ರಾಜ್ಯ

ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿ ಪ್ರಕಟ| ಸುಳ್ಳು ಮಾಹಿತಿ ನೀಡಿದ್ರೆ ಅಸಲು ಬಡ್ಡಿ ವಾಪಾಸ್ ತಗೊಳ್ತಾರೆ ಹುಷಾರ್!!

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿ ಪ್ರಕಟವಾಗಿದ್ದು ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಕುಟುಂಬದ ಯಜಮಾನಿ ಎಂದು ಬಿಪಿಎಲ್, ಎಪಿಎಲ್ ಕಾರ್ಡ್ ನಲ್ಲಿ ನಮೂದಾಗಿರುವುದು ಕಡ್ಡಾಯವಾಗಿದೆ. ಕಾರ್ಡ್ ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ 2000 ರೂ. ನೀಡಲಾಗುವುದು. ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿದ್ದರೆ ಒಬ್ಬರಿಗೆ ಮಾತ್ರ ಹಣ ನೀಡಲಾಗುವುದು. ಯಜಮಾನಿ, ಪತಿ ಆದಾಯ ತೆರಿಗೆ ಪಾವತಿದಾರರು, ಯಜಮಾನಿ ಅಥವಾ ಯಜಮಾನ ಜಿಎಸ್‌ಟಿ ಪಾವತಿದಾರರಾಗಿದ್ದರೆ

ಗೃಹಲಕ್ಷ್ಮಿ ಯೋಜನೆ ಮಾರ್ಗಸೂಚಿ ಪ್ರಕಟ| ಸುಳ್ಳು ಮಾಹಿತಿ ನೀಡಿದ್ರೆ ಅಸಲು ಬಡ್ಡಿ ವಾಪಾಸ್ ತಗೊಳ್ತಾರೆ ಹುಷಾರ್!! Read More »

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್| ಸದ್ದಿಲ್ಲದೆ ಹೆಚ್ಚಳವಾಯ್ತು ಮದ್ಯದ ದರ!?

ಸಮಗ್ರ ನ್ಯೂಸ್: ಕೆಲವು ಉಚಿತಗಳನ್ನು ನೀಡಿ ಹಲವು ಸರಕುಗಳಿಗೆ ಬೆಲೆ ಏರಿಸಲಾಗಿದೆ ಎಂಬ ಆರೋಪದ ನಡುವೆಯೇ ಸದ್ದಿಲ್ಲದೆ ಮದ್ಯದ ದರಗಳನ್ನು ಕೂಡ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ. ಮದ್ಯಪ್ರಿಯರಿಗೆ ಶಾಕ್ ಎನ್ನುವಂತೆ ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್ ಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಮಾಹಿತಿಯ ಪ್ರಕಾರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನವೇ ಎಣ್ಣೆ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ‌

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್| ಸದ್ದಿಲ್ಲದೆ ಹೆಚ್ಚಳವಾಯ್ತು ಮದ್ಯದ ದರ!? Read More »

ಚಂಡಮಾರುತವಾಗಿ ರೂಪುಗೊಂಡ ವಾಯುಭಾರ ಕುಸಿತ| ಕರ್ನಾಟಕದ ಕರಾವಳಿಗೆ ಹೈ ಅಲರ್ಟ್

ಸಮಗ್ರ ನ್ಯೂಸ್: ಅರಬ್ಬೀ ಸಮುದ್ರದಲ್ಲಿ ಕಳೆದ ಕೆಲ ದಿನಗಳಿಂದ ಕುಸಿತಗೊಂಡಿರುವ ವಾಯುಭಾರವು ಸದ್ಯ ಚಂಡಮಾರುತವಾಗಿ ರೂಪುಗೊಂಡಿದೆ. ಮುಂದಿನ 24 ಗಂಟೆಗಳ ಕಾಲ ಇದೇ ರೀತಿಯಲ್ಲಿ ಹವಾಮಾನ ಮುಂದುವರಿದರೆ ಕರಾವಳಿಗೆ ಬಿಪೋರ್ಜಾಯ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಚಂಡಮಾರುತದಿಂದ ಮುಂಗಾರು ಮಳೆ ರಾಜ್ಯಕ್ಕೆ ಆಗಮಿಸುವುದು ಮತ್ತಷ್ಟು ವಿಳಂಬವಾಗಲಿದೆ. ಮುಂದಿನ 24 ಗಂಟೆಯಲ್ಲಿ ಚಂಡಮಾರುತ ಅಪ್ಪಳಿಸಲಿದ್ದು, ಇದರಿಂದ ದಕ್ಷಿಣ ಭಾರತದ ಪಶ್ಚಿಮ ತೀರಗಳು ಅಪಾಯವನ್ನು ಎದುರಿಸಲಿವೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಪ್ರಸ್ತುತ ಉತ್ತರದತ್ತ ಮುಖ ಮಾಡಿರುವ ಚಂಡಮಾರುತದಿಂದ ನಾಳೆಯಿಂದ

ಚಂಡಮಾರುತವಾಗಿ ರೂಪುಗೊಂಡ ವಾಯುಭಾರ ಕುಸಿತ| ಕರ್ನಾಟಕದ ಕರಾವಳಿಗೆ ಹೈ ಅಲರ್ಟ್ Read More »

ಜೂ.30: ವಿಧಾನಪರಿಷತ್ ನ ಮೂರು ಸ್ಥಾನಗಳಿಗೆ ಉಪ ಚುನಾವಣೆ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನ ಪರಿಷತ್ ಸದಸ್ಯರ‌ ತೆರವಾಗುವ ಮೂರು ಸ್ಥಾನಗಳಿಗೆ ಉಪ ಚುನಾವಣೆಯು ಜೂನ್ 30 ರಂದು ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಜೂನ್‌ನಲ್ಲಿ ಮೂವರು ಸದಸ್ಯರ ಅಧಿಕಾರಾವಧಿ ಕೊನೆಗೊಳ್ಳುವ ಕಾರಣ ಉಪಚುನಾವಣೆ ಅನಿವಾರ್ಯವಾಗಿತ್ತು. ಶಾಸಕರಾದ ಸವದಿ ಲಕ್ಷ್ಮಣ್ ಮತ್ತು ಬಾಬುರಾವ್ ಚಿಂಚನಸೂರ್ ಅವರ ಅವಧಿ ಕ್ರಮವಾಗಿ ಜೂನ್ 14 ಮತ್ತು ಜೂನ್ 17 ರಂದು ಕೊನೆಗೊಂಡರೆ, ಆರ್. ಶಂಕರ್ ಅವರ ಅವಧಿ ಜೂನ್ 30 ರಂದು ಕೊನೆಗೊಳ್ಳಲಿದೆ. ಉಪಚುನಾವಣೆಯ ವೇಳಾಪಟ್ಟಿ

ಜೂ.30: ವಿಧಾನಪರಿಷತ್ ನ ಮೂರು ಸ್ಥಾನಗಳಿಗೆ ಉಪ ಚುನಾವಣೆ Read More »

ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ ₹30 ಕೋಟಿ ನೀಡಿದ್ರಾ ವಿರಾಟ್ ಕೊಹ್ಲಿ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮೆಸೇಜ್ ನ ಅಸಲಿಯತ್ತೇನು?

ಸಮಗ್ರ ನ್ಯೂಸ್: ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರು 30 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಷ್ಟೇ ಅಲ್ಲದೆ, ಅನೇಕ ಮೊಬೈಲ್​ ವಾಟ್ಸ್​ಆಯಪ್​​ ಸ್ಟೇಟಸ್​ಗಳಲ್ಲಿ ಮೋದಿ ಅವರನ್ನು ಕೊಂಡಾಡುತ್ತಿದ್ದಾರೆ. ಆದರೆ, ಈ ಸುದ್ದಿ ಸುಳ್ಳು ಎಂದು ಫ್ರೀ ಪ್ರೆಸ್​ ಜರ್ನಲ್​ ವರದಿ ಮಾಡಿದೆ. ಕೊಹ್ಲಿ ಯಾವುದೇ ನೆರವು ಘೋಷಣೆ ಮಾಡಿಲ್ಲ. ಬದಲಾಗಿ ಅವರು ರೈಲು ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ

ಒಡಿಶಾ ರೈಲು ದುರಂತದ ಸಂತ್ರಸ್ತರಿಗಾಗಿ ₹30 ಕೋಟಿ ನೀಡಿದ್ರಾ ವಿರಾಟ್ ಕೊಹ್ಲಿ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮೆಸೇಜ್ ನ ಅಸಲಿಯತ್ತೇನು? Read More »

‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಈ ವಾರ ಕನಕಪುರ ಬಂಡೆ ಡಿ.ಕೆ ಶಿವಕುಮಾರ್| ಕುತೂಹಲ ಮೂಡಿಸಿದ ಪ್ರೋಮೋ

ಸಮಗ್ರ ನ್ಯೂಸ್: ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಈ ವಾರ ಉಪಮುಖ್ಯಮಂತ್ರಿ, ಕಾಂಗ್ರೆಸ್ ನ ಪ್ರಮುಖ ನಾಯಕ ಡಿಕೆ ಶಿವಕುಮಾರ್ ಅತಿಥಿಯಾಗಿದ್ದಾರೆ. ಇದರೊಂದಿಗೆ ಈ ಕಾರ್ಯಕ್ರಮದ ಸೀಸನ್ ಕೊನೆಯಾಗಲಿದೆ. ಈ ಬಗ್ಗೆ ಈಗ ವಾಹಿನಿಯೇ ಅಧಿಕೃತವಾಗಿ ಪ್ರೋಮೋ ಹರಿಯಬಿಟ್ಟಿದೆ. ಡಿಕೆಶಿ ಕಳೆದ ವಾರವೇ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಪೂರ್ವನಿರ್ಧರಿತ ಕಾರ್ಯಕ್ರಮಗಳಿಂದಾಗಿ ಚಿತ್ರೀಕರಣ ಸಾಧ‍್ಯವಾಗಿರಲಿಲ್ಲ. ಹೀಗಾಗಿ ಕಳೆದ ವಾರ ಶೋ ರದ್ದಾಗಿತ್ತು. ಆದರೆ ಈಗ ಡಿಕೆಶಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಇದೇ ವಾರದ ಅಂತ್ಯಕ್ಕೆ

‘ವೀಕೆಂಡ್ ವಿತ್ ರಮೇಶ್’ ಶೋನಲ್ಲಿ ಈ ವಾರ ಕನಕಪುರ ಬಂಡೆ ಡಿ.ಕೆ ಶಿವಕುಮಾರ್| ಕುತೂಹಲ ಮೂಡಿಸಿದ ಪ್ರೋಮೋ Read More »

ಸ್ಲೀಪರ್ ಕೋಚ್ ಬಸ್‍ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು

ಸಮಗ್ರ ನ್ಯೂಸ್: ಸ್ಲೀಪರ್ ಕೋಚ್ ಬಸ್ ನಲ್ಲಿ ವಿಷ ಕುಡಿದು ಪ್ರೇಮಿಗಳು ಮಲಗಿದ್ದು, ಯುವತಿ ಮೃತಪಟ್ಟ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ. ಹೇಮಾ ರಾಮಕೃಷ್ಣಪ್ಪ (20) ಮೃತಪಟ್ಟ ಯುವತಿ. ಆದರೆ ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಘಟನೆ ವಿವರ: ಬಿ.ಕಾಂ ಫೈನಲ್ ಇಯರ್ ವಿದ್ಯಾರ್ಥಿನಿಯಾಗಿದ್ದ ಬೆಂಗಳೂರು ಮೂಲದ ಹೇಮಾಳಿಗೆ ಬಾಗಲಕೋಟೆ ಮೂಲದ ಅಖಿಲ್ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ

ಸ್ಲೀಪರ್ ಕೋಚ್ ಬಸ್‍ನಲ್ಲಿ ವಿಷ ಕುಡಿದು ಮಲಗಿದ ಪ್ರೇಮಿಗಳು Read More »

ಬೆಂಗಳೂರು: ಪ್ರವಾಸಿ ತಾಣಗಳ ಮಾಹಿತಿ ಪಡೆದು ಮನೆ ಬಿಟ್ಟ ಯುವಕ|ಕರಾವಳಿ ಭಾಗದಲ್ಲಿ ಮಗನಿಗಾಗಿ ಪೋಷಕರ ಹುಡುಕಾಟ

ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್ ನ 9ನೇ ತರಗತಿ ಓದುತ್ತಿದ್ದ ಆದಿತ್ಯಾ ಎಂಬ ಬಾತಾಯಕೆಲಮದಿನಗಳಿಂದ ನಾಪತ್ತೆಯಾಗಿದ್ದು ಇದೀಗ ಆತನ ಮನೆಯವ್ರು ಹುಡುಕುತ್ತಾ ಕರಾವಳಿಯ ಮಲ್ಪೆಗೆ ಬಂದಿದ್ದಾರೆ. ತನ್ನ ತಾಯಿಯ ಮೊಬೈಲ್​ನಲ್ಲಿ ಕೆಲವು ಪ್ರವಾಸಿ ತಾಣಗಳ ಬಗ್ಗೆ ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿ ಬ್ಯಾಗ್​ನಲ್ಲಿ ಬಟ್ಟೆ ತುಂಬಿಕೊಂಡು ಮನೆ ಬಿಟ್ಟಿದ್ದು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿತ್ಯಾ ಅಮ್ಮನ ಫೋನ್​ನಲ್ಲಿ ಮಂಗಳೂರು, ಮಲ್ಪೆ, ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿ

ಬೆಂಗಳೂರು: ಪ್ರವಾಸಿ ತಾಣಗಳ ಮಾಹಿತಿ ಪಡೆದು ಮನೆ ಬಿಟ್ಟ ಯುವಕ|ಕರಾವಳಿ ಭಾಗದಲ್ಲಿ ಮಗನಿಗಾಗಿ ಪೋಷಕರ ಹುಡುಕಾಟ Read More »

ಚಿಕ್ಕಮಗಳೂರು : ಮಹಿಳೆ ಮೇಲೆ ಹುಲಿ ದಾಳಿ

ಸಮಗ್ರ ನ್ಯೂಸ್: ಕಾಫಿತೋಟದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಪಂಡರವಳ್ಳಿಯ ನಡೆದಿದೆ. ಅಸ್ಸಾಂ ಮೂಲದ ಕಾರ್ಗಂಭೀರವಾಗಿಯಾಗಿದ್ದು ಹುಲಿ ದಾಳಿಯಿಂದ ಹಣೆ ಮತ್ತು ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ 8 ವರ್ಷದ ಹಿಂದೆ ಪಂಡರವಳ್ಳಿಯಲ್ಲಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದರು ಇದೀಗ ಮತ್ತೆ ಹುಲಿ ದಾಳಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

ಚಿಕ್ಕಮಗಳೂರು : ಮಹಿಳೆ ಮೇಲೆ ಹುಲಿ ದಾಳಿ Read More »

ಮೂಲ್ಕಿ: ಉರುಳಿಗೆ ಬಿದ್ದ ಚಿರತೆ ನರಳಿ ಸಾವು

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿಯ ಗುಡ್ಡೆಯಲ್ಲಿ ಉರುಳಿಗೆ ಸಿಕ್ಕಿ ಚಿರತೆಯು ಒದ್ದಾಡಿ ಸಾವನ್ನಪ್ಪಿದೆ. ಇಲ್ಲಿನ ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲಾರದೆ ಸ್ಥಳೀಯರು ಇಟ್ಟಿದ್ದ ಉರುಳಿಗೆ ಆಹಾರ ಹುಡುಕಿ ಬಂದಿದ್ದ ಚಿರತೆ ರಾತ್ರಿ ಹೊತ್ತು ಬಿದ್ದಿರುವುದು ಬೆಳಕಿನ. ಮುಂಜಾನೆ ಹೊತ್ತಿಗೆ ಆಸು-ಪಾಸಿನ ಮನೆಯವರು ಗುಡ್ಡೆಯಲ್ಲಿ ನಾಯಿ ಬೊಗಳುವ ಶಬ್ದವನ್ನು ಕೇಳಿ ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು

ಮೂಲ್ಕಿ: ಉರುಳಿಗೆ ಬಿದ್ದ ಚಿರತೆ ನರಳಿ ಸಾವು Read More »