ದಕ್ಷಿಣ ಕನ್ನಡಕ್ಕೂ ಆನೆ ಕಾರ್ಯಪಡೆ – ಸಚಿವ ಖಂಡ್ರೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆನೆಗಳ ಹಾವಳಿ ಹೆಚ್ಚಾಗಿದ್ದು, ಸರಕಾರ ಮಂಗಳೂರು ಅರಣ್ಯ ವಿಭಾಗದಲ್ಲೂ “ಆನೆ ಕಾರ್ಯ ಪಡೆ’ ಮಂಜೂರು ಮಾಡಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

Ad Widget ... .. Ad Widget .

ಸದನದ ಗಮನ ಸೆಳೆದ ಕಾಂಗ್ರೆಸ್‌ನ ಐವನ್‌ ಡಿ’ ಸೋಜಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗದಲ್ಲಿ ಆನೆಗಳ ಸಂಘರ್ಷ ತಡೆಯಲು ಸರಕಾರ ಎಲಿಫೆಂಟ್‌ ಟಾಸ್ಕ್ಫೋರ್ಸ್‌ ರಚಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

Ad Widget

ಈ ವೇಳೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ರಾಜ್ಯದ ಮಾನವ ಆನೆ ಸಂಘರ್ಷ ಅತಿ ಹೆಚ್ಚಾಗಿರುವ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಕೂಡಗು, ಹುಣಸೂರು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ಹಾಗೂ ಬಂಡೀಪುರಗಳಲ್ಲಿ ಸರಕಾರದ ಆದೇಶದಂತೆ ಒಟ್ಟು 8 ಆನೆ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈಗ ಮಂಗಳೂರು ಭಾಗಕ್ಕೂ ಹೆಚ್ಚುವರಿಯಾಗಿ ಒಂದು ಆನೆ ಕಾರ್ಯಪಡೆಯನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು

Leave a Comment

Your email address will not be published. Required fields are marked *