ಸಮಗ್ರ ನ್ಯೂಸ್: ನಿತ್ಯ ಜೀವನದಲ್ಲಿ ರಾಶಿಗಳು ಹಾಗೂ ಗ್ರಹಗಳ ಪ್ರಭಾವ ಮಹತ್ವ ಪಡೆಯುತ್ತದೆ. ರಾಶಿಗಳ ಚಲನೆಯಿಂದ ನಮ್ಮ ಜೀವನದ ಆಗುಹೋಗುಗಳು ನಿರ್ಧರಿತವಾಗುತ್ತವೆ. ಆದ್ದರಿಂದ ರಾಶಿಗಳ ಭವಿಷ್ಯ ತಿಳಿದುಕೊಳ್ಳುವುದು ಅವಶ್ಯಕ. ಈ ವಾರದಲ್ಲಿ (ಜೂ.14ರಿಂದ 20ರವರೆಗೆ) ಯಾವ ರಾಶಿಗೆ ಶುಭ? ಯಾವ ರಾಶಿಯ ಸಮಸ್ಯೆಗಳಿಗೆ ಏನು ಪರಿಹಾರ ಎಂಬುದನ್ನು ತಿಳಿಯೋಣ..
ಮೇಷ: ಅಧಿಕ ಜ್ಯೇಷ್ಠ ಮಾಸವು ಮುಗಿದು ನಿಜ ಜ್ಯೇಷ್ಠ ಮಾಸವು ಜೂನ್ 15ರಿಂದ ಆರಂಭವಾಗುತ್ತದೆ. ಅಂದೇ ಮಿಥುನ ಸಂಕ್ರಮಣವು ಬಂದು ರವಿ ಬುಧರು ಒಂದೇ ಮನೆಯಲ್ಲಿ ಇರುವುದು ಶುಭಸಂಕೇತವೇ. ಲಗ್ನಾಧಿಪತಿ ರಾಶಿಯಲ್ಲೇ ಇಚ್ಛಿತ ಕೆಲಸಗಳನ್ನು ನಡೆಸಿಕೊಡುತ್ತಾನೆ. ಗುರು ಒಂದೇ ಮನೆಯಲ್ಲಿದ್ದಾರೆ.
ಇದರಿಂದ ಅನುಕೂಲವೇ ಇರುತ್ತದೆ. ಸಿದ್ಧಿವಿನಾಯಕನನ್ನು ಪೂಜಿಸಿದರೆ ಕೆಲಸವು ಪೂರ್ಣಗೊಳ್ಳುತ್ತದೆ.
ವೃಷಭ:
ಏಕಾದಶದಲ್ಲಿ ಶನಿ, ಮೂರರಲ್ಲಿ ಗುರುವಿದ್ದಾನೆ. ಉಚ್ಛ ರಾಶಿಯಲ್ಲಿ ಗುರುವು ಏನನ್ನೂ ಕೊಡಲು ಉದ್ಯುಕ್ತನಾಗಿದ್ದು, ಮಾತು ಕಡಿಮೆ, ಶಿಸ್ತು ಪಾಲನೆ ಮಾಡಬೇಕು. 12ರಲ್ಲಿ ಕುಜನಿದ್ದಾನೆ. ಎಚ್ಚರಿಕೆಯಿಂದ ಸಾಗಿದರೆ ಏಕಾದಶ ಶನಿ ಒಬ್ಬನೇ ಸಾಕು ನಿಮ್ಮನ್ನು ಕಾಪಾಡಲು. ಕರಿಎಳ್ಳು, ಎಳ್ಳೆಣ್ಣೆ ದಾನ ನೀಡಿದರೆ ಒಳ್ಳೆಯದು.
ಮಿಥುನ:
ರವಿ- ಬುಧರು ಲಗ್ನದಲ್ಲೇ ಇದ್ದು, ಲಗ್ನಾಧಿಪತಿಯು ಸೂರ್ಯನ ಜತೆ ಇರುವುದು ಅತ್ಯಂತ ಅನುಕೂಲಕರ ಸಮಯ. ದಶಮದಲ್ಲಿ ಶನಿಯಿದ್ದಾನೆ. ಗುರುವು ದ್ವಿತೀಯದಲ್ಲಿ ಇರುವುದರಿಂದ ನಿಮಗೆ ಕುಟುಂಬದಲ್ಲಿ ಸುಖ-ಸಂತೋಷ ನೆಲೆಸಿ ನಿಮ್ಮ ಭಾಗ್ಯ ಚಕ್ರವು ತೆರೆಯುತ್ತದೆ. ಲಕ್ಷ್ಮೀ-ನಾರಾಯಣನನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ.
ಕಟಕ:
ಚಂದ್ರನ ಮನೆಯಾದ ಕಟಕ ರಾಶಿಯಲ್ಲಿ ಗುರು ಉಚ್ಛನಾಗಿದ್ದು, ಏನನ್ನೂ ಮಾಡಲು ಸಕಾಲವಾಗಿದೆ. 9ರಲ್ಲಿ ಶನಿಯಿರುವುದರಿಂದ ಅನುಕೂಲಕರವಾಗಿದೆ. ಅಷ್ಟಮ ರಾಹು ಶನಿಮನೆಯಲ್ಲಿ ಇರುವುದರಿಂದ ಶಿಸ್ತಿನ ಜೀವನ ನಿದ್ರೆಯಿಂದ ದೇಹಕ್ಕೆ ಸೌಖ್ಯವೂ ಸಿಕ್ಕಿ, ಮನಸ್ಸಿಗೆ ಸಂತೋಷವೂ ಸಿಗುತ್ತದೆ. ದ್ವಿತೀಯದಲ್ಲಿ ಕೇತುವಿದ್ದಾನೆ. ಆಡಿದ ಮಾತನ್ನು ಕೇಳಿಸಿಕೊಳ್ಳಿ. ನಿಮ್ಮ ಸಲಹೆ ಕೊಡಬೇಡಿ. ಈಶ್ವರನನ್ನು ಧ್ಯಾನಿಸಿ.
ಸಿಂಹ: ರಾಶಿಯವರಿಗೆ ಗುರುಬಲವಿಲ್ಲ. ಶನಿಯು ಅಷ್ಟಮದಲ್ಲಿದ್ದಾನೆ. ರೈಲು ಕಬ್ಬಿಣದ ಹಳಿಯ ಮೇಲೆ ಸಾಗಿ ನಮ್ಮನ್ನು ಬೇಕಾದ ಸ್ಥಳಕ್ಕೆ ತಲುಪಿಸುತ್ತದೆ. ಅದರ ನಿಯಂತ್ರಣಕ್ಕೆ ಚಾಲಕನಿದ್ದರೂ ಸಾವಿರಾರು ಜನರ ಪ್ರಾಣವನ್ನು ಭಗವಂತನೇ ನಿಯಂತ್ರಿಸುತ್ತಾನೆ. ಸದಾ ದೈವಶಕ್ತಿ ಇರಲಿ, ಮೌನವಾಗಿದ್ದು, ಯಾರೊಂದಿಗೂ ಕಲಹವನ್ನು ಮಾಡಿಕೊಳ್ಳಬೇಡಿ.
ಕನ್ಯಾ:
ರಾಶಿಗೆ ಗುರುಬಲ ಪರಿಪೂರ್ಣವಾಗಿದ್ದರೂ, ಶನಿ ಸಪ್ತಮದಲ್ಲಿದ್ದಾನೆ. ದೇಹಾರೋಗ್ಯವನ್ನು ನೋಡಿಕೊಳ್ಳೆಂದು ಸೂಚನೆ ನೀಡುತ್ತಾನೆ. ಗ್ರಹವು ಬಾಧಿಸದೇ ಇರಬಹುದು. ಆದರೆ ಮಾಡಿದ ಪಾಪಗಳಿಗೆ ಪೂರ್ವಜನ್ಮದ ಕೆಡಕುಗಳಿಗೆ ಮನುಷ್ಯನು ಉತ್ತರ ಕೊಡಲೇಬೇಕಾಗುತ್ತದೆ. ಏಕಾದಶದಲ್ಲಿ ಗುರುವಿದ್ದು, ಎಲ್ಲಾ ಕೆಲಸಗಳು ಮುಂದೆ ಸಾಗುತ್ತದೆ. ಶನಿಗೆ ಲಕ್ಷ್ಮೀ ನರಸಿಂಹನನ್ನು ಪೂಜಿಸಿ, ನಿತ್ಯವೂ ನರಸಿಂಹಾಷ್ಟೋತ್ತರ ಪಠಿಸಿ.
ತುಲಾ:
6ನೇ ಮನೆಯಲ್ಲಿ ಶನಿಯಿದ್ದಾನೆ. 10ನೇ ಮನೆಯಲ್ಲಿ ಗುರುವು ಉಚ್ಚ ರಾಶಿಯಲ್ಲಿದ್ದಾನೆ. ಗುರುವೂ ಒಳ್ಳೆಯ ಫಲವನ್ನೇ ನೀಡುತ್ತಾನೆ. ಅಳೆಯುವುದೂ-ತೂಕ ಮಾಡುವುದೂ ಇಲ್ಲ. ನಿಮಗೆ ಬೇಕಾದ್ದನ್ನು ಕೊಡುತ್ತಾನೆ. ನಿಮ್ಮನ್ನು ಜನಾನುರಾಗಿಯೇ ಇರಿಸುತ್ತಾನೆ. ದುರ್ಗೆಯನ್ನು ಪ್ರಾರ್ಥಿಸಿ.
ವೃಶ್ಚಿಕ:
9ರಲ್ಲಿ ಗುರು ಉಚ್ಚನಾಗಿದ್ದು, ಶುಕ್ರನು ಅಲ್ಲೇ ಇರುವುದು ಶುಭ ಸಂಕೇತವೇ. ಆದರೆ ಪಂಚಮ ಶನಿ ನಿಮ್ಮ ನಿಮ್ಮ ಪಾಪ- ಪುಣ್ಯ ತುಲನೆ ಮಾಡಿ ನಿಮ್ಮ ವೇಗವನ್ನು ಅಡ್ಡಗಟ್ಟುತ್ತಾನೆ. ಆದ್ದರಿಂದ ಈ ಸಂದರ್ಭದಲ್ಲಿ ಗುರುಚರಿತ್ರೆ ಪಾರಾಯಣ ಅತ್ಯಂತ ಶ್ರೇಷ್ಠವಾದುದು. ಹಮ್ಮಿಕೊಂಡ ಕೆಲಸದಲ್ಲಿ ಜಯವನ್ನು ಪಡೆಯಬೇಕಾದರೆ ಗುರು ದತ್ತಾತ್ರೇಯನನ್ನು ಪೂಜಿಸಿ. ಗುರುಚರಿತ್ರೆ 14ನೇ ಅಧ್ಯಾಯ ಪಾರಾಯಣ ಮಾಡಿ.
ಧನಸ್ಸು: ಈ ರಾಶಿಯವರಿಗೆ ಗುರುವು ಅಷ್ಟಮದಲ್ಲಿದ್ದು ಶನಿಯು 4ರಲ್ಲಿದ್ದಾನೆ. ಹರಿಚಿತ್ತ ಸತ್ಯವೆಂದು ತಿಳಿದು ಹರಿಯನ್ನು ಧ್ಯಾನಮಾಡಿ. ಏನು ಬಂದರೂ ಅದು ಬಂದ ಭಾಗ್ಯ ಎಂದು ಯಾವುದೇ ನಷ್ಟವಿಲ್ಲದ ಜೀವನ ಮಾಡಬೇಕಾದರೆ ದೈವಕೃಪೆ ಇರಬೇಕು. ಗಣೇಶನನ್ನು ಪೂಜಿಸಿ, ನಾಗದೇವರನ್ನು ಪ್ರಾರ್ಥಿಸಿ.
ಮಕರ:
7ನೇ ಮನೆಯಲ್ಲಿ ಗುರು ಶುಕ್ರರಿದ್ದಾರೆ. ಶುಕ್ರ ಕೂಡ ಅಸುರ ಗುರುವೇ, 3ರಲ್ಲಿ ಶನಿಯಿರುವುದರಿಂದ ಯಾವುದಕ್ಕೂ ಕಡಿಮೆ ಇಲ್ಲದ ಸುಖ ಜೀವನ ನಡೆಸಬಹುದು. ದೈವ ಕೃಪೆಯು ಪರಿಪುರ್ಣವಾಗಿದೆ. ಕೆಲಸಗಳನ್ನು ಮುಂದುವರಿಸಿ, ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಿ.
ಕುಂಭ:
6ರಲ್ಲಿ ಗುರುವಿದ್ದರೂ ಪರವಾಗಿಲ್ಲ ಉಚ್ಚರಾಶಿಯಲ್ಲಿ ಯಾವ ಕೇಡೂ ಆಗದು. ಗುರುಗ್ರಹವು ಯಾರಿಗೂ ಕೆಟ್ಟದನ್ನು ಮಾಡುವುದಿಲ್ಲ. ನಿಮ್ಮ ಪುಣ್ಯವನ್ನು ತುಲನೆ ಮಾಡಿ. ನಿಮಗೆ ನಷ್ಟವಿಲ್ಲದೆ ದುಃಖಕ್ಕೆ ಈಡಾಗದಂತೆ ಗುರುವೇ ಕೈಹಿಡಿದು ನಡೆಸುತ್ತಾನೆ. ಲೋಕಕ್ಕೆ ಗುರುವಾದ ಶ್ರಿ ಕೃಷ್ಣನನ್ನು ಪೂಜಿಸಿ.
ಮೀನ:
ಈ ರಾಶಿಗೆ ಗುರುವು ಪಂಚಮದಲ್ಲಿದ್ದಾನೆ. ಶನಿಯು ಪಂಚಮಸ್ಥಾನ ನೋಡುತ್ತಾನೆ. ದ್ವಿತೀಯದಲ್ಲಿ ಕುಜನಿದ್ದು ಆಡುವ ಮಾತುಗಳು ಮುತ್ತಿನಂತಿರಬೇಕು. ಮನುಷ್ಯನ ಸಮಯವು ಚೆನ್ನಾಗಿದ್ದಾಗ ಪ್ರೀತಿಯಿಂದ ಜನರನ್ನು ಗೆಲ್ಲಬೇಕು. ಇಷ್ಟ ದೇವರನ್ನು ಪ್ರಾರ್ಥಿಸಿ ಒಳ್ಳೆಯ ಫಲವನ್ನು ಅನುಭವಿಸಿ. ದಕ್ಷಿಣಾ ಮೂರ್ತಿಯನ್ನು ಪ್ರಾರ್ಥಿಸಿ ಕಡಲೇಬೇಳೆಯನ್ನು ದಾನನೀಡಿ.








