ರಾಷ್ಟ್ರೀಯ

ವಯನಾಡ್‌ ನಲ್ಲಿ ಭಾರೀ ಭೂಕುಸಿತ| ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ

ಸಮಗ್ರ ನ್ಯೂಸ್: ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪ ಕಲ್ಲಾಡಿಯಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದೆ. ಅವಶೇಷಗಳ ಅಡಿ ಕೆಲವರು ಸಿಲುಕಿರುವ ಸಾಧ್ಯತೆ ಇದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ವಯನಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಕಲ್ಲಾಡಿಯಲ್ಲಿರುವ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಉಂಟಾಗಿದೆ. ಕಲ್ಪೆಟ್ಟಾದಿಂದ ಅಗ್ನಿ ಶಾಮಕದ ದಳವು ಧಾವಿಸಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ಸುರಂಗ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಅ ಪ್ರದೇಶದಲ್ಲಿಯೇ ತಾತ್ಕಾಲಿಕ ಕ್ಯಾಂಪ್‌ಗಳಲ್ಲಿ […]

ವಯನಾಡ್‌ ನಲ್ಲಿ ಭಾರೀ ಭೂಕುಸಿತ| ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ Read More »

ಮೊಬೈಲ್ ಗ್ರಾಹಕರಿಗೆ ಮತ್ತೆ ಶಾಕ್ ನೀಡಲು‌‌ ಸಜ್ಜಾದ ಟೆಲಿಕಾಂ ಕಂಪನಿಗಳು| ರೀಚಾರ್ಜ್ ದರದಲ್ಲಿ ಶೇ12 ರಿಂದ 15ರಷ್ಟು‌ ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಭಾರತದ ಮೊಬೈಲ್ ಗ್ರಾಹಕರು ಮತ್ತೊಂದು ಹಂತದ ರೀಚಾರ್ಜ್ ದರ ಏರಿಕೆಗೆ ಸಜ್ಜಾಗಬೇಕಾಗಬಹುದು. ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳು ಮುಂದಿನ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ತಮ್ಮ ಸೇವಾ ದರಗಳನ್ನು ಶೇಕಡಾ 12 ರಿಂದ 15 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಪ್ರಮುಖ ಬ್ರೋಕರೇಜ್ ಸಂಸ್ಥೆಯಾದ ಸೆಂಟ್ರಮ್ ಇನ್‌ಸ್ಟಿಟ್ಯೂಷನಲ್ ರಿಸರ್ಚ್ ಅಂದಾಜಿಸಿದೆ. ಮಾರುಕಟ್ಟೆಯಲ್ಲಿ ಸದ್ಯ ಕೆಲವೇ ಕೆಲವು ಕಂಪನಿಗಳು ಉಳಿದುಕೊಂಡಿರುವುದರಿಂದ ಬೆಲೆ ಏರಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಸಂಸ್ಥೆಯು ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.​ಜೂನ್ ತ್ರೈಮಾಸಿಕದಲ್ಲಿ

ಮೊಬೈಲ್ ಗ್ರಾಹಕರಿಗೆ ಮತ್ತೆ ಶಾಕ್ ನೀಡಲು‌‌ ಸಜ್ಜಾದ ಟೆಲಿಕಾಂ ಕಂಪನಿಗಳು| ರೀಚಾರ್ಜ್ ದರದಲ್ಲಿ ಶೇ12 ರಿಂದ 15ರಷ್ಟು‌ ಏರಿಕೆ ಸಾಧ್ಯತೆ Read More »

ರಾಮಮಂದಿರದಲ್ಲಿ ನಿರಂತರ ಕಳ್ಳತನ| ಎಸ್ಐಟಿ ತನಿಖೆಯಿಂದ ಬಯಲಾಯ್ತು ಕೃತ್ಯ

ಸಮಗ್ರ ನ್ಯೂಸ್: : ಅಯೋಧ್ಯೆಯ (Ayodhya) ಶ್ರೀರಾಮ ಮಂದಿರಕ್ಕೆ (Ram mandir) ಭಕ್ತರು ನೀಡಿದ ದೇಣಿಗೆ ಹಣ ದುರುಪಯೋಗ ಮತ್ತು ಕಳ್ಳತನವಾಗಿರುವ ಪ್ರಕರಣದ ತನಿಖೆ ಈಗ ಮತ್ತಷ್ಟು ತೀವ್ರಗೊಂಡಿದೆ. ಈ ಕುರಿತು ವಿಶೇಷ ತನಿಖಾ ತಂಡ (SIT) ಸಲ್ಲಿಸಿರುವ ಪ್ರಾಥಮಿಕ ವರದಿಯು ಆಘಾತಕಾರಿ ಅಂಶಗಳನ್ನು ಹೊರಹಾಕಿದ್ದು, ಮಂದಿರದ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಮತ್ತು ದೀರ್ಘಕಾಲದವರೆಗೆ ಕದಿಯಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ. ಇದು ಒಂದೆರಡು ಬಾರಿ ನಡೆದ ಘಟನೆಯಲ್ಲ, ಬದಲಿಗೆ ಕೇವಲ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕನಿಷ್ಠ

ರಾಮಮಂದಿರದಲ್ಲಿ ನಿರಂತರ ಕಳ್ಳತನ| ಎಸ್ಐಟಿ ತನಿಖೆಯಿಂದ ಬಯಲಾಯ್ತು ಕೃತ್ಯ Read More »

ಪೆಟ್ರೋಲ್ ನಲ್ಲಿ ಎಥನಾಲ್ ಬಳಕೆ| ಕೇಂದ್ರದ ನಿರ್ಧಾರಕ್ಕೆ ಭಾರೀ ವಿರೋಧ

ಸಮಗ್ರ ನ್ಯೂಸ್: ಪೆಟ್ರೋಲ್‌ನಲ್ಲಿ ಕಡ್ಡಾಯವಾಗಿ ಶೇ. 20ರಷ್ಟು ಎಥನಾಲ್‌ (ಇ-20) ಮಿಶ್ರಣವನ್ನು ಬಳಸುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಈ ವಿವಾದವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂಧನ ದಕ್ಷತೆ ಕುಸಿತ, ವಾಹನಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಿರುವ ಆರೋಪಗಳ ನಡುವೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಯುತ್ತಿದೆ.ಕಳೆದ ವರ್ಷದಿಂದ ಜಾರಿಗೆ ಬಂದಿರುವ ಇ-20 ಇಂಧನ ನೀತಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ರಾಜಕೀಯವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶ್ವದ ಮೂರನೇ

ಪೆಟ್ರೋಲ್ ನಲ್ಲಿ ಎಥನಾಲ್ ಬಳಕೆ| ಕೇಂದ್ರದ ನಿರ್ಧಾರಕ್ಕೆ ಭಾರೀ ವಿರೋಧ Read More »

“ರಾಮಮಂದಿರಕ್ಕೆ ನಾನು ಕೊಟ್ಟ ದೇಣಿಗೆ ವಾಪಸ್ ನೀಡಿ, ಇಲ್ಲವಾದಲ್ಲಿ ಕೋರ್ಟ್ ಮೊರೆಹೋಗುವೆ” – ದಿಗ್ವಿಜಯ್ ಸಿಂಗ್

ಸಮಗ್ರ ನ್ಯೂಸ್: “ನಾನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ನೀಡಿದ್ದ 1.11 ಲಕ್ಷ ರೂಪಾಯಿ ದೇಣಿಗೆ ಹಣವನ್ನು ನನಗೆ ತಕ್ಷಣ ವಾಪಸ್ ನೀಡಿ. ಇಲ್ಲದಿದ್ದರೆ ನಾನು ನ್ಯಾಯಾಲಯದ ಮೆಟ್ಟಿಲೇರುತ್ತೇನೆ,” ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ. ರಾಮಮಂದಿರ ದೇಣಿಗೆ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿರುವ ಅವರು, ಈ ಕುರಿತು ಅಯೋಧ್ಯೆಯಲ್ಲೇ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ತಮ್ಮ ದೇಣಿಗೆ ಹಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್, ನಾನು ರಾಮಮಂದಿರಕ್ಕೆ

“ರಾಮಮಂದಿರಕ್ಕೆ ನಾನು ಕೊಟ್ಟ ದೇಣಿಗೆ ವಾಪಸ್ ನೀಡಿ, ಇಲ್ಲವಾದಲ್ಲಿ ಕೋರ್ಟ್ ಮೊರೆಹೋಗುವೆ” – ದಿಗ್ವಿಜಯ್ ಸಿಂಗ್ Read More »

ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಫಿಕ್ಸ್| ಅಮಿತ್ ಶಾ ಗೆ ಉಪಪ್ರಧಾನಿ‌ ಪಟ್ಟ!?

ಸಮಗ್ರ ನ್ಯೂಸ್: ದೇಶದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದಲ್ಲಿ ಭಾರಿ ರಾಜಕೀಯ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟವನ್ನು ಪುನಾರಚನೆ ಮಾಡಲು ಮತ್ತು ಪ್ರಮುಖ ಖಾತೆಗಳನ್ನು ಮರುಹಂಚಿಕೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ದೆಹಲಿಯ ರಾಜಕೀಯ ವಲಯದಲ್ಲಿ ಈಗ ತೀವ್ರ ಚರ್ಚೆಗಳು ಹಾಗೂ ಊಹಾಪೋಹಗಳು ಆರಂಭವಾಗಿವೆ. ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವುದಕ್ಕೂ ಮುನ್ನವೇ ಈ ಇಡೀ

ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಫಿಕ್ಸ್| ಅಮಿತ್ ಶಾ ಗೆ ಉಪಪ್ರಧಾನಿ‌ ಪಟ್ಟ!? Read More »

ಇಂದಿನಿಂದ ದೇಶಾದ್ಯಂತ ‘ವಿಬಿ ಜಿ ರಾಮ್ ಜಿ’ ಕಾಯ್ದೆ ಜಾರಿ| ಇತಿಹಾಸದ ಪುಟ ಸೇರಿದ ‘ನರೇಗಾ’

ಸಮಗ್ರ ನ್ಯೂಸ್: ಭಾರತದ ಗ್ರಾಮೀಣಾಭಿವೃದ್ಧಿ ಪಥದಲ್ಲಿ ಬದಲಾವಣೆಯೊಂದಕ್ಕೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಕಳೆದ ಎರಡು ದಶಕಗಳಿಂದ ದೇಶದ ಹಳ್ಳಿಗಳ ಆರ್ಥಿಕ ಶಕ್ತಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ – 2005) ಅಧಿಕೃತವಾಗಿ ರದ್ದಾಗಲಿದೆ. ಇದರ ಬದಲಿಗೆ ಕೇಂದ್ರ ಸರ್ಕಾರವು ರೂಪಿಸಿರುವ ನೂತನ ವಿಕಸಿತ ಭಾರತ್ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಅಥವಾ ವಿಬಿ-ಜಿ-ರಾಮ್ ಜಿ (VB-G-RAM ಜಿ) ಕಾಯ್ದೆ 2025 ಇಂದಿನಿಂದ (ಜುಲೈ 1) ದೇಶಾದ್ಯಂತ ಜಾರಿಗೆ

ಇಂದಿನಿಂದ ದೇಶಾದ್ಯಂತ ‘ವಿಬಿ ಜಿ ರಾಮ್ ಜಿ’ ಕಾಯ್ದೆ ಜಾರಿ| ಇತಿಹಾಸದ ಪುಟ ಸೇರಿದ ‘ನರೇಗಾ’ Read More »

ಜು.1ರಿಂದ ತೈಲ ಮಾರಾಟದ ಮೇಲಿನ ಎಲ್ಲಾ ನಿರ್ಬಂಧ ತೆರವು

ಸಮಗ್ರ ನ್ಯೂಸ್: ವಾಹನ ಸವಾರರು ಮತ್ತು ವಾಣಿಜ್ಯ ಗ್ರಾಹಕರಿಗೆ ನಿರಾಳ ಸುದ್ದಿ ಸಿಕ್ಕಿದೆ. ದೇಶದಲ್ಲಿ ಇಂಧನ ಪೂರೈಕೆ ವ್ಯವಸ್ಥೆಯು ಸಂಪೂರ್ಣವಾಗಿ ಸುಧಾರಿಸಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿದ್ದ ಎಲ್ಲ ರದ್ದತಿ ಹಾಗೂ ನಿರ್ಬಂಧಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹೊಸ ಆದೇಶವು ಜುಲೈ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ನಡೆದ ಸಂಘರ್ಷಗಳಿಂದಾಗಿ ಜಾಗತಿಕ ಸರಬರಾಜು ವ್ಯವಸ್ಥೆಯಲ್ಲಿ ಏರುಪೇರಾಗಿತ್ತು. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಕೊರತೆ ಉಂಟಾಗದಂತೆ

ಜು.1ರಿಂದ ತೈಲ ಮಾರಾಟದ ಮೇಲಿನ ಎಲ್ಲಾ ನಿರ್ಬಂಧ ತೆರವು Read More »

ಅಯೋಧ್ಯೆ: ರಾಮಮಂದಿರದಲ್ಲಿ ಬರೋಬ್ಬರಿ 70 ಬಾರಿ‌ ಹುಂಡಿ ಕಳ್ಳತನ| 7.5 ಕೋಟಿ ಎಗರಿಸಿದ ಕಳ್ಳರ ಗ್ಯಾಂಗ್

ಸಮಗ್ರ ನ್ಯೂಸ್: ದೇಶದ ಕೋಟ್ಯಂತರ ಹಿಂದೂಗಳ ಭಕ್ತಿಯ ಕೇಂದ್ರವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬೆಚ್ಚಿಬೀಳಿಸುವ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಹಲವು ತಿಂಗಳುಗಳಿಂದ ಸಂಘಟಿತ ತಂಡವೊಂದು ( ಹಣ ಎಣಿಸುವ ಗ್ಯಾಂಗ್)‌ ರಾಮಮಂದಿರದ ಹುಂಡಿಯಿಂದ ಹಣ ಕಳವು ಮಾಡುತ್ತಿದ್ದು, ಸುಮಾರು ₹7.5 ಕೋಟಿ ಎಗರಿಸಿರುವ ಆರೋಪ ಎದುರಾಗಿದೆ. ಪ್ರಕರಣದ ತನಿಖೆ ವೇಳೆ ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ. ದೇವಸ್ಥಾನದ ಭದ್ರತಾ ವ್ಯವಸ್ಥೆಯನ್ನು ಚಾಣಾಕ್ಷತನದಿಂದ ಬಳಸಿಕೊಂಡು, ಸಿಸಿಟಿವಿ ಕ್ಯಾಮೆರಾಗಳ ಕಣ್ತಪ್ಪಿಸಿ ಹಲವು ಬಾರಿ ಹಣ

ಅಯೋಧ್ಯೆ: ರಾಮಮಂದಿರದಲ್ಲಿ ಬರೋಬ್ಬರಿ 70 ಬಾರಿ‌ ಹುಂಡಿ ಕಳ್ಳತನ| 7.5 ಕೋಟಿ ಎಗರಿಸಿದ ಕಳ್ಳರ ಗ್ಯಾಂಗ್ Read More »

ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್| ಎಲ್ಲಾ ನಿರ್ಬಂಧ ತೆರವುಗೊಳಿಸಿದ ಕೇಂದ್ರ

ಸಮಗ್ರ ನ್ಯೂಸ್: ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ನೆಮ್ಮದಿ ನೀಡುವ ಕ್ರಮವಾಗಿ, ಕೇಂದ್ರ ಸರ್ಕಾರ ಎಲ್‌ಪಿಜಿ ಪೂರೈಕೆಯ ಮೇಲಿದ್ದ ಎಲ್ಲಾ ರೀತಿಯ ನಿರ್ಬಂಧಗಳನ್ನು ತಕ್ಷಣದಿಂದಲೇ ಹಿಂತೆಗೆದುಕೊಂಡಿದೆ. ಗೃಹೇತರ ಪ್ಯಾಕೇಜ್ಡ್ ಎಲ್‌ಪಿಜಿ ಪೂರೈಕೆಗೆ ವಿಧಿಸಲಾಗಿದ್ದ ವಲಯವಾರು ಮಿತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದಾಗಿ ಸರ್ಕಾರ ಘೋಷಿಸಿದೆ. ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಎಲ್‌ಪಿಜಿ (LPG) ಗ್ಯಾಸ್ ಪೂರೈಕೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ತಕ್ಷಣದಿಂದಲೇ ತೆರವುಗೊಳಿಸಿದ್ದು, ಇದರಿಂದ ಹೋಟೆಲ್‌ಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯ

ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್| ಎಲ್ಲಾ ನಿರ್ಬಂಧ ತೆರವುಗೊಳಿಸಿದ ಕೇಂದ್ರ Read More »