ರಾಜ್ಯ

ಆ ಊರಲ್ಲಿದೆ ಅವಳಿ ಮಕ್ಕಳ ಬಾವಿ| ಇಲ್ಲಿನ ನೀರು ಕುಡಿದರೆ ಅವಳಿ ಮಕ್ಕಳ ಜನನ ಪಕ್ಕಾ ಅಂತೆ!!

ಸಮಗ್ರ ನ್ಯೂಸ್: ಅನೇಕರು ಅವಳಿ ಮಕ್ಕಳು ಬೇಕು ಅಂತ ಆಸೆ ಪಡ್ತಾರೆ. ಆದರೆ ಎಲ್ಲರಿಗೂ ಅವಳಿ ಮಕ್ಕಳು ಆಗಲ್ಲ, ತುಂಬಾ ವಿರಳಾತೀ ವಿರಳ ಪ್ರಕರಣಗಳಲ್ಲಿ ಅವಳಿ ಮಕ್ಕಳು ಜನಿಸುತ್ತಾರೆ. ಆದರೆ ಕೆಲವೊಂದು ಗ್ರಾಮಗಳಲ್ಲಿ ಅವಳಿ ಮಕ್ಕಳು ತುಂಬಾ ಜನ ಇರ್ತಾರೆ. ಅದೇನು ಆ ಸ್ಥಳದ ಮಹಿಮೆಯೂ ಆ ಊರಿನ ಜೀವನಶೈಲಿಯೂ ವಾತಾವರಣವೋ ಗೊತ್ತಿಲ್ಲ. ಆದರೆ ಇಲ್ಲೊಂದು ಕಡೆ ಅವಳಿ ಮಕ್ಕಳನ್ನು ಪಡೆಯುವುದಕ್ಕಾಗಿಯೇ ಇರುವ ಬಾವಿಯೊಂದಿದೆ. ಹೌದು ಕೇಳುವುದಕ್ಕೆ ನಿಮಗಿದು ಅಚ್ಚರಿ ಅನಿಸಬಹುದು. ಆದರೆ ಆ ಊರಿನ ಜನ […]

ಆ ಊರಲ್ಲಿದೆ ಅವಳಿ ಮಕ್ಕಳ ಬಾವಿ| ಇಲ್ಲಿನ ನೀರು ಕುಡಿದರೆ ಅವಳಿ ಮಕ್ಕಳ ಜನನ ಪಕ್ಕಾ ಅಂತೆ!! Read More »

ಬೆಳ್ತಂಗಡಿ: ಜಿಪಿಆರ್ ಬಳಸಿ ಧರ್ಮಸ್ಥಳದ 13ನೇ ಗುರುತಲ್ಲಿ ಶೋಧ ಶುರು

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೆಲದಡಿ ಮೃತದೇಹಗಳ ಅವಶೇಷ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ಶೋಧ ಕಾರ್ಯವನ್ನು ಮಂಗಳವಾರ ಆರಂಭಿಸಿತು. ಸಾಕ್ಷಿ ದೂರುದಾರ ತೋರಿಸಿದ್ದ 13ನೇ ಜಾಗದಲ್ಲಿ ಡ್ರೋನ್ ಮತ್ತು ಜಿಪಿಆರ್ ಬಳಸಿ ಸ್ಕ್ಯಾನ್ ಮಾಡಲಾಯಿತು. ರಾಡಾರ್ ಮೂಲಕ ಸಂಗ್ರಹಿಸಿರುವ ನೆಲದಡಿಯ ಚಿತ್ರಣಗಳನ್ನು ತಜ್ಞರು ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ. ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ, ಇದುವರೆಗೆ

ಬೆಳ್ತಂಗಡಿ: ಜಿಪಿಆರ್ ಬಳಸಿ ಧರ್ಮಸ್ಥಳದ 13ನೇ ಗುರುತಲ್ಲಿ ಶೋಧ ಶುರು Read More »

ದಕ್ಷಿಣ ಕನ್ನಡಕ್ಕೂ ಆನೆ ಕಾರ್ಯಪಡೆ – ಸಚಿವ ಖಂಡ್ರೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆನೆಗಳ ಹಾವಳಿ ಹೆಚ್ಚಾಗಿದ್ದು, ಸರಕಾರ ಮಂಗಳೂರು ಅರಣ್ಯ ವಿಭಾಗದಲ್ಲೂ “ಆನೆ ಕಾರ್ಯ ಪಡೆ’ ಮಂಜೂರು ಮಾಡಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್‌ ಖಂಡ್ರೆ ಹೇಳಿದರು. ಸದನದ ಗಮನ ಸೆಳೆದ ಕಾಂಗ್ರೆಸ್‌ನ ಐವನ್‌ ಡಿ’ ಸೋಜಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗದಲ್ಲಿ ಆನೆಗಳ ಸಂಘರ್ಷ ತಡೆಯಲು ಸರಕಾರ ಎಲಿಫೆಂಟ್‌ ಟಾಸ್ಕ್ಫೋರ್ಸ್‌ ರಚಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಚಿವ

ದಕ್ಷಿಣ ಕನ್ನಡಕ್ಕೂ ಆನೆ ಕಾರ್ಯಪಡೆ – ಸಚಿವ ಖಂಡ್ರೆ Read More »

ಧರ್ಮಸ್ಥಳ ಪ್ರಕರಣ| ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ

ಸಮಗ್ರ ನ್ಯೂಸ್: ಧರ್ಮಸ್ಥಳ ಪ್ರಕರಣದಲ್ಲಿ SIT ತನಿಖೆ ಶುರುವಾದ ಬಳಿಕ ದಿನಕ್ಕೊಂದು ರೋಚಕ ಟ್ವಿಸ್ಟ್‌ ಎದುರಾಗುತ್ತಿದೆ. ಇದೀಗ ಕೋಡಿಶ್ರೀಗಳು‌ ‌ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ಸಮಾಚಾರ, ಪ್ರಚಾರ, ವಿಚಾರ, ಅಪಪ್ರಚಾರ – ಇವುಗಳಲ್ಲಿ ಅಪಪ್ರಚಾರವೇ ಪ್ರಬಲವಾಗಿದೆ ಎಂದಿದ್ದಾರೆ ದುರ್ದೈವ ಅಂದ್ರೆ ಅಪಪ್ರಚಾರ ಕೊನೆಗೆ ಬರಬೇಕು. ಆದರೆ ಇಂದು ಅಪಪ್ರಚಾರವೇ ಮೊದಲಿಗೆ ಬಂದಿದೆ. ಸತ್ಯ ಹೊರಬರಲು ಕಾಲಾವಕಾಶ ಬೇಕು ಎಂದು ಕೋಡಿಶ್ರೀ ಹೇಳಿದ್ದಾರೆ. ಅಳಕು ಹೃದಯದವನಿಗೆ ಅಪಪ್ರಚಾರವೇ ಆಯುಧ. ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯ ಬೇಕು.

ಧರ್ಮಸ್ಥಳ ಪ್ರಕರಣ| ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ Read More »

ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ

ಸಮಗ್ರ ನ್ಯೂಸ್: ದಿಢೀರ್ ಬೆಳವಣಿಗೆ ಎನ್ನುವಂತೆ ಸಚಿವ ಸ್ಥಾನಕ್ಕೆ ಸಚಿವ ಕೆಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ. ಸಹಕಾರಿ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಜಣ್ಣ, ಈ ಹಿಂದೆ ಭಾರತದ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ ನಿರ್ದೇಶಕರಾಗಿ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಣ್ಣ 1972 ರಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕ್ಯಾತಸಂದ್ರ

ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ Read More »

ಚಾರ್ಮಾಡಿ ಘಾಟಿಯಲ್ಲಿ KSRTC ಬಸ್–ಕಾರು ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಬಿದಿರುತಳ ಬಳಿ ಆ.10 ರಂದು KSRTC ಬಸ್ ಮತ್ತು ಕಾರಿನ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ನಾಲ್ವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KSRTC ಬಸ್ ಹಾಗೂ ಚಿಕ್ಕನಾಯಕನ ಹಳ್ಳಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಘಾಟಿಯ ತಿರುವಿನಲ್ಲಿ ಅಪಘಾತ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರುಬೇಟಿನೀಡಿದ್ದು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಾರ್ಮಾಡಿ ಘಾಟಿಯಲ್ಲಿ KSRTC ಬಸ್–ಕಾರು ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ Read More »

ಧರ್ಮಸ್ಥಳ: ಪದ್ಮಲತಾ ಕೊಲೆ‌ ಪ್ರಕರಣ| ಮರು ತನಿಖೆಗೆ ಒತ್ತಾಯಿಸಿ ಸಹೋದರಿಯಿಂದ ಎಸ್ಐಟಿ ಗೆ ದೂರು

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ 39 ವರ್ಷಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಪದ್ಮಲತಾ ಅವರ ಕಳೇಬರವನ್ನು ಹೊರತೆಗೆದು ಮರು ತನಿಖೆ ಮಾಡಿ, ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಕೋರಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಪದ್ಮಲತಾ ಅವರ ಅಕ್ಕ ಇಂದ್ರಾವತಿ ದೂರು ನೀಡಿದ್ದಾರೆ. ಸೋಮವಾರ (ಆ.11) ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ ಇಂದ್ರಾವತಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಏನಿದೆ?“ನಾನು ಪ್ರಸ್ತುತ ನೆಲ್ಯಾಡಿ ನಿವಾಸಿಯಾಗಿದ್ದು, ದಿವಂಗತ ದೇವಾನಂದ ಅವರ ಮಗಳು. ಕೊಲೆಗೀಡಾದ ಪದ್ಮಲತಾಳ ಅಕ್ಕನಾಗಿರುತ್ತೇನೆ. 38 ವರ್ಷಗಳ ಹಿಂದೆ ಎಸ್‌ಡಿಎಂ

ಧರ್ಮಸ್ಥಳ: ಪದ್ಮಲತಾ ಕೊಲೆ‌ ಪ್ರಕರಣ| ಮರು ತನಿಖೆಗೆ ಒತ್ತಾಯಿಸಿ ಸಹೋದರಿಯಿಂದ ಎಸ್ಐಟಿ ಗೆ ದೂರು Read More »

ಹಳದಿ ಮಾರ್ಗದ ಮೆಟ್ರೋ ಸಂಚಾರ ಆ.11 ರಿಂದ ಆರಂಭ |ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ

ಸಮಗ್ರ ನ್ಯೂಸ್: ಬೆಂಗಳೂರಿನ ಆರ್ವಿ ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯು ಇಂದಿನಿಂದ (ಆ.11 )ಬೆಳಿಗ್ಗೆಯಿಂದ ಪ್ರಾರಂಭವಾಗಿದೆ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ಇಂದು ಬೆಳಗ್ಗೆಯಿಂದ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದ್ದು. ಹಳದಿ ಮಾರ್ಗದಲ್ಲಿನ ನಮ್ಮ ಮೆಟ್ರೋ ರೈಲು ಸಂಚಾರದ ವೇಳಾಪಟ್ಟಿ ಈ ಕೆಳಗಿನಂತಿದೆ. ಸೋಮವಾರದಿಂದ ಶನಿವಾರದವರೆಗೆ, ವಾರದ ಎಲ್ಲಾ ದಿನಗಳಲ್ಲಿ, ಆರ್.ವಿ. ರಸ್ತೆ ಮತ್ತು ಡೆಲ್ಮಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಬೆಳಿಗ್ಗೆ 6.30

ಹಳದಿ ಮಾರ್ಗದ ಮೆಟ್ರೋ ಸಂಚಾರ ಆ.11 ರಿಂದ ಆರಂಭ |ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ Read More »

ಧರ್ಮಸ್ಥಳ: ಪಾಂಗಾಳ ಕ್ರಾಸ್ ನಲ್ಲಿ‌ ಗಲಾಟೆ ಮಾಡಿ‌ ಅರೆಸ್ಟ್ ಆದ 6 ಮಂದಿಗೆ ಜಾಮೀನು

ಸಮಗ್ರ ನ್ಯೂಸ್: ಆಗಸ್ಟ್ 6 ರಂದು ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್‌ನಲ್ಲಿ ನಡೆದ ಗಲಾಟೆ ಮಾಡಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಅವರಿಗೆ ನ್ಯಾಯಾಲಯ ಮದ್ಯಂತರ ಜಾಮೀನು ನೀಡಿದೆ. ಧರ್ಮಸ್ಥಳದಲ್ಲಿ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ ಪ್ರಕರಣ ಬಳಿಕ 7.15ರ ಸುಮಾರಿಗೆ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಬಳಗ ಮತ್ತು ಧರ್ಮಸ್ಥಳ ಭಕ್ತರ ಗುಂಪಿನ ನಡುವೆ ಅಕ್ರಮ ಕೂಟ ಸೇರಿ ಗಲಾಟೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ 6 ಮಂದಿಯನ್ನು

ಧರ್ಮಸ್ಥಳ: ಪಾಂಗಾಳ ಕ್ರಾಸ್ ನಲ್ಲಿ‌ ಗಲಾಟೆ ಮಾಡಿ‌ ಅರೆಸ್ಟ್ ಆದ 6 ಮಂದಿಗೆ ಜಾಮೀನು Read More »

ಸಹಕಾರ ಸಂಘಗಳ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ನಿಗದಿ – ಸಚಿವ ಕೆ.ಎನ್ ರಾಜಣ್ಣ

ಸಮಗ್ರ ನ್ಯೂಸ್: ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸರ್ಕಾರದ ಸೌಲಭ್ಯ ಪಡೆಯುವ ಸಹಕಾರಿ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ಜಾರಿಗೆ ತರಲು ಮಸೂದೆ ರೂಪಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ರಾಜಣ್ಣ 75ನೇ ಜನ್ಮದಿನಾಚರಣೆ ಅಂಗವಾಗಿ ಹೊರ ತರಲಾಗಿದ್ದ ‘ಸಹಕಾರ ಸಾರ್ವಭೌಮ’ ಕೃತಿಗೆ ಬರಹಗಳನ್ನು ನೀಡಿದ ಲೇಖಕರಿಗೆ ನಗರದ ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸಹಕಾರಿ ಸೌಲಭ್ಯ

ಸಹಕಾರ ಸಂಘಗಳ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ ನಿಗದಿ – ಸಚಿವ ಕೆ.ಎನ್ ರಾಜಣ್ಣ Read More »