ನಂಜನಗೂಡು:ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಅಲೆದಾಟ

ಸಮಗ್ರ ನ್ಯೂಸ್‌: ನಂಜನಗೂಡಿನ ನೆಲ್ಲಿತಾಳಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Ad Widget ... ..

ನಮಗೆ ಕುಡಿಯುವ ನೀರು ಕೊಡಿ ಎಂದು ಖಾಲಿ ಕೊಡೆ ಹಿಡಿದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನೆಲ್ಲಿತಾಳಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಿಂದ ಸುಮಾರು 1 ಕಿಲೋ ಮಿಟರ್ ದೂರದಿಂದ ನೀರನ್ನು ತಂದು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Ad Widget

ದಿನಗೂಲಿಯಿಂದ ಜೀವನ ನಡೆಸುವ ನಾವು ನೀರಿಗಾಗಿ ಪರದಾಡುವಂತಾಗಿದ್ದು, ಸುತ್ತ ಮುತ್ತಲಿನ ಕೆರೆ ಕಟ್ಟೆಗಳು ಬತ್ತಿ ಹೋಗಿವೆ. ಇದರಿಂದ ಜನ- ಜಾನುವಾರುಗಳಿಗೂ ನೀರಿಲ್ಲದೆ ತುಂಬ ತೊಂದರೆಯಾಗಿದೆ . ಸುಮಾರು 20 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಗ್ರಾಮದಲ್ಲಿರುವ 2 ಕೈ ಪಂಪ್ ಗಳು ಕೂಡ ಕೆಟ್ಟು ನಿಂತಿವೆ . ಓವರ್ ಹೆಡ್ ಟ್ಯಾಂಕ್ ನ ಪೈಪ್ ಹೊಡೆದು ಗ್ರಾಮಕ್ಕೆ ನೀರು ಸರಬರಾಜಾಗುತ್ತಿಲ್ಲ. ಕೂಡಲೇ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮದ ಮುಖಂಡ ಶಿವರಾಜು ಮತ್ತು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *