ಪ್ರವಾಸಿ ತಾಣ

ಕೋರ್ಟ್ ನಲ್ಲೇ ಉಸಿರುಚೆಲ್ಲಿದ ಕಬಡ್ಡಿ‌ ಆಟಗಾರ| ಆಡುತ್ತಿದ್ದಾಗಲೇ ಸಂಭವಿಸಿತು ಹೃದಯಾಘಾತ

ಸಮಗ್ರ ನ್ಯೂಸ್: ಕಬಡ್ಡಿ ಆಡುತ್ತಿರುವ ವೇಳೆ ಹಠಾತ್ ಹೃದಯಾಘಾತ ಸಂಭವಿಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕುಡ್ಡಲೂರು ಜಿಲ್ಲೆಯ ಮಂಡಕ್ಕಿ ಗ್ರಾಮದಲ್ಲಿ ನಡೆದಿದೆ.‌ 22 ವರ್ಷದ ವಿದ್ಯಾರ್ಥಿ ವಿಮಲ್​ರಾಜ್ ಮೃತ ದುರ್ದೈವಿ. ಈತ ಎರಡನೇ ವರ್ಷದ BSc Zoology ಓದುತ್ತಿದ್ದ. ಸೇಲಂ ಜಿಲ್ಲೆಯಲ್ಲಿರುವ ಖಾಸಗಿ ಖಾಲೇಜಿನಲ್ಲಿ ಓದುತ್ತಿದ್ದ ವಿಮಲ್ ರಾಜ್, ವೀಕೆಂಡ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ. ಜಿಲ್ಲಾ ಮಟ್ಟದ ‘ಮುರಟ್ಟು ಕಾಲೈ ಟೀಂ’ ಕಬಡ್ಡಿ ತಂಡವನ್ನ ವಿದ್ಯಾರ್ಥಿ ಪ್ರತಿನಿಧಿಸುತ್ತಿದ್ದ ಎನ್ನಲಾಗಿದೆ. ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರರ […]

ಕೋರ್ಟ್ ನಲ್ಲೇ ಉಸಿರುಚೆಲ್ಲಿದ ಕಬಡ್ಡಿ‌ ಆಟಗಾರ| ಆಡುತ್ತಿದ್ದಾಗಲೇ ಸಂಭವಿಸಿತು ಹೃದಯಾಘಾತ Read More »

“ನನ್ನ ಮೆಸೇಜ್ ಗೆ ಉತ್ತರಿಸಿ” ಟ್ರೋಲ್ ಆಯ್ತು‌ ಲಲಿತ್ ಮೋದಿ ಟ್ವೀಟ್

ಸಮಗ್ರ ನ್ಯೂಸ್: ಉದ್ಯಮಿ ಹಾಗೂ ಐಪಿಎಲ್ ಹೊಸ ರೂಪ ಕೊಟ್ಟು ಹೆಸರು ಮಾಡಿದ್ದ ಲಲಿತ್​ ಮೋದಿಯವರು ಸುಶ್ಮಿತಾ ಸೇನ್​ ಅವರೊಂದಿಗೆ ಡೇಟಿಂಗ್​ ಮಾಡುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಲು ಪ್ರಾರಂಭವಾಗಿದೆ. “ಸುಶ್ಮಿತಾ ಸೇನ್​ ನನ್ನ ಎಸ್​ಎಂಎಸ್​ಗೆ ಉತ್ತರಿಸಿ’ ಎಂದು ಲಲಿತ್​ ಮೋದಿ ಮಾಡಿದ್ದ ಟ್ವೀಟ್​ ಈಗ ಸದ್ದು ಮಾಡುತ್ತಿದೆ. ಆ ಟ್ವೀಟ್​ ಮಾಡಿದ್ದು 2013ರಲ್ಲಿ. ಆದರೆ, ಈಗ ಹಾಸ್ಯಮಯ ಪ್ರತಿಕ್ರಿಯೆಗಳಿಗೆ ಆ ಒಂದು ಸಣ್ಣ ಪೋಸ್ಟ್​ ಕಾರಣವಾಗಿದೆ. ಜುಲೈ

“ನನ್ನ ಮೆಸೇಜ್ ಗೆ ಉತ್ತರಿಸಿ” ಟ್ರೋಲ್ ಆಯ್ತು‌ ಲಲಿತ್ ಮೋದಿ ಟ್ವೀಟ್ Read More »

ಹೆದ್ದಾರಿಯಲ್ಲೇ ಗಜಪ್ರಸವ| ಮುದ್ದಾದ ಮರಿಗೆ ಜನ್ಮನೀಡಿ ಕಾಡುಸೇರಿದ ತಾಯಿಮಗು

ಸಮಗ್ರ ನ್ಯೂಸ್: ತಮಿಳುನಾಡು-ಕೇರಳ ಸಂಪರ್ಕಿಸುವ ವಾಹನ ದಟ್ಟಣೆಯ ಮಾರಾಯೂರ್ ಹೆದ್ದಾರಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ. ಇದರಿಂದ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಾರಾಯೂರ್-ಇಡುಕ್ಕಿ ಹೆದ್ದಾರಿ ಬಂದ್ ಆಗಿತ್ತು. ತುಂಬು ಗರ್ಭಿಣಿಯಾಗಿದ್ದ ಆನೆ ಹೆರಿಗೆ ಬೇನೆ ತಾಳಲಾರದೇ ರಸ್ತೆಗೆ ಬಂದಿದೆ. ಕಡೆಗೆ ಅಲ್ಲಿಯೇ ಮುದ್ದಾದ ಮರಿಗೆ ಜನ್ಮ ನೀಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಬದಿಯಲ್ಲೂ ನಿಂತಿದ್ದ ವಾಹನ ಸವಾರರು ಗಜಪ್ರಸವಕ್ಕೆ ಅನುವು

ಹೆದ್ದಾರಿಯಲ್ಲೇ ಗಜಪ್ರಸವ| ಮುದ್ದಾದ ಮರಿಗೆ ಜನ್ಮನೀಡಿ ಕಾಡುಸೇರಿದ ತಾಯಿಮಗು Read More »

ಕೇರಳದಲ್ಲಿ ಆತಂಕ ಮೂಡಿಸಿದ ಟೊಮೇಟೋ ಜ್ವರ ಎಚ್ಚರ ಎಚ್ಚರ…!

ಸಮಗ್ರ ನ್ಯೂಸ್: ದೇಶದೆಲ್ಲೆಡೆ ಕೊರೊನಾ ವೈರಸ್ ತಾಂಡವವಾಡುತ್ತಿದ್ದಂತೆ, ಇದೀಗ ಹೊಸತೊಂದು ವೈರಸ್ ಕೇರಳದಲ್ಲಿ ಕಾಣಿಸಿಕೊಂಡಿದೆ. ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ‌ ಈ ಜ್ವರ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದೇನಪ್ಪಾ, ಟೊಮೇಟೋ ಜ್ವರ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.ಇದೀಗ ಕೇರಳದಲ್ಲಿ ಟೊಮೇಟೋ ಜ್ವರದ ಆತಂಕ ಹೆಚ್ಚಾಗಿದ್ದು, ಕೊಲ್ಲಂ ಜಿಲ್ಲೆಯೊಂದರಲ್ಲೇ ಬರೋಬ್ಬರಿ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ

ಕೇರಳದಲ್ಲಿ ಆತಂಕ ಮೂಡಿಸಿದ ಟೊಮೇಟೋ ಜ್ವರ ಎಚ್ಚರ ಎಚ್ಚರ…! Read More »

ಇಂಜಿನಿಯರ್ ಪದವೀದರರಿಗೆ ಉದ್ಯೋಗಾವಕಾಶ| ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಸ್ಟೇಟ್ ಎಲೆಕ್ಟ್ರಿಸಿಟಿ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ ನಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮೇ 24 ರವರೆಗೆ ಅಧಿಕೃತ ವೆಬ್‌ಸೈಟ್ (mahatransco.in)ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಡಿಯಲ್ಲಿ ಸುಮಾರು 223 ಸಹಾಯಕ ಇಂಜಿನಿಯರ್ ಹುದ್ದೆಗಳನ್ನು ನೇಮಿಸಿಕೊಳ್ಳಲಾಗುವುದು. ಇದರಲ್ಲಿ ಪ್ರಸರಣ ವಿಭಾಗ, ದೂರಸಂಪರ್ಕ ಮತ್ತು ಇತರೆ ಹುದ್ದೆಗಳುನ್ನು ಒಳಗೊಂಡಿದೆ. ಹುದ್ದೆಗಳ ಮಾಹಿತಿಸಹಾಯಕ ಇಂಜಿನಿಯರ್ (ಪ್ರಸರಣ) – 170ಸಹಾಯಕ ಇಂಜಿನಿಯರ್ (ದೂರಸಂಪರ್ಕ) – 25ಸಹಾಯಕ

ಇಂಜಿನಿಯರ್ ಪದವೀದರರಿಗೆ ಉದ್ಯೋಗಾವಕಾಶ| ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಾಹಿತಿ Read More »

ಶೃಂಗೇರಿ ಶಾರದೆಗೆ ಪ್ರಕೃತಿಯ ಪ್ರಭಾವಳಿ| ಗುಡುಗು- ಮಿಂಚಿನ ಸಮ್ಮಿಲನದಲ್ಲಿ ಅತ್ಯದ್ಭುತ ನೋಟ|

ಸಮಗ್ರ ನ್ಯೂಸ್: ಗುಡುಗು-ಮಿಂಚಿನ ಸಮ್ಮಿಲನದಿಂದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಶೃಂಗೇರಿ ಶಾರದಾಂಬೆ ದೇಗುಲದ ಸುಂದರ ನೋಟ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಅತ್ಯದ್ಭುತ ಚಿತ್ರವನ್ನು ಸೆರೆ ಹಿಡಿಯಲು ಪ್ರಕೃತಿಯೇ ಸಾಕ್ಷಿಯಾಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಮಳೆ ಜೊತೆಗೆ ಗುಡುಗು-ಸಿಡಿಲಿನ ಅಬ್ಬರ ಕೂಡ ಜೋರಿದೆ. ಶೃಂಗೇರಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಬೆ ದೇಗುಲದ ದೃಶ್ಯಕಾವ್ಯ ನೋಡುಗರ ಮನಸೊರೆಗೊಂಡಿದೆ.

ಶೃಂಗೇರಿ ಶಾರದೆಗೆ ಪ್ರಕೃತಿಯ ಪ್ರಭಾವಳಿ| ಗುಡುಗು- ಮಿಂಚಿನ ಸಮ್ಮಿಲನದಲ್ಲಿ ಅತ್ಯದ್ಭುತ ನೋಟ| Read More »

ರಷ್ಯಾ ಕಬಳಿಸುತ್ತಿದ್ದರೂ ಅಮೇರಿಕಾ ಸುಮ್ಮನಿದೆ| ಪೇಸ್ ಬುಕ್ ಲೈವ್ ನಲ್ಲಿ ಉಕ್ರೇನ್ ಅಧ್ಯಕ್ಷನ ಅಳಲು

ಸಮಗ್ರ ನ್ಯೂಸ್: ಉಕ್ರೇನ್‌ನ ರಾಜಧಾನಿ ಕೀವ್‌ ಅನ್ನು ರಷ್ಯಾ ವಶಪಡಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ತನ್ನ ದೇಶವನ್ನುದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದ್ದು, ಜಗತ್ತಿನ ನಂ.1 ಶಕ್ತಿಶಾಲಿ ದೇಶ ಅಮೆರಿಕ ದೂರದಿಂದ ಸುಮ್ಮನೆ ನೋಡುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ. ನಾನು ರಷ್ಯಾದ ನಂ.1 ಗುರಿ, ನನ್ನ ಕುಟುಂಬ ನಂ.2 ಗುರಿ. ನಿನ್ನೆಯಂತೆ ಇಂದೂ ಕೂಡ ನಾವು ಏಕಾಂಗಿಯಾಗಿ ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ದೂರದಿಂದ ನೋಡುತ್ತಿದೆ ಎಂದು

ರಷ್ಯಾ ಕಬಳಿಸುತ್ತಿದ್ದರೂ ಅಮೇರಿಕಾ ಸುಮ್ಮನಿದೆ| ಪೇಸ್ ಬುಕ್ ಲೈವ್ ನಲ್ಲಿ ಉಕ್ರೇನ್ ಅಧ್ಯಕ್ಷನ ಅಳಲು Read More »

‘ಎತ್ತಿನ ಭುಜ, ಹತ್ತಿದರೆ ಸಜಾ’ | ಅಕ್ರಮ ಚಟುವಟಿಕೆ ಹಿನ್ನಲೆ, ಸಾರ್ವಜನಿಕ ಪ್ರವೇಶಕ್ಕೆ ತಾತ್ಕಾಲಿಕ ಬ್ರೇಕ್

ಚಿಕ್ಕಮಗಳೂರು : ಪ್ರವಾಸಿಗರ ರಮಣೀಯ ತಾಣ ಎತ್ತಿನ ಭುಜಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬರುವ ರಮಣೀಯ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಎತ್ತಿನಭುಜ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದ್ದು, ಚಾರಣಕ್ಕೆ ಬ್ರೇಕ್ ಹಾಕಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಎತ್ತಿನಭುಜದ ಸಮೀಪ ಮ್ಯಾರಥಾನ್ ಆಯೋಜನೆ ಮಾಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಹಲವರು ಇದನ್ನು ವಿರೋಧಿಸಿದ್ದರು. ಆದ್ದರಿಂದ ಅರಣ್ಯ ಇಲಾಖೆ ಎತ್ತಿನ

‘ಎತ್ತಿನ ಭುಜ, ಹತ್ತಿದರೆ ಸಜಾ’ | ಅಕ್ರಮ ಚಟುವಟಿಕೆ ಹಿನ್ನಲೆ, ಸಾರ್ವಜನಿಕ ಪ್ರವೇಶಕ್ಕೆ ತಾತ್ಕಾಲಿಕ ಬ್ರೇಕ್ Read More »

ದೇವರ ಮೀನುಗಳಿಗೆ ಆಹಾರವಿತ್ತರೆ ಚರ್ಮರೋಗ ನಿವಾರಣೆ| ತೊಡಿಕಾನ ದೇವಾಲಯದಲ್ಲೊಂದು ಪ್ರಕೃತಿಯ ಅಚ್ಚರಿ|

ಸುಳ್ಯ: ಪ್ರಕೃತಿ ಹಲವು ವಿಸ್ಮಯಗಳನ್ನು ಸೃಷ್ಠಿ ಮಾಡುತ್ತಿರುತ್ತದೆ. ವೈಜ್ಞಾನಿಕ ಯುಗದಲ್ಲೂ ಅಚ್ಚರಿಗೆ ಒಳಗಾಗುವ ವಿಚಾರಗಳು ಈ ಪ್ರಕೃತಿಯಲ್ಲಿ ಅಡಗಿದೆ. ಜನರ ನಂಬಿಕೆ ಮತ್ತು ಪ್ರಾಕೃತಿಕ ವಿಸ್ಮಯದಿಂದ ಇಂದಿಗೂ ಕುತೂಹಲಕಾರಿಯಾದ ಹಲವು ಅಂಶಗಳು ನಿಸರ್ಗದಲ್ಲಿವೆ. ಅಂತಹ ವಿಸ್ಮಯಗಳ ತಾಣ ಸುಳ್ಯ ತಾಲೂಕಿನ ‌ತೊಡಿಕಾನ ಮಲ್ಲಿಕಾರ್ಜುನ ಸನ್ನಿಧಿ. ಈ ದೇವಾಲಯದಲ್ಲಿ ಇಂದಿಗೂ ಅಚ್ಚರಿ ಮೂಡಿಸುವಂತಹ ಘಟನೆಗಳು ನಡೆಯುತ್ತಿದೆ. ದೇವಸ್ಥಾನದ ಬಳಿಯ ಹಳ್ಳದಲ್ಲಿರುವ ದೇವರ ಮೀನುಗಳಿಗೆ ಆಹಾರ ಹಾಕಿದರೆ ಸಾಕು ಮೈ ಮೇಲಿದ್ದ ಚರ್ಮ ರೋಗಗಳೆಲ್ಲಾ ಶಮನವಾಗುತ್ತದೆ ಎಂಬ ನಂಬಿಕೆ ಇಲ್ಲಿಯ

ದೇವರ ಮೀನುಗಳಿಗೆ ಆಹಾರವಿತ್ತರೆ ಚರ್ಮರೋಗ ನಿವಾರಣೆ| ತೊಡಿಕಾನ ದೇವಾಲಯದಲ್ಲೊಂದು ಪ್ರಕೃತಿಯ ಅಚ್ಚರಿ| Read More »

ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಗುಜರಾತ್ ಹೈಕೋರ್ಟ್ ಮು.ನ್ಯಾ. ಸ್ಥಾನಕ್ಕೆ ಶಿಫಾರಸು

ನವದೆಹಲಿ: ಸುಪ್ರೀಂಕೋರ್ಟ್ ಕೊಲಿಜಿಯಂ 8 ಹೈಕೋಟ್‍ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಹೆಸರುಗಳನ್ನು ಶಿಫಾರಸು ಮಾಲಾಗಿದ್ದು, ಈ ಪಟ್ಟಿಯಲ್ಲಿ ರಾಜ್ಯ ಹೈಕೋಟ್‍ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗರಾದ ನ್ಯಾ. ಅರವಿಂದ್ ಕುಮಾರ್ ಹೆಸರು ಕೂಡ ಇದ್ದು ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಸೆಪ್ಟೆಂಬರ್ 16 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೀಗ ಗುಜರಾತ್ ಹೈಕೋರ್ಟ್ ಮುಖ್ಯ ನಾಯಮೂರ್ತಿ ಸ್ಥಾನಕ್ಕೆ

ಕನ್ನಡಿಗ ನ್ಯಾ.ಅರವಿಂದ್ ಕುಮಾರ್ ಹೆಸರು ಗುಜರಾತ್ ಹೈಕೋರ್ಟ್ ಮು.ನ್ಯಾ. ಸ್ಥಾನಕ್ಕೆ ಶಿಫಾರಸು Read More »