ಹೆದ್ದಾರಿಯಲ್ಲೇ ಗಜಪ್ರಸವ| ಮುದ್ದಾದ ಮರಿಗೆ ಜನ್ಮನೀಡಿ ಕಾಡುಸೇರಿದ ತಾಯಿಮಗು

ಸಮಗ್ರ ನ್ಯೂಸ್: ತಮಿಳುನಾಡು-ಕೇರಳ ಸಂಪರ್ಕಿಸುವ ವಾಹನ ದಟ್ಟಣೆಯ ಮಾರಾಯೂರ್ ಹೆದ್ದಾರಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.

. Ad Widget . Ad Widget . Ad Widget .

ಇದರಿಂದ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಾರಾಯೂರ್-ಇಡುಕ್ಕಿ ಹೆದ್ದಾರಿ ಬಂದ್ ಆಗಿತ್ತು. ತುಂಬು ಗರ್ಭಿಣಿಯಾಗಿದ್ದ ಆನೆ ಹೆರಿಗೆ ಬೇನೆ ತಾಳಲಾರದೇ ರಸ್ತೆಗೆ ಬಂದಿದೆ. ಕಡೆಗೆ ಅಲ್ಲಿಯೇ ಮುದ್ದಾದ ಮರಿಗೆ ಜನ್ಮ ನೀಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಎರಡು ಬದಿಯಲ್ಲೂ ನಿಂತಿದ್ದ ವಾಹನ ಸವಾರರು ಗಜಪ್ರಸವಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಆನೆ ತನ್ನ ಮರಿಯೊಂದಿಗೆ ಕಾಡಿನೊಳಗೆ ಹೋಗಿದೆ ಎಂದು ಇಡುಕ್ಕಿ ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಜಪ್ರಸವಕ್ಕೆ ಸಂಬಂಧಿಸಿದ ವಿಡಿಯೊಗಳು ಸ್ಥಳೀಯ ಮಾಧ್ಯಮಗಳಲ್ಲಿ ಬಿತ್ತರಗೊಂಡು ಗಮನ ಸೆಳೆದಿವೆ.

Leave a Comment

Your email address will not be published. Required fields are marked *