ಇಂಜಿನಿಯರ್ ಪದವೀದರರಿಗೆ ಉದ್ಯೋಗಾವಕಾಶ| ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಾಹಿತಿ

ಸಮಗ್ರ ನ್ಯೂಸ್: ಮಹಾರಾಷ್ಟ್ರ ಸ್ಟೇಟ್ ಎಲೆಕ್ಟ್ರಿಸಿಟಿ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ ನಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮೇ 24 ರವರೆಗೆ ಅಧಿಕೃತ ವೆಬ್‌ಸೈಟ್ (mahatransco.in)ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Ad Widget ... .. Ad Widget .

ಈ ನೇಮಕಾತಿ ಅಡಿಯಲ್ಲಿ ಸುಮಾರು 223 ಸಹಾಯಕ ಇಂಜಿನಿಯರ್ ಹುದ್ದೆಗಳನ್ನು ನೇಮಿಸಿಕೊಳ್ಳಲಾಗುವುದು. ಇದರಲ್ಲಿ ಪ್ರಸರಣ ವಿಭಾಗ, ದೂರಸಂಪರ್ಕ ಮತ್ತು ಇತರೆ ಹುದ್ದೆಗಳುನ್ನು ಒಳಗೊಂಡಿದೆ.

Ad Widget

ಹುದ್ದೆಗಳ ಮಾಹಿತಿ
ಸಹಾಯಕ ಇಂಜಿನಿಯರ್ (ಪ್ರಸರಣ) – 170
ಸಹಾಯಕ ಇಂಜಿನಿಯರ್ (ದೂರಸಂಪರ್ಕ) – 25
ಸಹಾಯಕ ಎಂಜಿನಿಯರ್ (ಸಿವಿಲ್) – 28

ಶೈಕ್ಷಣಿಕ ಅರ್ಹತೆ
ಅಸಿಸ್ಟೆಂಟ್ ಇಂಜಿನಿಯರ್ (ಪ್ರಸರಣ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಇಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು.

ಸಹಾಯಕ ಇಂಜಿನಿಯರ್ (ಟೆಲಿಕಮ್ಯುನಿಕೇಶನ್) ಅಭ್ಯರ್ಥಿಗಳು ಬಿಇ (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್) ಅಥವಾ ಬಿ.ಟೆಕ್ (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್) ಪದವಿ ಹೊಂದಿರಬೇಕು.

ಸಹಾಯಕ ಇಂಜಿನಿಯರ್ (ಸಿವಿಲ್) ಸಿವಿಲ್ ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳ ವಯಸ್ಸು 28 ವರ್ಷಕ್ಕಿಂತ ಹೆಚ್ಚಿರಬಾರದು.

ವೇತನದ ವಿವರ:
ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ 49,210 ರಿಂದ ರೂ 1,19,315 ರವರೆಗಿನ ವೇತನವನ್ನು ನೀಡಲಾಗುತ್ತದೆ.

ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24 ಮೇ 2022,
ಸಹಾಯಕ ಇಂಜಿನಿಯರ್ ಪರೀಕ್ಷೆಯ ದಿನಾಂಕ – ಜೂನ್ / ಜುಲೈ 2022

Leave a Comment

Your email address will not be published. Required fields are marked *