ಗುಂಡ್ಯದಲ್ಲಿ‌ ಕಾರು ಅಪಘಾತ| ಎಲಿಮಲೆಯ ಯುವಕ‌ ಚಿಕಿತ್ಸೆ ಫಲಿಸದೇ ಸಾವು

ಸಮಗ್ರ ನ್ಯೂಸ್: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲಿಮಲೆಯ ಯುವಕ ಕಿಶನ್ ಮಾವಿನಕಟ್ಟೆ ಇಂದು ನಿಧನರಾಗಿದ್ದಾರೆ.

. Ad Widget . Ad Widget

ಎಲಿಮಲೆ ನಿವಾಸಿಯಾಗಿದ್ದ ಕಿಶನ್ ಹಾಗೂ ಹರ್ಷಿತ್ ಪ್ರಯಾಣಿಸುತ್ತಿದ್ದ ಕಾರು ಗುಂಡ್ಯ ಸಮೀಪ ಲಾರಿಯೊಂದಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಇಬ್ಬರೂ ಯುವಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

. Ad Widget . . Ad Widget . Ad Widget

ಕಳೆದ ಎರಡು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಕಿಶನ್, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯೆಸಿರೆಳೆದಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಎಲಿಮಲೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಶೋಕಮೂಡಿದ್ದು, ಯುವಕನ ಅಕಾಲಿಕ ಮರಣಕ್ಕೆ ಸ್ನೇಹಿತರು ಹಾಗೂ ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *