ಬೆಂಗಳೂರು: 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ, ರೌಡಿಶೀಟರ್ ಸಿಸಿಬಿ ವಶಕ್ಕೆ; ಡಿಸಿಪಿ ಶ್ರೀನಿವಾಸ್ ಗೌಡ ರೇಡ್ ಗೆ ಬೆಚ್ಚಿಬಿದ್ದ ರೌಡಿಪಡೆ
ಸಮಗ್ರ ನ್ಯೂಸ್: ನಗರದಲ್ಲಿ ರೌಡಿ ಚಟುವಟಿಕೆಗಳ ಮೇಲಿನ ನಿಯಂತ್ರಣ ಕ್ರಮಗಳನ್ನು ಮುಂದುವರಿಸಿರುವ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು, ಕೊಲೆ ಪ್ರಕರಣದಲ್ಲಿ ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಹಾಗೂ ಕಳೆದ 3 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ರೌಡಿಶೀಟರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೌಡಿಗಳ ವಿರುದ್ಧ ನಿರಂತರ ನಿಗಾ ವಹಿಸಿರುವ ಸಿಸಿಬಿ, ಡಿಸಿಪಿ ಶ್ರೀನಿವಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ನಿತ್ಯ ಕಾರ್ಯಾಚರಣೆ ಪ್ರಾರಂಭಿಸಿದೆ. ಶ್ರೀನಿವಾಸ್ ಗೌಡ ಈ ನಡೆಗೆ ಸದ್ಯ ರೌಡಿ ಪಡೆ ಬೆಚ್ಚಿಬಿದ್ದಿದೆ. ಕೆ.ಜಿ. ಹಳ್ಳಿ










