ಬೆಳ್ತಂಗಡಿ: 20 ವರ್ಷಗಳ ಬಳಿಕ‌ ಶತಾಯುಷಿ ತಾಯಿಯನ್ನು ನೋಡಲು ಬಂದ 85ರ ಮಗಳು!!

ಸಮಗ್ರ ನ್ಯೂಸ್: ಅಪರೂಪದಲ್ಲೇ ಅಪರೂಪದ ಘಟನೆಯೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ. 105 ವರ್ಷದ ತಾಯಿ ನೋಡಲು ದುರ್ಗಮ ಹಾದಿಯಲ್ಲಿ ಕ್ರಮಿಸಿ 85 ವರ್ಷದ ಮಗಳು ಬಂದಿದ್ದು, 20 ವರ್ಷಗಳ ಬಳಿಕ ತಾಯಿ-ಮಗಳ ಸಮಾಗಮವಾಗಿದೆ.

. Ad Widget . Ad Widget

ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮವಾದ ಮಕ್ಕಿಯ ಸೀತಮ್ಮ ಎಂಬವರ ಮಗಳಾದ ಸುಶೀಲಾರನ್ನು ಪಕ್ಕದ ಮಲವಂತಿಕೆ ಗ್ರಾಮಕ್ಕೆ ವಿವಾಹ ಮಾಡಿಕೊಡಲಾಗಿತ್ತು. ತವರು ಮನೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಕಾರಣ, ಕಳೆದ 20 ವರ್ಷಗಳಿಂದ ಮಕ್ಕಿಗೆ ಭೇಟಿಯನ್ನು ಸುಶೀಲಾ ಅವರು ನಿಲ್ಲಿಸಿದ್ದರು. ತಮ್ಮ 65ನೇ ವರ್ಷದ ಬಳಿಕ ತವರು ಮನೆಗೆ ಭೇಟಿ ಅವರ ಕನಸಾಗಿಯೇ ಉಳಿದಿತ್ತು.

. Ad Widget . . Ad Widget . Ad Widget

ಆದರೀಗ ಮೊಮ್ಮಕ್ಕಳ ಸಹಾಯದಿಂದ ಕಾಡು-ಮೇಡಿನ ದುರ್ಗಮ ಹಾದಿಯಲ್ಲಿ ಕ್ರಮಿಸಿ ಕೊನೆಗೂ ಸುಶೀಲಾ ಅವರು ತಮ್ಮ ತಾಯಿ ಸೀತಮ್ಮರ ಭೇಟಿ ಮಾಡಿದ್ದಾರೆ. ಇದೇ ನಮ್ಮ ಕೊನೆಯ ಭೇಟಿ ಎಂದು ತಾಯಿಗೆ ಭಾವುಕರಾಗಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *