ಸಮಗ್ರ ಸಮಾಚಾರ

ಇಸ್ರೇಲ್ ಗೆ ತೆರಳುತ್ತಿದ್ದ ‘ಪ್ಲೈ ದುಬೈ’ ವಿಮಾನ ಹೈಜಾಕ್ ಗೆ ಯತ್ನ| ಪ್ರಾಣ ಒತ್ತೆಯಿಟ್ಟು ಉಗ್ರ ದಾಳಿಯನ್ನು ತಡೆದ ಭಾರತೀಯ ಪೈಲಟ್

ಸಮಗ್ರ ನ್ಯೂಸ್: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ (FZ1073) ವಿಮಾನದಲ್ಲಿದ್ದ ಒಮಾನಿ ಮೂಲದ ಸಹ-ಪೈಲಟ್ ನಡೆಸಿದ ಭೀಕರ ಉಗ್ರ ದಾಳಿಯ ಯತ್ನವನ್ನು ತಡೆದಿದ್ದು ಭಾರತೀಯ ಮೂಲದ ಮುಖ್ಯ ಪೈಲಟ್ (ಕ್ಯಾಪ್ಟನ್) ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಮೂಲಕ ಅವರು ಅಮೆರಿಕದ 9/11 ಮಾದರಿಯ ಬೃಹತ್ ದುರಂತವೊಂದನ್ನು ತಪ್ಪಿಸಿ, 180ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ್ದಾರೆ ಎಂದು ಇಸ್ರೇಲ್‌ನ ‘ವೈನೆಟ್ ನ್ಯೂಸ್’ ಮತ್ತು ‘ಚಾನೆಲ್ 12’ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ,

ಇಸ್ರೇಲ್ ಗೆ ತೆರಳುತ್ತಿದ್ದ ‘ಪ್ಲೈ ದುಬೈ’ ವಿಮಾನ ಹೈಜಾಕ್ ಗೆ ಯತ್ನ| ಪ್ರಾಣ ಒತ್ತೆಯಿಟ್ಟು ಉಗ್ರ ದಾಳಿಯನ್ನು ತಡೆದ ಭಾರತೀಯ ಪೈಲಟ್ Read More »

ಮಂಗಳೂರು: ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಪ್ರಕರಣ| ಓರ್ವ ಕಾರ್ಮಿಕನ ಮೃತದೇಹ ಪತ್ತೆ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಸುರತ್ಕಲ್‌ ಬಳಿಯ ಎಂಆರ್‌ಪಿಎಲ್‌ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿರುವ ಪ್ರದೇಶದಲ್ಲಿ ಕಾರ್ಮಿಕನೊಬ್ಬನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಫೋಟದ ಬಳಿಕ ಕಾರ್ಮಿಕನೊಬ್ಬ ನಾಪತ್ತೆಯಾಗಿದ್ದ. ಆತನ ಮೃತದೇಹ ಘಟಕದಿಂದ ಸ್ವಲ್ಪ ದೂರದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಕಾರ್ಮಿಕನನ್ನು ಮೂಲ್ಕಿಯ ಮನೀಶ್‌ ಕರ್ಕೇರಾ (30) ಎಂದು ಗುರುತಿಸಲಾಗಿದೆ. ಆತ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ ಇನ್ನೊಬ್ಬ

ಮಂಗಳೂರು: ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಪ್ರಕರಣ| ಓರ್ವ ಕಾರ್ಮಿಕನ ಮೃತದೇಹ ಪತ್ತೆ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ Read More »

MRPL ನಲ್ಲಿ ಸ್ಪೋಟ ಪ್ರಕರಣ| ಗಾಯಾಳುಗಳ ಸಂಖ್ಯೆ 9ಕ್ಕೆ ಏರಿಕೆ

ಸಮಗ್ರ ನ್ಯೂಸ್: ಮಂಗಳೂರಿನ ಜೋಕಟ್ಟೆಯಲ್ಲಿರುವ ಮಂಗಳೂರು ರಿಫೈನರಿ ಆ್ಯಂಡ್​ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್)ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್​​ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಘಟನೆ ನಡೆದಿದೆ. ‘ಅವಘಡದಲ್ಲಿ 9 ಕಾರ್ಮಿಕರಿಗೆ  ಗಾಯಗಳಾಗಿದ್ದು, ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದೆ’ ಎಂದು ಮಂಗಳೂರು ಜಿಲ್ಲಾಧಿಕಾರಿ ದರ್ಶನ್​​ ಹೆಚ್​ವಿ ಮಾಹಿತಿ ನೀಡಿದ್ದಾರೆ. ಸುರತ್ಕಲ್ ನಿವಾಸಿ ರಾಜೇಶ್​​​ಗೆ ಶೇಕಡಾ 35ರಷ್ಟು ಗಾಯಗಳಾಗಿದ್ದು, ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಸಾದ್​, ಇಂದ್ರಜೀತ್​, ರಾಮನ್​ಗೆ ಎಜಿ ಆಸ್ಪತ್ರೆಗೆ ಮತ್ತು ಗಾಯಾಳುಗಳಾದ ಜೆರೋಮ್​, ಜಯರಾಮ್​,

MRPL ನಲ್ಲಿ ಸ್ಪೋಟ ಪ್ರಕರಣ| ಗಾಯಾಳುಗಳ ಸಂಖ್ಯೆ 9ಕ್ಕೆ ಏರಿಕೆ Read More »

ಮಂಗಳೂರು: ಎಂಆರ್ ಪಿಎಲ್‌ ನಲ್ಲಿ ಭಾರೀ ಸ್ಪೋಟ| ಹಲವು ಮನೆಗಳಿಗೆ ಹಾನಿ

ಸಮಗ್ರ ನ್ಯೂಸ್: ಮಂಗಳೂರಿನ MRPL ಭಾಗದಲ್ಲಿ ಬುಧವಾರ ಸಂಭವಿಸಿದ ಭಾರೀ ಸ್ಫೋಟಕ್ಕೆ ಜೋಕಟ್ಟೆ ಸುತ್ತಮುತ್ತಲಿನ ಹಲವು ಮನೆಗಳು ಹಾಗೂ ಕಟ್ಟಡಗಳು ಕಂಪಿಸಿವೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಮನೆಗಳ ಬಾಗಿಲು, ಕಿಟಕಿ ಹಾಗೂ ಗಾಜುಗಳು ಹಾನಿಗೊಳಗಾಗಿದ್ದು, ಕೆಲವು ಕಟ್ಟಡಗಳ ಗೋಡೆಗಳಿಗೂ ಹಾನಿಯಾಗಿದೆ ಎನ್ನಲಾಗಿದೆ. ಬಜಪೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸ್ಫೋಟದ ಕಂಪನ ಅನುಭವವಾಗಿದೆ. ಸ್ಫೋಟದ ಬಳಿಕ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ದೂರದ ಪ್ರದೇಶಗಳಿಂದಲೂ ಹೊಗೆ ಗೋಚರಿಸಿದೆ. ಸ್ಫೋಟಕ್ಕೆ ನಿಖರ ಕಾರಣ ಹಾಗೂ ಘಟನೆಯಲ್ಲಿ ಯಾವುದೇ ಹಾನಿ

ಮಂಗಳೂರು: ಎಂಆರ್ ಪಿಎಲ್‌ ನಲ್ಲಿ ಭಾರೀ ಸ್ಪೋಟ| ಹಲವು ಮನೆಗಳಿಗೆ ಹಾನಿ Read More »

ರಾಜಕೀಯ ಭಾಷಣದಿಂದ ಜನರ ಬದುಕು ಉದ್ದಾರವಾಗಲ್ಲ – ಅಶೋಕ್ ರೈ

ಸಮಗ್ರ ನ್ಯೂಸ್: ರಾಜಕೀಯದವರ ಭಾಷಣ ಕೇಳಿ ಯಾವುದೇ ಮನೆ, ಕುಟಂಬದ ಉದ್ಧಾರವಾಗಿಲ್ಲ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗ ಕೊಡಿಸಿ ಬಳಿಕ ನಿಮ್ಮ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಿದರೆ ಮಾತ್ರ ನಿಮ್ಮ ಕುಟುಂಬ ಉದ್ಧಾರವಾಗಲು ಸಾಧ್ಯ ಎಂದು ಶಾಸಕ ಅಶೋಕ್ ರೈ ಹೇಳಿದರು. ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದಲ್ಲಿ ₹65 ಲಕ್ಷ ವೆಚ್ಚದ ಆರೋಗ್ಯ ಕ್ಷೇಮ ಕೇಂದ್ರ ಹಾಗೂ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ

ರಾಜಕೀಯ ಭಾಷಣದಿಂದ ಜನರ ಬದುಕು ಉದ್ದಾರವಾಗಲ್ಲ – ಅಶೋಕ್ ರೈ Read More »

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಸೆಪ್ಟೆಂಬರ್ 30ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಬಳ್ಳಾರಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲವೆಡೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯೂ ಇದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ Read More »

ಬೆಳ್ತಂಗಡಿ: ಖಾಸಗಿ ಜಮೀನಿನಲ್ಲಿ ಮಾನವನ ಅಸ್ಥಿಪಂಜರ ಪತ್ತೆ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಸೋಮವಾರ ಸಂಜೆ ಅಪರಿಚಿತ ಮಾನವನ ಅಸ್ಥಿಪಂಜರವೊಂದು ಪತ್ತೆಯಾಗಿದೆ. ನಾಲ್ಕೂರು ಗ್ರಾಮದ ಬಳಂಜ ಪಾಡಿ ನಿವಾಸಿ ವಿನೋದ್ ಎಂಬವರ ಕೃಷಿ ಭೂಮಿಯ ಕಣಿಯ ಬಳಿ ತಲೆಬುರುಡೆ, ಮೂಳೆಗಳು ಹಾಗೂ ಉಡುಪುಗಳು ಸೇರಿ ಮಾನವನ ಅಸ್ಥಿಪಂಜರ ಕಂಡುಬಂದಿದೆ. ವಿನೋದ್ ಅವರ ಜಮೀನನ್ನು ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಎಂಬವರು ನಿರ್ವಹಣೆ ಮಾಡುತ್ತಿದ್ದರು. ಯಂತ್ರದ ಮೂಲಕ ಕೃಷಿ ಭೂಮಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೇಣೂರು

ಬೆಳ್ತಂಗಡಿ: ಖಾಸಗಿ ಜಮೀನಿನಲ್ಲಿ ಮಾನವನ ಅಸ್ಥಿಪಂಜರ ಪತ್ತೆ Read More »

ಸೌಜನ್ಯ ಕೊಲೆ ಪ್ರಕರಣ| ಅ.10ರಂದು ನ್ಯಾಯದ ನಡಿಗೆ

ಸಮಗ್ರ ನ್ಯೂಸ್: ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ನಡೆಸಿದ ಸುದೀರ್ಘ ಹೋರಾಟವನ್ನು ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಲು ಅ.10ರಂದು ‘ನ್ಯಾಯದ ನಡಿಗೆ’ ಪಾದಯಾತ್ರೆಯನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಿ.ಸೌಜನ್ಯಾ ಅವರ ತಾಯಿ ಕುಸುಮಾವತಿ ಚಂದಪ್ಪಗೌಡ, ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ ತಿಳಿಸಿದರು. ಉಜಿರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಉಜಿರೆಯ ಕುಂಜರ್ಪದಿಂದ ಹೊರಡುವ ಪಾದಯಾತ್ರೆ ಬೆಳ್ತಂಗಡಿ ಪಟ್ಟಣದಲ್ಲಿ ಸಮಾರೋಪಗೊಳ್ಳಲಿದೆ. ಬಳಿಕ ಸಾರ್ವಜನಿಕ ಸಭೆ ನಡೆಯಲಿದ್ದು, ಸಂವಿಧಾನ, ಕಾನೂನು ಮತ್ತು ನ್ಯಾಯಾಂಗ

ಸೌಜನ್ಯ ಕೊಲೆ ಪ್ರಕರಣ| ಅ.10ರಂದು ನ್ಯಾಯದ ನಡಿಗೆ Read More »

ಮಂಗಳೂರು: ನ್ಯಾಯಾಧೀಶರು ಚಲಾಯಿಸುತ್ತಿದ್ದ ಕಾರಿಗೆ ರಿಕ್ಷಾ ಡಿಕ್ಕಿ; ಚಾಲಕ ಸಾವು

ಸಮಗ್ರ ನ್ಯೂಸ್: ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿ ನ್ಯಾಯಾಲಯ ಸಂಕೀರ್ಣವನ್ನು ಸಂಪರ್ಕಿಸುವ ರಸ್ತೆಯ ಇಳಿಜಾರಿನಲ್ಲಿ ಮಂಗಳವಾರ ಸಾಗಿಬಂದ ಗೂಡ್ಸ್‌ ರಿಕ್ಷಾ ಚಾಲಕನ ನಿಯಂತ್ರಣ ಕಳೆದುಕೊಂಡು ನ್ಯಾಯಾಧೀಶರೊಬ್ಬರು ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗೂಡ್ಸ್‌ ರಿಕ್ಷಾ ಚಾಲಕ ಚಂದ್ರ ಕೆ. (67) ಅವರು ಮೃತಪಟ್ಟಿದ್ದಾರೆ. ಕಾರಿಗೆ ಡಿಕ್ಕಿ ಹೊಡೆದ ರಭಸದಲ್ಲಿ ಪಲ್ಟಿ ಹೊಡೆದ ಗೂಡ್ಸ್‌ ರಿಕ್ಷಾ ಸ್ಕೂಟರ್‌ ಒಂದರ ಮೇಲೆ ಉರುಳಿದ್ದು, ಅದರ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಲಾಯಿಸುತ್ತಿದ್ದ ನ್ಯಾಯಾಧೀಶರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ‘ಒಂದನೇ

ಮಂಗಳೂರು: ನ್ಯಾಯಾಧೀಶರು ಚಲಾಯಿಸುತ್ತಿದ್ದ ಕಾರಿಗೆ ರಿಕ್ಷಾ ಡಿಕ್ಕಿ; ಚಾಲಕ ಸಾವು Read More »

ಕುಕ್ಕೆ: ವಿವಾದಿತ ಜಾಗಗಳ ತೆರವು ಕಾರ್ಯ ಆರಂಭ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ 1 ಕಟ್ಟಡ ಸೇರಿದಂತೆ ಕೆಲವು ಜಾಗಗಳಿಗೆ ಸಂಬಂಧಿಸಿದ ವಿಚಾರಕ್ಕೆ ಹೊಸ ತಿರುವು ದೊರೆತಿದೆ. ಅಲ್ಲಿರುವ ಕಟ್ಟಡ ಹಾಗೂ ಅಂಗಡಿಗಳ ತೆರವು ಕಾರ್ಯ ಆರಂಭವಾಗಿದೆ. ಶ್ರೀನಿಕೇತನ ಕಟ್ಟಡದಲ್ಲಿರುವ ವಸತಿ ಕೊಠಡಿಗಳು, ಹೊಟೇಲ್, ಫ್ಯಾನ್ಸಿ ಸೇರಿದಂತೆ ವಿವಿಧ ಅಂಗಡಿಗಳನ್ನು ತೆರವುಗೊಳಿಸಲು ಸೆ.30ರವರೆಗೆ ಗಡುವು ನೀಡಿದ್ದು ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವು ಅಂಗಡಿ ಮಾಲಕರು ತಮ್ಮ ಅಂಗಡಿಗಳಲ್ಲಿದ್ದ ಸಾಮಗ್ರಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಕುಮಾರಧಾರೆಯಿಂದ ಮುಖ್ಯರಸ್ತೆ ಬದಿಯಲ್ಲಿರುವ ವಿವಾದಿತ ಜಾಗಗಳು

ಕುಕ್ಕೆ: ವಿವಾದಿತ ಜಾಗಗಳ ತೆರವು ಕಾರ್ಯ ಆರಂಭ Read More »