ಕಲ್ಯಾಣ ಮಂಟಪದಲ್ಲಿ ಝಳಪಿಸಿದ ಲಾಂಗು ಮಚ್ಚು| ಮಸ್ತಿಗಾಗಿ ಡ್ಯಾನ್ಸ್ ಮಾಡಿದ ಮೂವರು ಅರೆಸ್ಟ್

ಸಮಗ್ರ ನ್ಯೂಸ್: ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಯುವಕರಿಬ್ಬರು ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಕಲಬುರಗಿಯ ಆದರ್ಶ ಕಲ್ಯಾಣ ಮಂಟಪದಲ್ಲಿ ನಡೆದಿದ್ದು, ವಿಡಿಯೊ ವೈರಲ್ ಬೆನ್ನಲ್ಲೇ ‌ಮೂವರು ಅರೆಸ್ಟ್ ಆಗಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget .

ಇತ್ತೀಚೆಗೆ ಅರಿಸಿನ ಶಾಸ್ತ್ರ ಸಮಾರಂಭದಲ್ಲಿ ರಾಜಕೀಯ ಮುಖಂಡರೊಬ್ಬರು ಕೈ‌ಯಲ್ಲಿ ಪಿಸ್ತೂಲ್‌ ಹಿಡಿದು ಕುಣಿದ ಪ್ರಕರಣ ಸದ್ದು ಮಾಡಿದ ಬೆನ್ನಲ್ಲೆ ಈ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇತ್ತೀಚೆಗೆ ತುಷಾರ್ ಎಂಬ ಯುವಕನ ಮದುವೆ ಇತ್ತು. ಆ ಸಮಾರಂಭದಲ್ಲಿ ಸಂಜಯ್ ಹಾಗೂ ರಾಜವರ್ಧನ್ ಎಂಬುವರು ತುಷಾರ್ ಎಂಬಾತನ ಪ್ರಚೋದನೆಯಿಂದ ಸಾರ್ವಜನಿಕರಿಗೆ ಭಯ-ಭೀತಿ ಹುಟ್ಟಿಸುವ ರೀತಿಯಲ್ಲಿ ಕೈಯಲ್ಲಿ ಹರಿತವಾದ ಚಾಕು ಮತ್ತು ತಲ್ವಾರ‌್ ಹಿಡಿದು ನೃತ್ಯ ಮಾಡುವ ದೃಶ್ಯ ವಿಡಿಯೊದಲ್ಲಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೆ ಅಶೋಕನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಬಸವನಗರದ ರಾಜವರ್ಧನ್ ಸಂಗವಾರ (31), ಸಂಜಯ ಗಾಯಕವಾಡ್ (23) ಹಾಗೂ ತುಷಾರ್ ಗಾಯಕವಾಡ್ (24) ಬಂಧಿತರು.

Leave a Comment

Your email address will not be published. Required fields are marked *