ಅಮೇರಿಕಾ – ಇರಾನ್ ನಡುವೆ ಸಂಘರ್ಷ| ಕಚ್ಚಾ ತೈಲ ದರ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ಜಾಗತಿಕ ಇಂಧನ ಸಾಗಣೆಯ ಅತ್ಯಂತ ಪ್ರಮುಖ ಕೊಂಡಿಯಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸುವ ಜಿದ್ದಾಜಿದ್ದಿನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿದೆ. ವಿರುದ್ಧ ಪರಸ್ಪರ ಭೀಕರ ದಾಳಿಗಳು ತೀವ್ರಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸೋಮವಾರ ಶೇಕಡಾ 4 ಕ್ಕಿಂತಲೂ ಹೆಚ್ಚು ಜಿಗಿತ ಕಂಡಿದೆ.

Ad Widget ... .. Ad Widget .

ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ಬ್ರೆಂಟ್ ಕಚ್ಚಾ ತೈಲದ ಸೆಪ್ಟೆಂಬರ್ ಡೆಲಿವರಿ ಭವಿಷ್ಯದ ವಹಿವಾಟು ದರವು ಸೋಮವಾರ ಮುಂಜಾನೆ (ಜಿಎಂಟಿ 03:00 ರ ವೇಳೆಗೆ) ಶೇ. 4 ಕ್ಕೂ ಹೆಚ್ಚು ಏರಿಕೆ ಕಂಡು ಬ್ಯಾರೆಲ್‌ಗೆ 79.17 ಡಾಲರ್‌ ತಲುಪಿದೆ. ಇದು ಜೂನ್ 22 ರ ನಂತರ ದಾಖಲಾದ ಅತ್ಯಂತ ಗರಿಷ್ಠ ದರವಾಗಿದೆ. ಇತ್ತ ಅಮೆರಿಕದ ಡಬ್ಲ್ಯುಟಿಐ (WTI) ಕಚ್ಚಾ ತೈಲದ ದರ ಕೂಡ ಶೇ. 3.2 ರಷ್ಟು ಹೆಚ್ಚಳವಾಗಿ ಬ್ಯಾರೆಲ್‌ಗೆ 73.70 ಡಾಲರ್‌ಗೆ ತಲುಪಿದ್ದರೆ, ಬ್ರೆಂಟ್ ತೈಲದ ಮುಂಚೂಣಿ ವಹಿವಾಟು 78.38 ಡಾಲರ್‌ಗೆ ವೃದ್ಧಿಸಿದೆ.

Ad Widget

ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲಿನ ಇರಾನ್‌ನ ದಾಳಿ ತಡೆಯುವ ನಿಟ್ಟಿನಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಭಾನುವಾರ ಇರಾನ್‌ನ ಮಿಲಿಟರಿ ತಾಣಗಳ ಮೇಲೆ ನೂರಾರು ಸುತ್ತಿನ ಭೀಕರ ವೈಮಾನಿಕ ದಾಳಿ ನಡೆಸಿದೆ. ಇರಾನ್‌ನ ದಾಳಿ ತಡೆವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಪ್ರಕಟಿಸಿದೆ. ಜಲಸಂಧಿಯ ಮೂಲಕ ಹಾದುಹೋಗುತ್ತಿದ್ದ ಸೈಪ್ರಸ್ ಧ್ವಜದ ಎಂವಿ ಜಿಎಫ್‌ಎಸ್ ಗ್ಯಾಲಕ್ಸಿ (MV GFS Galaxy) ಎಂಬ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಇರಾನ್ ಪಡೆಗಳು ಉದ್ಧಟತನದಿಂದ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಈ ಪ್ರತೀಕಾರದ ಕ್ರಮ ಕೈಗೊಂಡಿದೆ.

ಅಮೆರಿಕದ ಭೀಕರ ಬಾಂಬ್ ದಾಳಿಗೆ ಪ್ರತಿಯಾಗಿ ಕೆರಳಿರುವ ಇರಾನ್ ಪಡೆಗಳು ಭಾನುವಾರ ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಕತಾರ್, ಕುವೈತ್, ಓಮನ್ ಮತ್ತು ಬಹ್ರೇನ್ ದೇಶಗಳ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸಿವೆ.ಮತ್ತೊಂದೆಡೆ, ಜಲಸಂಧಿಯ ಸಾರಿಗೆಯನ್ನು ತಾನೇ ನಿಯಂತ್ರಿಸುವುದಾಗಿ ಹೇಳಿಕೊಳ್ಳುತ್ತಿರುವ ಇರಾನ್‌ನ ಪರ್ಷಿಯನ್ ಗಲ್ಫ್ ಸ್ಟ್ರೈಟ್ ಅಥಾರಿಟಿ, ತನ್ನ ಅನುಮತಿಯಿಲ್ಲದ ಬದಲಿ ಮಾರ್ಗಗಳಲ್ಲಿ ಚಲಿಸುವ ಹಡಗುಗಳಿಗೆ ಯಾವುದೇ ಸುರಕ್ಷತೆಯ ಗ್ಯಾರಂಟಿ ನೀಡುವುದಿಲ್ಲ ಎಂದು ಪುನರುಚ್ಚರಿಸಿದೆ. ನಿಯಮಬಾಹಿರ ಮಾರ್ಗಗಳಲ್ಲಿ ಸಂಚರಿಸಿ ಸಂಭವಿಸುವ ಯಾವುದೇ ಅನಾಹುತಗಳಿಗೆ ಹಡಗಿನ ಮಾಲೀಕರು ಮತ್ತು ಕ್ಯಾಪ್ಟನ್ ಅವರೇ ನೇರ ಹೊಣೆಯಾಗುತ್ತಾರೆ ಎಂದು ಇರಾನ್ ಬೆದರಿಕೆ ಹಾಕಿದೆ

Leave a Comment

Your email address will not be published. Required fields are marked *