ಕ್ರೈಂ

ಮಂಗಳೂರು‌ ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ| ನೇಪಾಳಿ ಸೈಬರ್ ಕ್ರೈಂ ಗ್ಯಾಂಗ್ ಬಂಧನ

ಸಮಗ್ರ ನ್ಯೂಸ್: ನೇಪಾಳದಲ್ಲಿದ್ದುಕೊಂಡು ಆನ್‌ಲೈನ್‌ ಹೂಡಿಕೆ ನೆಪದಲ್ಲಿ ಭಾರತೀಯರನ್ನು ಗುರಿಯಾಗಿಸಿ ವಂಚನೆ ನಡೆಸಿರುವ ತಂಡವನ್ನು ಭೇದಿಸಿರುವ ಇಲ್ಲಿನ ಸೆನ್‌ ಕ್ರೈಂ ಠಾಣೆಯ ಪೊಲೀಸರು ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಲ್ಯಾಪ್ ಟಾಪ್, ವಿವಿಧ ಕಂಪನಿಗಳ 21 ಮೊಬೈಲ್ ಪೋನ್‌ಗಳು, ವಿವಿಧ ಕಂಪನಿಗಳ 20 ಸಿಮ್ ಕಾರ್ಡ್‌ಗಳು, ಬೇರೆ ಬೇರೆ ಬ್ಯಾಂಕ್‌ಗಳ 20 ಡೆಬಿಟ್ ಕ್ರೆಡಿಟ್ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಇಲ್ಲಿ ಗುರುವಾರ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್‌ […]

ಮಂಗಳೂರು‌ ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ| ನೇಪಾಳಿ ಸೈಬರ್ ಕ್ರೈಂ ಗ್ಯಾಂಗ್ ಬಂಧನ Read More »

ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಎಲ್ಲವನ್ನೂ ಸಹಿಸಲಾಗದು – ಹೈಕೋರ್ಟ್| ಬೆಳ್ತಂಗಡಿಯ ‘ಭಜರಂಗಿ ಗೋಕಳ್ಳರು’ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ವಿರುದ್ಧ ಕಿಡಿ

ಸಮಗ್ರ ನ್ಯೂಸ್:  ‘ಭಜರಂಗಿ ಗೋ ಕಳ್ಳರು’ ಹೆಸರಿನಲ್ಲಿ ವಾಟ್ಸ್‌ ಆ್ಯಪ್ ಗ್ರೂಪ್‌ ರಚಿಸಿ ಅದರಲ್ಲಿ, ಹಿಂದೂ ದೇವತೆಗಳನ್ನು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಡಿಯ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ನಿರಾಕರಿಸಿರುವ ಹೈಕೋರ್ಟ್‌, ‘ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲವನ್ನೂ ಸಹಿಸಲಾಗುವುದಿಲ್ಲ’ ಎಂದು ಕಿಡಿ ಕಾರಿದೆ. ‘ನನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕುಪ್ಪೆಟ್ಟಿ ಕರಾಯ ಗ್ರಾಮದ ಸಿರಾಜುದ್ದೀನ್‌ ಬಿನ್‌ ಮೊಹಮದ್‌ ಇಸ್ಮಾಯಿಲ್‌ (30)

ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ಎಲ್ಲವನ್ನೂ ಸಹಿಸಲಾಗದು – ಹೈಕೋರ್ಟ್| ಬೆಳ್ತಂಗಡಿಯ ‘ಭಜರಂಗಿ ಗೋಕಳ್ಳರು’ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ವಿರುದ್ಧ ಕಿಡಿ Read More »

ಪುತ್ತೂರು: ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ನಡೆಯಲಿದೆ ಬೃಹತ್ ಹೋರಾಟ| ಫೆ.1ರಂದು ಸಮಾಲೋಚನಾ ಸಭೆ

ಸಮಗ್ರ ನ್ಯೂಸ್: ಜೂಜಿನ ನೆಪವೊಡ್ಡಿ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರು ಈ ಬಾರಿ ಯಾವುದೇ ಸಾಂಪ್ರದಾಯಿಕ ಕೋಳಿ ಅಂಕಗಳನ್ನು ನಡೆಸದಂತೆ ತಡೆದಿದ್ದು, ಇದೀಗ ಸಾಂಪ್ರದಾಯಿಕ ಕೋಳಿ ಅಂಕ ಉಳಿಸುವ ನಿಟ್ಟಿನಲ್ಲಿ ಹೋರಾಟಗಾರರು ಮುಂದಾಗಿದ್ದು, ಫೆಬ್ರವರಿ 1 ರಂದು ಪುತ್ತೂರಿನಲ್ಲಿ ಬೃಹತ್ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ. ದಕ್ಷಿಣಕನ್ನಡ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಕೋಳಿ ಅಂಕಕ್ಕೆ ತಡೆ ಒಡ್ಡುತ್ತಿರುವ ಸರಕಾರ ಮತ್ತು ಪೊಲೀಸ ಇಲಾಖೆ ವಿರುದ್ದ ಇದೀಗ ಹೋರಾಟಕ್ಕೆ ಮುಂದಾಗಿದೆ. ಈ ಹಿನ್ನಲೆ ಫೆಬ್ರವರಿ 1ರಂದು ಪುತ್ತೂರಿನಲ್ಲಿ ‘ಕೋಳಿ ಅಂಕ’ಕ್ಕಾಗಿ

ಪುತ್ತೂರು: ಸಾಂಪ್ರದಾಯಿಕ ಕೋಳಿ ಅಂಕಕ್ಕಾಗಿ ನಡೆಯಲಿದೆ ಬೃಹತ್ ಹೋರಾಟ| ಫೆ.1ರಂದು ಸಮಾಲೋಚನಾ ಸಭೆ Read More »

ಪದೇ ಪದೇ ಐಟಿ ದಾಳಿ| ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ| ಸಿ.ಜೆ ರಾಯ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಮೂಲದ ರಾವ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯ ಸಂಸ್ಥಾಪಕರಾಗಿದ್ದರು. ಇಂದು ಸಂಜೆ ಬೆಂಗಳೂರಿನ ಆನೇಪಾಳ್ಯದಲ್ಲಿರೋ ತಮ್ಮ ಕಚೇರಿಯಲ್ಲಿ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಪದೇ ಪದೇ ಐಟಿ ದಾಳಿ| ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ| ಸಿ.ಜೆ ರಾಯ್ ಆತ್ಮಹತ್ಯೆ Read More »

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್ ಪೆಕ್ಟರ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಭ್ರಷ್ಟ ಅಧಿಕಾರಿಗಳ ಭೇಟೆ ಮುಂದುವರಿಸಿರುವ ಕರ್ನಾಟಕ ಲೋಕಾಯುಕ್ತ ಪೊಲೀಸರು, ಇಂದು ಮತ್ತೊಬ್ಬ ಪೊಲೀಸ್ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ. ಠಾಣೆಗೆ ಬಂದ ದೂರುದಾರರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚೀಟಿ ವ್ಯವಹಾರಕ್ಕೆ (Chit Fund Business) ಸಂಬಂಧಿಸಿದ ಪ್ರಕರಣವೊಂದು ಠಾಣೆಯ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಇತ್ಯರ್ಥಪಡಿಸಲು ಅಥವಾ

ಲಂಚ ಪಡೆಯುತ್ತಿರುವಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಇನ್ಸ್ ಪೆಕ್ಟರ್ Read More »

ಮಡಿಕೇರಿ: ರಾಜಕಾರಣಿಗಳ ಪುತ್ರಿಯರು ಸೇರಿ ಹಲವರ ಜೊತೆ ಸರಸ| ಯುವಕನ ಕಾಮದಾಟದ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಯುವಕನೊಬ್ಬ ರಾಜಕಾರಣಿಗಳ ಪುತ್ರಿಯರು ಸೇರಿದಂತೆ ಹಲವು ಯುವತಿಯರೊಂದಿಗೆ ರಾಸಲೀಲೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಕೊಡಗು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕೊಡಗಿನ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಮೊಹಮ್ಮದ್ ಸವದ್ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಸವದ್ ಬೆಂಗಳೂರಿನ ಸಂಪಿಗೆಹಳ್ಳಿಯ ಯನಪೋಯ

ಮಡಿಕೇರಿ: ರಾಜಕಾರಣಿಗಳ ಪುತ್ರಿಯರು ಸೇರಿ ಹಲವರ ಜೊತೆ ಸರಸ| ಯುವಕನ ಕಾಮದಾಟದ ವಿಡಿಯೋ ವೈರಲ್ Read More »

ಕುಡಿದು ವಾಹನ ಚಲಾಯಿಸಿ ಸರಣಿ ಅಪಘಾತ| ನಟ ಮಯೂರ್ ಪಟೇಲ್ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ನಟ ಮಯೂರ್ ಪಟೇಲ್ ರಿಂದ ಸರಣಿ ಅಪಘಾತ ಸಂಭವಿಸಿದೆ. ಫಾರ್ಚೂನರ್ ಕಾರ್ ಚಲಾಯಿಸುತ್ತಿದ್ದ ನಟ ಮಯೂರ್ ಪಟೇಲ್ ಕುಡಿದ ಮತ್ತಿನಲ್ಲಿ ನಿಂತಿದ್ದ ಕಾರ್ ಗಳಿಗೆ ಡಿಕ್ಕಿ ಹೊಡೆಸಿದ್ದಾರೆ. ದೊಮ್ಮಲೂರು ಸಮೀಪ ಘಟನೆ ನಡೆದಿದ್ದು, ಮಯೂರ್ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬುವರ ಕಾರ್ ಗಳು ಮತ್ತು ಸರ್ಕಾರಿ ವಾಹನ ಜಖಂ ಆಗಿವೆ. ನಟ ಮಯೂರ್ ಪಟೇಲ್ ಕುಡಿದು ಅಪಘಾತ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸ್ ಕಂಟ್ರೋಲ್ ರೂಮ್ ಗೆ

ಕುಡಿದು ವಾಹನ ಚಲಾಯಿಸಿ ಸರಣಿ ಅಪಘಾತ| ನಟ ಮಯೂರ್ ಪಟೇಲ್ ಪೊಲೀಸ್ ವಶಕ್ಕೆ Read More »

ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ| ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ‌ ದುರ್ಮರಣ

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಖಾಸಗಿ ವಿಮಾನ ಪತನಗೊಂಡು, DCM ‘ಅಜಿತ್ ಪವಾರ್’ ಸೇರಿ 6 ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ.ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ (ಹೆಲಿಕಾಪ್ಟರ್) ಅಪಘಾತಕ್ಕೀಡಾಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಾರಾಮತಿ ಕ್ಷೇತ್ರದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಭಾರಿ ಪ್ರಮಾಣದ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಬೈನಿಂದ ವಿಮಾನ ಹಾರಿದ ಒಂದು

ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ| ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ‌ ದುರ್ಮರಣ Read More »

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ| ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಮಹಾರಾಷ್ಟ್ರ DCM ಅಜಿತ್ ಪವಾರ್ ಇದ್ದರು ಎಂದು ವರದಿಯಾಗಿದೆ. ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಅಜಿತ್ ಪವಾರ್ ಅವರ ವಿಮಾನವು ಭೀಕರ ಅಪಘಾತಕ್ಕೆ ಒಳಗಾಗಿದೆ. ಅವರು ಮುಂಬೈನಿಂದ ಬೆಳಿಗ್ಗೆ ಬಾರಾಮತಿಗೆ ಹೊರಟಿದ್ದರು. ಸಾಮಾನ್ಯವಾಗಿ ಮುಂಬೈನಿಂದ ಬಾರಾಮತಿಗೆ ಪ್ರಯಾಣ ಮಾಡುವಾಗ ಅವರು ಸಣ್ಣ ವಿಮಾನ ಬಳಸುತ್ತಾರೆ. ಅದೇ ರೀತಿ, ಇಂದು ಅಜಿತ್

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ| ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ Read More »

ಬೆಳಗಾವಿ: 400 ಕೋಟಿ ಹಣ ತುಂಬಿದ್ದ ಎರಡು ಕಂಟೈನರ್ ಲಾರಿಗಳು ನಾಪತ್ತೆ| ತಡವಾಗಿ ಬೆಳಕಿಗೆ ಬಂದ ದೇಶದ ಅತಿದೊಡ್ಡ ರಾಬರಿ

ಸಮಗ್ರ ನ್ಯೂಸ್: ಗೋವಾದಿಂದ ಮಹಾರಾಷ್ಟ್ರಕ್ಕೆ ₹400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನೇ ಹೈಜಾಕ್‌ ಮಾಡಿರುವ ದೇಶದ ಅತಿ ದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದೇಶದ ಅಪರಾಧದ ಇತಿಹಾಸದಲ್ಲೇ ಬೆಚ್ಚಿಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ಈ ಮೂರು ರಾಜ್ಯಗಳ ಪೊಲೀಸ್ ವ್ಯವಸ್ಥೆಯನ್ನೇ ಈ ಘಟನೆ ಅಲರ್ಟ್ ಮಾಡಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು ₹400 ಕೋಟಿ ನಗದು ತುಂಬಿದ್ದ ಎರಡು ಕಂಟೇನರ್‌ಗಳು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಹೈಜಾಕ್ ಆಗಿರುವುದು

ಬೆಳಗಾವಿ: 400 ಕೋಟಿ ಹಣ ತುಂಬಿದ್ದ ಎರಡು ಕಂಟೈನರ್ ಲಾರಿಗಳು ನಾಪತ್ತೆ| ತಡವಾಗಿ ಬೆಳಕಿಗೆ ಬಂದ ದೇಶದ ಅತಿದೊಡ್ಡ ರಾಬರಿ Read More »