ಮೂಲ್ಕಿ: ಉರುಳಿಗೆ ಬಿದ್ದ ಚಿರತೆ ನರಳಿ ಸಾವು

ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳೆಪಾಡಿ ಮಿತ್ತಬೆಟ್ಟು ಬಳಿಯ ಗುಡ್ಡೆಯಲ್ಲಿ ಉರುಳಿಗೆ ಸಿಕ್ಕಿ ಚಿರತೆಯು ಒದ್ದಾಡಿ ಸಾವನ್ನಪ್ಪಿದೆ.

Ad Widget ... .. Ad Widget .

ಇಲ್ಲಿನ ಉಳೆಪಾಡಿ ಮಿತ್ತಬೆಟ್ಟು ಬಳಿ ಗುಡ್ಡೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲಾರದೆ ಸ್ಥಳೀಯರು ಇಟ್ಟಿದ್ದ ಉರುಳಿಗೆ ಆಹಾರ ಹುಡುಕಿ ಬಂದಿದ್ದ ಚಿರತೆ ರಾತ್ರಿ ಹೊತ್ತು ಬಿದ್ದಿರುವುದು ಬೆಳಕಿನ. ಮುಂಜಾನೆ ಹೊತ್ತಿಗೆ ಆಸು-ಪಾಸಿನ ಮನೆಯವರು ಗುಡ್ಡೆಯಲ್ಲಿ ನಾಯಿ ಬೊಗಳುವ ಶಬ್ದವನ್ನು ಕೇಳಿ ಭಯಭೀತರಾಗಿ ಸ್ಥಳಕ್ಕೆ ಧಾವಿಸಿದಾಗ ಉರುಳಿಗೆ ಚಿರತೆ ಬಿದ್ದು ಒದ್ದಾಡುತ್ತಿರುವುದು ಕಂಡಿದ್ದಾರೆ.

Ad Widget

ಒದ್ದಾಡಿ ನರಳಿದ ಚಿರತೆ ಸ್ಪಲ್ಪ ಸಮಯದಲ್ಲೇ ಉಸಿರು ಬಿಟ್ಟಿದೆ. ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಚಿರತೆ ಶವವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Leave a Comment

Your email address will not be published. Required fields are marked *