ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಮಂಗಳೂರು- ಮಡಿಕೇರಿ, ಮಂಗಳೂರು- ಕೊಲ್ಲೂರು, ಮಂಗಳೂರು- ಸಿಗಂದೂರು ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅ.11ರಿಂದ 20ರವರೆಗೆ ಆಯೋಜಿಸಿದೆ.
ಮಂಗಳೂರು ದಸರಾ ನವದುರ್ಗ ದರ್ಶನ ಪ್ಯಾಕೇಜ್:
ಬೆಳಿಗ್ಗೆ 8ರಿಂದ ರಾತ್ರಿ 8.30ರವರೆಗೆ. ಮರೋಳಿ ಸೂರ್ಯ ನಾರಾಯಣ ದೇವಸ್ಥಾನ-ಬೋಳಾರ ಮಾರಿಯಮ್ಮ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ- ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ-ಹೊಸನಾಡು ಕೊಡ್ಯಾಡ್ಕ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನ- ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಮೂಲ್ಕಿ- ಸಸಿಹಿತ್ಲು ಭಗವತಿ ದೇವಸ್ಥಾನ- ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ – ಉರ್ವ ಮಾರಿಯಮ್ಮ ದೇವಸ್ಥಾನ – ಕುದ್ರೋಳಿ ಗೋಕರ್ಣನಾಥ ದೇವಸ್ಥಾನ.
ಪ್ರಯಾಣ ದರ ವಯಸ್ಕರಿಗೆ ₹500 ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) ₹400.
ಮಂಗಳೂರು-ತಲಕಾವೇರಿ-ಭಾಗ ಮಂಡಲ:
ಬೆಳಿಗ್ಗೆ 7ರಿಂದ ರಾತ್ರಿ 9.30ರ ವರೆಗೆ. ಪುತ್ತೂರು ಮಹಾ ಲಿಂಗೇಶ್ವರ ದೇವಸ್ಥಾನ-ತಲಕಾವೇರಿ ದೇವಸ್ಥಾನ – ಶ್ರೀಭಗಂಡೇಶ್ವರ ಸ್ವಾಮಿ ದೇವಸ್ಥಾನ, ತ್ರಿವೇಣಿ ಸಂಗಮ, ಭಾಗ ಮಂಡಲ ಅಬ್ಬಿಪಾಲ್ಸ್-ರಾಜಾಸೀಟ್. ದರ ₹ 600, ಮಕ್ಕಳಿಗೆ ₹500.
ಮಂಗಳೂರು-ಕೊಲ್ಲೂರು: ಬೆಳಿಗ್ಗೆ 8ರಿಂದ ರಾತ್ರಿ 8. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ- ಕಾಪು ಮಾರಿಯಮ್ಮ ದೇವಸ್ಥಾನ- ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ -ಕಮಲಶಿಲೆ ಶ್ರೀಬ್ರಾಹ್ಮೀದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ-ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನ. ದರ ₹600, ಮಕ್ಕಳಿಗೆ ₹500.
ಮಂಗಳೂರು-ಸಿಗಂದೂರು: ಬೆಳಿಗ್ಗೆ 7ರಿಂದ ರಾತ್ರಿ 7.30. ಸಿಗಂದೂರ ಚೌಡೇಶ್ವರಿ ದೇವಸ್ಥಾನ-ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ. ದರ ₹700, ಮಕ್ಕಳಿಗೆ ₹600.
ಮಂಗಳೂರು-ಶೃಂಗೇರಿ: ಬೆಳಿಗ್ಗೆ 8ರಿಂದ ರಾತ್ರಿ 7.30. ಕೊಡ್ಯಾಡ್ಕ ಅನ್ನಪೂರ್ಣೇ ಶ್ವರಿ ದೇವಸ್ಥಾನ, ಶಾರ ದಾಂಬ ದೇವಸ್ಥಾನ, ಹರಿಹರಪುರ ಮಠ, ಋಷ್ಯಶೃಂಗೇಶ್ವರ ದೇವಸ್ಥಾನ, ಕಿಗ್ಗ ಕ್ಷೇತ್ರ. ದರ ₹600, ಮಕ್ಕಳಿಗೆ ₹500.
ಹೆಚ್ಚಿನ ಮಾಹಿತಿಗೆ ಮಂಗಳೂರು-1ನೇ ಘಟಕ ವ್ಯವಸ್ಥಾಪಕರು ಮೊ.77609 90713, ಮಂಗಳೂರು-3ನೇ ಘಟಕ ವ್ಯವಸ್ಥಾಪಕರು ಮೊ. 77609 90723, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್: 96632 11553, ಮಂಗಳೂರು ಬಸ್ ನಿಲ್ದಾಣ: 77609 90720, ವಿಭಾಗೀಯ ಕಚೇರಿ: 77609 90711, 96632 66221 ಸಂಪರ್ಕಿಸಬಹುದು ಎಂದು ಮಂಗಳೂರು ಕೆಎಸ್ಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.









