತವ್ಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ .ಈ ಸಮಿತಿಯ ಅಧ್ಯಕ್ಷರಾಗಿ ಮಡಿಕೇರಿ ಕ್ಷೇತ್ರದ ಶಾಸಕರಾದ ಮಂತರ್ ಗೌಡ, ಹಾಗೂ ಹುಣಸೂರು, ಅರಕಲಗೂಡು, ಪಿರಿಯಾಪಟ್ಟಣ, ಕೆ.ಆರ್. ನಗರ, ಶಾಸಕರಗಳನ್ನು ಒಳಗೊಂಡ ಸಮಿತಿ ಕಾರ್ಯನಿರ್ವಹಿಸಲಿದೆ.

. Ad Widget .

Leave a Comment

Your email address will not be published. Required fields are marked *