ಇನ್ಮುಂದೆ ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಸಿರಪ್ ಗಳು ಮೆಡಿಕಲ್ ಗಳಲ್ಲಿ ಸಿಗಲ್ಲ| ಔಷಧಿ ಮಾರಾಟಕ್ಕೆ ಹೊಸ ನಿಯಮ ಜಾರಿ

ಸಮಗ್ರ ನ್ಯೂಸ್: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶಾದ್ಯಂತ ಔಷಧಿಗಳ ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ಮುಂದೆ ಕೆಮ್ಮಿನ ಸಿರಪ್ ಸೇರಿದಂತೆ ಯಾವುದೇ ರೀತಿಯ ‘ಸಿರಪ್‌ಗಳು’ ವೈದ್ಯರ ಲಿಖಿತ ಚೀಟಿ ಇಲ್ಲದೆ ಮೆಡಿಕಲ್ ಶಾಪ್‌ಗಳಲ್ಲಿ ನೇರವಾಗಿ ಸಿಗುವುದಿಲ್ಲ.

Ad Widget . Ad Widget . Ad Widget . Ad Widget . Ad Widget . Ad Widget .

ಅಧಿಕೃತ ಗೆಜೆಟ್ ಅಧಿಸೂಚನೆಯ ಪ್ರಕಾರ, ಕೇಂದ್ರ ಸರ್ಕಾರವು ಡ್ರಗ್ಸ್ ನಿಯಮಾವಳಿಗಳು, 1945 ಕ್ಕೆ ತಿದ್ದುಪಡಿ ತಂದಿದ್ದು, ಇದನ್ನು ‘ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು, 2026’ ಎಂದು ಹೆಸರಿಸಲಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಡ್ರಗ್ಸ್ ನಿಯಮಾವಳಿಗಳು 1945ರ ‘ಷೆಡ್ಯೂಲ್ ಕೆ’ (Schedule K) ಅಡಿಯಲ್ಲಿ ಲಭ್ಯವಿದ್ದ ವಿನಾಯಿತಿ ಪಟ್ಟಿಯಿಂದ ‘ಸಿರಪ್ಸ್’ (Syrups) ಎಂಬ ಪದವನ್ನು ಕೈಬಿಡಲಾಗಿದೆ.

ಈ ಬದಲಾವಣೆಯಿಂದಾಗಿ, ಇನ್ಮುಂದೆ ಸಾರ್ವಜನಿಕರು ಯಾವುದೇ ಸಿರಪ್ ಅಥವಾ ಕೆಮ್ಮಿನ ಸಿರಪ್‌ಗಳನ್ನು ಖರೀದಿಸಬೇಕಾದರೆ ವೈದ್ಯರ ಅಧಿಕೃತ ಚೀಟಿಯನ್ನು ತೋರಿಸುವುದು ಕಡ್ಡಾಯವಾಗುತ್ತದೆ. ಓವರ್ ದಿ ಕೌಂಟರ್ (OTC) ಅಥವಾ ನೇರ ಮಾರಾಟಕ್ಕೆ ಇನ್ಮುಂದೆ ಅವಕಾಶವಿರುವುದಿಲ್ಲ.

ಈ ಹೊಸ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದಲೇ ಜಾರಿಗೆ ಬರಲಿವೆ ಎಂದು ಜಂಟಿ ಕಾರ್ಯದರ್ಶಿ ಹರ್ಷ್ ಮಂಗ್ಲಾ ಸಹಿ ಮಾಡಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಿರಪ್‌ಗಳ ಅತಿಯಾದ ಮತ್ತು ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಈ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *