ತೀವ್ರ ಸ್ವರೂಪ ಪಡೆದುಕೊಂಡ ‘ಬಿಫರ್ ಜಾಯ್’ ಚಂಡಮಾರುತ| ಕರಾವಳಿ ಪ್ರಕ್ಷುಬ್ದ; ಭಾರೀ ಗಾಳಿ ಮಳೆ ಸಾಧ್ಯತೆ| ಮುಂಗಾರು ಮಳೆಯಲ್ಲಿ ಉಂಟಾಗಲಿದೆ ವ್ಯತ್ಯಯ
ಸಮಗ್ರ ನ್ಯೂಸ್: ರಾಜ್ಯದ ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಸೋಮವಾರ ಉಂಟಾದ ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆಗೊಂಡಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಎದ್ದಿರುವ ಈ ಚಂಡಮಾರುತ ‘ಬಿಪೋರ್‌ಜಾಯ್’ ತೀವ್ರಗೊಂಡು ಉತ್ತರ ದಿಕ್ಕಿನತ್ತ ಗಂಟೆಗೆ 5ಕಿ.ಮೀ ವೇಗದಲ್ಲಿ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಚಂಡಮಾರುತವು ಗೋವಾದಿಂದ ನೈಋತ್ಯದಲ್ಲಿ 880ಕಿ.ಮೀ. ದೂರದಲ್ಲಿ, ಮುಂಬಯಿಯಿಂದ ನೈಋತ್ಯ ದಿಕ್ಕಿನಲ್ಲಿ 990 ಕಿ.ಮೀ., ಪೋರ್‌ಬಂದರಿನಿಂದ 1060 ಹಾಗೂ ಕರಾಚಿಯಿಂದ 1360ಕಿ.ಮೀ ದೂರದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ವರದಿ ತಿಳಿಸಿದೆ. ಮುಂದಿನ 12










